For Quick Alerts
ALLOW NOTIFICATIONS  
For Daily Alerts

Stock Market: ಶೀಘ್ರದಲ್ಲೇ ಪೇಟಿಎಂ ಷೇರುದಾರರಿಗೆ ಸಿಹಿಸುದ್ದಿ!

|

ನವದೆಹಲಿ, ಡಿಸೆಂಬರ್ 09: ಡಿಜಿಟಲ್ ಹಣಕಾಸು ಸೇವಾ ಸಂಸ್ಥೆ ಆಗಿರುವ ಪೇಟಿಎಂ ಕಂಪನಿಯು ತನ್ನ ಷೇರುಗಳ ಮರುಖರೀದಿಯ ಪ್ರಸ್ತಾಪವನ್ನು ಪರಿಗಣಿಸುವ ನಿಟ್ಟಿನಲ್ಲಿ ಡಿಸೆಂಬರ್ 13ರಂದು ಮಹತ್ವದ ಸಭೆ ಕರೆಯಲಾಗುವುದು ಎಂದು ತಿಳಿಸಿದೆ.

 

ಮುಂದಿನ ವಾರದಲ್ಲಿ ನಡೆಯಲಿರುವ ಪೇಟಿಎಂ ಕಂಪನಿ ಮಂಡಳಿ ಸಭೆಯಲ್ಲಿ ತನ್ನ ಷೇರುದಾರರಿಗೆ ಲಾಭದಾಯಕವಾಗಬಹುದಾದ ಕಂಪನಿಯ ದ್ರವ್ಯತೆಯ ಸ್ಥಿತಿಯನ್ನು ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಷೇರುಗಳ ಮರುಖರೀದಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

 

ಎಲ್‌ಐಸಿ ಮುಖ್ಯಸ್ಥರಾಗಿ ಖಾಸಗಿ ವಲಯದ ವೃತ್ತಿಪರರ ನೇಮಕಾತಿಗೆ ಕೇಂದ್ರ ಚಿಂತನೆ!ಎಲ್‌ಐಸಿ ಮುಖ್ಯಸ್ಥರಾಗಿ ಖಾಸಗಿ ವಲಯದ ವೃತ್ತಿಪರರ ನೇಮಕಾತಿಗೆ ಕೇಂದ್ರ ಚಿಂತನೆ!

ಕಳೆದ ತನ್ನ ಆದಾಯದ ವರದಿ ಪ್ರಕಾರ, ಪೇಟಿಎಂ ಸಂಸ್ಥೆಯು 9,182 ಕೋಟಿ ರೂಪಾಯಿ ಮೌಲ್ಯದ ಲಿಕ್ವಿಡಿಟಿಯನ್ನು ಹೊಂದಿದೆ. ಈ ಕಂಪನಿಯ ಲಿಕ್ವಿಡಿಟಿಯನ್ನು ನಗದು ರೂಪದಲ್ಲಿ ರಹಸ್ಯವಾಗಿಡುವ ಸಾಮರ್ಥ್ಯದಿಂದ ಅಳೆಯಲಾಗುತ್ತದೆ.

Stock Market: ಶೀಘ್ರದಲ್ಲೇ ಪೇಟಿಎಂ ಷೇರುದಾರರಿಗೆ ಸಿಹಿಸುದ್ದಿ!

ಡಿಸೆಂಬರ್ 13ರ ಮಂಗಳವಾರ ಮಂಡಳಿ ಸಭೆ:

"ಮುಂದಿನ ಡಿಸೆಂಬರ್ 13ರ ಮಂಗಳವಾರದಂದು ಪೇಟಿಎಂ ಕಂಪನಿಯ ಸಂಪೂರ್ಣವಾಗಿ ಪಾವತಿಸಿದ ಈಕ್ವಿಟಿ ಷೇರುಗಳ ಮರುಖರೀದಿಯ ಪ್ರಸ್ತಾಪವನ್ನು ಪರಿಗಣಿಸಲು ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯನ್ನು ಕರೆಯಲಾಗಿದೆ," ಎಂದು ಪೇಟಿಎಂ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ. ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 1,914 ಕೋಟಿ ರೂಪಾಯಿ ಆಗಿದೆ.

"ಈ ಕಂಪೆನಿಯು ಚಾಲ್ತಿಯಲ್ಲಿರುವ ಹಣಕಾಸಿನ ಸ್ಥಿತಿಯನ್ನು ಗಮನಿಸಿದರೆ, ಮರುಖರೀದಿಯು ನಮ್ಮ ಷೇರುದಾರರಿಗೆ ಲಾಭದಾಯಕವಾಗಬಹುದು ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕಂಪನಿಯು ತನ್ನ ಇತ್ತೀಚಿನ ವಿಶ್ಲೇಷಕರ ಸಭೆಯಲ್ಲಿ ಪ್ರಮುಖ ಬೆಳವಣಿಗೆಯ ಬಗ್ಗೆ ವಿವರಿಸಿದೆ. ಮುಂದಿನ 12-18 ತಿಂಗಳುಗಳಲ್ಲಿ ನಗದು ಹರಿವು ಧನಾತ್ಮಕವಾಗಿ ಪರಿಣಮಿಸುವ ನಿರೀಕ್ಷೆಯಿದೆ.

ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದ ಪೇಟಿಎಂ ಷೇರು:

ಕಳೆದ ನವೆಂಬರ್ 2021ರಲ್ಲಿ ಪೇಟಿಎಂ ಕಂಪನಿಯು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ತನ್ನ ಕಂಪನಿ ಹೆಸರನ್ನು ಸೇರಿಸಿತ್ತು. ಪೇಟಿಎಂ ತನ್ನ ಷೇರುಗಳನ್ನು 2,150 ರೂಪಾಯಿಗೆ ಒಂದರಂತೆ ಹಂಚಿಕೆ ಮಾಡಿತು. ಆದರೆ ಪೇಟಿಎಂ ಕಂಪನಿಯ ಷೇರು ಮೌಲ್ಯವು 1,950 ರೂಪಾಯಿಗೆ ವಹಿವಾಟು ಆರಂಭಿಸಿತು. ಈ ಷೇರು ಕಳೆದ ತಿಂಗಳು 441ರೂಪಾಯಿ ಇಳಿಕೆಯಾಗಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿತ್ತು.

English summary

Why Paytm Company Will Consider Shares Buyback

Why Paytm Company Will Consider Shares Buyback. Read Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X