Englishहिन्दी മലയാളം தமிழ் తెలుగు

ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ?

Written By: Siddu
Subscribe to GoodReturns Kannada

ಉದ್ಯೋಗಂ ಪುರುಷ ಲಕ್ಷಣಂ ಎನ್ನುವುದು ಈಗ ಹಳೆಯ ಮಾತು. ಉದ್ಯೋಗ ಈಗ ಎಲ್ಲರಿಗೂ ಅಗತ್ಯವಿರುವ ಲಕ್ಷಣ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಗಳಿಸಿದವರಿಗೇ ಈಗ ಹೆಚ್ಚಿನ ಮನ್ನಣೆ. ಅಲ್ಲದೇ ಇಂದಿನ ಖರ್ಚುಗಳು ವೇತನವೆಷ್ಟಿದ್ದರೂ ಅದನ್ನು ಕಬಳಿಸಿಯೇ ಬಿಡುತ್ತದೆ. ಕೊಂಚ ಹೆಚ್ಚಿನ ಗಳಿಕೆ ಇದ್ದಿದ್ದರೆ ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡುತ್ತದೆ.

ಈ ಅಗತ್ಯವನ್ನು ಪೂರೈಸಲು ಇಂದಿನ ಅಂತರ್ಜಾಲ ವ್ಯವಸ್ಥೆ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿದ್ದು, ಇವುಗಳಲ್ಲಿ ಪ್ರಮುಖವಾದ 10 ವಿಧಾನಗಳನ್ನು ಇಲ್ಲಿ ನೀಡಲಾಗಿದೆ.. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

ಬ್ಲಾಗಿಂಗ್

ನಮ್ಮೆಲ್ಲರೊಳಗೊಬ್ಬ ಲೇಖಕನಿರುತ್ತಾನೆ. ಆದರೆ ನಮ್ಮಲ್ಲಿ ಹೆಚ್ಚಿನವರು ಇವನಿಗೆ ಕೆಲಸ ಕೊಡುವುದೇ ಇಲ್ಲ. ಒಂದು ವೇಳೆ ನಿಮ್ಮಲ್ಲಿಯೂ ನಿಮ್ಮ ಭಾವನೆ, ಅನುಭವ ಅಥವಾ ಪಯಣ ಕಥನವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದಿದ್ದರೆ ಹಾಗೂ ಇದನ್ನು ಹೇಗೆ ಮಾಡಬೇಕೆಂದು ಗೊತ್ತಿಲ್ಲದೇ ಇದ್ದರೆ ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ಹೊಂದಬಹುದು. ಇದನ್ನು ಪ್ರಾರಂಭಿಸಲು ಹೆಚ್ಚಿನ ಕೌಶಲ್ಯವಾಗಲೀ ಹಣವಾಗಲೀ ಬೇಕಾಗಿಲ್ಲ. ಆದರೆ ನೀವು ಯಾವ ವಿಷಯದಲ್ಲಿ ಬರೆಯುವವರಿದ್ದೀರೋ, ಅದನ್ನು ಓದಬಯಸುವವರ ಸಂಖ್ಯೆ ತುಂಬಾ ಹೆಚ್ಚಿರುವಂತೆ ನೋಡಿಕೊಳ್ಳಬೇಕಿವುದು ಅಗತ್ಯ. ಇದರಿಂದ ನಿಮ್ಮ ಬ್ಲಾಗ್ ಬರಹಗಳನ್ನು ಹೆಚ್ಚು ಓದುಗರು ಸಿಗುತ್ತಾರೆ. ನಿಮ್ಮ ತಾಣಕ್ಕೆ ಎಷ್ಟು ಹೆಚ್ಚು ಜನರು ಭೇಟಿ ನೀಡುತ್ತಾರೋ, ಅದನ್ನು ಪರಿಗಣಿಸಿ ಜಾಹೀರಾತು, ಸಂಭಾವನೆ ಇರುವ ಲೇಖನ ಬರೆಯುವ ಅವಕಾಶ, ಇತರ ವ್ಯಕ್ತಿಗಳ ಉತ್ಪನ್ನಗಳ ಬಗ್ಗೆ ವಿವರಿಸಿ ಸಂಪಾದಿಸುವ ಅವಕಾಶವೂ ದೊರಕುತ್ತದೆ. ಬ್ಲಾಗ್ (Blog) ಮೂಲಕ ಹಣ ಮಾಡುವುದು ಹೇಗೆ?

ಬರವಣಿಗೆ

ಒಂದು ವೇಳೆ ನಿಮಗೆ ಬ್ಲಾಗ್ ನಿರ್ವಹಿಸಲು ಕಷ್ಟವಾಗುತ್ತಿದ್ದರೆ ಹಾಗೂ ನಿಮಗೆ ಬರೆಯುವ ಹೆಚ್ಚು ಉತ್ಸುಕತೆ ಇದ್ದರೆ ನೀವು ನಿಮ್ಮ ಬರವಣಿಗೆಗಳನ್ನು ಬೇರೆ ತಾಣಗಳಿಗೆ ಬರೆದು ಅವರಿಂದ ಸಂಭಾವನೆಯನ್ನು ಪಡೆಯಬಹುದು. ವಿಬ್ಲಾಗ್ಸ್, ಹೀಲಿಯಂ ಅಥವಾ ಪೇ ಪರ್ ಪೋಸ್ಟ್ ಎಂಬ ತಾಣಗಳು ಈ ಅವಕಾಶವನ್ನು ಒದಗಿಸುತ್ತವೆ. ಇಂದು ಜನಪ್ರಿಯವಾಗುತ್ತಿರುವ ಇ-ಪುಸ್ತಕಗಳನ್ನು ಬರೆದು ಪ್ರಕಟಿಸುವುದೂ ಇನ್ನೊಂದು ಆಯ್ಕೆಯಾಗಿದೆ. ಈ ಪುಸ್ತಕ ಪ್ರಕಟಿಸಲು ಬಂಡವಾಳವೇ ಬೇಕಾಗಿಲ್ಲ. ಮುದ್ರಣ, ಸಾಗಾಟ ವೆಚ್ಚವೂ ಇಲ್ಲ. ಒಂದು ವೇಳೆ ನಿಮಗೆ ಭಾಷೆಯ ಮೇಲೆ ಉತ್ತಮ ಹಿಡಿತವಿದ್ದು ಇತರರ ಬರವಣಿಗೆಗಳನ್ನು ತಿದ್ದುವಂತಹ ಪ್ರತಿಭೆಯಿದ್ದರೆ ನಿಮಗೆ ಕಾಪಿ ರೈಟರ್ ಎಂಬ ಉದ್ಯೋಗಾವಕಾಶವೂ ದೊರಕುತ್ತದೆ. ಇದರಲ್ಲಿ ವೆಬ್ ಮಾಸ್ಟರ್ ಗಳು ನಿಮಗೆ ಇತರರ ಬರವಣಿಗೆಗಳನ್ನು ನೋಡಿ ವ್ಯಾಕರಣ, ವಾಕ್ಯಗಳನ್ನು ತಿದ್ದಿ ಪ್ರಕಟಿಸಲು ಯೋಗ್ಯವಾಗುವಂತೆ ಮಾಡಲು ಕೇಳಿ ಇದಕ್ಕೆ ತಕ್ಕ ಸಂಭಾವನೆಯನ್ನೂ ನೀಡುತ್ತಾರೆ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಇ-ಟ್ಯೂಶನ್, ವೆಬಿನಾರ್ಸ್

ಇಂದು ಅಂತರ್ಜಾಲದ ಮೂಲಕ ಟ್ಯೂಶನ್ ನೀಡುವವರಿಗೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ನಿಮ್ಮಲ್ಲಿ ಕಲಿಸುವ ಪ್ರತಿಭೆಯಿದ್ದು, ಇನ್ನೊಬ್ಬರಿಗೆ ನೆರವಾಗ ಬಯಸಿದರೆ ಇ-ಶಿಕ್ಷಣ ನಿಮಗೆ ಉತ್ತಮ ಸಂಭಾವನೆಯನ್ನು ತಂದು ಕೊಡಬಲ್ಲುದು. ಇದಕ್ಕಾಗಿ ನಿಮಗೆ ಒಂದು ವಿಷಯದಲ್ಲಿ ಪರಿಣಿತಿ ಹಾಗೂ ವಾರದಲ್ಲಿ ಕೆಲವು ಘಂಟೆಗಳಾದರೂ ಇದಕ್ಕಾಗಿ ಮೀಸಲಿಡಬೇಕಾಗಿ ಬರಬೇಕಾಗುತ್ತದೆ ಅಷ್ಟೇ. ಟ್ಯೂಟರ್ ವೀಸಾ, ಇ-ಟ್ಯೂಟರ್, ಸ್ಮಾರ್ಟ್ ಥಿಂಕಿಂಗ್, ಟ್ಯೂಟರ್. ಕಾಂ ಮೊದಲಾದ ತಾಣಗಳಲ್ಲಿ ನೀವು ನಿಮ್ಮ ಪರಿಣಿತಿಯನ್ನು ವಿವರಿಸಿ ದಾಖಲಿಸಿಕೊಳ್ಳಬೇಕು. ಒಂದು ವೇಳೆ ನೀವು ಅರ್ಹರು ಎಂದು ತಿಳಿದರೆ ನಿಮ್ಮ ಪರಿಣಿತಿಗೆ ಸೂಕ್ತವಾದ ಪಾಠಗಳು, ವೆಬಿನಾರ್ ಅಥವಾ ಅಂತರ್ಜಾಲದ ಮೂಲಕ ನೀವು ಪಾಠ ನೀಡಬೇಕಾಗಿ ಬರುವ ಅವಕಾಶಗಳು ದೊರಕುತ್ತವೆ. ನಿಮ್ಮ ಪಾಠಗಳಿಗೆ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಹಕರಾಗಿದ್ದು ನಿಮ್ಮ ವೆಬಿನಾರ್ ಉಪಯುಕ್ತವೇ ಆಗಿದ್ದರೆ ನಿಮಗೆ ಹೆಚ್ಚಿನ ಆದಾಯ ಖಚಿತವಾಗಿದೆ. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ

ಅಫಿಲಿಯೇಟ್/ಮರು ಮಾರಾಟಗಾರ

ಯಾವುದೇ ವಸ್ತು ಅಥವಾ ಸೇವೆ ಆಗಲಿ, ಇದು ಮಾರಾಟವಾದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಹೆಚ್ಚುವರಿ ಹಣವನ್ನು ಸಂಪಾದಿಸಲು ಉತ್ತಮ ಮಾರ್ಗವೆಂದರೆ ಅಫಿಲಿಯೇಟ್/ಮರು ಮಾರಾಟಗಾರನಾಗುವುದು. ಅಫಿಲಿಯೇಟ್ ಅಂದರೆ ಇತರರಿಗೆ ಸೇರಿದ ಯಾವುದಾದರೊಂದು ವಸ್ತು ಅಥವಾ ಸೇವೆಯ ಬಗ್ಗೆ ಮೂರನೆಯ ವ್ಯಕ್ತಿಗೆ ವಿವರಿಸಿ ಅವರು ಕೊಳ್ಳುವಂತೆ ಮಾಡುವ ಮಧ್ಯವರ್ತಿ. ಈ ಕೆಲಸವನ್ನು ಸಾಮಾಜಿಕ ಜಾಲತಾಣದ ವೆಬ್ ಸೈಟ್ ಅಥವಾ ಈಬೇ ಮೊದಲಾದ ತಾಣಗಳ ಮೂಲಕವೂ ನಿರ್ವಹಿಸಬಹುದು. ಇದಕ್ಕಾಗಿ ನೀವು ಈ ವಸ್ತುವಿನ ಮಾಲಿಕರಾಗಿರಬೇಕಿಲ್ಲ. ಕೇವಲ ಅಫಿಲಿಯೇಟ್ ಕಾರ್ಯಕ್ರಮವೊಂದಕ್ಕೆ ದಾಖಲಿಸಿಕೊಂಡು ನಿಮ್ಮ ರೆಫರಲ್ ಕೊಂಡಿಯನ್ನು ಬಳಸಿ ಅವರ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಕಮಿಶನ್ ಜಂಕ್ಷನ್ ಅಥವಾ ಕ್ಲಿಕ್ ಬ್ಯಾಂಕ್ ಮೊದಲಾದ ತಾಣಗಳಲ್ಲಿ ಈ ಉದ್ಯೋಗಕ್ಕೆ ವಿಪುಲ ಅವಕಾಶವಿದೆ. ಕಡಿಮೆ ಬಂಡವಾಳದಲ್ಲಿ ಉದ್ಯಮ ನಡೆಸಬೇಕೆ?

ಡೊಮೈನ್ ಗಳ ಖರೀದಿ/ಮಾರಾಟ

ತಾಣಗಳ ಮೂಲಕ ಮಾರಾಟ ಮಾಡಬಹುದಾದ ಡೊಮೈನುಗಳನ್ನು ಕೊಳ್ಳುವ ಅಥವಾ ಮಾರಾಟ ಮಾಡುವುದೂ ಅಂತರ್ಜಾಲದ ಮೂಲಕ ಸಂಪಾದನೆ ಮಾಡುವ ಇನ್ನೊಂದು ಅವಕಾಶವಾಗಿದೆ. ಇದಕ್ಕೆ ಕೊಂಚ ಬಂಡವಾಳ ಅಗತ್ಯ. ಲಭ್ಯವಿರುವ ಡೊಮೈನುಗಳನ್ನು ಕೊಂಚ ಹಣ ನೀಡಿ ಖರೀದಿಸಬೇಕು ಹಾಗೂ ಹೆಚ್ಚಿನ ಮೊತ್ತಕ್ಕೆ ಮಾರಬಹುದು. ಆದರೆ ಇದಕ್ಕೆ ಕೊಂಚ ಪರಿಣಿತಿ ಪಡೆಯುವುದು ಅಗತ್ಯ. ಈ ಪರಿಣಿತಿಯನ್ನು sedo.co.uk, afternic.com, ebay.com ಮೊದಲಾದ ತಾಣಗಳಲ್ಲಿ ಪಡೆದುಕೊಳ್ಳಬಹುದು. ಈ ತಾಣಗಳಲ್ಲಿ ಈ ಡೊಮೈನುಗಳನ್ನು ಹರಾಜು ಹಾಕಲಾಗುತ್ತದೆ ಹಾಗೂ ಅತಿ ಆಕರ್ಷಕವಾಗಿರುವ ಹೆಸರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಇನ್ನೊಂದು ಸುಲಭ ವಿಧಾನವೆಂದರೆ ಈಗಾಗಲೇ ಮುಚ್ಚಿ ಹೋಗಿರುವ ಡೊಮೈನ್ ಲಿಸ್ಟ್ ಗಳಿಂದ ಹೆಸರನ್ನು ಆಯ್ದು ಮರುಜೀವ ನೀಡುವ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆಯಬಹುದು.

ವೃತ್ತಿಪರರಿಗೆ ಫ್ರೀಲ್ಯಾಂನ್ಸಿಂಗ್

ಫ್ರೀ ಲ್ಯಾಂನ್ಸಿಂಗ್ ಅಥವಾ ಸಂಪಾದಕರ ಹಂಗಿಲ್ಲದೇ ತಮ್ಮ ಪ್ರತಿಭೆಯನ್ನು ಬಳಸಬಹುದಾದ ಆಯ್ಕೆ ಹಲವಾರು ಪರಿಣಿತರಿಗೆ ಲಭ್ಯವಿದೆ. ತಮ್ಮ ಗ್ರಾಹಕರ ಅಗತ್ಯವನ್ನು ಪೂರೈಸುವುದು ಹೇಗೆ ಎಂದು ಇವರಿಗೆ ಗೊತ್ತಿದ್ದು ಕೆಲವಾರು ಪ್ರಾಜೆಕ್ಟ್ ಆಧಾರಿತ ತಾಣಗಳು ಅವಕಾಶವನ್ನು ಒದಗಿಸುತ್ತವೆ. ತಮ್ಮ ಪ್ರಾಜೆಕ್ಟುಗಳನ್ನು ವಿವರಿಸಲು ಈ ಸೇವೆಯನ್ನು ಪಡೆಯಲು ಉತ್ತಮ ಸಂಭಾವನೆಯನ್ನೂ ನೀಡಲಾಗುತ್ತದೆ. ಫ್ರೀಲ್ಯಾನ್ಸರ್ ಗಳು ಹಾಗೂ ಚಿಕ್ಕ ಉದ್ದಿಮೆದಾರರು ಗ್ರಾಹಕರಿಗೆ ಹರಾಜು, ಉಪಾಯಗಳು ಅಥವಾ ಪ್ರಸ್ತಾಪಗಳನ್ನು ನೀಡುವ ಮೂಲಕ ಗ್ರಾಹಕರು ತಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಯಾನ್ಸ್ ಮೊದಲಾದ ತಾಣಗಳು ಬರವಣಿಗೆ, ಡೇಟಾ ಎಂಟ್ರಿ, ವಿನ್ಯಾಸ ಮೊದಲಾದವುಗಳಲ್ಲಿ ಅವಕಾಶ ನೀಡಿದರೆ RentACoder ಎಂಬ ತಾಣ ಸಾಫ್ಟ್ ವೇರ್ ಪ್ರೋಗ್ರಾಮಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಒದಗಿಸುತ್ತದೆ.

ಜಾಹೀರಾತು

ನಿಮ್ಮ ಜಾಲತಾಣ ಅಥವಾ ಬ್ಲಾಗ್ ತಾಣದಲ್ಲಿ ಜಾಹೀರಾತು ನೀಡಲು ಸ್ಥಳಾವಕಾಶ ಒದಗಿಸುವ ಮೂಲಕ ಸಂಭಾವನೆಯನ್ನು ಪಡೆಯಬಹುದು. ಈ ಜಾಹೀರಾತುಗಳನ್ನು ಎಷ್ಟು ಹೆಚ್ಚು ಗ್ರಾಹಕರು ಕ್ಲಿಕ್ ಮಾಡುತ್ತಾರೋ ಅಷ್ಟು ಹೆಚ್ಚು ಸಂಭಾವನೆ ದೊರಕುತ್ತದೆ. ಜಾಹೀರಾತುಗಳ ಸ್ಥಳವನ್ನು ಮೇಲೆ ಕೆಳಗಾಗಿಸುವುದು ಹಾಗೂ ಪ್ರಕಟಿಸುವುದು ಉಚಿತ. ಪ್ರತಿ ಕ್ಲಿಕ್ ಗೆ ಪಡೆಯುವ ಸಂಭಾವನೆ ಆ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ, ಹಾಗೂ ಎಷ್ಟು ಬೇಗನೇ ಎಷ್ಟು ಹೆಚ್ಚು ಕ್ಲಿಕ್ ಪಡೆದಿವೆ ಹಾಗೂ ಪ್ರತಿ ಕ್ಲಿಕ್ ಗೆ ಎಷ್ಟು ಸಂಭಾವನೆ ಎಂಬ ಮಾಹಿತಿಗಳನ್ನು ಅನುಸರಿಸುತ್ತದೆ. Google AdSense ಅತ್ಯಂತ ಜನಪ್ರಿಯ ತಾಣವಾಗಿದೆ. BidVertiser, Text Link Ads ಹಾಗೂ Blogads ಸಹಾ ಉತ್ತಮ ಆಯ್ಕೆಗಳಾಗಿವೆ. ಅಲ್ಲದೇ ತಾನದಲ್ಲಿ RSS ಹಾಗೂ ಜಾಹೀರಾತಿನ ಬ್ಯಾನರುಗಳನ್ನು ಪ್ರಕಟಿಸುವುದೂ ಇನ್ನೊಂದು ಆಯ್ಕೆಯಾಗಿದೆ.

GPT ಪ್ರೋಗ್ರಾಮಿಂಗ್

GPT ಅಥವಾ Get-paid-to ಅಂದರೆ ಕಾರ್ಯಕ್ಕೆ ತಕ್ಕ ಸಂಭಾವನೆ ಇರುವ ಕೆಲಸಗಳು ಹದಿಹರೆಯದವರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಅಂದರೆ ಯಾವುದಾದರೊಂದು ತಾಣಕ್ಕೆ ಸುಮ್ಮನೇ ಭೇಟಿ ನೀಡಿ ಅದರಲ್ಲಿರುವ ಆಟಗಳನ್ನು ಆಡುವುದು ಅಥವಾ ರಾಜಕೀಯ - ಶಾಪಿಂಗ್ ಮೊದಲಾದ ವಿಷಯಗಳಲ್ಲಿ ನೀಡಲಾಗುವ ಆನ್ಲೈನ್ ಸಮೀಕ್ಷೆಗಳಲ್ಲಿ ಭಾಗವಹಿಸಿದರೆ ಸಾಕು. ಕೊಂಚ ಸಂಭಾವನೆ ದೊರಕುತ್ತದೆ. ಇದು ಸಾಮಾನ್ಯವಾಗಿ ಸಮಯಾವಕಾಶವಿದ್ದರೂ ಪರಿಣಿತಿ ಇಲ್ಲದವರಿಗೆ ಹೇಳಿ ಮಾಡಿಸಿದ ಕೆಲಸವಾಗಿದ್ದು, ದಿನದಲ್ಲಿ ಕೆಲವು ಸಮಯ ನೀಡಿದರೆ ಸಾಕು. ಆದರೆ ಇದರ ಸಂಭಾವನೆ ಚಿಕ್ಕ ಮೊತ್ತದ್ದಾಗಿದ್ದು ಇದರಿಂದ ಮನೆಯ ಖರ್ಚು ಕಳೆಯಲು ಸಾಧ್ಯವಿಲ್ಲ. ಆದರೆ ಕೊಂಚ ಹೆಚ್ಚುವರಿ ಆದಾಯವನ್ನು ಪಡೆಯಬಹುದು. Contests2win ಎಂಬ ತಾಣ ವಿಶ್ವಾಸಾರ್ಹವಾಗಿದೆ.

ಆನ್ಲೈನ್ ಮಾರ್ಕೆಟಿಂಗ್

ಯಾವುದೇ ತಾಣವನ್ನು ಪ್ರಾರಂಭಿಸುವಾಗ ಇದಕ್ಕೆ ಮೊದಲ ಆದ್ಯತೆಯನ್ನು ಇದನ್ನು ಇತರರು ಹುಡುಕುವಂತಿರಬೇಕು ಎಂದೇ ನಿರ್ಮಿಸಲಾಗುತ್ತದೆ. ಅಂದರೆ ಗೂಗಲ್ ಮೊದಲಾದ ಸರ್ಜ್ ಇಂಜಿನ್ ನಲ್ಲಿ ಈ ತಾಣಕ್ಕೆ ಸಂಬಂಧಿಸಿದ ಕೆಲವು ಪದಗಳನ್ನು ಬಳಸಿದರೂ ಈ ತಾಣ ಸುಲಭವಾಗಿ ಗ್ರಾಹಕ ಪಡೆಯುವಂತಿರಬೇಕು. SEO/SEM ಎಕ್ಸ್ ಪರ್ಟ್ ಎಂಬ ಪರಿಣಿತರು ಈ ಮಾರ್ಕೆಟಿಂಗ್ ತಾಣಗಳನ್ನು ನಿರ್ಮಿಸುವ ಹೊಣೆ ಹೊತ್ತಿದ್ದು ಈ ತಾಣಗಳ ಮೂಲಕ ಲೇಖನಗಳು, ಮಾಹಿತಿ ಸಂಗ್ರಹ, ಫೋರಂ ಪೋಸ್ಟಿಂಗ್, ಬ್ಲಾಗ್ ಪೋಸ್ಟಿಂಗ್, ನಿಮ್ಮ ತಾಣದ ಬಗ್ಗೆ ಡೈರೆಕ್ಟರಿ, ಸರ್ಚ್ ಇಂಜಿನ್, ಸಾಮಾಜಿಕ ಜಾಲತಾಣ ಮೊದಲಾದವುಗಳಲ್ಲಿ ದಾಖಲಿಸಲು ನೆರವಾಗುತ್ತಾರೆ. ಹೆಚ್ಚಿನ ಸಂಸ್ಥೆಗಳು ತಮ್ಮ ಉತ್ಪನ್ನವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ತಾವೇ ಸ್ವತಃ ತೊಡಗದೆ ಇದನ್ನು ಬೇರೆಯವರಿಗೆ ವಹಿಸುತ್ತಾರೆ. ಹಾಗೂ ಈ ಕೆಲಸವನ್ನು ನೀವು ನಿರ್ವಹಿಸಿದರೆ ನಿಮಗೆ ಸೂಕ್ತ ಸಂಭಾವನೆಯನ್ನೂ ನೀಡುತ್ತಾರೆ.

ಥೀಂ ಗಳನ್ನು ತಯಾರಿಸುವುದು

ಯಾವುದೇ ಕಂಪ್ಯೂಟರ್ ಆಧಾರಿತ ಕಡತಗಳನ್ನು ನಾವೇ ಸ್ವತಃ ತಯಾರಿಸುವುದಕ್ಕಿಂತಲೂ ಇದನ್ನು ಸುಲಭವಾಗಿಸುವ ಥೀಂ ಗಳನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿ. ಥೀಂ ಎಂದರೆ ಒಂದರ್ಥದಲ್ಲಿ ಅಚ್ಚು ಎನ್ನಬಹುದು. ಉದಾಹರಣೆಗೆ ರಜೆ ಪಡೆಯಲು ರಜಾ ಚೀಟಿ ಪಡೆಯುವುದು ಹೇಗೆ? ಇದು ಸರಿಯಾಗಿ ಗೊತ್ತಿರದೇ ಇದ್ದರೆ ಇದರ ಸಿದ್ಧ ರೂಪದ ಕಡತದಲ್ಲಿ ನಿಮ್ಮ ಹೆಸರು, ಕಾರಣ ಬರೆದು ಪ್ರಿಂಟ್ ಮಾಡಿದರೆ ಸಾಕು, ಸಿದ್ಧರೂಪದ ಉತ್ತಮ ಗುಣಮಟ್ಟದ ಪತ್ರ ತಯಾರಿ. ಇದೇ ರೀತಿಯಲ್ಲಿ ಬ್ಲಾಗ್ ನ ವಿನ್ಯಾಸದ ಹೊಣೆಯನ್ನೂ ನೀವೇ ಸ್ವತಃ ನಿರ್ವಹಿಸುವ ಬದಲು ಸಿದ್ಧರೂಪದ ವಿನ್ಯಾಸಗಳನ್ನು ನಿಮ್ಮ ಬ್ಲಾಗ್ ಗೆ ಅನ್ವಯಿಸಿದರೆ ಸಾಕು, ಎಲ್ಲವೂ ಆ ಪ್ರಕಾರವೇ ವಿನ್ಯಾಸಗೊಂಡು ನಿಮ್ಮ ಬ್ಲಾಗ್ ಸುಂದರವಾಗುತ್ತದೆ. ಇದನ್ನೇ ಥೀಂ (theme) ಎಂದು ಕರೆಯುತ್ತಾರೆ. ಒಂದು ವೇಳೆ ನಿಮಗೆ ವೆಬ್ ಡಿಸೈನಿಂಗ್ ಹಾಗೂ ಕೋಡಿಂಗ್ ಗೊತ್ತಿದ್ದರೆ ವೆಬ್ ಥೀಂಗಳನ್ನು ವಿನ್ಯಾಸಗೊಳಿಸುವ ಮೂಲಕ ಉತ್ತಮ ಸಂಭಾವನೆ ಪಡೆಯಬಹುದು. ಈ ನಿಟ್ಟಿನಲ್ಲಿ TemplateMonster ಹಾಗೂ ThemeForest ಮೊದಲಾದ ತಾಣಗಳು ಉತ್ತಮ ಸಂಭಾವನೆ ಮತ್ತು ಅವಕಾಶಗಳನ್ನು ಒದಗಿಸುತ್ತವೆ. ಈ ಥೀಂ ಗಳಲ್ಲಿ ಒದಗಿಸುರುವ ವಿಶೇಷ ಸೌಲಭ್ಯ ಹಾಗೂ ಹಕ್ಕು ಸ್ವಾಮ್ಯವನ್ನು ಪರಿಗಣಿಸಿ ಇದರ ಮೊತ್ತವೂ ಹೆಚ್ಚಾಗುತ್ತದೆ.

English summary

How to make money online?

Whether you're looking to make some fast cash, or you're after long-term, more sustainable income-producing results, there are certainly ways you can make money online today.
Story first published: Thursday, November 16, 2017, 13:08 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns