For Quick Alerts
ALLOW NOTIFICATIONS  
For Daily Alerts

ಚೀನಾ ಸರ್ಕಾರದ ಪಾಲಿನ 'ಡಾರ್ಲಿಂಗ್' ಜಾಕ್ ಮಾ ಜತೆಗೆ ಇದೆಂಥಾ ಬ್ರೇಕ್ ಅಪ್?

By ಅನಿಲ್ ಆಚಾರ್
|

ಓಹ್, ನೀವು ಭಾರತದವರಾ? ಗಾಂಧಿ ನಾಡಿನವರು ಎಂದು ಇಡೀ ಜಗತ್ತು ಹೇಗೆ ಭಾರತೀಯರನ್ನು ಮಹಾತ್ಮ ಗಾಂಧಿ ಹುಟ್ಟಿದ ನೆಲದವರು ಎಂದು ಗುರುತಿಸುತ್ತದೋ, ಆ ರೀತಿ ಚೀನಾದ ಪಾಲಿನ ವ್ಯವಹಾರ ಜಗತ್ತಿಗೆ ಮಾತ್ರ ಜಾಕ್ ಮಾ ಅವರು 'ಪೋಸ್ಟರ್ ಬಾಯ್'. ಒಂದು ಕಾಲ ಇಂಗ್ಲಿಷ್ ಟೀಚರ್ ಜಾಕ್ ಮಾ, ಇಂಟರ್ ನೆಟ್ ಮೂಲಕ ಚೀನಾಗೆ ತಂದ ಕ್ರಾಂತಿ ಅಂಥದ್ದು.

"ಸರ್ಕಾರದ ಜತೆ ಲವ್ ಇರಬೇಕು, ಆದರೆ ಎಂದೂ ಮದುವೆ ಆಗಬಾರದು"

ಅಮೆರಿಕದ ಅಮೆಜಾನ್ ಗೆ ಸಡ್ಡು ಹೊಡೆಯುವಂತೆ ಮಾ ಸ್ಥಾಪಿಸಿದ ಕಂಪೆನಿ ಅಲಿಬಾಬ. 2016ರಲ್ಲಿ ಡೊನಾಲ್ಡ್ ಟ್ರಂಪ್ ಯು.ಎಸ್. ಅಧ್ಯಕ್ಷರಾದ ಮೇಲೆ ಅವರನ್ನು ಭೇಟಿಯಾದ ಚೀನಾದ ಮೊದಲ ಹೈ ಪ್ರೊಫೈಲ್ ವ್ಯಕ್ತಿ ಜಾಕ್ ಮಾ. ಚೀನೀಯರ ಪಾಲಿಗೆ ಆತ ರಾಕ್ ಸ್ಟಾರ್ ಎನಿಸಿಕೊಂಡರು.

"ಡ್ಯಾಡಿ ಜಾಕ್ ಮಾ"ನನ್ನು ಚೀನಾದಲ್ಲಿ ದ್ವೇಷಿಸಲು ಆರಂಭ

ಆದರೆ, ಆ ನಂತರ ಸಾರ್ವಜನಿಕ ವಲಯದಲ್ಲಿ ಭಾವನೆಗಳೇ ಬದಲಾದವು. "ಡ್ಯಾಡಿ ಜಾಕ್ ಮಾ"ನನ್ನು ಚೀನಾದಲ್ಲಿ ದ್ವೇಷಿಸಲು ಆರಂಭಿಸಿದರು. ಆತ ಖಳನಾಯಕ, ರಾಕ್ಷಸ ಬಂಡವಾಳಶಾಹಿ, ರಕ್ತಹೀರುವ ರಾಕ್ಷಸ ಎಂದು ಜರೆಯಲು ಆರಂಭಿಸಿದರು. ಒಬ್ಬ ಲೇಖಕರಂತೂ "10 ಭಯಾನಕ ಪಾಪಗಳು" ಎಂಬ ಪುಸ್ತಕವನ್ನು ಜಾಕ್ ಮಾ ಬಗ್ಗೆ ಬರೆದರು. ಚೀನಾ ಸರ್ಕಾರದ ಜತೆ ತಿಕ್ಕಾಟ ಜಾಸ್ತಿಯಾಗುತ್ತಾ ಬಂದಂತೆ ಸಾರ್ವಜನಿಕರ ಮಧ್ಯೆ ಜಾಕ್ ಮಾ ಬಗ್ಗೆ ಇದ್ದ ಚಿತ್ರವೊಂದು ಬಣ್ಣ ಕಳೆದುಕೊಳ್ಳುತ್ತಾ ಬಂತು. ಗುರುವಾರ (ಡಿಸೆಂಬರ್ 24, 2020) ಅಲಿಬಾಬ ಕಂಪೆನಿ ವಿರುದ್ಧ ವಿಶ್ವಾಸಕ್ಕೆ ದ್ರೋಹ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಚೀನಾ ಸರ್ಕಾರದ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಇದೀಗ ಜಾಕ್ ಮಾಗೆ ಸೇರಿದ ಅಲಿಬಾಬ ಸಹವರ್ತಿ ಸಂಸ್ಥೆ ಆಂಟ್ ಸಮೂಹವನ್ನು ಚೀನೀ ಸರ್ಕಾರಿ ಅಧಿಕಾರಿಗಳು ಸುತ್ತುವರೆದಿದ್ದಾರೆ. ನವೆಂಬರ್ ನಲ್ಲಿ ಆಂಟ್ ನಿಂದ ಬಿಡುಗಡೆ ಆಗಬೇಕಿದ್ದ ಐಪಿಒ ಇನ್ನೇನು ಲಿಸ್ಟಿಂಗ್ ಎರಡು ವಾರಕ್ಕಿಂತ ಕಡಿಮೆ ಇರುವಾಗಲೇ ತಡೆಯೊಡ್ಡಲಾಯಿತು.

ಚೀನಾ ಬ್ಯಾಂಕ್ ಗಳು

ಚೀನಾ ಬ್ಯಾಂಕ್ ಗಳು "ಗಿರವಿ ಅಂಗಡಿ"ಯಂತೆ ವರ್ತನೆ

ಅಂದ ಹಾಗೆ ಈ ಬೆಳವಣಿಗೆ ನಡೆದಿದ್ದು, ಚೀನಾ ಬ್ಯಾಂಕ್ ಗಳು ಅಡಮಾನ ಇಟ್ಟುಕೊಳ್ಳುವ "ಗಿರವಿ ಅಂಗಡಿ"ಯಂತೆ ವರ್ತಿಸುತ್ತಿವೆ. ಯಾರು ಅಡಮಾನ ಇಡಲು ಸಾಧ್ಯವೋ ಅಂಥವರಿಗೆ ಮಾತ್ರ ಸಾಲ ಸಿಗುತ್ತವೆ ಎಂದು ಜಾಕ್ ಮಾ ನೀಡಿದ ಹೇಳಿಕೆ ನಂತರ. ಗುರುವಾರದಂದೇ ಚೀನಾದ ನಿಯಂತ್ರಕ ಸಂಸ್ಥೆಗಳ ಅಧಿಕಾರಿಗಳು ಆಂಟ್ ಕಂಪೆನಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಜಾಕ್ ಮಾ ವ್ಯಾಪಾರ ಸಾಮ್ರಾಜ್ಯದ ಮೇಲೆ ಚೀನಾ ಸರ್ಕಾರವು ಮುರಿದುಕೊಂಡು ಬಿದ್ದ ಮೇಲೆ ಅವರ ಸಾರ್ವಜನಿಕ ವರ್ಚಸ್ಸು ಸಹ ಪೆಟ್ಟು ತಿಂದಿತು. ಈಗಿನ ಸ್ಥಿತಿಯಲ್ಲಿ ಚೀನಾ ಸರ್ಕಾರ ಹಾಗೂ ಅಲ್ಲಿನ ಉದ್ಯಮಿಗಳನ್ನು ಸಂಕಷ್ಟಕ್ಕೆ ನೂಕಿವೆ. ಕೊರೊನಾ ಹೆಚ್ಚಾದ ಮೇಲೆ ಜಾಕ್ ಮಾ ಅವರಂಥ ಉದ್ಯಮಿಗಳು ಇಷ್ಟು ಸಮಯ ಸಿಕ್ಕ ಅವಕಾಶಗಳು ಕಾಣೆಯಾಗುತ್ತಿವೆ. ಅಂದ ಹಾಗೆ ಚೀನಾದಲ್ಲಿನ ಶತಕೋಟ್ಯಧಿಪತಿಗಳ ಸಂಖ್ಯೆಯು ಯುಎಸ್ ಹಾಗೂ ಭಾರತ ಎರಡೂ ಸೇರಿದರೆ ಎಷ್ಟೋ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದೆ. ಚೀನಾದ 60 ಕೋಟಿಯಷ್ಟು ಜನಕ್ಕೆ ತಿಂಗಳ ಆದಾಯ 150 ಯುಎಸ್ ಡಿ ಮತ್ತು ಅದಕ್ಕಿಂತ ಕಡಿಮೆ ಇದೆ.

ಶ್ರೀಮಂತರ ಬಗ್ಗೆ ಅಸಮಾಧಾನ ಹಾಗೂ ಶ್ರೀಮಂತಿಕೆ ಬಗ್ಗೆ ಸಿಟ್ಟು

ಶ್ರೀಮಂತರ ಬಗ್ಗೆ ಅಸಮಾಧಾನ ಹಾಗೂ ಶ್ರೀಮಂತಿಕೆ ಬಗ್ಗೆ ಸಿಟ್ಟು

ಇನ್ನು ಚೀನಾದಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಪದವೀಧರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಅವರ ವಿದ್ಯಾಭ್ಯಾಸಕ್ಕೆ ತಕ್ಕೆ ವೈಟ್ ಕಾಲರ್ ಕೆಲಸ ಸಿಗುತ್ತಿಲ್ಲ. ಸಂಬಳವೂ ಕಡಿಮೆ. ಅತ್ಯುತ್ತಮ ನಗರಗಳು ದುಬಾರಿ ಆಗಿವೆ. ಹೊಸ ತಲೆಮಾರಿನ ಯುವಕರು ಜಾಕ್ ಮಾಗೆ ಸೇರಿದ ಆಂಟ್ ಸಮೂಹದಂಥ ಆನ್ ಲೈನ್ ಸಾಲ ನೀಡುವ ಸಂಸ್ಥೆಗಳಿಂದ ಹಣ ಪಡೆದು, ಅಂಥವುಗಳ ಬಗ್ಗೆ ಸಿಟ್ಟಾಗಿದ್ದಾರೆ. ಚೀನಾದ ಆರ್ಥಿಕ ಯಶಸ್ಸಿಗೆ ಮೇಲ್ನೋಟಕ್ಕೆ ಕಾಣುವಂಥದ್ದು ಏನೇ ಇರಲಿ, ಬಹಳ ಸಮಯದಿಂದ ಶ್ರೀಮಂತರ ಬಗ್ಗೆ ಅಸಮಾಧಾನ ಹಾಗೂ ಶ್ರೀಮಂತಿಕೆ ಬಗ್ಗೆ ಸಿಟ್ಟು ಇದ್ದೇ ಇದೆ. "ಆಗರ್ಭ ಶ್ರೀಮಂತರಾದ ಜಾಕ್ ಮಾ ಅವರಂಥವರನ್ನು ಖಂಡಿತಾ ನೇಣಿಗೆ ಹಾಕಬೇಕು," ಎಂಬ ಆನ್ ಲೈನ್ ಕಾಮೆಂಟ್ ವೊಂದಕ್ಕೆ ಅದ್ಯಾವ ಪರಿಯ ಮೆಚ್ಚುಗೆ ಬಂದಿತ್ತು ಅಂದರೆ, ಭಾರೀ ಪ್ರಮಾಣದಲ್ಲಿ ಷೇರ್ ಕೂಡ ಮಾಡಲಾಗಿತ್ತು. ಸಾರ್ವಜನಿಕರಲ್ಲಿ ಇರುವ ಈ ಅಸಮಾಧಾನದ ಲಾಭವನ್ನು ಪಡೆಯಲು ಕಮ್ಯುನಿಸ್ಟ್ ಪಕ್ಷ ಮುಂದಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಕ್ಸಿ ಜಿನ್ ಪಿಂಗ್ ಉದ್ಯಮಿಗಳು ಹಾಗೂ ಖಾಸಗಿ ವ್ಯವಹಾರಸ್ಥರಿಗೆ ಸಮಸ್ಯೆಗಳು ತಂದೊಡ್ದಬಹುದು. ಕಳೆದ ವಾರ ನಡೆದ ಸಭೆಯಲ್ಲಿ ಕ್ಸಿ ಜಿನ್ ಪಿಂಗ್ ಈ ಬಗ್ಗೆ ಸುಳಿವು ಸಿಕ್ಕಿದೆ.

ಯಾವ ಕಡೆ ಸಾಗುತ್ತಿದೆ ಕಮ್ಯುನಿಸ್ಟ್ ಚೀನಾ?

ಯಾವ ಕಡೆ ಸಾಗುತ್ತಿದೆ ಕಮ್ಯುನಿಸ್ಟ್ ಚೀನಾ?

ಜಾಕ್ ಮಾ ಹಾಗೂ ಆಂಟ್ ಸಮೂಹದ ವಿರುದ್ಧ ಈಗಿನ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು, ದೇಶವು ಮೂಲಭೂತವಾಗಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಒಂದೋ ನೀವು ಸಂಪೂರ್ಣ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಅಥವಾ ಡೈನಾಮಿಕ್, ಇನೊವೇಟಿವ್ ಆರ್ಥಿಕತೆ ಹೊಂದಿರಬೇಕು. ಎರಡೂ ಒಟ್ಟಿಗೆ ಇರುವುದು ಅನುಮಾನ ಎಂದು ಪ್ರಮುಖ ವಿಶ್ಲೇಷಕರೊಬ್ಬರು ಚೀನಾದ ಈಗಿನ ನಿಲುವಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾಕ್ ಮಾ ಅವರ ಆಂಟ್ ಗ್ರೂಪ್ ಐಪಿಒಗೆ ತಡೆ ಒಡ್ಡಿದ ಮೇಲೆ ಚೀನಾಗೆ ಎಂಥ ಉದ್ಯಮಿಗಳು ಬೇಕು ಎಂದು ಸೂಚನೆ ನೀಡುವಂತೆ ಅಧ್ಯಕ್ಷ ಕ್ಸಿ ನಡೆದುಕೊಂಡಿದ್ದಾರೆ. ಝಾಂಗ್ ಜಿಯಾನ್ ಉದಾಹರಣೆ ನೀಡಿದ್ದರು. ಆತ ಶತಮಾನಗಳ ಹಿಂದೆ ಉದ್ಯಮ ನಡೆಸಿದವರು. ತನ್ನ ತವರು ಪಟ್ಟಣ ಕಟ್ಟಲು ಆತ ನೆರವಾದರು. ನೂರಾರು ಶಾಲೆ ಕಟ್ಟಿದರು. ಇದನ್ನೆಲ್ಲ ಪರೀಕ್ಷವಾಗಿ ಸೂಚಿಸಿದ ಕ್ಸಿ, ಝಾಂಗ್ ದಿವಾಳಿಯಾಗಿ ತೀರಿಕೊಂಡರು ಎಂಬುದನ್ನು ತಿಳಿಸಲಿಲ್ಲ. ಜಾಕ್ ಮಾ ಹೋದಲ್ಲಿ ಬಂದಲ್ಲೆಲ್ಲ ಸರ್ಕಾರದ ಬಗ್ಗೆ ಆಡುತ್ತಿರುವ ಮಾತುಗಳಿಂದ ಹಾಗೂ ಆಂಟ್ ಗ್ರೂಪ್ ನೀಡುತ್ತಿರುವ ಸಾಲಗಳಿಂದ ಚೀನಾ ಸರ್ಕಾರದ ಹಿಡಿತ ಇರುವ ಬ್ಯಾಂಕಿಂಗ್- ಹಣಕಾಸು ವಲಯಕ್ಕೆ ಮುಜುಗರ ಉಂಟು ಮಾಡುತ್ತಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ತಮ್ಮ ಪಾರ್ಟಿಯ ಬಗ್ಗೆ ಇತರರು ಮಾತನಾಡುವುದು ಹಾಗೂ ಅದನ್ನು ಮೀರಿ ಬೆಳೆಯುವುದು ಸಹಿಸಲು ಸಾಧ್ಯವಿಲ್ಲ. ಅದರದೇ ಫಲಿತಾಂಶದಿಂದ ಜಾಕ್ ಮಾ ಈಗಿನ ಸ್ಥಿತಿ ತಲುಪಿದ್ದಾರೆ.

English summary

Why Communist China Government Turned Against Jack Ma?

China officials proceed action against Jack Ma led Alibaba group. Why China government turned against Jack Ma? Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X