ನಿಮ್ಮ ಹಣವನ್ನು ದುಪ್ಪಟ್ಟುಗೊಳಿಸುವುದು ಹೇಗೆ? ಇಲ್ಲಿವೆ 9 ಮಾರ್ಗಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ನೀವು ಹೂಡಿಕೆ ಮಾಡಿದ ಮೂಲ ಹಣ ದ್ವಿಗುಣಗೊಂಡರೆ ನಿಮಗೆ ಹೇಗನಿಸುತ್ತದೆ? ತುಂಬಾ ಖುಷಿಯಾಗುತ್ತದೆ ಅಲ್ಲವೆ? ಹಣವನ್ನು ದ್ವಿಗುಣಗೊಳಿಸುವ ಹಲವಾರು ಮಾರ್ಗೋಪಾಯಗಳಿವೆ. ವಿಷಯ ಇಷ್ಟೇ, ಹಣ ದ್ವಿಗುಣಗೊಳ್ಳಲು ತೆಗೆದುಕೊಳ್ಳುವ ಕಾಲಾವಧಿಯ ವಿಚಾರದಲ್ಲಿ ಮಾತ್ರ ನೀವು ಯಾವುದೇ ರೀತಿಯ ಜಾದೂವನ್ನು ನಿರೀಕ್ಷಿಸುವಂತಿಲ್ಲ. ಮೂಲ ನಿಯಮ 72ರ ಪ್ರಕಾರ ವಾರ್ಷಿಕ ರಿಟರ್ನ್ ಅನ್ನು 72 ರಿಂದ ಭಾಗಿಸುವುದರ ಮೂಲಕ ಕಾಲಾವಧಿಯನ್ನು ಲೆಕ್ಕಾಚಾರ ಮಾಡಬಹುದು.

  ನಿಮ್ಮ ಹಣವನ್ನು ದುಪ್ಪಟ್ಟುಗೊಳಿಸುವ ಸಲುವಾಗಿ ಕೆಲವು ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ..

  ತೆರಿಗೆ ಮುಕ್ತ ಬಾಂಡ್ ಗಳು

  ಪ್ರಾರಂಭದಲ್ಲಿ ಕತೆರಿಗೆ ಮುಕ್ತ ಬಾಂಡ್ ಗಳನ್ನು ಕೇವಲ ನಿರ್ಧಿಷ್ಟ ಅವಧಿಗಳಿಗಷ್ಟೇ ವಿತರಿಸಲಾಗುತ್ತಿತ್ತು. ಇದೀಗ ರಾಜ್ಯ ಸರಕಾರದಿಂದಲೇ ನಡೆಸಲ್ಪಡುವ ಕೆಲ ಘಟಕಗಳು ಸಹ 40,000 ಕೋಟಿ ರೂಪಾಯಿ ಬೆಲೆಬಾಳುವ ಬಾಂಡ್ ಗಳನ್ನು ವಿತರಿಸಲು ಸರಕಾರ ಅನುಮತಿಸಿದೆ. ಪಿ.ಎಫ್.ಸಿ ಮತ್ತು ಎನ್.ಟಿ.ಪಿ.ಸಿ ಕರ ಮುಕ್ತ ಬಾಂಡ್ ಗಳಿಗೆ ಈಗಾಗಲೇ ಸಿಕ್ಕಾಪಟ್ಟೆ ಬೇಡಿಕೆ ಇದೆ. ತೆರಿಗೆ ಮುಕ್ತ ಬಾಂಡುಗಳು ನೀಡುವ ಬಡ್ಡಿದರ ಅಥವಾ ತೆರಿಗೆ-ಹೊಂದಾಣಿಕೆಯ ಲಾಭವು ವರ್ಷಕ್ಕೆ ಶೇ. 8.20 ರಿಂದ ಶೇ. 8.50ರವರೆಗೆ ಇರುತ್ತದೆ. ಹೂಡಿಕೆಯ ಅವಧಿಯ ಮೇಲೆ ಹೊಂದಿಕೊಂಡು ಈ ಬಾಂಡ್ ಗಳಲ್ಲಿ ಹೂಡಿದ ಹಣವು ಸರಿಸುಮಾರು 8 ರಿಂದ 9 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೇ ಓದಿ..

  ಕಿಸಾನ್ ವಿಕಾಸ ಪತ್ರ (ಕೆವಿಪಿ)

  2012 ರಲ್ಲಿ ಕಿಸಾನ್ ವಿಕಾಸ ಪತ್ರ ಕಾರ್ಯನಿರ್ವಹಿಸದಿದ್ದರೂ, 2015-16 ನೇ ಸಾಲಿನಲ್ಲಿ ಇದನ್ನು ಮತ್ತೊಮ್ಮೆ ಚಾಲ್ತಿಗೆ ತರಲಾಯಿತು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರ ಆದಾಯದ ಮೇಲೆ ಯಾವುದೇ ನಿಯಂತ್ರಣ ಇಲ್ಲದ್ದುದರಿಂದ ಹಾಗೂ ಕೆ.ವಿ.ಪಿ. ಯೋಜನೆಯನ್ನು ಯಾರು ಬೇಕಾದರೂ ತಮ್ಮದಾಗಿಸಿಕೊಳ್ಳಲು ಸಾಧ್ಯವಿದ್ದುದರಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಸಹ ಹೊಸ ನಿಯಮಾವಳಿಗಳ ಪ್ರಕಾರ, ಕಿಸಾಸ್ ವಿಕಾಸ ಪತ್ರದಲ್ಲಿ ರೂ. 50,000 ರೂಪಾಯಿಗಳ ನಗದು ಹಣವನ್ನು ಹೂಡುವುದಾದರೆ ಅದಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಕೆವಿಪಿಯ ಪ್ರಸ್ತುತ ವಾರ್ಷಿಕ ಬಡ್ಡಿದರವು ಶೇ. 7.3ರಷ್ಟಿದ್ದು, ಹಣವು ಸರಿಸುಮಾರು 8 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಿಗೆ ಮುತ್ತಿನಂಥ 10 ಮಾತು

  ಕಾರ್ಪೊರೇಟ್ ಡಿಪಾಸಿಟ್/ನಾನ್-ಕನ್ವರ್ಟೆಬಲ್ ಡಿಬೆಂಚರ್ಸ್ (ಎನ್.ಸಿ.ಡಿ)

  ಮೂಲ ಮೊತ್ತವನ್ನು ದ್ವಿಗುಣಗೊಳಿಸುವ ಅವೆಷ್ಟೋ ಹೂಡಿಕೆಯ ಮಾರ್ಗೋಪಾಯಗಳಿವೆ. ಅವುಗಳ ಪೈಕಿ ಕಾರ್ಪೊರೇಟ್ ಡಿಪಾಸಿಟ್ ಕೂಡ ಒಂದು. ಬ್ಯಾಂಕ್ ಎಫ್ ಡಿ ಗಳಿಗೆ ದೊರೆಯುವ ಬಡ್ಡಿದರಗಳಿಗೆ ಹೋಲಿಸಿದಲ್ಲಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್.ಬಿ.ಎಫ್.ಸಿ) ಮತ್ತು ಕಾರ್ಪೊರೇಟ್, ನಾನ್-ಕನ್ವರ್ಟೆಬಲ್ ಡಿಬೆಂಚರ್ಸ್ ಮತ್ತು ಕಾರ್ಪೊರೇಟ್ ಡಿಪಾಸಿಟ್ ಗಳಿಗೆ ಅಧಿಕ ಬಡ್ಡಿದರಗಳನ್ನು ನೀಡುತ್ತವೆ. ಐ.ಸಿ.ಆರ್.ಎ. ರೇಟಿಂಗ್ ಗಳು ಮತ್ತು ಡಿಪಾಸಿಟ್ ನ ಅವಧಿಯ ಮೇಲೆ ಹೊಂದಿಕೊಂಡು ಈ ಡಿಪಾಸಿಟ್ ಗಳ ರಿಟರ್ನ್ ದರವು ಸರಿಸುಮಾರು ಶೇ. 9 ರಿಂದ ಶೇ. 10ರಷ್ಟಿರುತ್ತದೆ. ಈ ಯೋಜನೆಯಲ್ಲಿ ಹೂಡಿದ ಹಣವು ಸುಮಾರು ಎಂಟು ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

  ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ಸ್ (ರಾಷ್ಟ್ರೀಯ ಉಳಿತಾಯ ಪತ್ರಗಳು)

  ಭಾರತೀಯ ಅಂಚೆ ಇಲಾಖೆಯಿಂದ ಕೊಡಮಾಡಲ್ಪಡುವ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಗಳು ಹೂಡಿಕೆಯ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ. ಈ ಸರ್ಟಿಫಿಕೇಟ್ ಗಳು ಐದು ಮತ್ತು ಹತ್ತು ವರ್ಷಗಳ ಅವಧಿಯ ಖಚಿತ ಕಾಲಾವಧಿಯದ್ದಾಗಿದ್ದು, ಹೂಡಿಕೆಯ ಅವಧಿಯನ್ನು ಹೊಂದಿಕೊಂಡು ಖಚಿತ ಬಡ್ಡಿದರವನ್ನು ಕೊಡಮಾಡುತ್ತವೆ. ಐದು ವರ್ಷಗಳ ಅವಧಿಯ ಎನ್.ಎಸ್.ಸಿ ಗೆ ವಾರ್ಷಿಕ ಬಡ್ಡಿದರವು ಶೇ. 7.6 ರಷ್ಟಿರುತ್ತದೆ. ಹತ್ತು ವರ್ಷಗಳ ಅವಧಿಯ ಎನ್.ಎಸ್.ಸಿ ಗಳಿಗೆ ವಾರ್ಷಿಕ ಶೇ. 8.80 ರ ದರದಲ್ಲಿ ಬಡ್ಡಿಯನ್ನು ಕೊಡಲಾಗುತ್ತದೆ.

  ರೂ. 1,50.000ವರೆಗೆ ಆದಾಯ ತೆರಿಗೆ ಅಧಿನಿಯಮ 1961 ರ 80C ಸೆಕ್ಷನ್ ನ ಅಡಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಗಳು ತೆರಿಗೆ ವಿನಾಯಿತಿ ಪಡೆಯುತ್ತವೆ. ಜೊತೆಗೆ ಯೋಜನೆಯು ಪಕ್ವವಾದಾಗ ಲಭ್ಯವಾಗುವ ಮೊತ್ತದ ಮೇಲೆ ಟಿ.ಡಿ.ಎಸ್ (ಮೂಲದಲ್ಲಿ ಕಡಿತ) ಅನ್ವಯವಾಗುವುದಿಲ್ಲ. ಎನ್.ಎಸ್.ಸಿ ಗಳಲ್ಲಿ ಹೂಡುವುದರ ಮತ್ತೊಂದು ಪ್ರಯೋಜನವೇನೆಂದರೆ ಅವುಗಳ ಆಧಾರದ ಮೇಲೆ ಯಾವುದೇ ಬ್ಯಾಂಕ್ ನಿಂದಲೂ ಸಾಲ ಪಡೆಯಬಹುದು.

  ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್

  ಬ್ಯಾಂಕ್ ಗಳು ಕೊಡಮಾಡುವ ಫಿಕ್ಸೆಡ್ ಡಿಪಾಸಿಟ್ ಹೂಡಿಕೆ ಜನಪ್ರಿಯ ಆಯ್ಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಒಂದು ಲಕ್ಷ ರೂಪಾಯಿಗಳವರೆಗಿನ ಎಫ್ ಡಿಗಳಿಗೆ ವಿಮೆ ಸೌಲಭ್ಯವನ್ನು ಒದಗಿಸಿದೆ. ಇತ್ತೀಚಿಗೆ ಆರ್ಬಿಐ ಶೇ. 0.50 (0.50 ಬಿಪಿಎಸ್) ನಷ್ಟು ರೆಪೋ ದರವನ್ನು ಕಡಿತಗೊಳಿಸಿದ ಬಳಿಕ ಹಲವಾರು ಬ್ಯಾಂಕುಗಳು ಫಿಕ್ಸೆಡ್ ಡಿಪಾಸಿಟ್ ವಾರ್ಷಿಕ ಬಡ್ಡಿದರವನ್ನು 0.25% ರಿಂದ 0.50% ಕ್ಕೆ ಏರಿಕೆ ಮಾಡಿವೆ. ಯಾವುದೇ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡಿದಲ್ಲಿ ಹಣವು ದ್ವಿಗುಣಗೊಳ್ಳಲು ಸುಮಾರು ಎಂಟರಿಂದ ಒಂಭತ್ತು ವರ್ಷಗಳ ಅವಧಿಯು ಬೇಕಾಗುತ್ತದೆ.

  ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

  ಸರಕಾರವು ಕೊಡಮಾಡಿರುವ ಮತ್ತೊಂದು ಜನಪ್ರಿಯ ಹಾಗೂ ವಿಶ್ವಸನೀಯವಾದ ಹೂಡಿಕೆಯ ಯೋಜನೆಯೆಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್. ಪಿಪಿಎಫ್ ನಲ್ಲಿ ಹೂಡಬೇಕಾದರೆ ವರ್ಷಕ್ಕೆ ಕನಿಷ್ಟ ರೂ. 500 ಹೂಡಬೇಕಾದುದು ಅನಿವಾರ್ಯ. ಈ ಯೋಜನೆಯ ಹೂಡಿಕೆಯ ಅವಧಿಯು (ಲಾಕ್-ಇನ್ ಪಿರಿಯೆಡ್) 15 ವರ್ಷಗಳದ್ದಾಗಿರುತ್ತದೆ. ಇನ್ನಿತರ ಉಳಿತಾಯ ಯೋಜನೆಗಳಿಗೆ ಹೋಲಿಸಿದಲ್ಲಿ, ಈ ಯೋಜನೆಗೆ ಹೂಡಬೇಕಾದ ಕನಿಷ್ಟ ಮೊತ್ತವು ತೀರಾ ಅಲ್ಪದ್ದಾಗಿರುವುದರಿಂದ ವೇತನದಾರರು, ಉದ್ಯೋಗಿಗಳು, ಅಥವಾ ಸರಕಾರಿ ನೌಕರರು ಈ ಯೋಜನೆಯಲ್ಲಿ ಹಣ ಹೂಡಬಹುದು. ವಾರ್ಷಿಕ ಶೇ. 7.9 ರ ದರದಲ್ಲಿ ರಿಟರ್ನ್ ದರವಿರುತ್ತದೆ. ಈ ದರವು ಹೂಡಿಕೆಯ ವರ್ಷದಿಂದಲೇ ಅನ್ವಯವಾಗುತ್ತದೆ. ಈ ಯೋಜನೆ ಅಡಿಯಲ್ಲಿ ಬಡ್ಡಿಯ ಜೊತೆ ಸೇರಿ ಅಸಲು ಹಣವು ದ್ವಿಗುಣಗೊಳ್ಳುವುದಕ್ಕೆ ಸರಿಸುಮಾರು 8-10 ವರ್ಷಗಳ ಅವಧಿಯು ಬೇಕಾಗುತ್ತದೆ. ಲಾಕ್-ಇನ್ ಅವಧಿಯ ಅಂತಿಮ ಘಟ್ಟದಲ್ಲಿ, ಹೂಡಿದ ಹಣವು ಹಲವು ಪಟ್ಟು ಅಧಿಕಗೊಂಡಿರುತ್ತದೆ.

  ಮ್ಯೂಚುವಲ್ ಫಂಡ್

  ಹಲವಾರು ಮ್ಯೂಚುವಲ್ ಫಂಡ್ ಗಳು ಲಭ್ಯವಿದ್ದು, ಇಎಲ್ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ಡೆಟ್ ಓರಿಯೆಂಟೆಡ್, ಈಕ್ವಿಟಿ ಓರಿಯೆಂಟೆಡ್, ಬ್ಯಾಲನ್ಸ್ಡ್, ಅಥವಾ ಹೈಬ್ರಿಡ್ ಮ್ಯೂಚುವಲ್ ಫಂಡ್ಸ್ ಗಳಂತಹ ಕೆಲವನ್ನು ಇಲ್ಲಿ ಹೆಸರಿಸಬಹುದು. ಮ್ಯೂಚುವಲ್ ಫಂಡ್ ಗಳಲ್ಲಿನ ಹೂಡಿಕೆಯ ರಿಟರ್ನ್ ಗಳು ಮಾರುಕಟ್ಟೆಯ ಏರಿಳಿತಗಳ ಮೇಲೆ ಅವಲಂಬಿತವಾಗಿರುತ್ತವೆಯಾದರೂ, ಲಭ್ಯವಿರುವ ಇನ್ನಿತರ ಹೂಡಿಕೆಯ ಯೋಜನೆಗಳಿಗೆ ಹೋಲಿಸಿದಲ್ಲಿ ಮ್ಯೂಚುವಲ್ ಫಂಡ್ ಗಳ ರಿಟರ್ನ್ ದರಗಳು ಹೆಚ್ಚು. ಹೂಡಿಕೆಯ ಅವಧಿಯ ಮೇಲೆ ಮ್ಯೂಚುವಲ್ ಫಂಡ್ ಗಳ ರಿಟರ್ನ್ ದರಗಳು ಅವಲಂಬಿತವಾಗಿರುತ್ತವೆ. ದೀರ್ಘಕಾಲೀನ ಮ್ಯೂಚುವಲ್ ಫಂಡ್ ಗಳು ವಾರ್ಷಿಕ ಶೇ. 12 ರಿಂದ ಶೇ. 15 ವರೆಗಿನ ದರದಲ್ಲಿ ರಿಟರ್ನ್ ಕೊಡಬಲ್ಲವು. ಮ್ಯೂಚುವಲ್ ಫಂಡ್ ಗಳ ಮೂಲಕ ಹೂಡಿದ ಹಣವನ್ನು ಸರಿಸುಮಾರು ಐದರಿಂದ ಆರು ವರ್ಷಗಳಲ್ಲಿ ದ್ವಿಗುಣಗೊಳಿಸಿಕೊಳ್ಳಬಹುದು.

  ಗೋಲ್ಡ್ ಇಟಿಎಫ್

  ಭಾರತದಲ್ಲಿ ಚಿನ್ನ ಎಂದೆಂದಿಗೂ ಬೇಡಿಕೆಯನ್ನು ಕಳೆದುಕೊಳ್ಳುವುದಿಲ್ಲ. ಹೂಡಿಕೆಯ ವಿಚಾರಕ್ಕೆ ಬಂದಾಗ ಈ ಹಳದಿ ಲೋಹ ತುಂಬಾ ಮಹತ್ವ ಪಡೆದುಕೊಳ್ಳುತ್ತದೆ. 2002 ರಲ್ಲಿ ಇಟಿಎಫ್ ಬಿಡುಗಡೆಗೊಳಿಸಲಾಯಿತು. ವಾರ್ಷಿಕ ಸರಾಸರಿ ಶೇ. 22 ರ ದರದಲ್ಲಿ ರಿಟರ್ನ್ ಕೊಡುತ್ತದೆ. ತೀವ್ರ ಸ್ವರೂಪದ ಏರುಪೇರುಗಳನ್ನು ಕಾಣುತ್ತದೆಯಾದರೂ ಸಹ ಸ್ಟಾಕ್ ಮಾರ್ಕೆಟ್ ಅನ್ನು ಅವಲಂಬಿಸಿಕೊಂಡು ಐದು ವರ್ಷಗಳ ಅವಧಿಗೆ ಗೋಲ್ಡ್ ಇಟಿಎಫ್ ಗಳು ಶೇ. 22 ಸಿಎಜಿಆರ್ ಅನ್ನು ಕೊಡಮಾಡುತ್ತವೆ. ಇದರರ್ಥ ಗೋಲ್ಡ್ ಇ.ಟಿ.ಎಫ್ ಗಳಲ್ಲಿ ಹೂಡಿದ ಮೊತ್ತವು ಮೂರರಿಂದ ನಾಲ್ಕು ವರ್ಷಗಳಲ್ಲೇ ದ್ವಿಗುಣಗೊಳ್ಳುತ್ತದೆ.

  ಸ್ಟಾಕ್ ಮಾರ್ಕೆಟ್

  ಸ್ಟಾಕ್ ಮಾರ್ಕೆಟ್ ನಲ್ಲಿ ಮಾಡಲಾದ ಹೂಡಿಕೆಗಳು ಎಂದೆಂದಿಗೂ ಅಧಿಕ ದರದ ಇಳುವರಿಗಳನ್ನೇ ಕೊಡುತ್ತವೆ. ಕಳೆದ ದಶಕದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಕಂಡುಕೊಳ್ಳಲಾದ ವಾರ್ಷಿಕ ದರ ಶೇ. 15 ರಷ್ಟಿತ್ತು. ಬ್ಲೂ ಚಿಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಹಣವು ಮೂರರಿಂದ ಐದು ವರ್ಷಗಳೊಳಗೆ ದ್ವಿಗುಣಗೊಳ್ಳುವ ಸಂಭಾವ್ಯವಿರುತ್ತದೆ. ಆದರೂ ಸಹ, ಹೂಡಿಕೆಯೆಂದಾಗಬಹುದಾದ ನಷ್ಟದ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ಟಾಕ್ ಮಾರ್ಕೆಟ್ ನ ಕಾರ್ಯನಿರ್ವಹಣೆಯ ಮೂಲಭೂತ ಹಾಗೂ ತಾಂತ್ರಿಕ ಜ್ಞಾನವಿರಬೇಕಾದದ್ದು ಅತೀ ಅವಶ್ಯ.

  ಕೊನೆ ಮಾತು

  ಹಣವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಲಭ್ಯವಿರುವ ಕೆಲವು ಆಯ್ಕೆಗಳು ಈ ಮೇಲಿನವುಗಳಾಗಿವೆ. ರಿಸ್ಕ್ ಅನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆಯ ಕಾಲಾವಧಿಗಳನ್ನು ಅವಲಂಬಿಸಿಕೊಂಡು ಹೂಡಿಕೆಗಾಗಿ ಒಂದು ಒಳ್ಳೆಯ ಯೋಜನೆಯನ್ನು ಆಯ್ದುಕೊಳ್ಳಬಹುದು. ದೀರ್ಘಕಾಲೀನ ಹೂಡಿಕೆಗಳನ್ನು ಆಯ್ದುಕೊಳ್ಳುವುದು ಜಾಣತನ. ಏಕೆಂದರೆ ಹಣ ದ್ವಿಗುಣಗೊಳ್ಳುವ ಸಾಧ್ಯತೆಯು ನಿಚ್ಚಳವಾಗಿರುತ್ತದೆ. ಆದರೂ ಸಹ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ವಿತ್ತೀಯ ಸಲಹೆಗಾರರೊಂದಿಗೆ ಅತ್ಯಗತ್ಯವಾಗಿ ಸಮಾಲೋಚಿಸಿರಿ.

  English summary

  How to Double Your Money? Here are 9 Ways

  How would you feel if the money you invested in becomes twice the principal amount? Seems good to be true, isn’t it?
  Story first published: Wednesday, April 25, 2018, 11:16 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more