For Quick Alerts
ALLOW NOTIFICATIONS  
For Daily Alerts

ಭಾರತ-ಪಾಕಿಸ್ತಾನದಲ್ಲಿ ಮಾತ್ರ ಆರ್ಥಿಕ ಪ್ರಗತಿ ಕುಂಠಿತ: ವಿಶ್ವಬ್ಯಾಂಕ್ ವರದಿ

|

ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಪ್ರಗತಿಯು ಹೆಚ್ಚು ಕುಂಠಿತಗೊಂಡಿರುವುದು ಭಾರತ ಮತ್ತು ಪಾಕಿಸ್ತಾನದಲ್ಲಿ ಎಂದು ವಿಶ್ವಬ್ಯಾಂಕ್ ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.

''2019ರಲ್ಲಿ ದಕ್ಷಿಣ ಏಷ್ಯಾದ ಆರ್ಥಿಕ ಪ್ರಗತಿಯು 4.9 ಪರ್ಸೆಂಟ್‌ಗೆ ಕುಸಿದಿದೆ. ಆದರೆ ಅದಕ್ಕೂ ಹಿಂದಿನ ವರ್ಷ ಪ್ರಗತಿಯ ಪ್ರಮಾಣವು 7.1ರಷ್ಟಿತ್ತು. ಅದರಲ್ಲೂ ಪ್ರಮುಖವಾಗಿ ಭಾರತ-ಪಾಕಿಸ್ತಾನ ದೇಶದಲ್ಲಿ ಪ್ರಗತಿ ಪ್ರಮಾಣವು ತೀವ್ರ ಕುಸಿದಿದೆ. ಭಾರತದ ವ್ಯಾಪಾರ ಆತ್ಮವಿಶ್ವಾಸದ ಕೊರತೆ, ಸಾಲದ ಕೊರತೆ ಮತ್ತು ಹೂಡಿಕೆ ಕುಸಿತದ ಜೊತೆಗೆ ಗ್ರಾಹಕರ ಬಳಕೆಯು ತೀವ್ರವಾಗಿ ಕುಸಿದಿದೆ'' ಎಂದು ವಿಶ್ವಬ್ಯಾಂಕ್ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಹೇಳಿದೆ.

ಭಾರತ-ಪಾಕಿಸ್ತಾನದಲ್ಲಿ ಮಾತ್ರ ಆರ್ಥಿಕ ಪ್ರಗತಿ ಕುಂಠಿತ: ವಿಶ್ವಬ್ಯಾಂಕ್

ಭಾರತದಲ್ಲಿ ಕಳೆದ ವರ್ಷ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ನಿಧಾನವಾಗಿದೆ. ತಯಾರಿಕೆ ಮತ್ತು ಕೃಷಿ ಕ್ಷೇತ್ರಗಳು ದೊಡ್ಡ ಹೊಡೆತ ತಿಂದಿವೆ. ನಿರುದ್ಯೋಗವು ಚಿಂತೆಗೆ ಕಾರಣವಾಗಿದೆ. ಮೂಲಸೌಕರ್ಯ ಕೊರತೆ ನೀಗಿಸಲು ಸಾಧ್ಯವಿಲ್ಲದಿರುವುದು ಉತ್ಪಾದನೆ ಮತ್ತು ಉದ್ಯೋಗ ಎರಡರ ಮೇಲೂ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಹೇಳಿದೆ.

ಇನ್ನು ವಿಶ್ವಬ್ಯಾಂಕ್ 2020-21ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನು 5 ಪರ್ಸೆಂಟ್‌ಗೆ ಇಳಿಸಿದೆ. ಇದಕ್ಕೂ ಮೊದಲು ಜಿಡಿಪಿ ದರವನ್ನು 6 ಪರ್ಸೆಂಟ್ ಎಂದು ಅಂದಾಜಿಸಿತ್ತು. ಇದರ ಜೊತೆಗೆ ಬಾಂಗ್ಲಾದೇಶದ ಜಿಡಿಪಿ ದರವನ್ನು 7.2 ಪರ್ಸೆಂಟ್‌ಗೆ ತಗ್ಗಿಸಿದೆ. 2019-20ರಲ್ಲಿ ಬಾಂಗ್ಲಾದೇಶದ ಜಿಡಿಪಿ ಬೆಳವಣಿಗೆ 8.13 ಪರ್ಸೆಂಟ್‌ನಷ್ಟಿತ್ತು.

English summary

World Bank Cuts India's GDP Growth For 5 Percent

A World Bank report has pegged India's growth in 2020-21 at five per cent . India-pakistan growth slown down very high
Story first published: Friday, January 10, 2020, 12:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X