For Quick Alerts
ALLOW NOTIFICATIONS  
For Daily Alerts

3 ವರ್ಷ ಹಿಂದಕ್ಕೆ ತಲುಪಿದ ಸಗಟು ಹಣದುಬ್ಬರ

|

ಭಾರತದ ಸಗಟು ಹಣದುಬ್ಬರವು(WPI) ಅಕ್ಟೋಬರ್ ತಿಂಗಳಿನಲ್ಲಿ ಶೇಕಡಾ 0.16ಕ್ಕೆ ಇಳಿದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಶೇಕಡಾ 0.33 ರಿಂದ ಅಕ್ಟೋಬರ್‌ಗೆ 0.16ಕ್ಕೆ ಇಳಿಕೆ ಕಂಡಿದೆ.

ಕಳೆದ ಮೂರವರೆ ವರ್ಷಕ್ಕಿಂತಲೂ ಕಡಿಮೆ ಇಳಿಕೆ ಇದಾಗಿದ್ದು, ಆಹಾರಯೇತರ ಪದಾರ್ಥಗಳು ಇಳಿಕೆ ಮತ್ತು ತಯಾರಿಕಾ ಸರಕುಗಳ ಬೆಲೆಗಳ ಕುಸಿತದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದಕ್ಕೆ ತಲುಪಿದೆ.

3 ವರ್ಷ ಹಿಂದಕ್ಕೆ ತಲುಪಿದ ಸಗಟು ಹಣದುಬ್ಬರ

ಸೆಪ್ಟೆಂಬರ್‌ನಲ್ಲಿ ಶೇಕಡಾ -0.42 ರಷ್ಟಿದ್ದ ತಯಾರಿಕಾ ವಸ್ತುಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇಕಡಾ -0.82 ರಷ್ಟಿದೆ. ಇಂಧನ ಮತ್ತು ವಿದ್ಯುತ್ ಸೆಪ್ಟೆಂಬರ್ ತಿಂಗಳಿನಲ್ಲಿ ಶೇಕಡಾ -7.05 ರಷ್ಟಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಶೇಕಡಾ --8.27 ರಷ್ಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ(ನವೆಂಬರ್ 14) ಬಿಡುಗಡೆ ಮಾಡಿದ ಅಂಕಿ-ಅಂಶಗಳಲ್ಲಿ ತಿಳಿಸಿದೆ.

16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ

ಹೆಚ್ಚಿನ ಆಹಾರ ಹಣದುಬ್ಬರವು ಸಗಟು ಬೆಲೆ(ವೋಲ್ ಸೇಲ್) ಸೂಚ್ಯಂಕವನ್ನು ನಕಾರಾತ್ಮಕದತ್ತ ಮುಖ ಮಾಡುವಂತೆ ಮಾಡಿದೆ. ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಶೇ.9.80ರಷ್ಟಿದ್ದು, ಸೆಪ್ಟೆಂಬರ್‌ನಲ್ಲಿ ಶೇ. 7.42ರಷ್ಟು ದಾಖಲಾಗಿತ್ತು.

ಸಗಟು ಹಣದುಬ್ಬರವು(WPI) ನಿರಂತರ ಕುಸಿತ ಕಾಣಲು ಪ್ರಮುಖ ಸರಕುಗಳಾದ ಇಂಧನ, ವಿದ್ಯುತ್‌, ಖನಿಜ, ಪೆಟ್ರೋಲಿಯಂ, ನೈಸರ್ಗಿಕ ಅನಿಲದ ಬೆಲೆ ಕಡಿಮೆಯಾಗಿರುವುದು ಕಾರಣವಾಗಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದಾರೆ.

English summary

Wholesale Inflation Hits 3 Years Low In October

India's Wholesale Inflation eased to 0.16 percent in october, ots lowest in more than 3 years
Story first published: Friday, November 15, 2019, 10:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X