For Quick Alerts
ALLOW NOTIFICATIONS  
For Daily Alerts

India's GDP: ಭಾರತದ ಜಿಡಿಪಿ ಬೆಳವಣಿಗೆ ದರ ಏರಿಸಿದ ವಿಶ್ವ ಬ್ಯಾಂಕ್

|

ವಿಶ್ವ ಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಏರಿಸಿದೆ. ಮಂಗಳವಾರ ಈ ಬಗ್ಗೆ ವಿಶ್ವ ಬ್ಯಾಂಕ್ ಘೋಷಣೆ ಮಾಡಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಶೇಕಡ 6.9ಕ್ಕೆ ಏರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತಿದೆ. ಆದ್ದರಿಂದ ಜಿಡಿಪಿ ಏರಲಿದೆ ಎಂದು ತಿಳಿಸಿದೆ.

 

ಇನ್ನು ಅಕ್ಟೋಬರ್‌ನಲ್ಲಿ ವಿಶ್ವ ಬ್ಯಾಂಕ್ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 7.5ರಿಂದ ಶೇಕಡ 6.5ಕ್ಕೆ ತಗ್ಗಿಸಿತ್ತು. ಆದರೆ ಈಗ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ಕಂಡು ಬರುತ್ತಿದ್ದಂತೆ ಏಪ್ರಿಲ್ 2022 -ಮಾರ್ಚ್‌ 2023ರವರೆಗಿನ 2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡ 6.9ರಲ್ಲಿ ಇರಬಹುದು ಎಂದು ಹೇಳಿಕೊಂಡಿದೆ.

 

India's Q2 GDP: ಭಾರತದ ಜಿಡಿಪಿ ಶೇ.6.3ಕ್ಕೆ ಕುಂಠಿತIndia's Q2 GDP: ಭಾರತದ ಜಿಡಿಪಿ ಶೇ.6.3ಕ್ಕೆ ಕುಂಠಿತ

ಭಾರತದ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಅಂದಾಜಿಗಿಂತ ಹೆಚ್ಚು ಆರ್ಥಿಕ ಸ್ಥಿರತೆ ಕಾರಣದಿಂದಾಗಿ ನಾವು ಭಾರತದ ಜಿಡಿಪಿ ಅಂದಾಜನ್ನು ಪರಿಷ್ಕರಣೆ ಮಾಡಿದ್ದೇವೆ ಎಂದು ಕೂಡಾ ವಿಶ್ವ ಬ್ಯಾಂಕ್ ಹೇಳಿಕೊಂಡಿದೆ. ಇನ್ನು ಈ ಹಿಂದೆ ಮೂಡೀಸ್ 2022ರ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 7ಕ್ಕೆ ಇಳಿಸಿದೆ.

ಆದರೆ ದೇಶದ ಮೇಲೆ ಯುಎಸ್, ಯುರೋಪ್ ಪ್ರದೇಶ, ಚೀನಾದ ಪ್ರಭಾವ ಇದೆ. ಹಾಗೆಯೇ ಭಾರತದಲ್ಲಿ ಈ ವರ್ಷ ಹಣದುಬ್ಬರ ಶೇಕಡ 7.1ಕ್ಕೆ ತಲುಪಲಿದೆ ಎಂದು ಕೂಡಾ ಅಂದಾಜಿಸಿದೆ.

 ಭಾರತದ ಜಿಡಿಪಿ ಬೆಳವಣಿಗೆ ದರ ಏರಿಸಿದ ವಿಶ್ವ ಬ್ಯಾಂಕ್

ಭಾರತದ ಜಿಡಿಪಿ ಎಷ್ಟಿದೆ?

ಎರಡನೇ ತ್ರೈಮಾಸಿಕದ ಭಾರತದ ಜಿಡಿಪಿ ಶೇಕಡ 6.3ಕ್ಕೆ ಕುಂಠಿತವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಶೇಕಡ 13.5ರಷ್ಟಿದ್ದ ಜಿಡಿಪಿಯು ಸೆಪ್ಟೆಂಬರ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಶೇಕಡ 6.3ಕ್ಕೆ ಇಳಿದಿದೆ. ಕಳೆದ ವರ್ಷ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 8.4ರಷ್ಟಿತ್ತು. ಆದರೆ ಈ ವರ್ಷ ಶೇಕಡ 6.3ರಷ್ಟಿದೆ.

ಇನ್ನು 2022-23ರ ಹಣಕಾಸು ವರ್ಷದಲ್ಲಿ ಶೇ. 7.3ರಷ್ಟು ಬೆಳವಣಿಗೆ ಆಗಬಹುದು ಎಂದು ಸೆಪ್ಟೆಂಬರ್‌ನಲ್ಲಿ ನಿರೀಕ್ಷಿಸಿದ್ದ ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್, ಇದೀಗ ಅದನ್ನು ಶೇ. 7ಕ್ಕೆ ತಗ್ಗಿಸಿತ್ತು. ಮುಂದಿನ ದಿನಗಳಲ್ಲಿ ವೇಗ ಇನ್ನಷ್ಟು ತಗ್ಗಬಹುದು. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಹೊಸ ಅಂದಾಜು ಮಾಡಿತ್ತು.

ಮೂಡೀಸ್ ಅಂದಾಜು ಎಷ್ಟಿದೆ?

ಮೂಡೀಸ್ 2022ರ ಹಣಕಾಸು ವರ್ಷದ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 7ಕ್ಕೆ ಇಳಿಸಿದೆ. ಭಾರತದ 2022ರ ಜಿಡಿಪಿ ಬೆಳವಣಿಗೆ ದರ ಸುಮಾರು ಶೇಕಡ 9.3ಕ್ಕೆ ಏರಲಿದೆ ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಹೇಳಿದ್ದ ಮೂಡೀಸ್, 2022ರ ನವೆಂಬರ್‌ 11ರಂದು ಭಾರತದ ಜಿಡಿಪಿ ದರವನ್ನು ಕುಗ್ಗಿಸಿದೆ. 2022ರಲ್ಲಿ ಭಾರತದ ಜಿಡಪಿ ಬೆಳವಣಿಗೆ ದರವನ್ನು ಎರಡನೇ ಬಾರಿಗೆ ಮೂಡೀಸ್ ಇಳಿಕೆ ಮಾಡಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಮೂಡೀಸ್ ಜಿಡಿಪಿ ದರವನ್ನು ಶೇಕಡ 8.8ರಿಂದ ಶೇಕಡ 7.7ಕ್ಕೆ ಇಳಿಸಿತ್ತು. ಆದರೆ ಈಗ ಶೇಕಡ 7.7ರಿಂದ ಶೇಕಡ 7ಕ್ಕೆ ಇಳಿಸಿದೆ.

ಈ ವರ್ಷ ಭಾರತದ ಜಿಡಿಪಿ ದರ ಶೇ. 7 ಸಾಧ್ಯತೆ: S&Pಈ ವರ್ಷ ಭಾರತದ ಜಿಡಿಪಿ ದರ ಶೇ. 7 ಸಾಧ್ಯತೆ: S&P

English summary

World Bank Revises Upwards India's GDP Growth Forecast For FY23

The World Bank on Tuesday revised upwards its GDP growth forecast for India to 6.9 per cent for 2022-23.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X