For Quick Alerts
ALLOW NOTIFICATIONS  
For Daily Alerts

ಜೊಮ್ಯಾಟೊ ತೊರೆದ ಸಹ ಸಂಸ್ಥಾಪಕ ಗೌರವ್ ಗುಪ್ತ: ರಾಜೀನಾಮೆ!

|

ಆಹಾರ ತಂತ್ರಜ್ಞಾನ ವೇದಿಕೆಯ ಜೊಮ್ಯಾಟೊನ ಉನ್ನತ ಕಾರ್ಯನಿರ್ವಾಹಕರಲ್ಲಿ ಒಬ್ಬರಾದ ಗೌರವ್ ಗುಪ್ತಾ ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೌರವ್ ಗುಪ್ತಾ, ಈ ವರ್ಷ ಆಹಾರ ವಿತರಣಾ ದಿಗ್ಗಜ ಜೊಮ್ಯಾಟೊನ ಪ್ರಮುಖ ಸಾರ್ವಜನಿಕ ಕೊಡುಗೆ (ಐಪಿಒ) ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇವರು ಮಂಗಳವಾರ ಕಂಪನಿಗೆ ರಾಜೀನಾಮೆ ನೀಡಿದರು.

ಜೊಮ್ಯಾಟೊದ ತನ್ನ ತಂಡದ ಸದಸ್ಯರು ಮತ್ತು ಸಹೋದ್ಯೋಗಿಗಳನ್ನು ಉದ್ದೇಶಿಸಿ, ಗುಪ್ತಾ ಇ-ಮೇಲ್‌ನಲ್ಲಿ ಬರೆದಿದ್ದಾರೆ, ನಾನು ಹೆಚ್ಚು ಹೇಳಲು ಬಯಸುವುದಿಲ್ಲ, ಎಲ್ಲಾ ಅನುಭವಗಳಿಗಾಗಿ ಕಂಪನಿಯಲ್ಲಿರುವ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು.

2015 ರಲ್ಲಿ ಜೊಮಾಟೊಗೆ ಸೇರಿದ ಗುಪ್ತಾ 2018 ರಲ್ಲಿ ಮುಖ್ಯ ಆಪರೇಟಿಂಗ್ ಆಫೀಸರ್ ಆಗಿ ಮತ್ತು 2019 ರಲ್ಲಿ ಸಂಸ್ಥಾಪಕರಾಗಿ ಬಡ್ತಿ ಹೊಂದಿದರು. ಅವರು ಐಪಿಒಗೆ ಮುಂಚಿತವಾಗಿ ಕಂಪನಿಯ ಮುಖ್ಯ ವ್ಯಕ್ತಿಯಾಗಿ ಹೊರಹೊಮ್ಮಿದ್ದರು, ಹೂಡಿಕೆದಾರರು ಮತ್ತು ಮಾಧ್ಯಮಗಳೊಂದಿಗೆ ಚರ್ಚೆಗಳನ್ನು ನಡೆಸಿದರು.

ಕಳೆದ ಹಲವು ವರ್ಷಗಳಲ್ಲಿ ಭಾರತದ ಮನೆಗಳಲ್ಲಿ ಅತ್ಯಂತ ಪರಿಚಿತ ಹೆಸರುಗಳಲ್ಲಿ ಒಂದಾಗಿರುವ ಆಹಾರ ತಂತ್ರಜ್ಞಾನ ಜೊಮ್ಯಾಟೊ ಆರಂಭದ ದಿನಗಳ ಪ್ರಯಾಣವನ್ನ ನೆನಪಿಸಿಕೊಳ್ಳುತ್ತಾ ''ಜೊಮ್ಯಾಟೊವನ್ನು ಮುನ್ನಡೆಸಲು ನಮ್ಮಲ್ಲಿ ಉತ್ತಮ ತಂಡವಿದೆ ಮತ್ತು ನನ್ನ ಪ್ರಯಾಣದಲ್ಲಿ ಪರ್ಯಾಯ ಮಾರ್ಗವನ್ನು ಆಯ್ಕೆ ಮಾಡುವ ಸಮಯ ಬಂದಿದೆ'' ಎಂದು ಹೇಳಿದರು.

ಜೊಮ್ಯಾಟೊ ತೊರೆದ ಸಹ ಸಂಸ್ಥಾಪಕ ಗೌರವ್ ಗುಪ್ತ: ರಾಜೀನಾಮೆ!

ಇನ್ನು ಗೌರವ್ ಜೊಮ್ಯಾಟೊ ಪ್ರಯಾಣ ಕುರಿತು ಮಾತನಾಡಿರುವ ಸಿಇಒ ದೀಪಿಂದರ್ ಗೋಯೆಲ್'' ಧನ್ಯವಾದ ಗೌರವ್‌ ಗುಪ್ತಾ ಕಳೆದ 6 ವರ್ಷಗಳು ಅದ್ಭುತವಾಗಿದೆ ಮತ್ತು ನಾವು ಬಹಳ ದೂರ ಬಂದಿದ್ದೇವೆ. ನಮ್ಮ ಪಯಣವು ಇನ್ನೂ ಮುಂದೆ ಸಾಗಬೇಕಿದೆ. ಉತ್ತಮ ತಂಡ ಹಾಗೂ ನಾಯಕತ್ವ ನಮ್ಮನ್ನು ಮುಂದಕ್ಕೆ ತಂದಿದೆ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ'' ಎಂದು ಹೇಳಿದ್ದಾರೆ.

ಜೊಮ್ಯಾಟೊ ತನ್ನ ಮೆಗಾ ಇನಿಶಿಯಲ್ ಪಬ್ಲಿಕ್ ಆಫರಿಂಗ್ (IPO) ಅನ್ನು ಎರಡು ತಿಂಗಳ ಹಿಂದೆ ಆರಂಭಿಸಿತು. ಆದರೆ ಕಂಪನಿಯು ಜೂನ್ 30, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 356 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ವರದಿ ಮಾಡಿದೆ. ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 916 ಕೋಟಿ ರೂ. ಆಗಿದ್ದು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಿತರಣೆಗಳ ಸಂಖ್ಯೆ ಹೆಚ್ಚಾದ ಕಾರಣ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಜೊಮ್ಯಾಟೊ ಷೇರು ಬೆಲೆ?
ಇಂದಿನ ವಹಿವಾಟಿನಲ್ಲಿ ಇದು 136.20 ರೂಪಾಯಿಗೆ ಇಳಿದಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಬಂಡವಾಳ 1,13,441 ಕೋಟಿ ರೂ. ಆಗಿದ್ದು, ಇದರ ಐಪಿಒ ಜುಲೈ 14 ರಂದು ಪ್ರಾರಂಭವಾಯಿತು ಮತ್ತು ಜುಲೈ 16 ರಂದು ಮುಚ್ಚಲಾಯಿತು. IPO ನಲ್ಲಿ ಅದರ ಷೇರುಗಳ ಬೆಲೆ ಬ್ಯಾಂಡ್ 72-76 ರೂ. ನಷ್ಟಿದೆ.

English summary

Zomato Co-Founder Gaurav Gupta Quits Company

Senior executive Gaurav Gupta has decided to leave Zomato Limited, just two months after the food delivery company raised $1.3 billion in an initial public offering, people familiar with the development said.
Story first published: Tuesday, September 14, 2021, 22:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X