5 ವಿಭಿನ್ನ ಹೂಡಿಕೆದಾರರಿಂದ 250 ಮಿಲಿಯನ್ ಡಾಲರ್ ಸಂಗ್ರಹಿಸಲಿದೆ ಜೊಮಾಟೊ
ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮಾಟೊ ವಿಭಿನ್ನ ಹೂಡಿಕೆದಾರರಿಂದ ಐಪಿಒ ಭಾಗವಾಗಿ ಐದು ವಿಭಿನ್ನ ಹೂಡಿಕೆದಾರರಿಂದ 250 ಮಿಲಿಯನ್ ಡಾಲರ್ ಸಂಗ್ರಹಿಸಲು ಮುಂದಾಗಿದೆ.
ಈ ವರ್ಷದ ಜೂನ್‌ನಲ್ಲಿ ತನ್ನ ಉದ್ದೇಶಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಿಂತ ಅಸ್ತಿತ್ವದಲ್ಲಿರುವ ಮತ್ತು ಹೊಸ ಹೂಡಿಕೆದಾರರಿಂದ ಹೆಚ್ಚುವರಿ 250 ಮಿಲಿಯನ್ ಸಂಗ್ರಹಿಸಲಿದೆ.
5.4 ಬಿಲಿಯನ್ ಡಾಲರ್ ಹಣದ ಮೌಲ್ಯಮಾಪನದಲ್ಲಿ ಜೊಮಾಟೊವನ್ನು ಮೌಲ್ಯೀಕರಿಸಿದೆ ಎಂದು ಕಂಪನಿಯ ಪಾಲನ್ನು ಹೊಂದಿರುವ ಇನ್ಫೋ ಎಡ್ಜ್, ಸ್ಟಾಕ್ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಕಂಪನಿಯ ನಿಧಿಸಂಗ್ರಹದಲ್ಲಿ ಎಡ್ಜ್‌ನ ಪಾಲು ಶೇ. 18.4 ರಷ್ಟಿದೆ.
ಜೊಮಾಟೊ ಕೋರಾ ಮ್ಯಾನೇಜ್‌ಮೆಂಟ್ ಎಲ್‌ಪಿಯಿಂದ 115 ಮಿಲಿಯನ್ ಡಾಲರ್, ಫಿಡೆಲಿಟಿ ಮ್ಯಾನೇಜ್ಮೆಂಟ್ & ರಿಸರ್ಚ್ ಕಂಪನಿ ಎಲ್ಎಲ್ ಸಿ ಮತ್ತು ಅದರ ಅಂಗಸಂಸ್ಥೆಗಳಿಂದ 55 ಮಿಲಿಯನ್ ಡಾಲರ್, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್, ಎಲ್ಎಲ್ ಸಿ ಯಿಂದ 50 ಮಿಲಿಯನ್ ಡಾಲರ್, ಬೋ ವೇವ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್, ಎಲ್ಪಿ ಮತ್ತು ಡ್ರ್ಯಾಗೋನಿಯರ್ ಇನ್ವೆಸ್ಟ್ಮೆಂಟ್ ಗ್ರೂಪ್, ಎಲ್ಎಲ್ ಸಿ ಯಿಂದ 10 ಮಿಲಿಯನ್ ಡಾಲರ್ ಸಂಗ್ರಹಿಸಲಿದೆ.
ಜೊಮಾಟೊ ಇತ್ತೀಚಿನ ನಿಧಿಯು ಸೇರಿದಂತೆ 10 ಹೊಸ ಹೂಡಿಕೆದಾರರಿಂದ ಕಳೆದ ವರ್ಷ ಸಂಸ್ಥೆಯು ಕೈಗೊಂಡ 660 ಮಿಲಿಯನ್ ಪ್ರಾಥಮಿಕ ನಿಧಿಸಂಗ್ರಹವಾಗಿದೆ.