For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್ ಹೊಸ ಫೀಚರ್: ನೀವು ಕಳುಹಿಸುವ ಸಂದೇಶ, ಒಮ್ಮೆ ನೋಡಿದ ಬಳಿಕ ಕಣ್ಮರೆ

|

ಜಗತ್ತಿನ ಅತಿದೊಡ್ಡ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಈ ಫೀಚರ್ ಮೂಲಕ ಬಳಕೆದಾರರು ಕಳುಹಿಸುವ ಸಂದೇಶ ಅಥವಾ ವೀಡಿಯೋ ಒಂದು ಸಲ ನೋಡಿದ ತಕ್ಷಣ ಡಿಲೀಟ್ ಆಗಲಿದೆ.

ಹೌದು ವಾಟ್ಸಾಪ್‌ ಬಳಕೆದಾರರ ಬಹುಬೇಡಿಕೆಯ ಮತ್ತು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದ್ದ ಫೀಚರ್‌ ಅನ್ನು ವಾಟ್ಸಾಪ್‌ ಆರಂಭದಲ್ಲಿ ಪ್ರಾಯೋಗಿಕವಾಗಿ ಐ-ಫೋನ್ ಬಳಕೆದಾರರಿಗೆ ನೀಡಿದೆ. ಇನ್ನು ಸ್ವಲ್ಪ ದಿನಗಳ ಬಳಿಕ ಆಂಡ್ರಾಯ್ಡ್‌ನಲ್ಲಿರುವವುಗಳನ್ನು ಒಳಗೊಂಡಂತೆ ಎಲ್ಲಾ ಬಳಕೆದಾರರಿಗಾಗಿ ಈ ಹೊಸ ಫೀಚರ್ ಲಭ್ಯವಾಗಲಿದೆ.

ವೀವ್ ಒನ್ಸ್‌ ಫೀಚರ್

ವೀವ್ ಒನ್ಸ್‌ ಫೀಚರ್

ವಾಟ್ಸಾಪ್‌ನಲ್ಲಿ ಚಾಟ್‌ಗಳಿಗಾಗಿ 'ವೀವ್ ಒನ್ಸ್' ಫೀಚರ್‌ ಅನ್ನು ಸಕ್ರಿಯಗೊಳಿಸಿದಾಗ, ನಿಮ್ಮಿಂದ ಫೋಟೋ ಅಥವಾ ವೀಡಿಯೊವನ್ನು ಸ್ವೀಕರಿಸುವವರು ಒಮ್ಮೆ ಮಾತ್ರ ನೀವು ಕಳುಹಿಸುವ ಸಂದೇಶವನ್ನು ನೋಡಲು ಸಾಧ್ಯವಾಗುತ್ತದೆ. ಒಮ್ಮೆ ನೋಡಿದ ಬಳಿಕ ಸಂದೇಶವು ಚಾಟ್‌ನಿಂದ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ.

ಈ ಫೀಚರ್‌ ಖಾಸಗಿ ಮತ್ತು ಸುರಕ್ಷಿತ ಸಂದೇಶ ರವಾನೆ ವೇದಿಕೆಯಾಗುವ ವಾಟ್ಸಾಪ್‌ನ ಪ್ರಾಥಮಿಕ ಗುರಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಈ ಹಿಂದೆ ವಾಟ್ಸಾಪ್ ಸಂಸ್ಥಾಪಕ ಜುಕರ್‌ಬರ್ಗ್ ಹೇಳಿದ್ದಾರೆ.

 

ಫೋಟೊ/ವೀಡಿಯೋ ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ!

ಫೋಟೊ/ವೀಡಿಯೋ ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ!

ಈ ಫೀಚರ್ ಮೂಲಕ ಬಳಕೆದಾರರ ಪ್ರೈವಸಿ ಉಳಿಸಿಕೊಳ್ಳಲು ಸಾಧ್ಯ. ಹೇಗೆಂದರೆ ನೀವು ಯಾರಿಗಾದರೂ ಕಳುಹಿಸುವ ಫೋಟೋ ಅಥವಾ ವೀಡಿಯೋ ಅನ್ನು ಪಡೆದುಕೊಳ್ಳುವವರು ಒಂದು ಸಲ ಅದನ್ನು ವೀಕ್ಷಿಸಿದ ತಕ್ಷಣ ಅದು ಡಿಲೀಟ್ ಆಗಲಿದೆ. ಈ ಫೋಟೋಗಳು ಮತ್ತು ವೀಡಿಯೋಗಳು ಇನ್ಮುಂದೆ ರಿಸೀವ್ ಮಾಡಿದವರ ಮೊಬೈಲ್ ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ.

ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?ಗೂಗಲ್ ಪೇನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?

ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು

ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು

ಬೇರೆಯವರು ಕಳುಹಿಸಿದ ಸಂದೇಶ ಒಮ್ಮೆ ನೋಡಿದ ತಕ್ಷಣ ಕಣ್ಮರೆಯಾಗುವುದಾದರೆ ಏನು ಗತಿ ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಪರಿಹಾರ. ಜನರು ಮೊಬೈಲ್‌ನಲ್ಲಿ ಮುಖ್ಯವಾದ ಸಂದೇಶವನ್ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ಮಾಧ್ಯಮ ವಿಷಯದ ದಾಖಲೆಯನ್ನು ಇಟ್ಟುಕೊಳ್ಳುವುದನ್ನು ಇದು ನಿರ್ಬಂಧಿಸುವುದಿಲ್ಲ.

ಹೊಸ ಒನ್‌ ಟೈಮ್ ಐಕಾನ್

ಹೊಸ ಒನ್‌ ಟೈಮ್ ಐಕಾನ್

ನಾವು ಕಳುಹಿಸುವ ಫೋಟೋ ಅಥವಾ ವೀಡಿಯೋವನ್ನು ಓಪನ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಕೂಡ ಇಲ್ಲಿರುವುದಿಲ್ಲ. ಏಕೆಂದರೆ ಫೋಟೋ ಅಥವಾ ವೀಡಿಯೋವನ್ನು ಪಡೆದ ವ್ಯಕ್ತಿ, ಅದನ್ನು ವೀಕ್ಷಿಸಿದ ಕೂಡಲೇ ಹೊಸ ಒನ್‌ ಟೈಮ್ ಐಕಾನ್‌ನೊಂದಿಗೆ (one time icon) ಗೋಚರವಾಗುತ್ತದೆ. ಈ ಮೂಲಕ ಬಳಕೆದಾರರ ಸಂದೇಶ ಸ್ವೀಕರಿಸಿರುವ ಹಾಗೂ ವೀಕ್ಷಿಸಿರುವ ಕುರಿತು ಸ್ಪಷ್ಟವಾಗಿ ತಿಳಿಯುತ್ತದೆ.

ಹೀಗೆ ನೀವು ಕಳುಹಿಸುವ ಸಂದೇಶವನ್ನು ಅಥವಾ ವೀಡಿಯೋವನ್ನು ವೀವ್ ಒನ್ಸ್ ಮೂಲಕ ಕಳುಹಿಸಿದ್ದೇ ಆದಲ್ಲಿ, ರಿಸೀವ್ ಮಾಡುವವರು ಫೋಟೋ ಅಥವಾ ವೀಡಿಯೋವನ್ನು ಸೇವ್ ಮಾಡಲು ಅಥವಾ ಫಾರ್ವಡ್ ಮಾಡಲು ಸಾಧ್ಯವಾಗುವುದಿಲ್ಲ.

 

14 ದಿನಗಳ ಬಳಿಕ ಸ್ವಯಂಚಾಲಿತ ಡಿಲೀಟ್ ಆಗಲಿದೆ

14 ದಿನಗಳ ಬಳಿಕ ಸ್ವಯಂಚಾಲಿತ ಡಿಲೀಟ್ ಆಗಲಿದೆ

ವೀವ್ ಒನ್ಸ್ ಆಯ್ಕೆಯಿಂದ ಕಳುಹಿಸಿದ ಸಂದೇಶವನ್ನು ಸ್ವೀಕರಿಸುವವರ ಫೋಟೋಗಳು ಅಥವಾ ವೀಡಿಯೋ ಗ್ಯಾಲರಿಗೆ ಸೇವ್‌ ಆಗುವುದಿಲ್ಲ ಎಂಬುದು ನಿಮಗೆ ಗೊತ್ತಾಗಿದೆ. ಹಾಗೆಯೇ ಈ ಫೀಚರ್ ಬಳಸಿ ಕಳುಹಿಸಿದ ಫೋಟೋ ಅಥವಾ ವಿಡಿಯೋ 14 ದಿನಗಳ ಒಳಗೆ ತೆರೆಯದಿದ್ದರೆ ಚಾಟ್‌ನಿಂದ ಡಿಲೀಟ್ ಆಗಲಿದೆ.

ಡಿಸಿಪಿಯರಿಂಗ್ ಮೋಡ್

ಡಿಸಿಪಿಯರಿಂಗ್ ಮೋಡ್

ವಾಟ್ಸಾಪ್ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಮತ್ತೊಂದು ಫೀಚರ್ ಎಂದರೆ ಡಿಸಿಪಿಯರಿಂಗ್ ಮೋಡ್ ಆಗಿದೆ. ಈ ಹೊಸ ಫೀಚರ್‌ ಅನ್ನು ವಾಟ್ಸಾಪ್ ಬಳಕೆದಾರರು ತಮ್ಮ ಎಲ್ಲಾ ಹೊಸ ಚಾಟ್‌ಗಳಿಗೆ ಸೆಟ್‌ ಮಾಡಬಹುದಾಗಿದೆ. ಈ ಡಿಸಪಿಯರಿಂಗ್ ಮೋಡ್ ವೈಶಿಷ್ಟ್ಯವನ್ನು ಸೆಟ್‌ ಮಾಡಿದರೆ 7 ದಿನಗಳ ನಂತರ ಚಾಟ್‌ನಲ್ಲಿ ಸಂದೇಶಗಳನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ. ಈ ಮೂಲಕ ನಿಮ್ಮ ವಾಟ್ಸಾಪ್‌ನ ಮೆಸೆಜ್‌ಗಳು ಇಂತಿಷ್ಟು ನಿಗದಿತ ದಿನಗಳ ಬಳಿಕ ಡಿಲೀಟ್ ಆಗಲಿದೆ.

English summary

WhatsApp's Launches View Once Feature: Know Details In Kannada

Here the complete details of whatsApp new feature View Once explained in Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X