For Quick Alerts
ALLOW NOTIFICATIONS  
For Daily Alerts

ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸುವುದು ಹೇಗೆ?

ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಹಣವನ್ನು ಉಳಿತಾಯ ಖಾತೆಯಲ್ಲಿಯೇ ಇಡುವ ಬದಲು ಶ್ರೇಣಿ II ರ ಖಾತೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಯನ್ನು ಆಯ್ಕೆ ಮಾಡಿಕೊಳ್ಳಬಹುದು.

|

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಒಂದು ಕೋಟಿ ರೂಪಾಯಿಗಿಂತ ಕೆಳಗೆ ಅನ್ವಯವಾಗುವಂತೆ, ಉಳಿತಾಯ ಖಾತೆಯ ಮೇಲೆ 50 ಪಾಯಿಂಟ್ ಕಡಿತಗೊಳಿಸಿದ ನಂತರ, ಇದೇ ನೀತಿಯನ್ನು ರಾಜ್ಯದ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಅದನ್ನೇ ಪಾಲಿಸಲು ಆರಂಭಿಸಿದವು.

ಅಪನಗದೀಕರಣದ ನಂತರ ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬಂದ ನಂತರ, ಒಟ್ಟಾರೆ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಲಾರಂಭಿಸಿತು. ಬ್ಯಾಂಕುಗಳ ಒಟ್ಟಾರೆ ಪ್ರಸ್ತುತ ಉಳಿತಾಯ ಖಾತೆ (ಸಿಎಎಸ್ಎ) ಯ ಒಟ್ಟು ಮೊತ್ತವು ಶೇ.78ರಷ್ಟಿದ್ದು, ಜೂನ್ 30, 2017 ರವರೆಗೆ ಒಟ್ಟಾರೆ ಠೇವಣಿಯ ಶೇ. 30 ರಷ್ಟಿತ್ತು.

ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸುವುದು ಹೇಗೆ?

ಈ ರೀತಿಯ ಕೆಲವು ಉಳಿತಾಯಗಳಿಂದ ಹೆಚ್ಚಿನದ್ದನ್ನು ಅಪೇಕ್ಷಿಸಲು ಸಾಧ್ಯವಿರುವುದಿಲ್ಲ. ಈ ರೀತಿಯ ಬಹುತೇಕ ಹೂಡಿಕೆಗಳು ಉಳಿತಾಯ ಖಾತೆಯಲ್ಲಿ ಹಣವನ್ನು ಸುರಕ್ಷತೆಯ ಸಲುವಾಗಿ ಮಾತ್ರ ಇಡಲಾಗುತ್ತದೆ. ಹಾಗಾಗಿ, ಇದನ್ನೊಂದು ಹೂಡಿಕೆಯ ಆಯ್ಕೆ ಎನ್ನಲಾಗುವುದಿಲ್ಲ.

ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಹಣವನ್ನು ಉಳಿತಾಯ ಖಾತೆಯಲ್ಲಿಯೇ ಇಡುವ ಬದಲು ಶ್ರೇಣಿ II ರ ಖಾತೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ಮ್ಯೂಚುಯಲ್ ಫಂಡ್ ಗಳನ್ನು ಆಯ್ಕೆ ಮಾಡುವುದರಿಂದ ಹಣಕ್ಕೆ ಹೆಚ್ಚಿನ ಆದಾಯ ಬರುವುದು. ಹೂಡಿಕೆ ಯೋಜನೆ: ಭದ್ರ ಹೂಡಿಕೆ ಯೋಜನೆಯನ್ನು ರೂಪಿಸುವುದು ಹೇಗೆ?

ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸುವುದು ಹೇಗೆ?

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಶೇಣಿ II
ನಿವೃತ್ತಿಯ ನಂತರದ ಆದಾಯ ತೆರಿಗೆ ಯೋಜನೆಗಳನ್ನು ಪಡೆಯಬೇಕಾದರೆ ಶ್ರೇಣಿ I ರಡಿಯಲಿ ಉಳಿತಾಯ ಮಾಡುವುದು ಕಡ್ಡಾಯ. ಆದರೆ ಶ್ರೇಣಿ IIರ ಖಾತೆಯಲ್ಲಿ ಪಿಂಚಣಿಯನ್ನು ನಿರ್ವಹಿಸಲ್ಪಡುವ ಏಳು ಹಂತಗಳಿದ್ದು, ಇದು ಮ್ಯೂಚುವಲ್ ಫಂಡ್ ಗಳಂತೆಯೇ ಇರುತ್ತವೆ.
ಯಾವುದೇ ಅಡ್ಡಿ ಇಲ್ಲದೆ ತಮ್ಮ ಹಣವನ್ನು ಇದರಲ್ಲಿ ಹಿಂದಕ್ಕೆ ಪಡೆದುಕೊಳ್ಳಬಹುದು. ಆಯಾ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅನ್ವಯವಾಗುವಂತೆ ಈಕ್ವಿಟಿ, ಸರಕಾರಿ ಸೆಕ್ಯುರಿಟಿಗಳು ಮತ್ತು ಕಾರ್ಪೊರೇಟ್ ಸಾಲ ಸೌಲಭ್ಯದ ಲಾಭಗಳನ್ನು ಪಡೆಯಬಹುದು.
ಶ್ರೇಣಿ IIರ ಖಾತೆಯನ್ನು ಪ್ರಾರಂಭಿಸುವ ಮೊದಲು ಶ್ರೇಣಿ Iರ ಖಾತೆಯನ್ನು ತೆರೆಯುವುದು ಕಡ್ಡಾಯ. ಶ್ರೇಣಿ IIರಲ್ಲಿ ಒಂದು ವರ್ಷಕ್ಕೆ ಇಕ್ವಿಟಿ ಯೋಜನೆಯಡಿಯಲ್ಲಿ 17.5%, ಸರಕಾರಿ ಸೆಕ್ಯುರಿಟಿಗಳಲ್ಲಿ 19% ಮತ್ತು ಕಾರ್ಪೋರೇಟ್ ಬಾಂಡ್ ಗಳಲ್ಲಿ 11% ರಷ್ಟು ನಿವ್ವಳ ಲಾಭವನ್ನು ಪಡೆಯಬಹುದಾಗಿದೆ. 80ಸಿ ತೆರಿಗೆ ಕಾಯ್ದೆಯ ಪ್ರಕಾರ ಶ್ರೇಣಿ Iರ ಖಾತೆಯಂತೆ ಶ್ರೇಣಿ IIರಲ್ಲಿ ತೆರಿಗೆ ವಿನಾಯತಿಯ ವ್ಯವಸ್ಥೆಯು ಇರುವುದಿಲ್ಲ. ತೆರಿಗೆ ಪಟ್ಟಿಯ ಪ್ರಕಾರ ಇದರಲ್ಲಿ ಬರುವ ಲಾಭದ ಅಂಶವನ್ನು ಒಬ್ಬ ವ್ಯಕ್ತಿಯ ಆದಾಯಕ್ಕೆ ಸೇರಿಸಲಾಗುವುದು.

ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸುವುದು ಹೇಗೆ?

ಮ್ಯೂಚುಯಲ್ ಫಂಡ್ (Liquid funds of mutual funds)
ಮ್ಯೂಚುಯಲ್ ಫಂಡ್ ಗಳ ಲಿಕ್ವಿಡ್ ಹಣವನ್ನು ಠೇವಣಿಗಳ ಪ್ರಮಾಣಪತ್ರ, ಖಜಾನೆ ಮಸೂದೆಗಳು, ವಾಣಿಜ್ಯ ಕಾಗದ ಮತ್ತು ಟರ್ಮ್ ಡಿಪಾಸಿಟ್ ಮುಂತಾದ ರೂಪದಲ್ಲಿ ಹೂಡಿಕೆ ಮಾಡಲಾಗುತ್ತದೆ. ವ್ಯಕ್ತಿಗಳು ಹೆಚ್ಚಿನ ಹಣವನ್ನು ಹೂಡಿಕೆ ಮಾಡಿಕೊಳ್ಳಲು ಸೂಕ್ತ ಆಯ್ಕೆಗಳಾಗಿವೆ. ಈ ನಿಧಿಗಳ ಮುಕ್ತಾಯವು 91 ದಿನಗಳಿಗಿಂತಲೂ ಕಡಿಮೆಯಿರುತ್ತದೆ. ಇವುಗಳಿಗೆ ಯಾವುದೇ ಲಾಕ್-ಇನ್ ಅವಧಿ ಇರುವುದಿಲ್ಲ ಮತ್ತು ತಕ್ಷಣದ ಹಿಂಪಡೆತಕ್ಕೆ (ರಿಡೆಮ್ಶನ್) ಅವಕಾಶವಿರುತ್ತದೆ. ಇದರ ಹೂಡುವಿಕೆಯ ಅವಧಿಯು ಕಡಿಮೆಯಾಗಿರುವುದರಿಂದ ಈ ಪದ್ದತಿಗಳನ್ನು ಹೆಚ್ಚಾಗಿ ಕಂಪನಿಗಳು ತಮ್ಮ ಹಣದ ಹೂಡುವಿಕೆಗಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಇದರ ಅವಧಿಯು ಒಂದು ದಿನದಿಂದ ಹಿಡಿದು ಮೂರು ತಿಂಗಳುಗಳವರೆಗೆ ಇರುತ್ತದೆ. ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ ನಿಮಯದ ಪ್ರಕಾರ, 60 ದಿನಗಳಿಗಿಂತ ಕಡಿಮೆ ಅವಧಿಯನ್ನು ಹೊಂದಿರುವ ಭದ್ರತೆಗಳನ್ನು (ಸೆಕ್ಯುರಿಟಿ) ನೇರ ಆಧಾರದ ಮೇಲೆ ಪಾವತಿಸಲಾಗುವುದು. ವೆಚ್ಚ ಅಥವಾ ಕೊನೆಯ ಮೌಲ್ಯಾಂಕನದ ಬೆಲೆಯಿಂದ ಮುಕ್ತಾಯಕ್ಕೆ ಇದು ನಿಧಿ ಸಂಗ್ರಹಿಸಲ್ಪಡುತ್ತದೆ. ಇದು ಫಂಡ್ ನ ನಿವ್ವಳ ಆಸ್ತಿ ಮೌಲ್ಯಕ್ಕೆ ಸ್ಥಿರತೆಯನ್ನು ನೀಡುತ್ತದೆ. ಇದು ಕೆಲವು ಮಾರುಕಟ್ಟೆ ಮತ್ತು ಕ್ರೆಡಿಟ್ ಅಪಾಯವನ್ನು ಹೊಂದಿದೆ.

ಉಳಿತಾಯ ಖಾತೆಯಿಂದ ಬಡ್ಡಿಯನ್ನು ಗಳಿಸುವ ರೂ. 10,000 ವರೆಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಟಿಟಿಎ ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. 36 ತಿಂಗಳುಗಳಿಗಿಂತಲೂ ಹೆಚ್ಚು ಕಾಲ ನಡೆಸಿದ ದ್ರವ ನಿಧಿಯ (ಲಿಕ್ವಿಡ್ ಫಂಡ್) ಘಟಕಗಳ ಮಾರಾಟವು 20% ರಷ್ಟು ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆಯನ್ನು ಆಕರ್ಷಿಸುತ್ತದೆ.
36 ತಿಂಗಳಿಗಿಂತ ಮುಂಚಿನ ಮಾರಾಟವು ವ್ಯಕ್ತಿಯ ತೆರಿಗೆ ಸ್ಲ್ಯಾಬ್ ಪ್ರಕಾರ ಅಲ್ಪಾವಧಿಯ ಬಂಡವಾಳ ತೆರಿಗೆ ಲಾಭಗಳನ್ನು ಪಡೆಯುತ್ತದೆ. ಉಳಿತಾಯ ಖಾತೆಗಳೊಂದಿಗೆ ಹೋಲಿಸಿದರೆ, ತೆರಿಗೆಯನ್ನು ಪಾವತಿಸಿದ ನಂತರವೂ ಹೆಚ್ಚುವರಿ ಹಣ ಪಡೆಯಲು ಅವಕಾಶವಿದೆ ಎಂದು ತಜ್ಞರು ಹೇಳುತ್ತಾರೆ.

English summary

How to invest smartly and get higher returns

Savings account balances accounted for 78% of the overall current account savings account (CASA) of banks and 30% of the overall deposit base as on June 30, 2017. ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಹಣವನ್ನು ಉಳಿತಾಯ ಖಾತೆಯಲ್ಲಿಯೇ ಇಡುವ ಬದಲು ಶ್ರೇಣಿ II ರ ಖಾ
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X