For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಸಗಟು ದರ 1.48% ಗೆ ಏರಿಕೆ; WPI ಬೆಳವಣಿಗೆ 8 ತಿಂಗಳ ಗರಿಷ್ಠ

|

ಭಾರತದಲ್ಲಿ ಸಗಟು ದರವು ಅಕ್ಟೋಬರ್ ನಲ್ಲಿ 1.48 ಪರ್ಸೆಂಟ್ ಗೆ ಏರಿಕೆಯಾಗಿದೆ. ಈ ಹಿಂದಿನ ತಿಂಗಳಲ್ಲಿ, ಅಂದರೆ ಸೆಪ್ಟೆಂಬರ್ ನಲ್ಲಿ 1.32 ಪರ್ಸೆಂಟ್ ಇತ್ತು. ಇದು ಸತತವಾಗಿ ಮೂರನೇ ವಾರ್ಷಿಕ ಏರಿಕೆ ಆಗಿದೆ. ಆ ಮೂಲಕ WPI ಬೆಳವಣಿಗೆ 8 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆರ್ಥಿಕ ಚಟುವಟಿಕೆಗಳು ಆರಂಭವಾದ ಮೇಲೆ ಸಗಟು ದರ ಸಹ ಏರಲು ಆರಂಭವಾಯಿತು.

 

ಇನ್ನು ಉತ್ಪಾದನಾ ವಸ್ತುಗಳ ದರದಲ್ಲಿ ಸಹ ಈ ತಿಂಗಳು ಏರಿಕೆಯಾಯಿತು. ಆಹಾರ ಪದಾರ್ಥಗಳ ಬೆಲೆಯಲ್ಲಿ ಸಹ ಬದಲಾವಣೆ ಆಗಿದೆ. 2020ರ ಸೆಪ್ಟೆಂಬರ್ ನಲ್ಲಿ WPI ಆಹಾರ ಸೂಚ್ಯಂಕವು 6.92 ಪರ್ಸೆಂಟ್ ಇದ್ದದ್ದು ಅಕ್ಟೋಬರ್ ನಲ್ಲಿ 5.78 ಪರ್ಸೆಂಟ್ ಗೆ ಕುಸಿದಿದೆ. ಇನ್ನು WPI ಉತ್ಪಾದನೆ ಅಕ್ಟೋಬರ್ ನಲ್ಲಿ 2.12 ಪರ್ಸೆಂಟ್ ಗೆ ಏರಿಕೆ ಕಂಡಿದೆ. 2020ರ ಸೆಪ್ಟೆಂಬರ್ ನಲ್ಲಿ 1.61 ಪರ್ಸೆಂಟ್ ಇತ್ತು.

 

ಈರುಳ್ಳಿ ದರ ಕೆಜಿಗೆ 100 ರೂ, ರೀಟೇಲ್ ದರ ತಗ್ಗಿಸಲು ಸರ್ಕಾರ ಯತ್ನಈರುಳ್ಳಿ ದರ ಕೆಜಿಗೆ 100 ರೂ, ರೀಟೇಲ್ ದರ ತಗ್ಗಿಸಲು ಸರ್ಕಾರ ಯತ್ನ

ಸಗಟು ಆಹಾರ ಸೂಚ್ಯಂಕವು ನಿಧಾನ ಗತಿಯಲ್ಲಿ ಏರಿಕೆ ಕಂಡರೂ ಸಗಟು ಹಾಗೂ ಚಿಲ್ಲರೆ ಮಾರಾಟ ದರವು ಚಿಂತೆಗೆ ಕಾರಣ ಆಗಿದೆ. ಈ ಮಧ್ಯೆ, ಭಾರತದಲ್ಲಿ ವಾರ್ಷಿಕ ಚಿಲ್ಲರೆ ಹಣದುಬ್ಬರ 2020ರ ಅಕ್ಟೋಬರ್ ನಲ್ಲಿ 7.61 ಪರ್ಸೆಂಟ್ ಆಗಿದೆ. ಹಿಂದಿನ ತಿಂಗಳಲ್ಲಿ 7.34 ಪರ್ಸೆಂಟ್ ಇತ್ತು.

ಭಾರತದಲ್ಲಿ ಸಗಟು ದರ 1.48% ಗೆ ಏರಿಕೆ; WPI 8 ತಿಂಗಳ ಗರಿಷ್ಠ

2014ರ ಮೇ ನಂತರ ಗ್ರಾಹಕ ದರ ಸೂಚ್ಯಂಕ (CPI) ಗರಿಷ್ಠ ಮಟ್ಟದಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2ರಿಂದ 4 ಪರ್ಸೆಂಟ್ ಗುರಿಗಿಂತ ಮೇಲಿನ ಮಟ್ಟದಲ್ಲಿದ್ದು, ಹೀಗೆ ಸತತ ಏಳನೇ ತಿಂಗಳು ಏರಿಕೆ ಕಂಡಿದೆ. ಹೆಚ್ಚುತ್ತಿರುವ ಆಹಾರ ಪದಾರ್ಥಗಳ ಬೆಲೆ ಕಾರಣಕ್ಕೆ ಚಿಲ್ಲರೆ ಹಣದುಬ್ಬರ ದರವು 11.07 ಪರ್ಸೆಂಟ್ ನಲ್ಲಿದೆ. ಜನವರಿ ನಂತರ ಗರಿಷ್ಠ ಮಟ್ಟ ಇದು.

English summary

Wholesale Price In October Rise For Third Month; WPI Hits 8 Month High

Wholesale price in October rise for third month in a row and WPI hits 8 month high.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X