For Quick Alerts
ALLOW NOTIFICATIONS  
For Daily Alerts

ಕಾರ್ಮಿಕರ ಹಿತ ರಕ್ಷಣೆ ಕಡೆಗಣನೆ: ಅಮೆಜಾನ್ ವಿರುದ್ಧ ಜರ್ಮನಿಯಲ್ಲಿ ಪ್ರತಿಭಟನೆ

|

ಜರ್ಮನಿ: ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದರೂ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೋವಿಡ್ ತಡೆ ನಿಯಮಗಳನ್ನು ಪಾಲಿಸಲು ಅನುಕೂಲ ಮಾಡಿ ಕೊಡುತ್ತಿಲ್ಲ ಎಂದು ಜರ್ಮನಿಯಲ್ಲಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿವೆ.

ಸೋಮವಾರ ಕಾರ್ಮಿಕರು ಜರ್ಮನಿಯ ಆರು ಅಮೆಜಾನ್ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಆರೂ ಘಟಕಗಳಲ್ಲಿ ಕೋವಿಡ್ ಸೋಂಕು ನಲವತ್ತಕ್ಕೂ ಹೆಚ್ಚು ಮಂದಿಗೆ ಹರಡಿದೆ. ಎರಡು ದಿನ ಕಾರ್ಮಕರು ಲಾಜಿಸ್ಟಿಕ್ ಘಟಕಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಅಮೆಜಾನ್ ನಿಂದ 20,000 ತಾತ್ಕಾಲಿಕ ಹುದ್ದೆ ಸಿಬ್ಬಂದಿ ನೇಮಕಅಮೆಜಾನ್ ನಿಂದ 20,000 ತಾತ್ಕಾಲಿಕ ಹುದ್ದೆ ಸಿಬ್ಬಂದಿ ನೇಮಕ

ಅಮೆಜಾನ್ ತನ್ನ ಕಾರ್ಮಿಕರ ಸುರಕ್ಷತೆಗಿಂತ ಲಾಭವನ್ನು ನೋಡುತ್ತಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಆದರೆ, ಅಮೆಜಾನ್ ಆರೋಪಗಳನ್ನು ತಿರಸ್ಕರಿಸಿದೆ. ಜೂನ್ ವೇಳೆಗೆ ತನ್ನ ಜಾಗತಿಕ ಕಾರ್ಯಪಡೆ ಮತ್ತು ಗ್ರಾಹಕರನ್ನು ಕೋವಿಡ್ -19 ಸೋಂಕಿನ ಅಪಾಯದಿಂದ ರಕ್ಷಿಸುವ ಕ್ರಮಗಳಿಗಾಗಿ 4 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗಿದೆ ಎಂದು ಹೇಳಿದೆ.

ಕಾರ್ಮಿಕರ ಹಿತ ಕಡೆಗಣನೆ: ಅಮೆಜಾನ್ ವಿರುದ್ಧ ಜರ್ಮನಿಯಲ್ಲಿ ಪ್ರತಿಭಟನೆ

ಅಮೆರಿಕದ ನಂತರ ಅತಿದೊಡ್ಡ ಮಾರುಕಟ್ಟೆಯಾದ ಜರ್ಮನಿಯಲ್ಲಿ, ಅಮೆಜಾನ್ ಫೆಬ್ರವರಿಯಿಂದ 470 ಮಿಲಿಯನ್ ಸ್ಯಾನಿಟೈಸರ್ ಬಾಟಲಿಗಳು, 21 ಮಿಲಿಯನ್ ಜೋಡಿ ಕೈಗವಸುಗಳು, 19 ಮಿಲಿಯನ್ ಮುಖವಾಡಗಳು ಮತ್ತು ಇತರ ಉತ್ಪನ್ನಗಳನ್ನು ನೀಡಿದೆ ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ. (ಮೂಲ; ಹಿಂದೂಸ್ತಾನ್ ಟೈಮ್ಸ್).

English summary

Workers Welfare Disregard Ahead Of Coronavirus: Protests In Germany Against Amazon

Workers Welfare Disregard Ahead Of Coronavirus: Protests In Germany Against Amazon,
Story first published: Monday, June 29, 2020, 17:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X