For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ ಇಟಲಿಯಲ್ಲೇ ಅತಿ ಹೆಚ್ಚು ಮರಣಮೃದಂಗ ಬಾರಿಸಲು ಕಾರಣ ಏನು? ಚೀನಾ ಜೊತೆಗಿನ ಕನೆಕ್ಷನ್ ಆದ್ರೂ ಏನು?

|

ಕೊರೊನಾವೈರಸ್‌ಗೆ ಜಗತ್ತೆ ಸಂಪೂರ್ಣ ತತ್ತರಿಸಿ ಹೋಗಿದೆ. ಈ ವೈರಸ್‌ನ ಹೆಸರು ಕೇಳಿದರೆ ಕನಸಿನಲ್ಲೂ ಬೆಚ್ಚಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಅಭಿವೃದ್ಧಿ ಶೀಲ ರಾಷ್ಟ್ರಗಳೇ ಕೊರೊನಾ ಹಾವಳಿಯನ್ನು ತಡೆಗಟ್ಟಲಾಗದೆ ಕಂಗಾಲಾಗಿ ಹೋಗಿವೆ.

 

ಚೀನಾದ ಹುವಾನ್‌ನಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಇದೀಗ ಜಗತ್ತನ್ನೇ ಸಂಪೂರ್ಣ ನಲುಗಿಸಿ ಬಿಟ್ಟಿದೆ. ಚೀನಾದ ಅಕ್ಕ-ಪಕ್ಕದ ರಾಷ್ಟ್ರಗಳು ಅಷ್ಟೇ ಅಲ್ಲದೆ, ಇಟಲಿ, ಸ್ಪೇನ್, ಜರ್ಮನಿ, ಫ್ರಾನ್ಸ್, ಭಾರತ ಸೇರಿದಂತೆ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೂ ಬಿಟ್ಟಿಲ್ಲ. ಶುಕ್ರವಾರವಷ್ಟೇ ಅಮೆರಿಕಾ, ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರ ಎಂಬ ಪಟ್ಟಕ್ಕೂ ಏರಿದೆ.

ವಿಶ್ವವೇ ವೈರಸ್‌ಗೆ ತತ್ತರ, ಚೇತರಿಕೊಳ್ಳುತ್ತಿದೆ ಚೀನಾ!

ವಿಶ್ವವೇ ವೈರಸ್‌ಗೆ ತತ್ತರ, ಚೇತರಿಕೊಳ್ಳುತ್ತಿದೆ ಚೀನಾ!

ಕೊರೊನಾವೈರಸ್‌ ನಿಂದಾಗಿ ವಿಶ್ವವೇ ತತ್ತರಿಸಿ ಹೋಗುತ್ತಿರುವಾಗ ಮೊದಲು ವೈರಸ್‌ಗೆ ತುತ್ತಾದ ಚೀನಾ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಕೊರೊನಾ ವೈರಸ್ ಕೇಂದ್ರ ಬಿಂದು ರಾಷ್ಟ್ರ ಚೀನಾ ಕೈಗಾರಿಕೆಗಳನ್ನು ಪುನಾರರಂಭ ಮಾಡಿದೆ.

ಇದುವರೆಗೂ ಚೀನಾದಲ್ಲಿ (ಮಾರ್ಚ್ 27)ರಂದು ಚೀನಾದಲ್ಲಿ 81,340 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 74,588 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನುಳಿದ 3,292 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಚೀನಾದಲ್ಲಿ ಕೊರೊನಾ ಸಾವಿಗಿಂತ ಹೆಚ್ಚಾಗಿ ಅಂದರೆ 70 ಪರ್ಸೆಂಟ್‌ಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

ಚೀನಾಗಿಂತ ಹೆಚ್ಚು ವೈರಸ್‌ನಿಂದ ಆಘಾತ ಅನುಭವಿಸಿರುವ ಇಟಲಿ

ಚೀನಾಗಿಂತ ಹೆಚ್ಚು ವೈರಸ್‌ನಿಂದ ಆಘಾತ ಅನುಭವಿಸಿರುವ ಇಟಲಿ

ಚೀನಾವು ಹೇಗೆ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಆದರೆ ಸುಮಾರು 6 ರಿಂದ 7 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಇಟಲಿ ಮಾತ್ರ ಪಡಬಾರದ ಕಷ್ಟ ಕಾಣುತ್ತಿದೆ. ದಿನೇ ದಿನೇ ಏನಿಲ್ಲಾ ಅಂದರೂ 400 ರಿಂದ 500 ಜನರು ಇಟಲಿಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಈ ಮೂಲಕ ಚೀನಾಗಿಂತ ಅಧಿಕ ಸಾವಿನ ಪ್ರಮಾಣ ದಾಖಲಾಗುತ್ತಿದೆ.

80 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, 8,000 ಕ್ಕೂ ಅಧಿಕ ಸಾವು
 

80 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, 8,000 ಕ್ಕೂ ಅಧಿಕ ಸಾವು

ವಿಶ್ವದ ಯಾವುದೇ ರಾಷ್ಟ್ರದಲ್ಲಿ ಕಾಣದ ಪ್ರಮಾಣದಲ್ಲಿ ಹೆಚ್ಚು ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಈ ಇಟಲಿ ರಾಷ್ಟ್ರದಲ್ಲಿ. ಚೀನಾದಲ್ಲಿ ವೈರಸ್ ಹುಟ್ಟಿದರೂ ಅದರಿಂದ ಹೆಚ್ಚು ಆಘಾತ ಅನುಭವಿಸಿರುವುದು ಇಟಲಿ.

ಕೊರೊನಾವೈರಸ್‌ ನಿಂದಾಗಿ ಇಟಲಿ ರಾಷ್ಟ್ರವೂ ಸಂಪೂರ್ಣ ನೆಲಕಚ್ಚಿದ್ದು, ಭಾರತೀಯ ಕಾಲಮಾನ ಪ್ರಕಾರ ಮಾರ್ಚ್‌ 27 ಸಂಜೆ 5 ಗಂಟೆ ಸುಮಾರಿಗೆ ಇಟಲಿಯಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 80,589 ಆಗಿದೆ. ಇದರಲ್ಲಿ ಸಾವನ್ನಪಿದರ ಸಂಖ್ಯೆಯು 8,215ಕ್ಕೂ ಅಧಿಕ. ಅಂದರೆ ಇಟಲಿಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಪ್ರಮಾಣ ಚೀನಾಗಿಂತಲೂ ಎರಡು ಪಟ್ಟು ಹೆಚ್ಚಾಗಿದೆ.

ಇಟಲಿಗೂ-ಚೀನಾಗೂ ಇರುವ ಸಂಪರ್ಕವಾದ್ರೂ ಏನು?

ಇಟಲಿಗೂ-ಚೀನಾಗೂ ಇರುವ ಸಂಪರ್ಕವಾದ್ರೂ ಏನು?

ಇಟಲಿಯ ಉತ್ತರ ಭಾಗವು ಸಾಂಪ್ರದಾಯಿಕವಾಗಿ ಹೆಚ್ಚು ಗಾರ್ಮೆಂಟ್ಸ್‌ಗಳನ್ನು ಹೊಂದಿದೆ. ಇಲ್ಲಿ ಬುಚ್ಚಿ ಅಂಡ್ ಪ್ರಾಡಾ ಸೇರಿದಂತೆ ವಿಶ್ವದ ದೊಡ್ಡ ದೊಡ್ಡ ಬ್ರ್ಯಾಂಡೆಡ್ ಬಟ್ಟೆಗಳು ತಯಾರಾಗುತ್ತವೆ.

ಚೀನಾ ಜಗತ್ತಿನಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಉತ್ಪಾದನೆಯನ್ನು ಮಾಡಿಕೊಡುತ್ತದೆ. ಅದರಲ್ಲೂ ವಿಶೇಷ ಅಂದ್ರೆ ಇಟಲಿಯಲ್ಲಿರುವ ಗಾರ್ಮೆಂಟ್ಸ್‌ಗಳು ಬಹುತೇಕ ಚೀನಾದೊಂದಿಗೆ ಕೆಲಸ ಮಾಡುತ್ತವೆ. ಬಹುತೇಕ ಇಟಲಿಯ ಬಟ್ಟೆ ಉತ್ಪಾದನೆ ಮಾಡುವ ಗಾರ್ಮೆಂಟ್ಸ್‌ಗಳು ಚೀನಾಗೆ ಹೊರಗುತ್ತಿಗೆಯನ್ನು ನೀಡಿವೆ, ಅದರಲ್ಲೂ ವಿಶೇಷವಾಗಿ ವುಹಾನ್‌ಗೆ.

ಇಟಲಿಯಿಂದ ವುಹಾನ್‌ಗಿದೆ ನೇರ ವಿಮಾನ ಸಂಪರ್ಕ

ಇಟಲಿಯಿಂದ ವುಹಾನ್‌ಗಿದೆ ನೇರ ವಿಮಾನ ಸಂಪರ್ಕ

ವುಹಾನ್, ಕೊರೊನಾ ವೈರಸ್ ಕಾಣಿಸಿಕೊಂಡ ಹಾಗೂ ವಿಶ್ವಕ್ಕೆ ಹರಡಲು ಕಾರಣವಾದ ನಗರ. ಈ ನಗರಕ್ಕೆ ಇಟಲಿಯಿಂದ ನೇರ ವಿಮಾನ ಸಂಪರ್ಕವಿದ್ದು, ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಈ ಎರಡು ನಗರಗಳ ನಡುವೆ ಜನರು ವಿಮಾನದಲ್ಲಿ ಪ್ರಯಾಣಿಸುತ್ತಾರೆ.

ಇಟಲಿಯ ಕೈಗಾರಿಕೆಯಲ್ಲಿ 1 ಲಕ್ಷ ಚೀನಿಯರು ಕೆಲಸ ನಿರ್ವಹಿಸುತ್ತಾರೆ

ಇಟಲಿಯ ಕೈಗಾರಿಕೆಯಲ್ಲಿ 1 ಲಕ್ಷ ಚೀನಿಯರು ಕೆಲಸ ನಿರ್ವಹಿಸುತ್ತಾರೆ

ಇಟಲಿಯಲ್ಲಿ ಹೆಚ್ಚಿನ ಕೈಗಾರಿಕೆಗಳಲ್ಲಿ ಚೀನಿಯರು ಸಹ ಕಾರ್ಯ ನಿರ್ವಹಿಸುತ್ತಾರೆ. ಒಂದು ವರದಿ ಪ್ರಕಾರ ಇಟಲಿಯಲ್ಲಿ ಮೂರು ಲಕ್ಷಕ್ಕೂ ಅಧಿಕ ಚೀನಿಯರು ಕೆಲಸ ಮಾಡುತ್ತಾರೆ. ಅದರಲ್ಲೂ ಇಟಲಿಯ ಅನೇಕ ಗಾರ್ಮೆಂಟ್ಸ್‌ಗಳನ್ನು ಚೀನಿಯರೇ ಖರೀದಿ ಮಾಡಿ ಮುನ್ನೆಡೆಸುತ್ತಿದ್ದಾರೆ. ಈ ಗಾರ್ಮೆಂಟ್ಸ್‌ಗಳಲ್ಲಿ 90 ಪರ್ಸೆಂಟ್‌ನಷ್ಟು ಚೀನಿಯರೇ ಕೆಲಸ ನಿರ್ವಹಿಸುತ್ತಿದ್ದಾರೆ.

ಕೈ ಮೀರಿ ಹೋದಾಗ ಎಚ್ಚೆತ್ತುಕೊಂಡ ಇಟಲಿ ಸರ್ಕಾರ

ಕೈ ಮೀರಿ ಹೋದಾಗ ಎಚ್ಚೆತ್ತುಕೊಂಡ ಇಟಲಿ ಸರ್ಕಾರ

ಚೀನಾದ ವುಹಾನ್‌ನಲ್ಲಿ ಮೊದಲು ಕೊರೊನಾವೈರಸ್ ಕಾಣಿಸಿಕೊಂಡ ತಕ್ಷಣ ,ಅದರ ಹರಡುವಿಕೆ ಕುರಿತು ಇಟಲಿ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮೂರು ಲಕ್ಷಕ್ಕೂ ಅಧಿಕ ಚೀನಿಯರು ತನ್ನಲ್ಲಿ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಬಹುಶಃ ಇಟಲಿ ಸರ್ಕಾರ ಹೆಚ್ಚು ಗಮನ ಕೊಡದೇ ಇರುವುದು ದೊಡ್ಡ ಪ್ರಮಾದಕ್ಕೆ ಎಡೆಮಾಡಿಕೊಟ್ಟಿತು.

ಇಟಲಿ ಸರ್ಕಾರದ ಬೇಜವಾಬ್ದಾರಿ ತನದಿಂದ 8 ಸಾವಿರಕ್ಕೂ ಅಧಿಕ ಜನರು ಪ್ರಾಣ ತೆತ್ತಿದ್ದಾರೆ. ಇದರ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗಲು ತಜ್ಞರು ಎರಡು ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ.

ಮೊದಲನೆಯದು: 23 ಪರ್ಸೆಂಟ್ ಜನರು 65 ವರ್ಷ ಮೇಲ್ಪಟ್ಟವರು

ಮೊದಲನೆಯದು: 23 ಪರ್ಸೆಂಟ್ ಜನರು 65 ವರ್ಷ ಮೇಲ್ಪಟ್ಟವರು

ಇಟಲಿಯಲ್ಲಿ ಕೊರೊನಾಯಿಂದ ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ. 40 ವರ್ಷ ಮೇಲ್ಪಟ್ಟವರು ಇಟಲಿಯಲ್ಲಿ 60 ಪರ್ಸೆಂಟ್ ಜನರಿದ್ದಾರೆ. ಇದರಲ್ಲಿ 23 ಪರ್ಸೆಂಟ್ ಜನರು 65 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಈ ವಯಸ್ಸಿನವರಾಗಿದ್ದಾರೆ.

ಎರಡನೆಯದು: ಇಟಲಿಯ ಕೈಗಾರಿಕೆಗಳು ಚೀನಾ ಮೇಲೆ ಅವಲಂಬನೆಯಾಗಿರುವುದು

ಎರಡನೆಯದು: ಇಟಲಿಯ ಕೈಗಾರಿಕೆಗಳು ಚೀನಾ ಮೇಲೆ ಅವಲಂಬನೆಯಾಗಿರುವುದು

ಇಟಲಿಯ ಬಹುತೇಕ ಗಾರ್ಮೆಂಟ್ಸ್‌ಗಳು, ಕೈಗಾರಿಕೆಗಳು ಚೀನಾದ ಮಾರುಕಟ್ಟೆ ಹಾಗೂ ಉತ್ಪಾದನೆ ಮೇಲೆ ಅವಲಂಬನೆಯಾಗಿರುವುದು ದೊಡ್ಡ ಹಾನಿಗೆ ಎಡೆಮಾಡಿಕೊಟ್ಟಿದೆ. ಇಟಲಿಯ ಗಾರ್ಮೆಂಟ್ಸ್‌ಗಳು 100 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಪ್ರಮಾಣದ ಮಾರುಕಟ್ಟೆ ಮೌಲ್ಯವು ಚೀನಾ ಮೇಲೆ ಅವಲಂಬಿತವಾಗಿದೆ.

ಬಟ್ಟೆ ಉತ್ಪಾದನೆ ಮೇಲೆ ಚೀನಾದ ಮೇಲೆ ಅವಲಂಭನೆಯ ಜೊತೆಗೆ ಅತಿ ಹೆಚ್ಚು ಗ್ರಾಹಕರೂ ಕೂಡ ಚೀನಿಯರೇ ಆಗಿರುವುದು ಇಟಲಿಗೆ ದೊಡ್ಡ ಮಟ್ಟಿಗೆ ದುಷ್ಪರಿಣಾಮ ಬೀರಿದೆ. ಅಲ್ಲದೆ ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಸಂಖ್ಯೆಯಿಂದ ಅಲ್ಲಿನ ಸರ್ಕಾರವು ದಿಕ್ಕೇ ತೋಚದಂತಾಗಿದೆ.

ಇಟಲಿಯನ್ನೇ ಹಿಂದಿಕ್ಕಿದ ಅಮೆರಿಕಾ

ಇಟಲಿಯನ್ನೇ ಹಿಂದಿಕ್ಕಿದ ಅಮೆರಿಕಾ

ಜಾಗತಿಕವಾಗಿ ಅತಿ ಹೆಚ್ಚು ಕೊರೊನಾವೈರಸ್ ಸೋಂಕು ದೃಢಪಟ್ಟ ರಾಷ್ಟ್ರಗಳಲ್ಲಿ ಇಲ್ಲಿಯವರೆಗೂ ಇಟಲಿಯು ಮೊದಲ ಸ್ಥಾನದಲ್ಲಿತ್ತು. ಆದರೆ ಈಗ ಅಮೆರಿಕಾ ಇಟಲಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿ ಡ್ಯಾಶ್ ಬೋರ್ಡ್ ಅಂಕಿ ಅಂಶದ ಪ್ರಕಾರ, ಭಾರತೀಯ ಕಾಲಮಾನ ಪ್ರಕಾರ ಮಾರ್ಚ್‌ 27 ಸಂಜೆ 5 ಗಂಟೆ ಸುಮಾರಿಗೆ ಅಮೆರಿಕದಲ್ಲಿ ಕೋವಿಡ್ 19 ದೃಢಪಟ್ಟವರ ಸಂಖ್ಯೆ 82,577 ಮಂದಿ, ಸಾವನ್ನಪ್ಪಿದವರ ಸಂಖ್ಯೆ 1,300ರ ಗಡಿದಾಟಿದೆ. ಇಂದು 300ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

English summary

Why Coronavirus Most Effected On Itali More Than China

In this article explained why itali suffered coronavirus effect more than china
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X