For Quick Alerts
ALLOW NOTIFICATIONS  
For Daily Alerts

ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?

|

ಕಳೆದ ವರ್ಷದ ಆದಾಯ ತೆರಿಗೆ ಪಾವತಿ ತೆರಿಗೆ ರಿಟರ್ನ್ಸ್ ಪಾವತಿ ಮಾಡದ ಎಷ್ಟೋ ಉದಾಹರಣೆಗಳಿರುತ್ತವೆ. ಇಂಥ ಸಂದರ್ಭದಲ್ಲಿ ಅಂದರೆ ವಿಳಂಬವಾದಲ್ಲಿ ಪುನಃ ರಿಟರ್ನ್ಸ್ ಹೇಗೆ ಪೈಲ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಇಂಥ ವಿಳಂಬವಾಗಿದ್ದಲ್ಲಿ ಚಲನ್ 280ರ ಮೂಲಕ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಆಫ್ ಲೈನ್ ಮೂಲಕ ಹಣ ಪಾವತಿಸುವುದಾದರೂ ಇದೇ ಚಲನ್ ಡೌನ್ ಲೋಡ್ ಮಾಡಿಕೊಂಡು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕಾಗುತ್ತದೆ. ಚೆಕ್ ಅಥವಾ ನಗದು ಮೂಲಕ ಹಣ ಸಂದಾಯ ಮಾಡಬೇಕಾಗುತ್ತದೆ.[ತೆರಿಗೆದಾರ ಮಾರ್ಚ್ 31ರೊಳಗೆ ಮಾಡಬೇಕಾದ್ದೇನು?]

ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?

ವಿಳಂಬವಾಗಿದ್ದರೆ ಹಣ ಪಾವತಿ ಹೇಗೆ?
ಆನ್ ಲೈನ್ ನಲ್ಲಿ ಹಣ ಸಂದಾಯ ಮಾಡುವುದಾದರೆ ಸಂಬಂಧಿಸಿದ ಬ್ಯಾಂಕ್ ನ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರಬೇಕಾಗುತ್ತದೆ.
* ಆದಾಯ ತೆರಿಗೆ ವೆಬ್ ತಾಣಕ್ಕೆ ಭೇಟಿ ನೀಡಿ
* ಚಲನ್ 280 ನ್ನು ಸೆಲೆಕ್ಟ್ ಮಾಡಿಕೊಳ್ಳಿ
* ನಿಮ್ಮ ಮಾಹಿತಿ ಅಂದರೆ, ಪ್ಯಾನ್ ನಂಬರ್, ಅಡ್ರೆಸ್, ವರ್ಷ, ಮೇಜರ್ ಹೆಡ್ ಕೋಡ್, ಮೈನರ್ ಹೆಡ್ ಕೋಡ್, ಪಾವತಿಯ ರೀತಿ, ಬ್ಯಾಂಕ್ ಹೆಸರು ಎಲ್ಲವನ್ನು ನಮೂದಿಸಬೇಕಾಗುತ್ತದೆ.[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]
(ಮೇಜರ್ ಹೆಡ್ ಗೆ ಸಂಬಂಧಿಸಿ 020 ಅಥವಾ 021 ರಲ್ಲಿ ತೆರಿಗೆ ಮೌಲ್ಯಕ್ಕೆ ಅನುಗುಣವಾಗಿ ಒಂದನ್ನು ಟಿಕ್ ಮಾಡಬೇಕಾಗುತ್ತದೆ)
ಡಿಟೆಲ್ಸ್ ಆಫ್ ಪೇಮೆಂಟ್ಸ್ ನಲ್ಲಿ ಮೈನರ್ ಹೆಡ್ ಕುರಿತ ಮಾಹಿತಿ ದಾಖಲು ಮಾಡಿ ಮುಂದುವರಿಯಬೇಕಾಗುತ್ತದೆ.
* ಮತ್ತೊಮ್ಮೆ ಎಲ್ಲ ಮಾಹಿತಿಯನ್ನು ಪರಿಶೀಲಿಸಿ, ಯಾವುದಾದರೂ ಬದಲಾವಣೆ ಇದ್ದರೆ ಎಡಿಟ್ ಆಯ್ಕೆಗೆ ಹೋಗಿ ಮಾಡಬೇಕು.
* ಎಲ್ಲ ಸರಿಯಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಸಬ್ ಮಿಟ್ ಆಯ್ಕೆ ಕ್ಲಿಕ್ ಮಾಡಬೇಕು.
* ಶಿಕ್ಷಣಕ್ಕೆ ಸಂಬಂಧಿಸಿದ ಸೆಸ್ ನ್ನು ದಾಖಲು ಮಾಡಬೇಕಾಗುತ್ತದೆ.
* ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗುತ್ತದೆ. ನಿಮಗೆ ಅಕ್ ನಾಲೆಡ್ಜಮೆಂಟ್ ಸಹ ದೊರೆಯುತ್ತದೆ ಅದರೊಂದಿಗೆ ಚಲನ್ ಐಡೆಂಟಿಫಿಕೇಶನ್ ನಂಬರ್ ವೊಂದನ್ನು (ಸಿಐಎನ್) ನೀಡಲಾಗುತ್ತದೆ.
ಚಲನ್ ಐಡೆಂಟಿಫಿಕೇಶನ್ ನಂಬರ್ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ಹಣ ಸಂದಾಯವಾಗಿರುವ ಬಗ್ಗೆ ನೀಡುವ ಮರುಪಾವತಿ ಪತ್ರ ಇದಾಗಿರುತ್ತದೆ.
* ಏಳು ಅಂಕೆಯ ಬಿಎಸ್ ಆರ್ ಕೋಡ್ ನ್ನು ನೀಡಲಾಗುತ್ತದೆ.
* ತೆರಿಗೆ ತುಂಬಿದ ದಿನಾಂಕ ನಮೂದಾಗಿರುತ್ತದೆ
* ಚಲನ್ ನ ಸೀರಿಯಲ್ ನಂಬರ್ ಇರುತ್ತದೆ.
ಮುಂದೆ ನೀವು ಆದಾಯ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸುವಾಗ ಈ ಎಲ್ಲ ಮಾಹಿತಿಗಳು ಅಗತ್ಯವಾಗಿ ಬೇಕಾಗುತ್ತದೆ. ನಿಮ್ಮ ಚಲನ್ ಕುರಿತಾದ ಮಾಹಿತಿಯನ್ನು ಎನ್ಎಸ್ ಡಿಎಲ್-ಟಿಐಎನ್ ವೆಬ್ ತಾಣದ ಮೂಲಕ ಚಲನ್ ನಂಬರ್ ಬಳಸಿ ಪರಿಶೀಲನೆ ಮಾಡಬಹುದು.[ಗುಡ್ ರಿಟರ್ನ್ಸ್.ಇನ್]

English summary

How To Pay Income Tax Online Which is Due Using Challan 280?

There are cases where an individual assessee fails to file income tax returns of the previous year. One can file the same before March 31, is you have failed to file the previous years tax returns. Any Income Tax due, can be paid by using tax payment challan 280. One can also pay it offline by downloading and submitting the same to designated branch and payment can be made through cheque or cash.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X