Englishहिन्दी മലയാളം தமிழ் తెలుగు

ಪೂರ್ಣಾವಧಿ ಕೆಲಸದ ಜೊತೆ ಹೆಚ್ಚು ಹಣ ಗಳಿಸಬೇಕೆ? ಇಲ್ಲಿವೆ 10 ಮಾರ್ಗ

Posted By: Siddu Thorat
Subscribe to GoodReturns Kannada

ಜೀವನದಲ್ಲಿ ಪ್ರತಿಯೊಬ್ಬರಿಗೂ ಹೆಚ್ಚೆಚ್ಚು ದುಡಿಬೇಕು, ಹಣ ಗಳಿಸಬೇಕು ಎಂಬ ಇಚ್ಛೆ ಇರುತ್ತದೆ. ಪೂರ್ಣಾವಧಿ ಕೆಲಸದ ಜೊತೆ ಇನ್ನು ಏನಾದರೂ ಕೆಲಸ ಮಾಡಬೇಕು ಎಂಬ ಆಲೋಚನೆ ಇರುತ್ತದೆ.

ನೀವು ಮಾಡುವ ಕೆಲಸದಲ್ಲಿ ಯಾವುದೇ ಒತ್ತಡ ಹಾಗೂ ತಲೆನೋವು ಇಲ್ಲದಿದ್ದರೆ ಹೆಚ್ಚುವರಿ ಸಮಯದಲ್ಲಿ ಹಣ ಸಂಪಾದಿಸಬಹುದು. ಆದರೆ ನಿಮ್ಮಲ್ಲಿ ಪೂರ್ಣಾವಧಿ ಕೆಲಸದ ಜೊತೆ ಬೇರೆ ಕೆಲಸ ಮಾಡಿ ಹಣ ಸಂಪಾದಿಸಬೇಕೆಂಬ ಛಲ, ಕಠಿಣ ಶ್ರಮ, ಸ್ಮಾರ್ಟ್ ವರ್ಕ್ ಹಾಗೂ ಸಮರ್ಪಣಾ ಮನೋಭಾವ ಇದ್ದರೆ ಮಾತ್ರ ಹಣ ಸಂಪಾದಿಸಲು ಸಾಧ್ಯ. ಮನಸಿದ್ದಲ್ಲಿ ಮಾರ್ಗ ಅಲ್ಲವೇ..?  (ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು)

ನಿಮ್ಮ ಪೂರ್ಣಾವಧಿ ಕೆಲಸದ ಜೊತೆ ಹಣ ಮಾಡಬಹುದಾದ 10 ಮಾರ್ಗಗಳು ಇಲ್ಲಿವೆ ನೋಡಿ...

ಆಸಕ್ತಿಕರ ವಿಡಿಯೋಗಳನ್ನು ಮಾಡಿ ಯುಟ್ಯೂಬ್ ಗೆ ಅಪಲೋಡ್ ಮಾಡಿ

ಯುಟ್ಯೂಬ್ ನಲ್ಲಿ ಅನೇಕ ವ್ಯಕ್ತಿಗಳು ಆಸಕ್ತಿಕರ ಮತ್ತು ಕುತೂಹಲಕಾರಿ ವಿಡಿಯೋಗಳಿಗಾಗಿ ಹುಡುಕುತ್ತಿರುತ್ತಾರೆ.
ಒಂದು ಸಲ ನೀವು ವಿಡಿಯೋ ಅಪಲೋಡ್ ಮಾಡಿದರೆ ಅದನ್ನು ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್ ಮತ್ತು ಟ್ವಿಟ್ಟರ್ ಮೂಲಕ ಪ್ರಚಾರ ಮಾಡಿ ಮಾರುಕಟ್ಟೆ ಮಾಡಬಹುದು. ಹಣ ಗಳಿಸುವ ಟ್ಯಾಬ್ ಕ್ಲಿಕ್ ಮಾಡುವುದರ ಮುಖೇನ ನೀವು ಆ ವಿಡಿಯೋ ಮೇಲೆ ಹಣವನ್ನು ಗಳಿಸಬಹುದಾಗಿದೆ. ಎಷ್ಟು ವ್ಯಕ್ತಿಗಳು ಎಷ್ಟು ಬಾರಿ ಆ ವಿಡಿಯೋ ಟ್ಯಾಬ್ ಕ್ಲಿಕ್ ಮಾಡುತ್ತಾರೆ ಹಾಗೂ ನೋಡುತ್ತಾರೆ ಎಂಬುದರ ಮೇಲೆ ನಿಮಗೆ ಹಣ ದೊರೆಯುತ್ತದೆ. ನಿಮ್ಮ ಯುಟ್ಯೂಬ್ ಚಾನೇಲ್ ಮೂಲಕ ಹಣ ಗಳಿಸಬೇಕೆಂದರೆ ಆಡ್ಸೆನ್ಸ್ ಖಾತೆ(AdSense account) ಹೊಂದಿರಬೇಕಾಗುತ್ತದೆ.
ಕೆಲಸ ಇಲ್ಲದ ಹೆಚ್ಚುವರಿ ಸಮಯದಲ್ಲಿ ಜನರು ವಿಡಿಯೋಗಳನ್ನು ವಿಕ್ಷಿಸುವುದರಿಂದ ಮತ್ತು ಜಾಹೀರಾತುಗಳ ಮೇಲೆ ಕ್ಲಿಕ್ ಮಾಡುವುದರಿಂದ ನೀವು ಹಣ ಸಂಪಾದಿಸಬಹುದಾಗಿದೆ.

ಆನ್ಲೈನ್ ಬೋಧನೆ ವೆಬ್ಸೈಟ್ ನೋಂದಣಿ ಮಾಡಿಸಿ

ಈಗಾಗಲೇ ಇರುವಂತಹ ಆನ್ಲೈನ್ ಬೋಧನೆ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿ. ಇದು ಅತ್ಯುತ್ತಮ ಆಯ್ಕೆ ಆಗಿದ್ದು, ನಿಮ್ಮ ಮುಕ್ತವಾಗಿರುವ ಸಮಯದಲ್ಲಿ ಆನ್ಲೈನ್ ಬೋಧನೆ ಮಾಡಬಹುದು. ಉದಾಹರಣೆಗೆ, ನೀವು ಸಂಜೆ ವೇಳೆಯಲ್ಲಿ 6 pm to 9 pm ಸಮಯದಲ್ಲಿ ಪ್ರೀ ಆಗಿದ್ದರೆ ನೋಂದಣಿ ಮಾಡುವ ಸಂದರ್ಭದಲ್ಲಿ ಹೇಳಿದರೆ ಸಾಕು.
ವೇದಾಂತು ಅಂತಹ ಅನೇಕ ಆನ್ಲೈನ್ ಬೋಧನಾ ಪೋರ್ಟಲ್ ಗಳ ಮೂಲಕ ಬೋಧನೆ ಮಾಡಬಹುದಾಗಿದೆ. IGSE, ICSE, CBSE, IIT-JEE ಹಾಗೂ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಗತಿಗಳನ್ನು ತೆಗೆದುಕೊಳ್ಳುವುದರಿಂದ ನಿಮಗೆ ಇಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಬೋಧನೆ ಮಾಡಬಹುದು.

ಆನ್ಲೈನ್ ಬರವಣಿಗೆ

ಅನೆಕ ಆನ್ಲೈನ್ ಪೋರ್ಟಲ್ ಗಳು ಎಸ್ಇಓ ಸಂಬಂಧಿತ ಸಂಗತಿಗಳನ್ನು ಬಯಸುತ್ತವೆ. ಅವು ಒಂದು ಪದಕ್ಕೆ 1 ರೂ.ವರೆಗೆ ಕೊಡುತ್ತಾರೆ. ಒಂದು ಪದಕ್ಕೆ ರೂ. 0.25-0.50  ವರೆಗೆ ಇದರ ವ್ಯಾಪ್ತಿ ಇರುತ್ತದೆ. ಅವರು ನಿಮ್ಮ ಖಾತೆಗೆ ಹಣವನ್ನು ವಾರಕ್ಕೊಮ್ಮೆಯಂತೆ ಹಾಕುತ್ತಾರೆ.
ಅನೇಕ ವ್ಯಕ್ತಿಗಳು ಇಂತಹ ಕೆಲಸದ ಮೂಲಕ ಹಣವನ್ನು ಸಂಪಾದಿಸುತ್ತಿದ್ದಾರೆ.

ಆನ್ಲೈನ್ ಅನುವಾದಕರು

ಭಾರತದಲ್ಲಿ ಅನುವಾದಕರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಕಾರಣ ನಮ್ಮ ದೇಶದಲ್ಲಿ ಸಾವಿರಾರು ಭಾಷೆಗಳಿವೆ. ಅನುವಾದಕರನ್ನು ಬಯಸುವ ಅನೇಕ ಆನ್ಲೈನ್ ಪೋರ್ಟಲ್ ಗಳ ಮೂಲಕ ನೀವು ನೋಂದಣಿ ಮಾಡಿಸಬಹುದು. ಉದಾಹರಣೆಗೆ ಅದರಲ್ಲಿ ಲೇಖಕ್ ಕೂಡ ಒಂದು.

ಯೋಗ ತರಗತಿಗಳು


ನೀವು ಯೋಗದಲ್ಲಿ ಪರಿಣಿತರಾಗಿದ್ದಲ್ಲಿ ನಿಮ್ಮ ಬಿಡುವಿನ ವೇಳೆಯಲ್ಲಿ ಅಂದರೆ ಬೆಳಿಗ್ಗೆ 8ರ ಒಳಗಾಗಿ ಮತ್ತು ಸಂಜೆ 6ರ ನಂತರ ಯೋಗ ತರಗತಿಗಳನ್ನು ತೆಗೆದುಕೊಳ್ಳಬಹುದು. ಅನೇಕ ಯೋಗ ಸಂಸ್ಥಗಳಿದ್ದು, ಅವುಗಳೊಂದಿಗೆ ಮಾತುಕತೆ ನಡೆಸಿ ನಿರ್ಧಿಷ್ಟ ಸಮಯವನ್ನು ಖಚಿತಪಡಿಸಿ ತರಗತಿಗಳನ್ನು ತೆಗೆದುಕೊಳ್ಳಬಹುದಾಗಿದೆ. ಅಲ್ಲದೇ ಕೆಲವರಿಗೆ ಮನೆಮನೆಗೆ ಹೋಗಿಯೂ ಯೋಗ ಮತ್ತು ಥೇರಪಿಗಳನ್ನು ಹೇಳಿಕೊಡಬಹುದು. ಇಂತಹ ಐದಾರು ಮನೆಗಳ ಸಂಪರ್ಕ ಇಟ್ಟುಕೊಂಡರೆ ತಿಂಗಳಿಗೆ 300 ರಿಂದ 400 ಸಾವಿರ ದುಡಿಯಬಹುದು. ಜೊತೆಗೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ರಾತ್ರಿ ಉದ್ಯೋಗ

ಪೂರ್ಣಾವಧಿ ಕೆಲಸವನ್ನು ಹೊರತುಪಡಿಸಿ ರಾತ್ರಿ ಸಮಯದಲ್ಲೂ ಕೆಲಸ ಮಾಡುವ ಶಕ್ತಿ, ಚೈತನ್ಯ ನಿಮ್ಮಲ್ಲಿ ಇದ್ದರೆ ರಾತ್ರಿ ಕೆಲಸಗಳನ್ನು ಸಹ ಮಾಡಿ ಸಂಪಾದಿಸಬಹುದು. ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಬಾರ್, ರೆಸ್ಟೋರೆಂಟ್ ಮತ್ತು ಡಿಜೆ ಮುಂತಾದ ಕೆಲಸಗಳನ್ನು ಮಾಡಬಹುದು.

ಹಣಕಾಸು ಕನ್ಸಲ್ಟನ್ಸಿ ಸೇವೆಗಳು

ವಿಮಾ ಕಂಪನಿಗಳಿಗೆ ಏಜೆಂಟ್ ಗಳಾಗಿ ಸಹ ಸೇವೆಯನ್ನು ಸಲ್ಲಿಸಬಹುದಾಗಿದೆ. ಇದು ಅತ್ಯುತ್ತಮ ಆಯ್ಕೆ ಆಗಿದ್ದು, ತುಂಬಾ ಜನರು ಈ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸಂಪರ್ಕ, ಸಂವಹನ ಕಲೆ, ಹಣಕಾಸು ಜ್ಞಾನ ಇದ್ದವರು ಇದನ್ನು ತುಂಬಾ ಸರಳವಾಗಿ ಮಾಡಬಹುದಾಗಿದೆ. ರಜಾ ದಿನಗಳ ಲಾಭವನ್ನು ಸಹ ಪಡೆಯಬಹುದು. ನಿಮ್ಮ ಕೆಲಸದ ವೇಳೆ 6 pm ಒಳಗಾಗಿ ಮುಗಿಯುತ್ತಿದ್ದಲ್ಲಿ ತದನಂತರ ವ್ಯಕ್ತಿಗಳನ್ನು ಬೇಟಿಯಾಗಿ ವಿಮೆಗಳನ್ನು ಮಾರಾಟ ಮಾಡಬಹುದು.
ಇದಕ್ಕೆ ಎಲ್ಐಸಿ ಕಾರ್ಪೊರೇಷನ್ ಉತ್ತಮ ಉದಾಹರಣೆಯಾಗಿದ್ದು, ವಿಮೆ ಮಾರಾಟ ಮಾಡುವ ಎಂಜೆಂಟ್ ಗಳಿಗೆ ಉತ್ತಮ ಕಮಿಷನ್ ಕೊಡುತ್ತದೆ. ನೀವು ಸಹ ಏಜೆಂಟ್ ಗಳಾಗಿ ಸ್ಥಿರ ಠೇವಣಿ ಮತ್ತು ಇನ್ನೀತರ ಹಣಕಾಸು ಉತ್ಪನ್ನಗಳ ಮೇಲೆ ಕೆಲಸ ಮಾಡಬಹುದಾಗಿದೆ.

ಷೇರುಗಳ ವಹಿವಾಟು

ನಿಮ್ಮ ಪೂರ್ಣಾವಧಿ ಕೆಲಸದ ಜೊತೆ ಷೇರುಗಳನ್ನು ಮಾರಾಟ ಮಾಡುವುದರ ಮೂಲಕ ಕೂಡ ಹೆಚ್ಚುವರಿ ಹಣ ಸಂಪಾದಿಸಬಹುದು. ಬಹುಷಹ ಇದು ಉತ್ತಮ ಆಯ್ಕೆಯಂತು ಅಲ್ಲ. ಆದರೂ ನಿಮ್ಮಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಉತ್ತಮ ಜ್ಞಾನ ಇದ್ದರೆ ಹಾಗೂ ನಿಮ್ಮ ಕೆಲಸಕ್ಕೆ ಭಂಗ ತರದೆ ಇದ್ದರೆ ಇದರಲ್ಲಿ ತೊಡಗಿಸಿಕೊಳ್ಳಬಹುದು.
ಮತ್ತೊಮ್ಮೆ ಹೇಳುವುದೇನೆಂದರೆ ನಿಮ್ಮ ದಿನನಿತ್ಯದ ಕೆಲಸದ ಮೇಲೆ ಪರಿಣಾಮ ಬೀರುವಂತಿದ್ದರೆ ಮಾಡುವುದು ಸರಿಯಲ್ಲ. ಆದರೆ ಆಸಕ್ತಿ ಮತ್ತು ಅದರ ಬಗ್ಗೆ ಜ್ಞಾನ ಹೊಂದಿರುವವರು ಉತ್ತಮ ಕಮಾಯಿ ಮಾಡಬಹುದು.

ಟೀಮ್ ಮ್ಯಾನೇಜ್ಮೆಂಟ್, ಕೋರಿಯೋಗ್ರಫಿ

ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ವಿವಿಧ ಕಾರ್ಯಕ್ರಮಗಳ ನಿರ್ವಹಣೆಗಾಗಿ ಎದುರು ನೋಡುತ್ತಿರುತ್ತವೆ. ನಿಮ್ಮಲ್ಲಿ ಟೀಮ್ ಮ್ಯಾನೇಜ್ಮೆಂಟ್ ನಂತಹ ಸಂಘಟನಾ ಮತ್ತು ನಿರ್ವಹಣಾ ಕಲೆ ಇದ್ದರೆ ಇಂತಹ ಅವಕಾಶಗಳನ್ನು ಪಡೆಯಬಹುದು. ಜೊತೆಗೆ ಟಿವಿ ‍ಷೋ ಮತ್ತು ಸಿನೆಮಾದವರು ಕೋರಿಯೋಗ್ರಾಫರ್ ಗಳಿಗಾಗಿ ಹುಡುಕುತ್ತಿರುತ್ತಾರೆ. ನಿಮ್ಮಲ್ಲಿ ಅಂತಹ ಕ್ರಿಯಾಶೀಲ ಸೃಜನಾತ್ಮಕತೆ ಇದ್ದಲ್ಲಿ ಇಂತಹ ವೇದಿಕೆಗಳನ್ನು ಬಳಸಿ ಉತ್ತಮ ಸಂಪಾದನೆ ಮಾಡಬಹುದು ಎಂಬುದರಲ್ಲಿ ಸಂಶಯವಿಲ್ಲ.

ಇನ್ನಿತರ ಸಲಹೆಗಳು

ನೀವು ಕೆಲ ನಿರ್ಧಿಷ್ಟ ಕ್ಷೇತ್ರದಲ್ಲಿ ಪರಿಣಿತಿಯನ್ನು ಪಡೆದಿದ್ದರೆ ಆಯಾ ಕ್ಷೇತ್ರದಲ್ಲಿ ಸಲಹೆಗಳನ್ನು ಕೊಡಬಹುದಾಗಿದೆ. ವಾಸ್ತುಶಿಲ್ಪ ಹಾಗೂ ರಿಯಲ್ ಎಸ್ಟೇಟ್ ಹೀಗೆ ಯಾವುದೇ ಕ್ಷೇತ್ರಗಳು ಆಗಬಹುದು.

Read more about: money, jobs, salary, ಹಣ, ಸಂಬಳ
English summary

8 Ways To Earn Extra Money Along With A Full Time Job

If you believe that your job is not hectic and you have that extra time to make money, you can utilize that time to make an extra buck. Here are 8 ways to make extra money along with a full time job.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns