For Quick Alerts
ALLOW NOTIFICATIONS  
For Daily Alerts

ವಿದೇಶಗಳಲ್ಲಿ ಒಂಟೆ ಹಾಲು ಲೀಟರ್ ಗೆ 2100 ರು.; ಏಕಿಷ್ಟು ಬೇಡಿಕೆ?

|

ಹಸುವಿನ ಹಾಲು, ಎಮ್ಮೆ ಹಾಲು ಕುಡಿಯುವುದರ ಬಗ್ಗೆ ಕೇಳಿರುತ್ತೀರಿ. ಆದರೆ ಒಂಟೆ ಹಾಲು ಕೂಡ ಅದೇ ರೀತಿಯಲ್ಲಿ ಮಾರಾಟ ಆಗುವ ದಿನಗಳು ದೂರವಿಲ್ಲ. ಯಾಕೆ ಒಂಟೆ ಹಾಲು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಅಂದ ಹಾಗೆ ಒಂಟೆ ಹಾಲಿನಲ್ಲಿ ಮನುಷ್ಯರ ದೇಹಕ್ಕೆ ಚೈತನ್ಯ ತುಂಬುವ ಶಕ್ತಿ ಇದೆಯಂತೆ. ಆ ಹಾಲಿನಲ್ಲಿ ಇರುವ ಅಂಶಗಳಿಂದ ಇಡೀ ದೇಹಕ್ಕೆ ಅಗತ್ಯ ಇರುವ ಅಂಶಗಳು ಪೂರೈಕೆಯಾಗಿ, ಉತ್ಸಾಹಭರಿತವಾಗಿ ಇರುತ್ತದಂತೆ.

ಮುಖ್ಯವಾಗಿ ಮಾನಸಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ಒಂಟೆ ಹಾಲು ಬಹಳ ಆರೋಗ್ಯಕರ ಎಂಬ ನಂಬಿಕೆ ಇದೆ. ತಿಂಗಳ ಕಾಲ ಒಂಟೆ ಹಾಲು ಸೇವಿಸಿದರೆ ಹಲವು ಮಾನಸಿಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂದು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಮಧುಮೇಹಕ್ಕೆ ಕೂಡ ಈ ಹಾಲು ರಾಮಬಾಣ.

ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್

ವರ್ಷಗಳ ಕಾಲ ತೀವ್ರತರವಾದ ಮಧುಮೇಹದಿಂದ ಬಳಲುತ್ತಿದ್ದರೆ ಅದಕ್ಕೂ ಕೂಡ ತಿಂಗಳ ಕಾಲ ಒಂಟೆ ಹಾಲು ಸೇವನೆ ಮಾಡಿದಲ್ಲಿ ಶೀಘ್ರ ಮೇಲಾಗುತ್ತದೆ ಅನ್ನೋದು ತಜ್ಞರ ಮಾತು. ಒಂದು ಲೀಟರ್ ಒಂಟೆ ಹಾಲಿನಲ್ಲಿ ಇನ್ಸುಲಿನ್ ನ ಐವತ್ತೆರಡಕ್ಕೂ ಹೆಚ್ಚು ವಸ್ತುಗಳು ಇರುತ್ತವೆ.

ವಿದೇಶಗಳಲ್ಲಿ ಒಂಟೆ ಹಾಲು ಲೀಟರ್ ಗೆ 2100 ರು.; ಏಕಿಷ್ಟು ಬೇಡಿಕೆ?

ಒಂಟೆ ಹಾಲಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಷಿಯಂ ಇರುತ್ತದೆ. ಇದರಿಂದ ಮೂಳೆ ಬಲವಾಗುತ್ತದೆ. ಇದರ ಜತೆಗೆ ಲೆಕ್ಟೋಫೆರಿನ್ ಇರುವುದರಿಂದ ಹಲವು ಬಗೆಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸುತ್ತದೆ. ಚರ್ಮದ ಸಮಸ್ಯೆಗಳು ಮತ್ತು ರಂಧ್ರಕ್ಕೆ ಪರಿಹಾರದಂತೆ ಕೆಲಸ ಮಾಡುತ್ತದೆ.

ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಒಂಟೆ ಹಾಲಿಗೆ ವಿಪರೀತ ಬೇಡಿಕೆ. ವಿಶ್ವದ ಒಟ್ಟಾರೆ ಒಂಟೆ ಹಾಲು ಉತ್ಪಾದನೆಯಲ್ಲಿ ಶೆಕಡಾ ಅರವತ್ನಾಲ್ಕರಷ್ಟು ಸೋಮಾಲಿಯಾ ಮತ್ತು ಕೀನ್ಯಾದಿಂದ ಆಗುತ್ತದೆ. ಹಸುವಿಗಿಂತ ಒಂಟೆ ಬಹಳ ಕಡಿಮೆ ಪ್ರಮಾಣದಲ್ಲಿ ಹಾಲು ನೀಡುತ್ತದೆ.

ಇನ್ನು ವಿದೇಶಗಳಲ್ಲಿ ಒಂಟೆ ಹಾಲಿಗೆ ಲೀಟರ್ ಗೆ ಮೂವತ್ತು ಅಮೆರಿಕನ್ ಡಾಲರ್ ನಂತೆ ಮಾರಲಾಗುತ್ತದೆ. ಹಸುವಿನ ಹಾಲಿನ ಬೆಲೆಗೆ ಹೋಲಿಸಿದರೆ ಇಪ್ಪತ್ತು- ಮೂವತ್ತು ಪಟ್ಟು ಬೇಡಿಕೆ ಹೆಚ್ಚು.

English summary

Why Camel Milk Too Costly?

Camel milk too costly in many countries. Do you want to know why? Here is the reason.
Story first published: Sunday, February 9, 2020, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X