For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ನಿಂದ FPO ಮೂಲಕ 15,000 ಕೋಟಿ ತನಕ ಸಂಗ್ರಹ

|

ಖಾಸಗಿ ವಲಯದ ಯೆಸ್ ಬ್ಯಾಂಕ್ ಫಾಲೋ- ಆನ್ ಪಬ್ಲಿಕ್ ಆಫರ್ (FPO) ಮೂಲಕ 15,000 ಕೋಟಿ ತನಕ ಹಣ ಸಂಗ್ರಹಿಸಲು ಮುಂದಾಗಿದೆ. ಅದಕ್ಕಾಗಿ ಪ್ರತಿ ಷೇರಿಗೆ ಫ್ಲೋರ್ ಪ್ರೈಸ್ (ಮೂಲ ದರ) 12 ರುಪಾಯಿ ನಿಗದಿ ಮಾಡಿದ್ದು, ಜುಲೈ 15ನೇ ತಾರೀಕಿನಿಂದ ಇದು ಆರಂಭ ಆಗಲಿದೆ.

ಬ್ಯಾಂಕ್ ಆಡಳಿತ ಮಂಡಳಿಯ ಬಂಡವಾಳ ಸಂಗ್ರಹ ಸಮಿತಿ (CRC) ಸಭೆಯಲ್ಲಿ ಪ್ರತಿ ಷೇರಿಗೆ ಮೂಲ ಬೆಲೆ 12 ರುಪಾಯಿ ನಿಗದಿ ಮಾಡಲು ಒಪ್ಪಿಗೆ ಸೂಚಿಸಿತು ಎಂದು ಯೆಸ್ ಬ್ಯಾಂಕ್ ನಿಂದ ಬಿಎಸ್ ಇ ಪೈಲಿಂಗ್ ನಲ್ಲಿ ತಿಳಿಸಲಾಗಿದೆ. ಎಫ್ ಪಿಒದ ಗರಿಷ್ಠ ದರವು ಪ್ರತಿ ಷೇರಿಗೆ 13 ರುಪಾಯಿ.

ಸಾಲ ತೀರಿಸದ ಡಿಶ್ ಟಿವಿಯ 24.19 ಪರ್ಸೆಂಟ್ ಷೇರನ್ನು ಸ್ವಾಧೀನಪಡಿಸಿಕೊಂಡ ಯೆಸ್ ಬ್ಯಾಂಕ್ಸಾಲ ತೀರಿಸದ ಡಿಶ್ ಟಿವಿಯ 24.19 ಪರ್ಸೆಂಟ್ ಷೇರನ್ನು ಸ್ವಾಧೀನಪಡಿಸಿಕೊಂಡ ಯೆಸ್ ಬ್ಯಾಂಕ್

ಇನ್ನು ಕನಿಷ್ಠ 1000 ಷೇರುಗಳಿಗೆ ಅರ್ಜಿ ಹಾಕಬೇಕು. ಅದಕ್ಕಿಂತ ಹೆಚ್ಚಿನದು ಬೇಕಿದ್ದಲ್ಲಿ 1000 ಷೇರುಗಳ ಗುಣಕದಲ್ಲಿ ಹೆಚ್ಚಿಸಿ ಅರ್ಜಿ ಹಾಕಿಕೊಳ್ಳಬೇಕು. ಇನ್ನು ಬ್ಯಾಂಕ್ ಉದ್ಯೋಗಿಯಾಗಿದ್ದಲ್ಲಿ, ಅರ್ಹ ಸಿಬ್ಬಂದಿಗೆ ನಿಗದಿಯಾಗಿರುವ ಪ್ರಮಾಣದಲ್ಲಿ ಪ್ರತಿ ಷೇರಿಗೆ 1 ರುಪಾಯಿ ರಿಯಾಯಿತಿ ದೊರೆಯಲಿದೆ.

ಯೆಸ್ ಬ್ಯಾಂಕ್ ನಿಂದ FPO ಮೂಲಕ 15,000 ಕೋಟಿ ತನಕ ಸಂಗ್ರಹ

ಯೆಸ್ ಬ್ಯಾಂಕ್ ಎಫ್ ಪಿಒ ಜುಲೈ 15, 2020ಕ್ಕೆ ಶುರುವಾದರೆ, ಜುಲೈ 17, 2020ಕ್ಕೆ ಕೊನೆಯಾಗುತ್ತದೆ. ಬ್ಯಾಂಕ್ ಸಿಬ್ಬಂದಿಗೆ 200 ಕೋಟಿ ರುಪಾಯಿ ಮೌಲ್ಯದ ಷೇರುಗಳು ಮೀಸಲಿರಿಸಲಾಗಿದೆ. ಯೆಸ್ ಬ್ಯಾಂಕ್ ಷೇರಿನ ಬೆಲೆ ಬಿಎಸ್ ಇಯಲ್ಲಿ ಶುಕ್ರವಾರ (ಜುಲೈ 10, 2020) ಐದು ಪರ್ಸೆಂಟ್ ಇಳಿಕೆ ಕಂಡು, 25.30 ರುಪಾಯಿಗೆ ವಹಿವಾಟು ಮುಗಿಸಿತು.

English summary

Yes Bank Fix Floor Price Of Rs 12 Per Share For FPO To Raise Up To 15 Thousand Crore

Private bank Yes bank fixed floor price of 12 Rupees per share for FPO to raise up to 15,000 crore rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X