ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮಾರ್ಚ್‌ 16ರವರೆಗೆ ED ವಶಕ್ಕೆ

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮಾರ್ಚ್ 16ರವರೆಗೆ ಜಾರಿ ನಿರ್ದೇಶನಾಲಯದ ವಶದಲ್ಲೇ ಇರಲಿದ್ದಾರೆ.

ಈಗಾಗಲೇ ಬಂಧನಕ್ಕೊಳಗಾಗಿರುವ ರಾಣಾ ಕಪೂರ್ ಬಂಧನ ಅವಧಿಯನ್ನು ಮುಂಬೈ ವಿಶೇಷ ನ್ಯಾಯಾಲಯ ಮಾರ್ಚ್ 16ರವರೆಗೆ ವಿಸ್ತರಿಸಿದೆ. ರಾಣಾ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮಾರ್ಚ್‌ 16ರವರೆಗೆ ED ವಶಕ್ಕೆ

ರಾಣಾ ಕಪೂರ್ ಅವರು 30,000 ಕೋಟಿ ಸಾಲ ಸಾಲ ಮಂಜೂರು ಮಾಡಿದ್ದು, ಅದರಲ್ಲಿ 20,000 ಕೋಟಿ ಹಣ ವಸೂಲಾಗದ ಸಾಲ(ಎನ್‌ಪಿಎ) ಆಗಿತ್ತು. ಹೀಗಾಗಿ ರಾಣಾ ವಿರುದ್ಧ ಪ್ರಕರಣ ದಾಖಲಿಸಿ ಇಡಿ ತನಿಖೆ ನಡೆಸುತ್ತಿದೆ.

ರಾಣಾ ಕಪೂರ್ ಅವರನ್ನು ಮಾರ್ಚ್ 8ರಂದು ಮುಂಬೈನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧನ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿತ್ತು. ಕಪೂರ್ ಅವರ ಕುಟುಂಬವು 78 ಕಂಪನಿಗಳೊಂದಿಗೆ ಸಂಬಂಧ ಹೊಂದಿದೆ ಎಂದು ನ್ಯಾಯಾಲಯದಲ್ಲಿ ಇಡಿ ವಾದಿಸಿದೆ. ಅಲ್ಲದೆ ಅವರ ಕುಟುಂಬಕ್ಕೆ ಸಂಪರ್ಕ ಹೊಂದಿರುವ ಕಂಪನಿಗಳನ್ನು ವಿಚಾರಣೆ ಮಾಡುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+