For Quick Alerts
ALLOW NOTIFICATIONS  
For Daily Alerts

ಯೆಸ್‌ ಬ್ಯಾಂಕ್ Q4 ವರದಿ: ದಾಖಲೆಯ 3,788 ಕೋಟಿ ರೂ. ನಷ್ಟ

|

ಖಾಸಗಿ ವಲಯದ ಬ್ಯಾಂಕ್ ಯೆಸ್ ಬ್ಯಾಂಕ್ ಮಾರ್ಚ್ ತ್ರೈಮಾಸಿಕದಲ್ಲಿ ದಾಖಲೆಯ ನಷ್ಟವನ್ನು ಅನುಭವಿಸಿದೆ. 2020ರಲ್ಲಿ ಸಾಕಷ್ಟು ಆರ್ಥಿಕ ಸವಾಲುಗಳನ್ನು ಎದುರಿಸಿದ್ದ ಯೆಸ್‌ ಬ್ಯಾಂಕ್ 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ಅಂದಾಜಿಗಿಂತ ಹೆಚ್ಚಿನ ನಷ್ಟ ಕಂಡಿದೆ.

 

ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ನಷ್ಟವು ನಿರೀಕ್ಷೆಗಿಂತ ಹೆಚ್ಚಾಗಿ 3,788 ಕೋಟಿ ರೂ.ಗೆ ತಲುಪಿದೆ. ಸಾಲದ ನಷ್ಟ ಮತ್ತು ನಿವ್ವಳ ಬಡ್ಡಿ ಆದಾಯದಲ್ಲಿನ ಇಳಿಕೆಯಿಂದಾಗಿ ಯೆಸ್‌ ಬ್ಯಾಂಕ್ ಭಾರೀ ಪ್ರಮಾಣದಲ್ಲಿ ನಷ್ಟವನ್ನು ಕಂಡಿದೆ. ಒಂದು ವರ್ಷದ ಹಿಂದೆ ತ್ರೈಮಾಸಿಕದಲ್ಲಿ 3,668 ಕೋಟಿ ರೂ. ನಷ್ಟ ಎದುರಿಸಿದೆ.

 
ಯೆಸ್‌ ಬ್ಯಾಂಕ್ Q4 ವರದಿ: ದಾಖಲೆಯ 3,788 ಕೋಟಿ ರೂ. ನಷ್ಟ

ಡಿಸೆಂಬರ್‌ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಯೆಸ್‌ ಬ್ಯಾಂಕ್ 148 ಕೋಟಿ ರೂಪಾಯಿ ನಿವ್ವಳ ಲಾಭ ವರದಿ ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ, ಯೆಸ್ ಬ್ಯಾಂಕಿನ ಬಡ್ಡಿ ಆದಾಯವು ಶೇಕಡಾ 22.5 ರಷ್ಟು ಇಳಿದು 986.7 ಕೋಟಿ ರೂ. ತಲುಪಿದೆ.

ಒಂದು ವರ್ಷದ ಹಿಂದೆ ಮಾರ್ಚ್ ತ್ರೈಮಾಸಿಕದಲ್ಲಿ, ಯೆಸ್ ಬ್ಯಾಂಕಿನ ಈ ಆದಾಯ 1,273.70 ಕೋಟಿ ರೂ. ಆಗಿತ್ತು. ಅದೇ ಸಮಯದಲ್ಲಿ, ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ಸಾಲವು ಶೇಕಡಾ 2.7 ರಷ್ಟು ಇಳಿದು 1.66 ಲಕ್ಷ ಕೋಟಿ ರೂ. ತಲುಪಿದೆ.

English summary

Yes Bank Q4 Report: Net Loss Up Rs 3,788 Crore

Private lender Yes Bank's standalone net loss widened marginally to Rs 3,788 crore in the March quarter
Story first published: Friday, April 30, 2021, 20:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X