For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ವ್ಯವಹಾರ ನಡೆಸುವವರು ಈ ಸ್ಮಾರ್ಟ್ ಮಾರ್ಗಗಳನ್ನು ಅನುಸರಿಸಿ..

ಇತ್ತೀಚಿನ ದಿನಗಳಲ್ಲಿ ಬ್ಯಾಂಕು ವ್ಯವಹಾರ ಇನ್ನು ಸರಳವಾಗುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಶುಲ್ಕ ಅಥವಾ ದಂಡ ಕಟ್ಟಬೇಕಾಗುತ್ತದೆ. ನಾವು ಮಾಡಿದ ಯಾವುದೋ ತಪ್ಪುಗಳಿಗಾಗಿ ಅನವಶ್ಯಕವಾಗಿ ಹಣ ಕಡಿತವಾಗುತ್ತಿರುತ್ತದೆ. ಇದೆಲ್ಲ ಏಕೆ? ಹೇಗೆ? ಆಗುತ್

By Siddu
|

ನಮ್ಮಲ್ಲಿ ಅನೇಕರಿಗೆ ಬ್ಯಾಂಕು ವ್ಯವಹಾರ ಮತ್ತು ಅದರ ನಿಯಮಗಳ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಗೊಂದಲಗಳಿಗೆ ಒಳಗಾಗಿ ತಪ್ಪುಗಳು ಜರಗುತ್ತವೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕು ವ್ಯವಹಾರ ಇನ್ನು ಸರಳವಾಗುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಶುಲ್ಕ ಅಥವಾ ದಂಡ ಕಟ್ಟಬೇಕಾಗುತ್ತದೆ. ನಾವು ಮಾಡಿದ ಯಾವುದೋ ತಪ್ಪುಗಳಿಗಾಗಿ ಅನವಶ್ಯಕವಾಗಿ ಹಣ ಕಡಿತವಾಗುತ್ತಿರುತ್ತದೆ. ಇದೆಲ್ಲ ಏಕೆ? ಹೇಗೆ? ಆಗುತ್ತಿರುತ್ತದೆ ಎಂಬುದರ ಅರಿವು ಸಹ ನಮಗಿರುವುದಿಲ್ಲ.

ಹಾಗಾಗಿ ಇದಕ್ಕೆ ಕಾರಣಗಳೇನು? ಇದೆಲ್ಲವನ್ನು ತಪ್ಪಿಸುವುದು ಹೇಗೆ? ಎಂಬ ಪ್ರಶ್ನೆಗಳು ಇದ್ದೆ ಇರುತ್ತವೆ. (ಎಟಿಎಂ ಹೆಚ್ಚುವರಿ ಚಾರ್ಜ್ ತಪ್ಪಿಸಿಕೊಳ್ಳಬೇಕೆ? ಇಲ್ಲಿವೆ 10 ದಾರಿ)

ಅದಕ್ಕಾಗಿ ಬ್ಯಾಂಕು ವ್ಯವಹಾರದ ಸಂದರ್ಭದಲ್ಲಿ ಆಗಬಹುದಾದ ಗೊಂದಲ, ವ್ಯವಹಾರಿಸಬೇಕಾದ ಸರಳ ವಿಧಾನ ಮತ್ತು ಕಟ್ಟಬೇಕಾಗಿ ಬರುವ ಶುಲ್ಕಗಳಿಂದ ತಪ್ಪಿಸಿಕೊಳ್ಳುವ ಕೆಲ ಸ್ಮಾರ್ಟ್ ಸಲಹೆಗಳು ಇಲ್ಲಿವೆ ನೋಡಿ.

ಎಟಿಎಂ ವ್ಯವಹಾರ

ಎಟಿಎಂ ವ್ಯವಹಾರ

ಪ್ರತಿ ತಿಂಗಳಿಗೆ ನಿಮ್ಮ ಬ್ಯಾಂಕಿನ ಎಟಿಎಂ ನಲ್ಲಿ ತಲಾ ಮೂರು ಬಾರಿ ವ್ಯವಹಾರ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿದ ಎಟಿಎಂ ವ್ಯವಹಾರಕ್ಕೆ ಶುಲ್ಕವನ್ನು ವಿಧಿಸಲಾಗುತ್ತದೆ. ಹೀಗಾಗಿ ಪೂರ್ವಯೋಜಿತವಾಗಿ ತಿಂಗಳಿಗೆ ಬೇಕಾಗಬಹುದಾದ ಹಣವನ್ನು ನಿಮ್ಮ ಬ್ಯಾಂಕಿನ ಎಟಿಎಂನಿಂದ ಬಿಡಿಸಿಕೊಳ್ಳುವುದರಿಂದ ಅನವಶ್ಯಕ ಶುಲ್ಕಗಳಿಂದ ತಪ್ಪಿಸಿಕೊಳ್ಳಬಹುದು.

ಉಳಿತಾಯ ಖಾತೆ

ಉಳಿತಾಯ ಖಾತೆ

ಎರಡು ವರ್ಷಗಳ ಕಾಲದವರೆಗೆ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ಯಾವುದೇ ವ್ಯವಹಾರ ಮಾಡದೆ ಹೋದರೆ ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ.
ಒಂದಕ್ಕಿಂತಲೂ ಹೆಚ್ಚಿನ ಖಾತೆಗಳು ಇದ್ದಲ್ಲಿ ವರ್ಷಕ್ಕೆ ಒಂದೆರಡು ಬಾರಿ ವ್ಯವಹಾರ ಮಾಡಲು ಮರೆಯಬೇಡಿ. ಇಲ್ಲದ್ದಿದ್ದರೆ ನಿಮ್ಮ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುವುದು.

ಚೆಕ್ ವಾಯಿದೆ
 

ಚೆಕ್ ವಾಯಿದೆ

ಚೆಕ್ ,ಡ್ರಾಪ್ಟ್ ಅಥವಾ ಬ್ಯಾಂಕರ್ಸ್ ಚೆಕ್ ಗಳ ಅವಧಿಯನ್ನು ಆರು ತಿಂಗಳಿನಿಂದ ಮೂರು ತಿಂಗಳಿಗೆ ಕಡಿಮೆ ಮಾಡಲಾಗಿದೆ ಎಂಬುದನ್ನು ಗಮನದಲ್ಲಿಡಬೇಕು. ಒಂದು ವೇಳೆ ಚೆಕ್ ಪಡೆದಿದ್ದರೆ ಅದನ್ನು ಮೂರು ತಿಂಗಳ ಅವಧಿ ಒಳಗಾಗಿ ವ್ಯವಹಾರ ಮುಗಿಸಿಕೊಳ್ಳಬೇಕು. ಇಲ್ಲದಿದ್ದರೆ ಅದನ್ನು ನಿಷ್ಕ್ರಿಯ ಚೆಕ್ ಎಂದು ಕರೆಯಲಾಗುತ್ತದೆ. ಇಲ್ಲವೆ ಬೌನ್ಸ್ ಆಗಿ ವ್ಯವಹಾರ ಮಾಡಲು ಸಾಧ್ಯ ಆಗುವುದಿಲ್ಲ.

ಎಟಿಎಂ ಡೆಬಿಟ್ ಕಾರ್ಡ್

ಎಟಿಎಂ ಡೆಬಿಟ್ ಕಾರ್ಡ್

ಎಟಿಎಂ ಕಾರ್ಡ್ ಜಾರಿಗೊಳಿಸುವ ಬ್ಯಾಂಕುಗಳಿಗೆ ಗ್ರಾಹಕರು ದೂರು ಸಲ್ಲಿಸಿದರೆ ಕೆಲಸ ನಿರ್ವಹಿಸುವ ೭ ದಿನಗಳ ಒಳಗಾಗಿ ಅದನ್ನು ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ಏಳು ದಿನಗಳ ಒಳಗಾಗಿ ದೂರು ಪರಿಶೀಲಿಸಲು ವಿಳಂಬವಾದಲ್ಲಿ ಸಂಬಂಧ ಪಟ್ಟ ಶಾಖೆ ಗ್ರಾಹಕರಿಗೆ ಒಂದು ದಿನಕ್ಕೆ ನೂರು ರೂಪಾಯಿಯಂತೆ ಪರಿಹಾರ ಕೊಡಬೇಕಾಗುತ್ತದೆ.

ಆನ್ಲೈನ್ ಅಲರ್ಟ್ಸ್

ಆನ್ಲೈನ್ ಅಲರ್ಟ್ಸ್

ಕಾರ್ಡು ಸಂಬಂಧಿತ ವ್ಯವಹಾರಗಳಿಗೆ ಎಲ್ಲ ಕಾರ್ಡುದಾರರಿಗೆ ಆನ್ಲೈನ್ ಅಲರ್ಟ್ಸ್ ಸಂದೇಶಗಳನ್ನು ಕಳುಹಿಸಬೇಕಾಗುತ್ತದೆ.
ಎಸ್ಎಂಎಸ್ ಅಥವಾ ಇ-ಮೇಲ್ ಮುಖಾಂತರ ನಿಮಗೆ ಅಪ್ಡೇಟ್ ಸಂದೇಶಗಳು ಬರುತ್ತಿವೆಯೇ ಇಲ್ಲವೆ ಎಂಬುದನ್ನು ಗಮನಿಸಿ. ಇದು ಆನ್ಲೈನ್ ಅಥವಾ ಆಪ್ ಲೈನ್ ಯಾವುದೇ ವ್ಯವಹಾರ ಆಗಿರಬಹುದು. ಇಲ್ಲದಿದ್ದರೆ ದೂರನ್ನು ನೀಡಿ ಸರಿಪಡಿಸಿಕೊಳ್ಳಿ.

ಆಧಾರ್ ಲಿಂಕ್

ಆಧಾರ್ ಲಿಂಕ್

 ಈಗ ಬ್ಯಾಂಕು ಮತ್ತು ಹಣಕಾಸು ಸಂಬಂಧಿತ ವ್ಯವಹಾರಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡುತ್ತಿದ್ದಾರೆ. ಆಧಾರ್ ನಂಬರ್ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಕಡಿಮೆಗೊಳಿಸುತ್ತಿದ್ದಾರೆ.
ಇ-ಕೆವೈಸಿ(e-KYC)ಗಾಗಿ ಬ್ಯಾಂಕುಗಳು ಆಧಾರ್ ಲಿಂಕ್ ಕಡ್ಡಾಯ ಮಾಡುತ್ತಿದ್ದಾರೆ.

ಪಾಸ್ಬುಕ್

ಪಾಸ್ಬುಕ್

ಎಲ್ಲ ಬ್ಯಾಂಕುಗಳು ತಮ್ಮ ಉಳಿತಾಯ ಖಾತೆ ಗ್ರಾಹಕರಿಗೆ ಏಕರೂಪದ ಪಾಸ್ಬುಕ್ ಸೌಲಭ್ಯ ನೀಡುವ ಅಗತ್ಯವಿದೆ. ಒಂದು ವೇಳೆ ಬ್ಯಾಂಕುಗಳು ಪಾಸ್ಬುಕ್ ನೀಡದಿದ್ದಲ್ಲಿ ದೂರು ನೀಡಬಹುದು.

ಹಕ್ಕು ನಿರಾಕರಣೆ/ಪೂರ್ವಪಾವತಿ ಶುಲ್ಕ

ಹಕ್ಕು ನಿರಾಕರಣೆ/ಪೂರ್ವಪಾವತಿ ಶುಲ್ಕ

ನಿಯಮಗಳನುಸಾರ ಗೃಹಸಾಲದ ತೇಲುವ(ಬದಲಾಗುವ) ದರದ ಮೇಲೆ
ಲೆವಿ ಹಕ್ಕು ನಿರಾಕರಣೆ ಶುಲ್ಕ ಅಥವಾ ಪೂರ್ವ ಪಾವತಿ ಶುಲ್ಕ ವಿಧಿಸಲಾಗುವುದಿಲ್ಲ. ಆದರೆ ಸ್ಥಿರ ದರದ ಗೃಹಸಾಲದ ಮೇಲೆ ಮಾಡಬಹುದಾಗಿದೆ. ಇದನ್ನು ನೀವು ಗೃಹಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.

English summary

Smart Banking Tips To Follow

Young individuals are not much aware of banking and the procedure it involves. Now, doing bank transactions is easy and can be done at your finger tips. But this does not mean that you should not know about some basic things and guidelines.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X