For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ

By Mahesh
|

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2016-17ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 29) ಸಂಸತ್ತಿನಲ್ಲಿ ಮಂಡಿಸಿದರು.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಇತ್ತು. ಆದರೆ, ಮನೆ ಬಾಡಿಗೆ ಭತ್ಯೆ ಮಿತಿ ಏರಿಕೆ ಮಾತ್ರ ಹೆಚ್ಚಳ ಮಾಡಲಾಗಿದೆ. ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಜಾರಿಗೊಳಿಸಲಿದೆ. [ಆದಾಯ ತೆರಿಗೆ ಲೆಕ್ಕಾಚಾರ ಹಾಕುವುದು ಹೇಗೆ?]

* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ. [ಸಂಬಳದಾರರ ಗಮನಕ್ಕೆ, ಸ್ಯಾಲರಿ ವ್ಯತ್ಯಾಸ ತಿಳಿದುಕೊಳ್ಳಿ!]

* ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

* 1 ಕೋಟಿ ರು ಅಧಿಕ ಸೂಪರ್ ರಿಚ್ ಗ್ರಾಹಕರಿಗೆ ಶೇ 15ರಷ್ಟು ಸರ್ಚ್ ಚಾರ್ಜ್ ಏರಿಕೆ.

ಆರ್ಥಿಕ ವರ್ಷ: ಏಪ್ರಿಲ್ 01ರಿಂದ ಮಾರ್ಚ್ 31ರ ಅವಧಿ. [ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
ತೆರಿಗೆ ಪಾವತಿ ವರ್ಷ: ಒಂದು ಆರ್ಥಿಕ ವರ್ಷ ಅವಧಿಯಲ್ಲಿ ತೆರಿಗೆ ಪಾವತಿಗೆ ಒಳಪಡುವ ಕಾಲ (assessment year)

ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ

ಉದಾಹರಣೆ: 5 ಲಕ್ಷ ರು ಆದಾಯವಿದ್ದವರಿಗೆ ಏಪ್ರಿಲ್ 2016 ರಿಂದ ಮಾರ್ಚ್ 31, 2017ರ ತನಕ ತೆರಿಗೆ ಪಾವತಿ ವರ್ಷವಾಗಿದೆ. ಜುಲೈ 31, 2017 ರ ತನಕ ಆದಾಯ ತೆರಿಗೆ ಪಾವತಿಗೆ ಅವಕಾಶವಿರುತ್ತದೆ. 2016-17 ರ assessment year ಇದಾಗಿರುತ್ತದೆ.[ತೆರಿಗೆ ಉಳಿಸಲು ಎಚ್‌ಡಿಎಫ್‌ಸಿ ಯುಲಿಪ್‌ನಲ್ಲಿ ಹೂಡಿಕೆ ಮಾಡಿ]

ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ಹಾಗಾಗಿ, ಯಾವುದೇ ತೆರಿಗೆ ಪಾವತಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಯಾರು ಯಾರಿಗೆ ಯಾವ ಮಿತಿ ನೋಡಿ:

ತೆರಿಗೆದಾರರು ಹಾಗೂ ಮಹಿಳೆಯರು
Income Tax Slab (in Rs.)Tax Slab
0 to Rs 2,50,000No tax
2,50,001 to 5,00,00010%
5,00,001 to 10,00,00020%
Above 10,00,00030%

________________________________

ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷ ತನಕ)
Income Tax Slab (in Rs.)Tax Slab
0 to Rs 3,00,000No tax
3,00,001 to 5,00,00010%
5,00,001 to 10,00,00020%
Above 10,00,00030%

__________________________________________

ಹಿರಿಯ ನಾಗರಿಕರು (80 ವರ್ಷ ಅದಕ್ಕಿಂತ ಹೆಚ್ಚು)
Income Tax Slab (in Rs.)Tax Slab
0 to Rs 5,00,000No tax
5,00,001 to 10,00,00020%
Above 10,00,00030%

ತೆರಿಗೆ ದರವು ಸರ್ ಚಾರ್ಜ್, ಎಜುಕೇಷನ್ ಸೆಸ್, ಸೆಕಂಡರಿ ಹಾಗೂ ಉನ್ನತ ಶಿಕ್ಷಣ ಸೆಸ್ ನಿಂದ ಹೊರತುಪಡಿಸಲಾಗಿದೆ.
(ಗುಡ್ ರಿಟರ್ನ್ಸ್ .ಇನ್)

English summary

Income Tax Rates For Financial Year (FY) 2016-17 And Assessment Year (AY) 2017-18

Finance Minister Arun Jaitley presented Union Budget 2016 on February 19, 2016. There were no changes in the income tax slabs for financial year 2016-17 and assessment year 2017-18.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X