For Quick Alerts
ALLOW NOTIFICATIONS  
For Daily Alerts

ಕಾಲೇಜ್ ವಿದ್ಯಾರ್ಥಿಗಳಿಗೆ 8 ಅತ್ಯುತ್ತಮ ಪಾರ್ಟ್ ಟೈಮ್ ಉದ್ಯೋಗಗಳು

ವಿದ್ಯಾರ್ಥಿ ದೆಸೆಯಲ್ಲಿ ದೊರಕುವ ಅಪಾರ ಪ್ರಮಾಣದ ಬಿಡುವಿನ ವೇಳೆಯನ್ನು ಉಪಯುಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅರೆಕಾಲಿಕ ಕೆಲಸದ ಮೂಲಕ ಹಣ ಸಂಪಾದಿಸಬಹುದು. ಇದರಿಂದ ಹಲವು ಬಗೆಯ ಪ್ರಯೋಜನಗಳಿವೆ.

By Siddu
|

ವಿದ್ಯಾರ್ಥಿ ದೆಸೆಯಲ್ಲಿ ದೊರಕುವ ಅಪಾರ ಪ್ರಮಾಣದ ಬಿಡುವಿನ ವೇಳೆಯನ್ನು ಉಪಯುಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅರೆಕಾಲಿಕ ಕೆಲಸದ ಮೂಲಕ ಹಣ ಸಂಪಾದಿಸಬಹುದು. ಇದರಿಂದ ಹಲವು ಬಗೆಯ ಪ್ರಯೋಜನಗಳಿವೆ. ಮೊದಲಿಗೆ ಇದರಿಂದ ಹಣ ಗಳಿಕೆ ಸಾಧ್ಯವಾಗುವುದರಿಂದ ಪೋಷಕರ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೆ ಕೆಲಸದ ವೇಳೆ ದೊರಕುವ ಅನುಭವ ಮತ್ತು ಸಂಪರ್ಕಗಳು ಮುಂದಿನ ಜೀವನದಲ್ಲಿ ಅತ್ಯವಶ್ಯವಾಗಿ ಉಪಯುಕ್ತವಾಗಲಿವೆ. ಈ ಹಂತದಲ್ಲಿನ ದುಡಿಮೆಯಿಂದ ಆತ್ಮವಿಶ್ವಾಸ ವೃದ್ಧಿಸುತ್ತದಲ್ಲದೆ, ಸಮಾಜ ಅಂತಹವರನ್ನು ಗೌರವ ಭಾವದಿಂದ ಕಾಣುತ್ತದೆ.

 

ವ್ಯಾಸಂಗದ ಬಳಿಕ ನೀವು ಪೂರ್ಣಾವಧಿ ಉದ್ಯೋಗ ಪಡೆಯಲು ಯತ್ನಿಸಿದಾಗ ನಿಮ್ಮ ಈ ಕೆಲಸದ ಪೂರ್ವಾನುಭವ ನಿಮಗೆ ಇತರೆ ಅಭ್ಯರ್ಥಿಗಳಿಗಿಂತ ಒಂದು ಕೈ ಹೆಚ್ಚು ಅನುಕೂಲಕರವಾಗಿ ನೆರವಿಗೆ ನಿಲ್ಲುತ್ತದೆ. ಕಾಲೇಜು ವ್ಯಾಸಂಗದ ವೇಳೆ ಉದ್ಯೋಗ ಮಾಡುವ ಆಕಾಂಕ್ಷೆ ಉಳ್ಳವರಾಗಿದ್ದರೆ ನೀವು ಕೈಗೆತ್ತಿಕೊಳ್ಳಬಹುದಾದ ವಿವಿಧ ಕೆಲಸಗಳ ಕಿರು ಪಟ್ಟಿಯನ್ನು ಒಮ್ಮೆ ನೋಡೋಣ ಬನ್ನಿ.. ಜನರು ಉದ್ಯೋಗ ಯಾಕೆ ಕಳೆದುಕೊಳ್ಳುತ್ತಾರೆ? ಇಲ್ಲಿವೆ ಪ್ರಮುಖ 10 ಕಾರಣ

ಐ.ಟಿ. ಸಪೋರ್ಟ್

ಐ.ಟಿ. ಸಪೋರ್ಟ್

ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಕಾರ್ಯವಿಧಾನದ ಕುರಿತ ತಾಂತ್ರಿಕ ಜಾಣ್ಮೆ ನಿಮಗಿದ್ದು, ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಗಳಲ್ಲಿ ಎದುರಾಗಬಹುದಾದ ಸಣ್ಣ ಪುಟ್ಟ ನ್ಯೂನತೆಗಳನ್ನು ಸರಿಪಡಿಸುವುದು ನಿಮಗೆ ತಿಳಿದಿದ್ದರೆ ಈ ನಿಮ್ಮ ಕೌಶಲ್ಯವು ಅಗತ್ಯವಾಗಿ ನಿಮಗೆ ಹಣ ಸಂಪಾನೆಯ ಮಾರ್ಗವಾಗಬಲ್ಲದು. ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಾಜೆಕ್ಟ್ ಕುರಿತಾದ ಅಧ್ಯಯನ ಮತ್ತು ಪ್ರಾಜೆಕ್ಟ್ ವರದಿ ತಯಾರಿಕೆ ಸೇರಿದಂತೆ ಬಹುಮುಖಿ ಕಾರಣಗಳಿಗಾಗಿ ಕಂಪ್ಯೂಟರ್ ಅನ್ನು ಆಶ್ರಯಿಸುತ್ತಾರೆ. ಕಂಪ್ಯೂಟರ್ ಬಳಕೆಯ ಸಂದರ್ಭಗಳಲ್ಲಿ ಕೆಲವೊಮ್ಮೆ ಅಷ್ಟೇನೂ ಗಹನವಲ್ಲದ ಕೆಲವು ಚಿಕ್ಕಪುಟ್ಟ ತೊಂದರೆಗಳು ಕಂಡು ಬರಬಹುದು. ಕಂಪ್ಯೂಟರ್ ಸಂಸ್ಥೆಯ ಸರ್ವೀಸ್ ಕೇಂದ್ರಗಳು ಎಲ್ಲಾ ನಗರಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿರುವುದಿಲ್ಲ. ಅವು ಇರುವೆಡೆ ಕೂಡ ಸುಲಭಕ್ಕೆ ತಲುಪುವಷ್ಟು ಹತ್ತಿರವಿರುವುದಿಲ್ಲ. ಅವು ನಿಗದಿತ ವೇಳೆಯಲ್ಲಿ ಮಾತ್ರವೇ ಕಾರ್ಯನಿರ್ವಹಣೆ ಮಾಡುತ್ತವೆ. ರಿಪೇರಿ ಮತ್ತು ಮರಳಿಸಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತವೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಇಂತಹ ಸಮಯದಲ್ಲಿ ತಕ್ಷಣದ ಸಹಾಯಕ್ಕಾಗಿ ಕಂಪ್ಯೂಟರ್ ಸಂಸ್ಥೆಯ ಸೇವಾ ಕೇಂದ್ರದ ಬದಲಿಗೆ ಸಮೀಪದಲ್ಲಿ ಸಿಗುವ ಕಡಿಮೆ ಖರ್ಚಿನಲ್ಲಿ ಹಾಗೂ ಶೀಘ್ರವಾಗಿ ಈ ತೊಂದರೆಗಳನ್ನು ಸರಿಪಡಿಸಿಕೊಡುವವರಿಗೆ ಆದ್ಯತೆ ನೀಡುತ್ತಾರೆ. ಪರ್ಸ್/ವಾಲೆಟ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ...

ಸಾಮಾಜಿಕ ಮಾಧ್ಯಮ ಸಹಾಯಕ
 

ಸಾಮಾಜಿಕ ಮಾಧ್ಯಮ ಸಹಾಯಕ

ಸಾಮಾಜಿಕ ಜಾಲತಾಣಗಳು ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ತಮ್ಮ ಆಸಕ್ತಿ, ಅಭಿರುಚಿಯನ್ನು ಚರ್ಚಿಸಲು, ಹಂಚಿಕೊಳ್ಳಲು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಕಾಲೇಜು ವಿದ್ಯಾರ್ಥಿಗಳು ಉಳಿದೆಲ್ಲಾ ವಯೋಮಾನದ ಜನರಿಗಿಂತ ಹೆಚ್ಚಾಗಿ ಸಾಮಾಜಿಕ ಜಾಲವನ್ನು ಬಳಸುತ್ತಾರೆ. ಹಾಗಾಗಿ ಈ ಜಾಲತಾಣಗಳ ಮೂಲಕ ತಮ್ಮ ಬ್ರ್ಯಾಂಡ್ ಉತ್ಪನ್ನಗಳ ಪ್ರಚಾರ ಮಾಡಲು ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತವೆ. ಈ ಸ್ಥಾನಗಳು ಅರೆಕಾಲಿಕ ಸ್ವರೂಪದ್ದಾಗಿರುತ್ತವೆ ಹಾಗು ಸಣ್ಣಮಟ್ಟದ ಸ್ಟೈಫೆಂಡ್ (ಶಿಷ್ಯವೇತನ) ನೀಡಲಾಗುತ್ತದೆ. ಕೆಲಸದಲ್ಲಿ ಉತ್ತಮ ಕಾರ್ಯದಕ್ಷತೆ ಪ್ರದರ್ಶಿಸಿದವರಿಗೆ ಕಾಲೇಜು ವ್ಯಾಸಂಗದ ಬಳಿಕ ಪೂರ್ಣಾವಧಿ ಹುದ್ದೆಗೆ ನೇಮಕವಾಗುವ ಅವಕಾಶಗಳು ಕೂಡ ಮುಕ್ತವಾಗಿರುತ್ತವೆ.

ಟ್ಯೂಟರ್

ಟ್ಯೂಟರ್

ಶೈಕ್ಷಣಿಕವಾಗಿ ಉನ್ನತ ದರ್ಜೆಯವರಾಗಿದ್ದರೆ ಮತ್ತು ಕಲಿಸುವ ಹಂಬಲ ಹಾಗು ಮನೋಭಾವ ನಿಮ್ಮದಾದರೆ ಚಿಕ್ಕ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಪಾಠ ಕಲಿಸಲು ನಿಮ್ಮನ್ನು ಆರಿಸಲು ಉತ್ಸುಕರಾಗುತ್ತಾರೆ. ನಿಮ್ಮ ಈ ಹಂಬಲದ ಕುರಿತು ನಿಮ್ಮ ನೆರೆಹೊರೆಯ ಜನರಲ್ಲಿ ಮಾತಾಡಿದರೆ ಅದು ಉತ್ತಮ ಫಲಿತಾಂಶ ಒದಗಿಸುತ್ತದೆ. ಇಂತಹ ಕೆಲಸಕ್ಕೆ ಬಾಯಿ ಮಾತಿನ ಪ್ರಚಾರ ಹೆಚ್ಚು ಪ್ರಯೋಜನಕಾರಿ. ಸೈನ್ಸ್, ಗಣಿತದಂತಹ ಬಹುಪಾಲು ವಿದ್ಯಾರ್ಥಿಗಳ ಪಾಲಿನ ಕಬ್ಬಿಣದ ಕಡಲೆಯಂತಹ ವಿಷಯ ಮತ್ತು ಮಕ್ಕಳ ವಯೋಮಾನದ ಆಧಾರದ ಮೇಲೆ ದಿನಕ್ಕೆ ಒಂದೆರಡು ತಾಸುಗಳನ್ನು ವ್ಯಯಿಸಿ ಹೆಚ್ಚು ಹಣ ಗಳಿಸಬಹುದು.

ಊಬರ್ ಅಥವಾ ಓಲಾ ಚಾಲಕ

ಊಬರ್ ಅಥವಾ ಓಲಾ ಚಾಲಕ

ನಿಮ್ಮ ನಗರದ ರಸ್ತೆ ಮತ್ತು ಮಾರ್ಗಗಳ ಕುರಿತು ನಿಮಗಿರುವ ಅರಿವನ್ನು ನಿಮ್ಮ ಹಣ ಸಂಪಾದನೆಗೆ ದಾರಿ ಮಾಡಿಕೊಳ್ಳಬಹುದು. ಕಾರು ಚಾಲಕರಾಗಿ ಕಾರು ಹಾಗು ಅದರ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್) ಹೊಂದಿರಬೇಕಾದ್ದು ಅವಶ್ಯಕ. ಸಂಸ್ಥೆಗಳು ನಿಮ್ಮಿಂದ ನೋಂದಣಿ ಶುಲ್ಕವನ್ನು ಸಂಗ್ರಹಿಸುತ್ತವೆ. ಒಂದಕ್ಕಿಂತ ಹೆಚ್ಚು ಬ್ರ್ಯಾಂಡ ಗಳನ್ನು ಆಯ್ದುಕೊಂಡು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲೂಬಹುದು. ಇದು ಅತ್ಯಂತ ಸರಳ ಕೆಲಸವಾಗಿದೆ. ಸುರಕ್ಷತಾ ಅಂಶಗಳ ಪಾಲನೆ ಅತ್ಯಗತ್ಯ ಎಂಬುದನ್ನು ಎಂದಿಗೂ ಮರೆಯಕೂಡದು. ನಿಮ್ಮ ವಾಹನ ಚಾಲನೆ ಕುರಿತು ನಿಮಗೆ ಸಮಾಧಾನವಿಲ್ಲದ ಪಕ್ಷದಲ್ಲಿ ಈ ಹುದ್ದೆಯಿಂದ ದೂರವಿರುವುದು ಉತ್ತಮ. ಇಲ್ಲದಿದ್ದರೆ ಪ್ರಯಾಣಿಕರ ಮತ್ತು ಪಾದಚಾರಿಗಳ ಸಾವು ನೋವುಗಳು ಉಂಟಾಗುವ ಅಪಾಯವಿರುತ್ತದೆ.

ಈವೆಂಟ್ ಪ್ರೊಮೋಷನ್

ಈವೆಂಟ್ ಪ್ರೊಮೋಷನ್

ಈ ಹುದ್ದೆಗೂ ಸಾಮಾಜಿಕ ಮಾಧ್ಯಮದ ಮ್ಯಾನೇಜರ್ ಹುದ್ದೆಗೆ ಬೇಕಾಗುವಂತಹ ಉತ್ತಮ ಸಂಪರ್ಕ ಜಾಲ ಅಗತ್ಯವಿರುತ್ತದೆ. ಆದರೆ ಇಲ್ಲಿ ವ್ಯಕ್ತಿಗತ ಮಟ್ಟದ ಸಂಪರ್ಕಗಳು ಹೆಚ್ಚು ಸಹಾಯಕ್ಕೆ ಬರುತ್ತವೆ. ಈವೆಂಟ್ ನಿರ್ವಹಣಾ ಸಂಸ್ಥೆಗಳು ಆಯೋಜಿಸುವ ಕಾರ್ಪೋರೇಟ್ ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮಗಳಿಗೆ ಪ್ರಮೋಟರ್ ಗಳು ಮತ್ತು ಸಭಿಕರ ಅವಶ್ಯಕತೆ ಇರುತ್ತದೆ. ಪ್ರಮೋಟರ್ ಗಳು ಈವೆಂಟ್ ಗಳ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುವುದು ಈ ಹುದ್ದೆಯ ಒಂದು ಭಾಗವಾಗಿರುತ್ತದೆ. ಸಾಧ್ಯವಿರುವಷ್ಟೂ ಹೆಚ್ಚೆಚ್ಚು ಜನರು ಭಾಗವಹಿಸುವಂತೆ ಮಾಡುವುದು ಈ ಹುದ್ದೆಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಹೊಸದಾಗಿ ಆರಂಭಗೊಂಡ ರೆಸ್ಟೋರಂಟ್ ಗಳು ಗ್ರಾಹಕರನ್ನು ತಮ್ಮಲ್ಲಿಗೆ ಸೆಳೆಯಬೇಕಾಗುತ್ತದೆ. ಈ ಕಾರ್ಯಸಾಧನೆಗಾಗಿ ಅವು ಕಮಿಷನ್ ಆಧಾರದ ಮೇಲೆ ಪ್ರಮೋಟರ್ ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ವೈಯಕ್ತಿಕ ಮತ್ತು ಸಾಮಾಜಿಕ ತಾಣಗಳ ಮೂಲಕ ಸಂಪಾದಿಸಿದ ಸಂಪರ್ಕ ಇಲ್ಲಿ ನೆರವು ನೀಡುತ್ತದೆ.

ರೆಸ್ಯೂಮ್ ತಯಾರಿಸುವುದು

ರೆಸ್ಯೂಮ್ ತಯಾರಿಸುವುದು

ನಿಮ್ಮ ಭಾಷಾ ಕೌಶಲ್ಯ ಉತ್ತಮವಾಗಿದ್ದು ಅಸ್ತವ್ಯಸ್ತ, ಚೆದುರಿದ ವಿಷಯಗಳನ್ನು ವ್ಯವಸ್ಥಿತ ರೂಪದಲ್ಲಿ ಪುನರ್ಮೂಡಿಸುವ, ಅದನ್ನು ಅರ್ಥಪೂರ್ಣವಾಗಿಸುವ ಕಲೆ ನಿಮಗೆ ಸಿದ್ಧಿಸಿದ್ದರೆ ರೆಸ್ಯೂಮ್ ತಯಾರಿಕೆಯ ಕೆಲಸ ನಿಮಗೆ ಹೇಳಿಮಾಡಿಸಿದಂಥದ್ದು. ಸಾಕಷ್ಟು ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಅಗತ್ಯ ಕುಶಲತೆ ಇರದೆ ಅವರು ಈ ವಿಷಯದಲ್ಲಿ ಹಿಂದುಳಿದಿರುತ್ತಾರೆ. ಹಾಗಾಗಿ ಈ ಉದ್ಯೋಗಕ್ಕೆ ಹೆಚ್ಚು ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ಇದು ಸರಳ ಆಯ್ಕೆ ಮಾತ್ರವಲ್ಲದೇ ಈ ಹುದ್ದೆಗೆ ಯಾವುದೇ ಆರಂಭಿಕ ಬಂಡವಾಳದ ಅವಶ್ಯಕತೆಯೂ ಇಲ್ಲ.

ರೆಸ್ಟೋರಂಟ್/ಶೀಘ್ರ ಆಹಾರ ಸಮೂಹದಲ್ಲಿ ಉದ್ಯೋಗ

ರೆಸ್ಟೋರಂಟ್/ಶೀಘ್ರ ಆಹಾರ ಸಮೂಹದಲ್ಲಿ ಉದ್ಯೋಗ

ಸಾಕಷ್ಟು ಫಾಸ್ಟ್ ಫುಡ್ ಸಮೂಹಗಳು ಸಂಜೆಯ ಪಾಳಿಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಲು ಅವಕಾಶ ಒದಗಿಸುತ್ತವೆ. ವಿದ್ಯಾರ್ಥಿಗಳ ಬಿಡುವಿನ ವೇಳೆಯಾದ ಸಂಜೆ ೫ ರಿಂದ ರಾತ್ರಿ ೧೧ ರ ವರೆಗೆ ಅವರು ಕಾರ್ಯನಿರ್ವಹಿಸಲು ಅನುವು ಮಡಿಕೊಡುತ್ತವೆ. ಈ ಕೆಲಸ ಸ್ವಲ್ಪ ಕಠಿಣವೆನಿಸಿದರೂ ಸಹ ಇದು ರೆಸ್ಟೋರಂಟ್ ವ್ಯಾಪಾರದ ಬಗ್ಗೆ ಅಪಾರ ತಿಳುವಳಿಕೆ ಒದಗಿಸುತ್ತದೆ. ಜೊತೆಗೆ ಉದ್ಯೋಗಿಗಳಿಗೆ ಆಕರ್ಷಕ ರಿಯಾಯ್ತಿಗಳು ಸಹ ದೊರೆಯುತ್ತವೆ. ಒಂದು ವೇಳೆ ನೀವು ಸರ್ವರ್ ಆಗಿ ದುಡಿಯಲು ಇಚ್ಛಿಸಿದಲ್ಲಿ ಟಿಪ್ಸ್ ಮೂಲಕ ಹೆಚ್ಚುವರಿ ಸಂಪಾದನೆ ಸಹ ಸಾಧ್ಯವಿದೆ.

ಇ-ಕಾಮರ್ಸ್ ಡೆಲಿವರಿ

ಇ-ಕಾಮರ್ಸ್ ಡೆಲಿವರಿ

ತಮ್ಮ ವಾಸಸ್ಥಳ ಮತ್ತು ತಮ್ಮ ನೆರೆಹೊರೆಯ ಪ್ರದೇಶಗಳು ಮತ್ತು ರಸ್ತೆಗಳ ಸಂಪೂರ್ಣ ತಿಳುವಳಿಕೆ ಹೊಂದಿರುವ ಕಾರಣಕ್ಕೆ ಸ್ಥಳೀಯ ಪ್ರತಿಭಾವಂತರಿಗೆ ಇ-ಕಾಮರ್ಸ್ ಸಂಸ್ಥೆಗಳು ಆದ್ಯತೆ ನೀಡುತ್ತವೆ. ಈ ಸಂಸ್ಥೆಗಳಿಗೆ ಲಾಜಿಸ್ಟಿಕ್ಸ್ ಒದಗಿಸುವವರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಪ್ರದೇಶಕ್ಕೆ ಡೆಲಿವರಿ ಬಾಯ್ಸ್ ಗಳಾಗಿ ಅರೆಕಾಲಿಕ ಉದ್ಯೋಗ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಹುದ್ದೆಗೆ ಸ್ವಂತ ವಾಹನ ಹೊಂದಿರಬೇಕಾಗುತ್ತದೆ.

English summary

8 Best Part Time Jobs For College Students

As a student, one can sometimes have a lot of free time at hand which can be productively utilised to make money from part time jobs.
Story first published: Saturday, March 31, 2018, 11:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X