For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಬಡ್ಡಿದರ ಇಳಿಕೆ!

By Mahesh
|

ನವದೆಹಲಿ, ಮಾರ್ಚ್ 18: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಶುಕ್ರವಾರ (ಮಾರ್ಚ್ 18) ಸಂಜೆ ವೇಳೆಗೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವವರಿಗೆ ಆಘಾತ ನೀಡಿದೆ. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಸೇರಿದಂತೆ ಕೆಲ ಯೋಜನೆಗಳ ಬಡ್ಡಿ ದರವನ್ನು ಇಳಿಸಲಾಗಿದೆ. ಪಿಪಿಎಫ್ ದರ ಶೇ 8.7 ರಿಂದ ಶೇ 8.1ಕ್ಕೆ ಇಳಿಕೆಯಾಗಿದೆ.

ಉಳಿದಂತೆ ಕಿಸಾನ್ ವಿಕಾಸ್ ಪತ್ರ ದರ ಶೇ 8.7ರಿಂದ ಶೇ 7.8ಕ್ಕೆ ಇಳಿದಿದೆ.

ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಬಡ್ಡಿದರ ಇಳಿಕೆ!

* ಒಂದು ವರ್ಷ ಅವಧಿಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 7.1 ಕ್ಕೆ ಇಳಿಸಲಾಗಿದೆ.
* ಎರಡು ವರ್ಷ ಅವಧಿಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 7.2ಕ್ಕೆ ಇಳಿಸಲಾಗಿದೆ.
* ಮೂರು ವರ್ಷ ಅವಧಿಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.4 ರಿಂದ ಶೇ 7.4ಕ್ಕೆ ಇಳಿಸಲಾಗಿದೆ.
* ಐದು ವರ್ಷ ಅವಧಿಗೆ ಎನ್ ಎಸ್ ಸಿ ಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 8.1 ಕ್ಕೆ ಇಳಿಸಲಾಗಿದೆ.
* ಐದು ವರ್ಷ ಅವಧಿಗೆ ಹಿರಿಯ ನಾಗರಿಕರ ಯೋಜನೆಯಲ್ಲಿ ಹೂಡಿಕೆ ಮೇಲಿನ ಬಡ್ಡಿ ದರವನ್ನು ಶೇ 9.3 ರಿಂದ ಶೇ 8.6ಕ್ಕೆ ಇಳಿಸಲಾಗಿದೆ.
* ಹೆಣ್ಣು ಮಕ್ಕಳ ಯೋಜನೆ ಮೇಲಿನ ಹೂಡಿಕೆಗೆ ಶೇ 9.2 ರಿಂದ ಶೇ 8.6ಕ್ಕೆ ಇಳಿಕೆ.
* ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ದರವನ್ನು ಶೇ 4 ರಂತೆ ಉಳಿಸಲಾಗಿದೆ ( ಗುಡ್ ರಿಟರ್ನ್ಸ್ ,ಇನ್)

English summary

Modi Govt cuts PPF rate from 8.7% to 8.1%

Narendra Modi government today cut the interest rate on a number of small savings scheme, including on the popular Public Provident Fund (PPF) from 8.7 percent to 8.1 percent, and on the Kisan Vikas Patra from 8.7 percent to 7.8 percent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X