For Quick Alerts
ALLOW NOTIFICATIONS  
For Daily Alerts

  ಭಾರತದಲ್ಲಿ ಪ್ರಥಮ ಬಾರಿ ಹೂಡಿಕೆ ಮಾಡಬೇಕೆನ್ನುವಿರಾ? ಹಾಗಿದ್ದರೆ ಇಲ್ಲಿ ನೋಡಿ..

  By Siddu
  |

  ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಪ್ರಾರಂಭಿಸಲು ಬಯಸಿರುವವರಾದರೆ, ಸ್ಟಾಕ್ ಮತ್ತು ಷೇರುಗಳ ಬಗ್ಗೆ ತಕ್ಕಮಟ್ಟಿನ ತಿಳುವಳಿಕೆ ನೀಡುವ ಪ್ರಯತ್ನ ಇದಾಗಿದೆ. ನಿಮ್ಮ ಪ್ರಸ್ತುತ ಆರ್ಥಿಕ ಸ್ಥಿತಿಗೆ ಅಪಾಯಕಾರಿಯಾಗದಂತೆ ನೀವು ಮಾಡುವ ನಿಯಮಿತ ಹೂಡಿಕೆಯು ಭವಿಷ್ಯದಲ್ಲಿ ನಿಮಗೆ ದೊಡ್ಡ ಪ್ರಮಾಣದ ಹಣದ ಗಂಟಾಗಲು ಸಹಾಯ ಮಾಡಬಲ್ಲದು. ತಮ್ಮ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಬಯಸುವ ಆರಂಭಿಕರಿಗೆ ಸಹಾಯವಾಗಬಲ್ಲ ಕೆಲ ಸಲಹೆಗಳು ಇಲ್ಲಿವೆ. ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು?

  ಹೂಡಿಕೆಯ ಉದ್ದೇಶವನ್ನು ನಿರ್ಧರಿಸಿ

  ನೀವು ಸ್ಟಾಕ್ ಮತ್ತು ಷರುಗಳಲ್ಲಿ ಹೂಡಿಕೆ ಪ್ರಾರಂಭಿಸುವಾಗಲೇ, ನಿಮ್ಮ ದೀರ್ಘಾವಧಿ ಹೂಡಿಕೆಯ ಗುರಿಯನ್ನು ನಿರ್ಧರಿಸಿಕೊಂಡಿದ್ದರೆ ನಿಮಗೆ ಉತ್ತಮ ಫಲಿತಾಂಶ ದೊರೆಯಬಲ್ಲದು. ನಿಮ್ಮ ಉಳಿತಾಯದ ಉದ್ದೇಶವು ನಿಮ್ಮ ನಿವೃತ್ತಿಗಾಗಿ ಇರಬಹುದು. ನಿಮ್ಮ ಮಗುವಿನ ಶಿಕ್ಷಣ ವೆಚ್ಚಗಳಿಗಾಗಿಯಾದರೂ ಇರಬಹುದು ಅಥವಾ ಆಸ್ತಿ ಖರೀದಿಸುವುದೇ ಆಗಿರಬಹುದು. ಇಲ್ಲವೇ ಬೇರೇ ಏನೇ ಆಗಿದ್ದರೂ, ನೀವು ದೀರ್ಘಾವಧಿ ಉಳಿತಾಯದ ಗುರಿ ನಿರ್ಧರಿಸಿಕೊಂಡಿದ್ದರೆ ನಿಮ್ಮ ಉಳಿತಾಯದ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. ಒಂದು ವೇಳೆ ನೀವು ಯಾವುದೇ ಯೋಜನೆಯಲ್ಲಾಗಲಿ ಅಥವಾ ಬೇರೆ ಯಾವುದೇ ಹೂಡಿಕಾ ಸಲಕರಣೆಯಲ್ಲಾಗಲಿ, ಅಲ್ಪಾವಧಿಗಾಗಿ ಹಣ ಹೂಡಿಕೆ ಮಾಡಿ. ಕೆಲ ವರ್ಷಗಳ ನಂತರ ಹಣವನ್ನು ಹಿಂತೆಗೆದುಕೊಳ್ಳಲು ಬಯಸಿದ್ದರೆ, ಇನ್ನಿತರ ಯಾವುದೇ ಹಣಹೂಡಿಕೆ ವಿಧಾನವನ್ನು ಪರಿಗಣಿಸಬಹುದು. ಏಕೆಂದರ ಸ್ಟಾಕ್ ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ನೀವು ನಿಮ್ಮ ಹಣವನ್ನು ಬೇಕಾದಾಗ ಪಡೆಯಬಹುದೋ ಇಲ್ಲವೋ ಎಂಬುದನ್ನು ನಿಖರವಾಗಿ ನಿರ್ಧರಿಸಲಾಗುವುದಿಲ್ಲ.

  ನಿಮ್ಮ ಹೂಡಿಕೆಯ ಬಂಡವಾಳದ ವೃದ್ಧಿಯು ನಿಮ್ಮ ಹೂಡಿಕೆಯ ಮೊತ್ತ, ಹೂಡಿಕೆಯ ಕಾಲಾವಧಿ, ಹೂಡಿಕೆಯಿಂದಾದ ವಾರ್ಷಿಕ ನಿವ್ವಳ ಲಾಭ ದಂತಹ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಹೂಡಿಕೆಯು ಗಮನಾರ್ಹವಾಗಿ ವೃದ್ದಿ ಹೊಂದಬೇಕೆಂದಿದ್ದರೆ, ಸಾಧ್ಯವಾದಷ್ಟು ಬೇಗನೆ ಉಳಿತಾಯ ಪ್ರಾರಂಭ ಮಾಡಲು ಸಲಹೆ ನೀಡುತ್ತಾರೆ. 2018 ರಲ್ಲಿನ ಟಾಪ್ 15 ಬೆಸ್ಟ್ ಮ್ಯೂಚುವಲ್ ಫಂಡ್ಸ್ (SIP) ಯಾವುವು ಗೊತ್ತೆ?

  ಅಪಾಯದ ಮಟ್ಟ

  ನೀವು ಎಲ್ಲೆ ಹಣ ಹೂಡಿಕೆ ಮಾಡಬೇಕೆಂದಿದ್ದರೂ ಆ ಹೂಡಿಕೆಯಿಂದ ಉಂಟಾಗಬಹುದಾದ ಅಪಾಯ ಪ್ರಮಾಣದ ಮಟ್ಟವನ್ನು ಮೊದಲೇ ಎಚ್ಚರಿಕೆಯಿಂದ ವಿಶ್ಲೇಷಿಸಿಕೊಂಡಿರಬೇಕು. ವಿವಿಧ ಯೋಜನೆಗಳ ನಡುವೆ ಸಮಗ್ರ ಹೋಲಿಕೆ ನಡೆಸಿ ಅದರಲ್ಲಿ ನಿಮಗೆ ಸೂಕ್ತವೆನಿಸುವ ಉತ್ಪನ್ನವನ್ನು ಆಯ್ಕೆ ಮಾಡುವುದು ಹೂಡಿಕೆಯ ಅಪಾಯದ ಮಟ್ಟವನ್ನು ಗುರುತಿಸಲು ಇರುವ ಒಂದು ಉತ್ತಮ ವಿಧಾನವಾಗಿದೆ. ಹೀಗೆ ಮಾಡುವುದು ನಿಮಗೆ ಪ್ರತ್ಯೇಕ ಉತ್ಪನ್ನದಲ್ಲೂ ಇರುವ ಅಪಾಯದ ಮಟ್ಟವನ್ನು ಗುರುತಿಸಿ ನಿಮ್ಮ ಹಣವನ್ನು ಸೂಕ್ತವಾಗಿ ಹೂಡಿಕೆ ಮಾಡಲು ಸಹಕಾರಿಯಾಗಬಲ್ಲದು. ಹೂಡಿಕೆಯಲ್ಲಿ ಒಳಗೊಂಡಿರುವ ಆಪಾಯದ ಮಟ್ಟವನ್ನು ಅರ್ಥೈಸಿಕೊಳ್ಳುವುದು, ನಿಮಗೆ ನಷ್ಟವನ್ನುಂಟುಮಾಡಬಹುದಾದ ಹೂಡಿಕೆಯಿಂದ ದೂರವಿರಲು ಸಹಾಯ ಮಾಡಬಲ್ಲುದು.

  ಭಾವನೆಗಳ ಮೇಲಿನ ಹಿಡಿತ

  ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಯಸುವವರು ಭಾವನೆಗಳ ಮೇಲೆ ಹಿಡಿತ ಹೊಂದಿರಬೇಕಾದುದು ತುಂಬಾ ಮುಖ್ಯ. ಒಂದು ಕಂಪನಿಯ ಬಗ್ಗೆ ಮಾರುಕಟ್ಟೆ ಹೊಂದಿರುವ ಅಭಿಪ್ರಾಯವು ಆ ಕಂಪನಿಯ ಷೇರಿನ ದರದ ಮೂಲಕ ವ್ಯಕ್ತವಾಗುತ್ತದೆ. ಉದಾಹರಣೆಗೆ ಬಹುಸಂಖ್ಯೆಯ ಹೂಡಿಕೆದಾರರು ಒಂದು ಕಂಪನಿಯ ಉನ್ನತ ಭವಿಷ್ಯದ ಬಗ್ಗೆ ಸಂದೇಹ ಹೊಂದಿದ್ದರೆ ಅಂತಹ ಕಂಪನಿಯ ಶೇರುದರ ಕುಸಿಯುತ್ತದೆ. ಅದೇ ರೀತಿ ಹೂಡಿಕೆದಾರರು ಯಾವುದೇ ಕಂಪನಿಯ ಉತ್ತಮ ಭವಿಷ್ಯದ ವಿಶ್ವಾಸ ಹೊಂದಿದ್ದರೆ, ಅಂತಹ ಕಂಪನಿಗಳ ಶೇರು ದರ ಏರುತ್ತಾ ಸಾಗುತ್ತದೆ.
  ಷೇರುದರ ಏರುತ್ತಾ ಸಾಗುವ ಪ್ರಕ್ರಿಯೆಗೆ "ಬುಲ್ಸ್" (ಗೂಳಿ) ಎಂದೂ ಇಳಿಯುವ ಪ್ರಕ್ರಿಯೆಗೆ "ಬಿಯರ್" (ಕರಡಿ) ಎಂದೂ ಕರೆಯುತ್ತಾರೆ. ಈ ರೀತಿಯ ಗೂಳಿ ಮತ್ತು ಕರಡಿಗಳ ನಿರಂತರ ಸಂಘರ್ಷದಿಂದ ಶೇರುಗಳ ದರವು ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಅಲ್ಪಕಾಲೀನ ಶೇರುದರ ಬದಲಾವಣೆಯು ಒಂದು ಕಂಪನಿಯ ನಿಜವಾದ ಆಸ್ತಿ, ಉತ್ತಮ ನಿರ್ವಹಣೆ, ಅದರ ಸುಸ್ಥಿತಿಯ ಪ್ರಮಾಣ ಇವುಗಳ ವ್ಯವಸ್ಥಿತ ವಿಶ್ಲೇಷಣೆ ನಡೆಯದೇ, ಕೇವಲ ಆ ಕಂಪನಿಯ ಬಗೆಗಿನ ಆ ಕ್ಷಣದಲ್ಲಿ ಇರುವ ಊಹಾಪೋಹಗಳು, ಭಾವನೆಗಳು ಹಾಗೂ ವದಂತಿಗಳಿಂದಾಗಿ ಉಂಟಾಗುತ್ತದೆ.
  ಶೇರು ದರದ ನಿರಂತರ ಬದಲಾವಣೆಯು ಶೇರುದಾರರಲ್ಲಿ ಅಭದ್ರತೆಯ ಭಾವನೆ, ಆತಂಕವನ್ನು ಮೂಡಿಸುವುದಲ್ಲದೇ ಅವರಲ್ಲಿ ಅನೇಕ ಸಂದೇಹಗಳನ್ನು ಹುಟ್ಟುಹಾಕಿ, ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಶೇರನ್ನು ಮಾರಿಬಿಡಬೇಕೆ ಅಥವಾ ಇನ್ನು ಸ್ವಲ್ಪದಿನ ಇಟ್ಟುಕೊಂಡು ದರ ಏರಿಕೆಗಾಗಿ ಕಾದು ನೋಡಬೇಕೆ ಎಂಬಂತಹ ಹಲವಾರು ಗೊಂದಲನ್ನು ಸೃಷ್ಟಿಸುತ್ತದೆ. ಈ ರೀತಿಯ ನಡೆಗಳು ಪ್ರಮುಖವಾಗಿ ಮನಸ್ಸಿನ ಉದ್ವೇಗದಿಂದ ಚಾಲನೆಹೊಂದುವುದರಿಂದ, ಎಲ್ಲಾ ರೀತಿಯ ಸಾಧಕ ಬಾಧಕ ಗಳನ್ನು ವಿಶ್ಲೇಷಿಸಿ ನಂತರ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಕು.

  ಸ್ಟಾಕ್ ಮಾರ್ಕೆಟ್ ಅಧ್ಯಯನ ಮಾಡಿ

  ಪ್ರಥಮ ಬಾರಿಗೆ ಹೂಡಿಕೆ ಮಾಡಲಿಚ್ಚಿಸುವವರು ಹೂಡಿಕೆ ಮಾಡುವ ಮುನ್ನ, ಸ್ಟಾಕ್ ಮಾರ್ಕೆಟ್ ನ ತಳಮಟ್ಟದ ಅಧ್ಯಯನ ನಡೆಸುವುದಲ್ಲದೇ, ಮಾರುಕಟ್ಟೆಯನ್ನು ಸಂಯೋಜಿಸುವ ವಿವಿಧ ಭದ್ರತೆಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು ಎಂದು ಸಲಹೆ ನೀಡಲಾಗುತ್ತದೆ. ಪ್ರಮುಖವಾಗಿ ಕೇಂದ್ರೀಕರಿಸಬೇಕಾದ ವಿಷಯಗಳೆಂದರೆ, ಆರ್ಡರ್ ಪ್ರಕಾರಗಳು, ಹಣಕಾಸು ವ್ಯಾಖ್ಯಾನಗಳು ಹಾಗೂ ಮೇಟ್ರಿಕ್ಸ್, ವಿವಿಧ ರೀತಿಯ ಬಂಡವಾಳ ಹೂಡಿಕಾ ಖಾತೆಗಳು, ಹೂಡಿಕೆಯ ಸಮಯ, ಸ್ಟಾಕ್ ಗಳನ್ನು ಆಯ್ಕೆ ಮಾಡುವ ವಿಧಾನಗಳು ಇತ್ಯಾದಿ. ಸ್ಟಾಕ್ ಮಾರುಕಟ್ಟೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆದುಕೊಳ್ಳುವುದರಿಂದ ನೀವು ನಿಮ್ಮ ಹೂಡಿಕೆಯ ಅಪಾಯದ ಪ್ರಮಾಣವನ್ನು ನೀವೇ ಖ‌ಚಿತಪಡಿಸಿಕೊಂಡು ಸೂಕ್ತ ರೀತಿಯಲ್ಲಿ ಹಣವನ್ನು ಹೂಡಿಕೆಯಲ್ಲಿ ವಿನಿಯೋಗಿಸಬಹುದು.

  ಹೂಡಿಕೆಗಳ ವೈವಿಧ್ಯೀಕರಣ

  ಪ್ರಮುಖವಾಗಿ ನುರಿತ ಹೂಡಿಕೆದಾರರು ತಮ್ಮ ಹೂಡಿಕೆಯಿಂದ ಉಂಟಾಗಬಹುದಾದ ಎಲ್ಲಾ ಅಪಾಯಗಳ ಸಂಭಾವ್ಯತೆಯನ್ನು ಸಂಶೋಧಿಸಿ, ವರ್ಗೀಕರಿಸಿ, ಲೆಕ್ಕಾಚಾರ ಹಾಕಿ, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಪ್ರಾರಂಭಿಕ ಹೂಡಿಕೆದಾರರು ಹೂಡಿಕೆಗಳ ವೈವಿಧ್ಯೀಕರಣದ ಪ್ರಾರಂಭಿಸುವುದರ ಮೊದಲು ಸ್ಟಾಕ್ ಮಾರ್ಕೆಟ್ ನಲ್ಲಿ ಸ್ವಲ್ಪ ಅನುಭವ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ.
  ಹೂಡಿಕೆಗಳ ವೈವಿಧ್ಯೀಕರಣ, ಅಪಾಯವನ್ನು ನಿರ್ವಹಿಸುವ ಆದ್ಯತೆಯ ವಿಧಾನಗಳಲ್ಲಿ ಒಂದಾಗಿದೆ. ನೀವು ಐದು ಬೇರೆ ಬೇರೆ ಕಂಪನಿಗಳ ಸ್ಟಾಕ್ ಗಳನ್ನು ಖರೀದಿಸಿ, ಪ್ರತಿಯೊಂದು ಸ್ಟಾಕ್ ದರವು ನಿರಂತರವಾಗಿ ಮೇಲೇರಬೇಕೆಂದು ಬಯಸುತ್ತಿರುವಿರಿ. ಇಂತಹ ಸಂದರ್ಭದಲ್ಲಿ, ಎರಡು ಕಂಪನಿಗಳ ಸ್ಟಾಕ್ ದರವು 25% ನಷ್ಟು ಏರಿಕೆ ಕಂಡಿರಬಹುದು. ಇನ್ನೆರಡು ಕಂಪನಿಗಳ ಏರಿಕೆ 10% ಇರಬಹುದು ಹಾಗೂ ಐದನೆಯ ಕಂಪನಿಯು ಶೇರುಗಳು ದೊಡ್ಡ ಮೊಕದ್ದಮೆಯನ್ನು ಎದುರಿಸಲು ದಿವಾಳಿಯಾಗಬೇಕಾಗಿರಬಹುದು. ದಿವಾಳಿಯಾದ ಶೇರುಗಳಿಂದಾಗಿ ಹೂಡಿಕೆದಾರರಿಗೆ ನಷ್ಟವುಂಟಾಗುವುದರಿಂದ ವೈವಿಧ್ಯೀಕರಣವು ಆ ಕಂಪನಿಯಿಂದಾದ ನಷ್ಟವನ್ನು ಇತರೆ ಕಂಪನಿಗಳಿಂದ ದೊರಕಿದ ಲಾಭದಿಂದ ಸರಿದೂಗಿಸಿಕೊಳ್ಳಲು ಸಹಕಾರಿಯಾಗಿರುತ್ತದೆ. ಹೀಗಾಗಿ ಅವನು/ಅವಳು ಕೇವಲ ಒಂದೇ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರೆ ಆಗಬಹುದಾಗಿದ್ದ ಪರಿಣಾಮಕ್ಕಿಂತ ಉತ್ತಮ ಫಲಿತಾಂಶ ಪಡೆಯಬಹುದು.

  ಎರವಲು ಹಣದ ಬಳಕೆ ಬೇಡ

  ಎರವಲು ಪಡೆದ ಹಣವನ್ನು ನಿಮ್ಮ ಸ್ಟಾಕ್ ಮಾರುಕಟ್ಟೆಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಉತ್ತಮವಲ್ಲ. ಮಾರ್ಜಿನ್ ಖಾತೆ ಹೊಂದಿರುವವರಿಗೆ ಬ್ಯಾಂಕ್ ಗಳು ಹಾಗೂ ಬ್ರೊಕರ್ ಸಂಸ್ಥೆಗಳು ಸ್ಟಾಕ್ ಖರೀದಿಸಲು, ಸಾಮಾನ್ಯವಾಗಿ ಮುಖಬೆಲೆಯ ಸುಮಾರು 50% ರಷ್ಟು ಸಾಲ ನೀಡುತ್ತದೆ. ಒಂದೊಮ್ಮೆ ಹೂಡಿಕೆದಾರನು ರೂ. 500 ಮುಖಬೆಲೆಯ 100 ಶೇರುಗಳನ್ನು ಖರೀದಿಸಲು ಬಯಸಿದರೆ, ಒಟ್ಟು ಮೊತ್ತವು ರೂ. 50,000 ಆಗುತ್ತದೆ. ಈ ಖರೀದಿಯನ್ನು ಬ್ರೋಕರ್ ಸಂಸ್ಥೆಯಿಂದ 50% ರಷ್ಟು (ರೂ. 25,000/-) ಸಾಲವನ್ನು ಪಡೆದುಕೊಳ್ಳುವುದರ ಮೂಲಕ ಪೂರೈಸಿಕೊಳ್ಳಬಹುದು.

  ಎರವಲು ಪಡೆದ ನಿಧಿಯನ್ನು ಬಳಸಿಕೊಳ್ಳುವುದು ಬೆಲೆ ಬದಲಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಪ್ರತಿ ಶೇರಿನ ಬೆಲೆಯು ರೂ. 1000 ಕ್ಕೆ ಹೆಚ್ಚಿದ್ದು, ಹೂಡಿಕೆದಾರ ಶೇರನ್ನು ಮಾರಲು ನಿರ್ಧರಿಸಿದರೆ, ಅವನು ತನ್ನ ಸ್ವಂತ ಹಣವನ್ನು ಖರೀದಿಗೆ ಬಳಸಿದ್ದಿದ್ದರೆ, ಆತನ ಲಾಭವು 100% ಪ್ರತಿಶತವಾಗುತ್ತದೆ (Rs.1 lacs minus Rs. 50,000 divided by Rs.50,000). ಒಂದು ವೇಳೆ ರೂ. 25000 ಸ್ಟಾಕ್ ಖರೀದಿಸಲು ಎರವಲು ಪಡೆದಿದ್ದು, ಆ ಸ್ಟಾಕನ್ನು ರೂ. 1000ಕ್ಕೆ ಮಾರಾಟ ಮಾಡಿದರೆ ಆತನ ಲಾಭವು ರೂ. 25,000 ಸಾಲವನ್ನು ತೀರಿಸಿದ ನಂತರ 300% ಪ್ರತಿಶತವಾಗುತ್ತದೆ (Rs.1 lac minus Rs.25,000 divided by Rs. 25,000).

  ಕೊನೆ ಮಾತು

  ಶೇರುಗಳ ಬೆಲೆ ಹೆಚ್ಚಳವಾಗುತ್ತಿದ್ದರೆ ಭವಿಷ್ಯವು ಉತ್ತಮವಾಗಿರುತ್ತದೆ. ಆದಾಗ್ಯೂ, ಶೇರುಗಳ ದರದಲ್ಲಿ ಇಳಿಕೆಯಾಗ ತೊಡಗಿದರೆ, ನೀವು ಬ್ರೋಕರ್ ಗೆ ಕೊಡಬೇಕಿರುವ ಬಡ್ಡಿಯ ಮೊತ್ತದ ಜೊತೆಗೇ ನಿಮ್ಮ ಆರಂಭಿಕ ಬಂಡವಾಳದಲ್ಲಿ ಗಣನೀಯ ಪ್ರಮಾಣದ ಹಣವನ್ನೂ ಕಳೆದುಕೊಳ್ಳಲು ಆರಂಭಿಸುತ್ತೀರಿ.
  ಈ ಸರಳ ಸಲಹೆಗಳನ್ನು ಅನುಸರಿಸುವುದರಿಂದ, ನೀವು ಸ್ಟಾಕ್ ಮಾರ್ಕೆಟ್ ಬಗ್ಗೆ ಉತ್ತಮ ತಿಳುವಳಿಕೆ ಪಡೆದು ನಿಮ್ಮ ಹಣವನ್ನು ನಿಮಗೆ ಕಾಲಾನುಕ್ರಮದಲ್ಲಿ ಉತ್ತಮ ಲಾಭ ತಂದುಕೊಡಬಹುದಾದ ವಿಧಾನಗಳಲ್ಲಿ ಹೂಡಿಕೆ ಮಾಡಲು ಸಹಾಯಕವಾಗುತ್ತದೆ.

  English summary

  Beginner’s Guide to Stock market investment in India

  If you wish to start investing in the stock market, it is instrumental to possess a fair understanding of stocks and shares.
  Story first published: Tuesday, July 24, 2018, 10:58 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more