For Quick Alerts
ALLOW NOTIFICATIONS  
For Daily Alerts

ವಿಪ್ರೋ ನಾಲ್ಕನೇ ತ್ರೈಮಾಸಿಕ ವರದಿ: ಆದಾಯ 16,334 ಕೋಟಿ ರೂಪಾಯಿ

|

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೊ 2020-21ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ಬಲವಾಗಿ ಬೆಳೆದಿದೆ. ಈ ಅವಧಿಯಲ್ಲಿ ಕಂಪನಿಯ ಐಟಿ ವ್ಯವಹಾರದ ಆದಾಯ 16,334 ಕೋಟಿ ರೂ. ಆಗಿದ್ದು ಇದು ಸಿಎನ್‌ಬಿಸಿ-ಟಿವಿ 18 ನಿರೀಕ್ಷೆಗಿಂತ ಹೆಚ್ಚಾಗಿದೆ.

 

ತ್ರೈಮಾಸಿಕ ಆಧಾರದ ಮೇಲೆ ಕಂಪನಿಯ ಏಕೀಕೃತ ಲಾಭವು ಶೇಕಡಾ 0.1 ರಷ್ಟು ಏರಿಕೆಯಾಗಿ 2,972.3 ಕೋಟಿ ರೂ. ಆಗಿದ್ದು ಅಂತೆಯೇ, ನಾಲ್ಕನೇ ತ್ರೈಮಾಸಿಕದಲ್ಲಿ ಸಿಸಿ ಆದಾಯದ ಬೆಳವಣಿಗೆಯು ಶೇಕಡಾ 3 ರಷ್ಟು ಹೆಚ್ಚಾಗಿದೆ. ಡಾಲರ್ ಗಳಿಕೆಯಲ್ಲಿ ಶೇಕಡಾ 3.9 ರಷ್ಟು ಏರಿಕೆ ಕಂಡಿದೆ.

 
ವಿಪ್ರೋ ನಾಲ್ಕನೇ ತ್ರೈಮಾಸಿಕ ವರದಿ: ಆದಾಯ 16,334 ಕೋಟಿ ರೂಪಾಯಿ

ಈ ಸಂದರ್ಭದಲ್ಲಿ ಕಂಪನಿಯ ಫಲಿತಾಂಶಗಳ ಕುರಿತು ಮಾತನಾಡಿದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯೆರ್ರಿ ಡೆಲ್ಪೋರ್ಟೆ, "ನಾವು ಸತತ ಮೂರನೇ ತ್ರೈಮಾಸಿಕದಲ್ಲಿ ಬಲವಾದ ಫಲಿತಾಂಶಗಳನ್ನು ಕಂಡಿದ್ದೇವೆ. ಈ ಅವಧಿಯಲ್ಲಿ, ಕಂಪನಿಯು ಬಹಳ ದೊಡ್ಡ ವ್ಯವಹಾರಗಳನ್ನು ಪಡೆದುಕೊಂಡಿದೆ ಮತ್ತು ಕಾರ್ಯಾಚರಣೆಯ ಅಂಚುಗಳು ಸಹ ಸುಧಾರಣೆಯನ್ನು ತೋರಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿಯೇ, ನಾವು ಕ್ಯಾಪ್ಕೊವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ, ಇದು ಕಂಪನಿಯು ಮಾಡಿದ ಅತಿದೊಡ್ಡ ಸ್ವಾಧೀನವಾಗಿದೆ'' ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ನಾಲ್ಕನೇ ತ್ರೈಮಾಸಿಕವು ಅತ್ಯುತ್ತಮವಾಗಿದೆ ಎಂದು ವಿಪ್ರೊ ಹೇಳಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಮಾಡಿದೆ. ಗಮನಾರ್ಹವಾಗಿ, 2021 ರಲ್ಲಿ, ವಿಪ್ರೋ ಷೇರುಗಳು ಶೇಕಡಾ 8.5ರಷ್ಟು ಹೆಚ್ಚಳವನ್ನು ಕಂಡಿವೆ. ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 6.6 ರಷ್ಟು ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ನಾಲ್ಕನೇ ತ್ರೈಮಾಸಿಕವು ಅತ್ಯುತ್ತಮವಾಗಿದೆ ಎಂದು ವಿಪ್ರೊ ಹೇಳಿದೆ.

English summary

Wipro Q4 Result: IT Services Revenue Growth 2 to 4%

Wipro Q4 Result clocked revenue at Rs 16,334 crore for the quarter, beating CNBC-TV18 analysts' poll estimate of Rs 15,768 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X