For Quick Alerts
ALLOW NOTIFICATIONS  
For Daily Alerts

ನೀವು ಪರಿಗಣಿಸಬೇಕಾದ 10 ಉಳಿತಾಯ ಮತ್ತು ಹೂಡಿಕೆ ಯೋಜನೆಗಳು

By ಶಾರ್ವರಿ
|

ಹಣವನ್ನು ಉಳಿಸುವುದು ಮತ್ತು ಅದನ್ನು ಗರಿಷ್ಠಗೊಳಿಸುವುದು ಹಣಕಾಸು ಯೋಜನೆಯ ಪ್ರಮುಖವಾದ ಅಂಶವಾಗಿದೆ. ಹಾಗೇ ನೋಡಿದರೆ ಭಾರತದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸಹಾಯ ಮಾಡುವ ಹಲವಾರು ಉಳಿತಾಯ ಯೋಜನೆಗಳು ಇವೆ.

ಪ್ರತಿಯೊಬ್ಬರೂ ತಮ್ಮ ಹಣವನ್ನು ಕಳೆದುಕೊಳ್ಳದೆ ಹಣಕಾಸಿನ ಪ್ರತಿಫಲವನ್ನು ಗರಿಷ್ಠಗೊಳಿಸುವ ಸಲುವಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಸ್ಥಿತಿಯಲ್ಲಿ, ಉತ್ತಮ ಆದಾಯವನ್ನು ಗಳಿಸಲು ಮತ್ತು ಹೂಡಿಕೆ ಕಾರ್ಪಸ್ ಅನ್ನು ನಿರ್ಮಿಸಲು ಮೂಲ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡುವುದು ಸರಿಯಾದ ತಂತ್ರವಲ್ಲ. ಆರ್ಥಿಕ ಉದ್ದೇಶಗಳನ್ನು ಪೂರೈಸಲು ವಿವಿಧ ಹೂಡಿಕೆ ಸಾಧನಗಳಲ್ಲಿ ನಿಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡುವುದು ನಿಜಕ್ಕೂ ಒಳ್ಳೆಯ ಆಯ್ಕೆಯಾಗಿದೆ. ಆದರೆ, ನಿಮ್ಮ ಹಣವನ್ನು ಸುಮ್ಮನೆ ಬ್ಯಾಂಕ್ ಖಾತೆಯಲ್ಲಿ ಉಳಿಸುವುದು ಅಥವಾ ಸಂಗ್ರಹಿಸುವುದು ಉತ್ತಮ ಕ್ರಮವಲ್ಲ.

ಸಾಮಾನ್ಯವಾಗಿ ಆರ್ಥಿಕ ಜವಾಬ್ದಾರಿಗಳನ್ನು ಪೂರೈಸುವುದು ನಮಗೆ ಮಾತ್ರವಲ್ಲ, ನಮ್ಮ ಸುತ್ತಲಿನ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ, ಉಳಿತಾಯ ತಂತ್ರವು ಭವಿಷ್ಯದ ಪೀಳಿಗೆಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಬಹುದು. ನೀವು ಪ್ರತಿ ತಿಂಗಳು ಎಷ್ಟು ಹಣವನ್ನು ಉಳಿಸುತ್ತೀರಿ ಎಂಬುದು ಮುಖ್ಯವಲ್ಲ. ಹಣದುಬ್ಬರದ ಸಮಯದಲ್ಲೂ ನಿಮ್ಮ ವೇತನ ಕಡಿತಗೊಂಡರೂ ಸಮಾಜದ ಅಗತ್ಯಗಳಿಗೆ ನೀವು ಎಷ್ಟು ಒತ್ತು ನೀಡಿದ್ದೀರಾ ಎಂಬುದು ಮುಖ್ಯವಾಗುತ್ತದೆ.

ಮ್ಯೂಚುಯಲ್ ಫಂಡ್‌ಗಳು (MF)

ಮ್ಯೂಚುಯಲ್ ಫಂಡ್‌ಗಳು (MF)

ಮ್ಯೂಚುಯಲ್ ಫಂಡ್‌ಗಳು ಹಣಕಾಸಿನ ವಾಹನಗಳಾಗಿದ್ದು, ಅದು ಸ್ಟಾಕ್‌ಗಳು, ಬಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಲು ಅನುವು ಮಾಡಿಕೊಡುತ್ತದೆ. ರಿಸ್ಕ್ ತೆಗೆದುಕೊಂಡು ದೊಡ್ಡ ಮಟ್ಟದ ಆದಾಯವನ್ನು ಗಳಿಸಲು ಬಯಸುವ ಜನರಿಗೆ ಇದು ಅತ್ಯುತ್ತಮ ಮಾರ್ಗವಾಗಿದೆ. ಮಾರುಕಟ್ಟೆಯ ಬಗ್ಗೆ ಯಾವುದೇ ಪೂರ್ವ ಜ್ಞಾನವಿಲ್ಲದ ಆರಂಭಿಕರಾಗಿ ನೀವು ಹೂಡಿಕೆ ಮಾಡಲು ಬಯಸಿದ್ದರೆ ಮ್ಯೂಚುವಲ್ ಫಂಡ್ ಉತ್ತಮ ಉಳಿತಾಯ ಆಯ್ಕೆಯಾಗಿದೆ. ಭಾರತದಲ್ಲಿ, ಹಲವಾರು ನಿಧಿ ಸಂಸ್ಥೆಗಳು ಹೂಡಿಕೆದಾರರಿಗೆ ಅವಕಾಶ ಒದಗಿಸಿದ್ದು, ಹೂಡಿಕೆದಾರರು ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ SIP (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS)

ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS)

ಇದು ಷೇರುಗಳಲ್ಲಿ ಹೂಡಿಕೆ ಮಾಡುವ ಒಂದು ರೀತಿಯ ಮ್ಯೂಚುಯಲ್ ಫಂಡ್ ಆಗಿದೆ. ತೆರಿಗೆ ಪ್ರಯೋಜನ ಮತ್ತು ಗಮನಾರ್ಹ ಆದಾಯದ ಸಾಧ್ಯತೆಯನ್ನು ಒದಗಿಸುತ್ತದೆ.‌ ಸ್ವಲ್ಪ ಕಾಲದ ನಂತರ ಹಣವನ್ನು ದ್ವಿಗುಣಗೊಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಮೂರು-ವರ್ಷದ ಅರ್ಹತಾ ಅವಧಿ ಮತ್ತು ಕನಿಷ್ಠ ನಿರ್ವಹಣಾ ವೆಚ್ಚಗಳೊಂದಿಗೆ, ಇದು ಕೇವಲ ಹಣವನ್ನು ಉಳಿಸುವುದಲ್ಲದೆ, ನಿಮ್ಮ ಹೂಡಿಕೆಯು ಎಷ್ಟು ಬೆಳೆಯುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಇದು ತೆರಿಗೆ-ಉಳಿತಾಯ ನಿಧಿಯಾಗಿದ್ದು, ಭಾರತೀಯ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80c ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

ನಿಶ್ಚಿತ ಠೇವಣಿ (ಎಫ್‌ಡಿ)

ನಿಶ್ಚಿತ ಠೇವಣಿ (ಎಫ್‌ಡಿ)

ನಿಶ್ಚಿತ ಠೇವಣಿಯು ಒಂದು ರೀತಿಯ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ನೀವು ನಿಗದಿತ ಅವಧಿಗೆ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು. ಜೊತೆಗೆ ಸೆಟ್ ರಿಟರ್ನ್ ಕೂಡ ಪಡೆಯುತ್ತೀರಿ. ಎಫ್‌ಡಿಗಳನ್ನು ಲಿಕ್ವಿಡೇಟ್ ಮಾಡುವುದು ತುಂಬಾ ಸುಲಭ. ತುರ್ತು ನಿಧಿಗಾಗಿ ಹಣ ಉಳಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸಾಮಾನ್ಯ ನಿವಾಸಿಗಳಿಗೆ, FD ಗಳ ಮೇಲಿನ ಬಡ್ಡಿ ದರವು 2.8 ಪ್ರತಿಶತದಿಂದ 6% ವರೆಗೆ ಇರುತ್ತದೆ. ಮತ್ತೊಂದೆಡೆ, ಹಿರಿಯ ವ್ಯಕ್ತಿಗಳು ಕೆಲವು ಸಂಸ್ಥೆಗಳಲ್ಲಿ 7 ಪ್ರತಿಶತದಷ್ಟು ಬಡ್ಡಿಯನ್ನು ಗಳಿಸಬಹುದು. ಭದ್ರತೆ ಮತ್ತು ಖಚಿತವಾದ ಲಾಭವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಪೋಸ್ಟ್ ಆಫೀಸ್ ಉಳಿತಾಯ ಯೋಜನೆ (POSS)

ಪೋಸ್ಟ್ ಆಫೀಸ್ ಉಳಿತಾಯ ಯೋಜನೆ (POSS)

ಭಾರತೀಯ ಅಂಚೆ ಕಛೇರಿಯು ಈ ಯೋಜನೆಯನ್ನು ನೀಡುತ್ತದೆ, ಇದು ತೆರಿಗೆ ಪ್ರಯೋಜನಗಳನ್ನು ಮತ್ತು ಗಣನೀಯ ಹೂಡಿಕೆಯ ಆದಾಯವನ್ನು ಒದಗಿಸುತ್ತದೆ. ಸುರಕ್ಷಿತ ಮತ್ತು ಸ್ಥಿರವಾದ ಉಳಿತಾಯ ತಂತ್ರವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಪ್ರಾರಂಭಿಸಲು ಅಗತ್ಯವಿರುವ ಕನಿಷ್ಠ ಠೇವಣಿ ರೂ 500. ಒಂದೇ ಸ್ಥಳದಲ್ಲಿ ವಾಸಿಸುವ ಇಬ್ಬರು ವ್ಯಕ್ತಿಗಳು ಮತ್ತು ಅವರ ಸಂಗಾತಿಯನ್ನು ಒಳಗೊಂಡಂತೆ ಅವರ ಕುಟುಂಬದ ಸದಸ್ಯರು ಏಕ ಅಥವಾ ಜಂಟಿ ಮಾಲೀಕತ್ವದಲ್ಲಿ ಖಾತೆಗಳನ್ನು ತೆರೆಯಬಹುದು. ಉಳಿತಾಯ ಯೋಜನೆಯು 4% p.a ಬಡ್ಡಿ ದರವನ್ನು ನೀಡುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ (SSY)

ಸುಕನ್ಯಾ ಸಮೃದ್ಧಿ ಯೋಜನೆ (SSY)

ಸರ್ಕಾರವು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಗೆ ಹಣವನ್ನು ಸಂರಕ್ಷಿಸಲು ಹಾಗೂ ಪೋಷಕರನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ತೆರಿಗೆ ಪ್ರಯೋಜನಗಳನ್ನು ಮತ್ತು ಹೆಚ್ಚಿನ ಆದಾಯವನ್ನು ಒದಗಿಸುತ್ತದೆ.‌ ಇದು ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಹಾಕಲು ಬಯಸುವ ಪೋಷಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳು ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯ. ಹೆಣ್ಣು ಮಗುವಿನ ಗರಿಷ್ಠ ವಯಸ್ಸು ಹತ್ತು ವರ್ಷ ಮೀರಬಾರದು. ಈ ಯೋಜನೆಯು ಪ್ರಸ್ತುತ 2022 ರಂತೆ ವಾರ್ಷಿಕ 7.6% ಅನ್ನು ನೀಡುತ್ತಿದೆ.

ಚಿನ್ನದ ಉಳಿತಾಯ ಯೋಜನೆ

ಚಿನ್ನದ ಉಳಿತಾಯ ಯೋಜನೆ

ಈ ಯೋಜನೆಯು ನಿಮಗೆ ಚಿನ್ನದಲ್ಲಿ ಹೂಡಿಕೆ ಮಾಡಲು ಸಹಕಾರಿಯಾಗಿದೆ. ಜೊತೆಗೆ ಹಲವಾರು ತೆರಿಗೆ ಪ್ರಯೋಜನಗಳನ್ನು ಮತ್ತು ದೊಡ್ಡ ಲಾಭದ ಸಾಧ್ಯತೆಯನ್ನು ಒದಗಿಸುತ್ತದೆ. ಹಣದುಬ್ಬರ ಮತ್ತು ಮಾರುಕಟ್ಟೆ ಚಂಚಲತೆಯ ವಿರುದ್ಧ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಅನೇಕ ಆಭರಣ ವ್ಯಾಪಾರಿಗಳು ಚಿನ್ನದ ಉಳಿತಾಯ ಯೋಜನೆಯನ್ನು ನೀಡುತ್ತಾರೆ. ಇದರಲ್ಲಿ ನೀವು ನಿಗದಿತ ಸಂಖ್ಯೆಯ ಮಾಸಿಕ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಆಭರಣಕಾರರು ಅವಧಿಯ ಕೊನೆಯಲ್ಲಿ ಬೋನಸ್ ಅನ್ನು ಸೇರಿಸುತ್ತಾರೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS)

ರಾಷ್ಟ್ರೀಯ ಪಿಂಚಣಿ ಯೋಜನೆ (NPS)

ಈ ಯೋಜನೆಯು ನಿವೃತ್ತಿಯ ಹಣ ಉಳಿತಾಯ ಮತ್ತು ಹಲವಾರು ತೆರಿಗೆ ಪ್ರಯೋಜನಗಳನ್ನು ಹೊಂದಿದೆ. ದೊಡ್ಡ ಲಾಭದ ಸಾಮರ್ಥ್ಯವನ್ನು ಹೊಂದಿದೆ. ಜನರು ತಮ್ಮ ಇಳಿವಯಸ್ಸಿನಲ್ಲಿ ಹಣ ಉಳಿಸಲು ಬಯಸುವವರಿಗೆ ಇದು ಅದ್ಭುತ ಆಯ್ಕೆಯಾಗಿದೆ. ಪಿಂಚಣಿ ಹಣವು ನಿವೃತ್ತಿಯ ತನಕ ಸಂಗ್ರಹಗೊಳ್ಳುತ್ತದೆ. ಕಡಿಮೆ ಖಾತೆ ನಿರ್ವಹಣೆ ವೆಚ್ಚಗಳ ಪರಿಣಾಮವಾಗಿ, ಚಂದಾದಾರರ ಸಂಚಿತ ಲಾಭ ಕೂಡ ಇದರಲ್ಲಿ ದೊರಕುತ್ತದೆ.

ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್‌ಗಳು (ಯುಲಿಪ್ಸ್)

ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್‌ಗಳು (ಯುಲಿಪ್ಸ್)

ಇದು ಜೀವ ವಿಮಾ ರಕ್ಷಣೆಯ ಭದ್ರತೆಯೊಂದಿಗೆ ಗಮನಾರ್ಹ ಲಾಭದ ಸಾಧ್ಯತೆಯನ್ನು ನೀಡುವ ವಿಮಾ ಯೋಜನೆಗಳಾಗಿವೆ. ಸುರಕ್ಷತೆ ಮತ್ತು ಅಭಿವೃದ್ಧಿಗೆ ಅವಕಾಶ ಬಯಸುವ ಜನರಿಗೆ ಇದು ಸೊಗಸಾದ ಆಯ್ಕೆಯಾಗಿದೆ. ನಿಮ್ಮ ಲಾಭವನ್ನು ಹೆಚ್ಚಿಸಲು ನಿಮಗೆ ಸಹಾಯವಾಗುವಂತೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಮಕ್ಕಳ ಹೂಡಿಕೆ ಯೋಜನೆಗಳು

ಮಕ್ಕಳ ಹೂಡಿಕೆ ಯೋಜನೆಗಳು

ಈ ಯೋಜನೆಗಳು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣ ಮತ್ತು ಇತರ ಭವಿಷ್ಯದ ಅಗತ್ಯಗಳಿಗಾಗಿ ಉಳಿಸಲು ಅನುವು ಮಾಡಿಕೊಡುತ್ತದೆ. ಇದು ತೆರಿಗೆ ಪ್ರಯೋಜನಗಳನ್ನು ಮತ್ತು ಗಮನಾರ್ಹ ಆದಾಯವನ್ನು ಒದಗಿಸುತ್ತದೆ. ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುವ ಪೋಷಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಮಕ್ಕಳ ಭವಿಷ್ಯವನ್ನು ರಕ್ಷಿಸಲು ಅತ್ಯಂತ ಪರಿಣಾಮಕಾರಿ ಉಳಿತಾಯ ತಂತ್ರ ಇದಾಗಿದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)

ಈ ಯೋಜನೆಯು ನಿವೃತ್ತಿ ಹೊಂದಿದವರಿಗೆ ಸಹಕಾರಿಯಾಗಿದೆ. ತೆರಿಗೆ ಪ್ರಯೋಜನಗಳನ್ನು ಮತ್ತು ಗಮನಾರ್ಹ ಹೂಡಿಕೆ ಆದಾಯವನ್ನು ನೀಡುತ್ತದೆ. ನಿವೃತ್ತಿ ಸಮಯದಲ್ಲಿ ನಿಮ್ಮ ಹಣವನ್ನು ಉಳಿತಾಯ ಮಾಡಲು ಇದು ಬುದ್ಧಿವಂತ ಮಾರ್ಗಗಳಲ್ಲಿ ಒಂದಾಗಿದೆ. ನೀವು 1000 ರೂ.ಗಳಿಂದ ಆರಂಭಿಸಿ 15 ಲಕ್ಷದವರೆಗೆ ಹೋಗಬಹುದು. ಈ ಯೋಜನೆಯು ಪ್ರಸ್ತುತ ವರ್ಷಕ್ಕೆ 7.4% ನೀಡುತ್ತಿದೆ.

ಬಾಟಮ್ ಲೈನ್

ಪ್ರತಿಯೊಬ್ಬರಿಗೂ ಉಳಿತಾಯ ಯೋಜನೆಯು ಹಣಕಾಸಿನ ಭದ್ರತೆಯನ್ನು ನೀಡುತ್ತದೆ. ನಿಗದಿತ ಹೂಡಿಕೆಗಳ ಮೂಲಕ ಈ ಎಲ್ಲಾ ಉದ್ದೇಶಗಳನ್ನು ಸಲೀಸಾಗಿ ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಹಣವನ್ನು ಉಳಿಸುವುದು ಹಣಕಾಸಿನ ಯೋಜನೆಯಲ್ಲಿ ನಿರ್ಣಾಯಕ ಅಂಶವಾಗಿದೆ. ಭಾರತದಲ್ಲಿ ನಿಮ್ಮ ಹಣವನ್ನು ಹೆಚ್ಚಿಸಲು ಸಹಾಯ ಮಾಡುವ ಹಲವಾರು ಉಳಿತಾಯ ಯೋಜನೆಗಳಿವೆ. ಕ್ರಮಬದ್ಧ ಮತ್ತು ಶಿಸ್ತುಬದ್ಧ ಹೂಡಿಕೆಗಳ ಮೂಲಕ ಹಣವನ್ನು ಹೆಚ್ಚಿಸಲು ವಿವಿಧ ಮಾರ್ಗಗಳನ್ನು ನೀಡಿದೆ. ಇವೆಲ್ಲವೂ ನೀವು ಕಷ್ಟಪಟ್ಟು ಗಳಿಸಿದ ಸ್ವತ್ತುಗಳನ್ನು ರಕ್ಷಿಸಲು ಬಯಸುವ ಗ್ರಾಹಕರಿಗೆ ಅನುಗುಣವಾಗಿರುತ್ತವೆ.

English summary

10 Savings Cum Investment Plans You Should Consider

Saving money and maximizing the money is a crucial component of financial planning, and India offers a number of savings schemes that may help you increase your money.
Story first published: Sunday, April 10, 2022, 11:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X