For Quick Alerts
ALLOW NOTIFICATIONS  
For Daily Alerts

ನಿಮ್ಮ ಬಳಿ ರೂ. 1-5 ಲಕ್ಷ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು?

ನಿಮ್ಮ ಬಳಿ ಸುಮಾರು 1 ರಿಂದ 5 ಲಕ್ಷ ರೂಗಳ ವರೆಗೂ ಹಣವಿದ್ದರೆ, ಸುರಕ್ಷತೆ, ಆದಾಯ ಮತ್ತು ಲಿಕ್ವಿಡಿಟಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

|

ಇತ್ತೀಚಿನ ಏರಿಳಿತಗಳಿಂದ ಷೇರು ಮಾರುಕಟ್ಟೆ ಶೇ. 6 ರಿಂದ 7 ರಷ್ಟು ಕುಸಿತ ಕಂಡಿದೆ. ಚಿನ್ನದ ಬೆಲೆ ಹೊಸ ವರ್ಷದ ಏರಿಕೆಯಲ್ಲಿದೆ. ಬಡ್ಡಿ ದರಗಳು ಏರುತ್ತಿವೆ. ನಿಮ್ಮ ಬಳಿ ಸುಮಾರು 1 ರಿಂದ 5 ಲಕ್ಷ ರೂಗಳ ವರೆಗೂ ಹಣವಿದ್ದರೆ, ಸುರಕ್ಷತೆ, ಆದಾಯ ಮತ್ತು ಲಿಕ್ವಿಡಿಟಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂದು ತಿಳಿದುಕೊಳ್ಳೋಣ ಬನ್ನಿ. ಕೇವಲ 10 ಸಾವಿರ ಇದ್ರೆ ಈ ಬಿಸಿನೆಸ್ ಶುರು ಮಾಡಬಹುದು..

1. ಕೆಟಿಡಿಎಫ್ಸಿ (KTDFC) ಠೇವಣಿ

1. ಕೆಟಿಡಿಎಫ್ಸಿ (KTDFC) ಠೇವಣಿ

ಇದು ಕೇರಳ ಸರ್ಕಾರ ಬೆಂಬಲಿಸುವ ಸ್ಥಿರ ಠೇವಣಿಯಾಗಿದ್ದು, 2000 ಕೋಟಿ ರೂಗಳವರೆಗೂ ಗ್ಯಾರಂಟಿ ಕೊಡುತ್ತದೆ. 1,2 ಮತ್ತು 3 ವರ್ಷಗಳ ಠೇವಣಿಗಳ ಮೇಲೆ ಶೇ. 8.25ರಷ್ಟು ಬಡ್ಡಿದರ ಇದೆ. ನಿಮ್ಮ ಬಳಿ ಇರುವ ಮೊತ್ತದಲ್ಲಿ ಕನಿಷ್ಠ 25 ಶೇ ಹಣವನ್ನು ಇದರಲ್ಲಿ ತೊಡಗಿಸುವುದು ಸೂಕ್ತ. ನಿಮ್ಮ ಹತ್ತಿರ 1 ಲಕ್ಷ ರೂ ಇದ್ದರೆ, 25000 ರೂಗಳನ್ನು ತೊಡಗಿಸಬಹುದು ಅಥವಾ ನಿಮ್ಮ ಬಳಿ 5 ಲಕ್ಷ ರೂ ಇದ್ದರೆ ಕನಿಷ್ಠ 1 ಲಕ್ಷ ರೂಗಳನ್ನಾದರೂ ನಿಯೋಜಿಸಬಹುದು. ಪ್ರಸ್ತುತ ಶೇ 8.25 ಬಡ್ಡಿ ಪಡೆಯುವುದು ತುಂಬಾ ಕಷ್ಟ. ಇವುಗಳು ಹೆಚ್ಚು ಭದ್ರತೆ ಒದಗಿಸುವ ಠೇವಣಿಗಳಾಗಿದ್ದು, ಆದಾಯ ಮತ್ತು ಸುರಕ್ಷತೆಗಾಗಿ ಒಳ್ಳೆಯದು.

2. ಹೆಚ್ ಪಿ ಸಿ ಎಲ್ ಷೇರು

2. ಹೆಚ್ ಪಿ ಸಿ ಎಲ್ ಷೇರು

ಹೆಚ್ ಪಿ ಸಿ ಎಲ್ ಷೇರುಗಳಲ್ಲಿ ನೀವು ಕನಿಷ್ಠ ಶೇ 25ರಷ್ಟು ಹೂಡಿಕೆ ಮಾಡಬಹುದು. ಕಂಪೆನಿಯು ನಿಮಗೆ ಶೇ.5ರಷ್ಟು ತೆರಿಗೆ ಮುಕ್ತ ಲಾಭಾಂಶವನ್ನು ನೀಡುತ್ತದೆ. 386 ರೂ ಮೌಲ್ಯದ ಷೇರುಗಳು ಇನ್ನೂ ಏರಿಕೆಯಾಗುವ ಉತ್ತಮ ಸಾಧ್ಯತೆಯನ್ನು ಹೊಂದಿದೆ. ಶೇ. 6 ರಷ್ಟು ಇಳಿಕೆಯಂತೆ, ಇದರ ಷೇರುಗಳು 480 ರೂ ಮೌಲ್ಯದಿಂದ ಈಗಿನ ಮಟ್ಟಕ್ಕೆ ಕುಸಿದಿದೆ. ಲಾಭಾಂಶದ ಹೊರತಾಗಿ, ಈ ಷೇರನ್ನು ಆದಾಯದ 6 ಪಟ್ಟು ವಾರ್ಷಿಕ ಮುಂದಿನ ಗಳಿಕೆಗಿಂತ ತುಲನಾತ್ಮಕವಾಗಿ ಅಗ್ಗವಾಗಿ ಮಾರಾಟ ಮಾಡಲಾಗುತ್ತಿದೆ. ನೀವು ಷೇರುಗಳನ್ನು ಮತ್ತೆ 2-3 ವರ್ಷಗಳವರೆಗೆ ಇಟ್ಟುಕೊಂಡರೆ, ಒಳ್ಳೆಯ ಲಾಭ ಮಾಡಬಹುದು.

3. ಪಿಪಿಎಫ್

3. ಪಿಪಿಎಫ್

ನಿಮ್ಮ 1 ರಿಂದ 5 ಲಕ್ಷದವರೆಗಿನ ಹಣದಲ್ಲಿ ಉಳಿದ ಮೊತ್ತದಲ್ಲಿ ಕನಿಷ್ಠ ಶೇ. 25 ರಷ್ಟನ್ನು ಪಿಪಿಎಫ್ ಮಾಡಲು ಸಲಹೆ ನೀಡುತ್ತೇವೆ. ಏಕೆಂದರೆ ಇದರಿಂದ ಬರುವ ಬಡ್ಡಿಯು ತೆರಿಗೆ ರಹಿತವಾಗಿದೆ. ಇಷ್ಟೇ ಅಲ್ಲದೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರಸ್ತುತ ಬಡ್ಡಿದರವು ಶೇ 7.9 ಆಗಿದ್ದು, ಇದು ಬ್ಯಾಂಕುಗಳಿಗಿಂತಲೂ ಉತ್ತಮವಾಗಿದೆ. ಮೂರನೇ ವರ್ಷದ ನಂತರ ಪಿಎಫ್ ಮೇಲೆ ಸಾಲವನ್ನೂ ಪಡೆಯಬಹುದು.ಒಂದೇ ಒಂದು ನ್ಯೂನ್ಯತೆಯೆಂದರೆ ಇದು 15 ವರ್ಷಗಳ ಲಾಕ್ ಇನ್ ಅವಧಿಯನ್ನು ಹೊಂದಿದೆ. ಇದನ್ನು ಕೋರ್ಟ್ ನ ಅಧಿಕೃತ ಅದೇಶದಡಿಯಲ್ಲಿ ಲಗತ್ತಿಸಲಾಗುವುದಿಲ್ಲ.

4. ಎನ್ಎಸ್ ಸಿ

4. ಎನ್ಎಸ್ ಸಿ

ಮಿಕ್ಕ ಶೇ. 15 ರಷ್ಟಕ್ಕೆ ನಾವು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅನ್ನು ಸೂಚಿಸುತ್ತೇವೆ. ಉತ್ತಮ ಬಡ್ಡಿದರ ಮತ್ತು ಹೆಚ್ಚಿನ ಮಟ್ಟದ ಸುರಕ್ಷತೆ ಇರುವ ಎನ್ ಎಸ್ ಸಿ ಹೂಡಿಕೆದಾರರ ಮತ್ತೊಂದು ಆಯ್ಕೆಯಾಗಿದೆ.ಶೇ 7.8 ಬಡ್ಡಿದರವು ಬ್ಯಾಂಕುಗಳು ನೀಡುವ ಬಡ್ಡಿಗಿಂತ ಉತ್ತಮವಾಗಿದೆ. 1.5 ಲಕ್ಷ ರೂ ವರೆಗಿನ ಹೂಡಿಕೆಗೆ ಆದಾಯ ತೆರಿಗೆ ಕಾಯಿದೆ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಆದರೂ ಬಡ್ಡಿಯ ಆದಾಯಕ್ಕೆ ತೆರಿಗೆ ವಿನಾಯಿತಿ ಇಲ್ಲ. ಮೂಲ ಹಣಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಬಡ್ಡಿಯ ಅಂಶವನ್ನು ತೋರಿಸಲು ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ.

5. ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್

5. ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್

ಉಳಿದ ಶೇ 5ಕ್ಕೆ, 1 ಮತ್ತು 2 ವರ್ಷಗಳ ಠೇವಣಿಗೆ ಶೇ.8ರಷ್ಟು ಬಡ್ಡಿಯನ್ನು ನೀಡುವ ಉಜ್ಜೀವನ್ ಸಣ್ಣ ಉಳಿತಾಯ ಬ್ಯಾಂಕಿನ ಠೇವಣಿಗಳಲ್ಲಿ ತೊಡಗಿಸಬಹುದು. ಇದು ಆರ್ಬಿಐನ ನಿಯಂತ್ರಣಕ್ಕೆ ಒಳಪಟ್ಟಿದೆ. ಆರ್ ಬಿ ಐನ ವ್ಯಾಪ್ತಿಯಲ್ಲಿದ್ದು ಅದರ ನಿಯಮಗಳಿಗೆ ಬದ್ಧವಾಗಿರುವುದರಿಂದ ಇದನ್ನು ಸುರಕ್ಷಿತವೆಂದು ಪರಿಗಣಿಸಬಹುದು.ಠೇವಣಿಯ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ರಹಿತವಾಗಿಲ್ಲದಿರುವುದರಿಂದ ಒಟ್ಟು ಪೋಸ್ಟ್ ಟ್ಯಾಕ್ಸ್ ಇಳುವರಿ ಕುಸಿಯಬಹುದು. ಪ್ರಸ್ತುತ ಕಡಿಮೆ ಬಡ್ಡಿದರಗಳು ದೊರೆಯುವ ಸಂದರ್ಭದಲ್ಲಿ, ಶೇ.8 ರಷ್ಟು ಬಡ್ಡಿದರವನ್ನು ಪಡೆಯುವ ಅವಕಾಶಗಳು ಸೀಮಿತವಾಗಿವೆ.

ಇತರೆ ಹೂಡಿಕೆ

ಇತರೆ ಹೂಡಿಕೆ

ನೀವು ಅಪಾಯವನ್ನು ತಡೆಗಟ್ಟಲು ಮತ್ತು ನಿಮ್ಮ ಬಂಡವಾಳವನ್ನು ವೈವಿಧ್ಯಮಯಗೊಳಿಸಲು ಬಯಸುವಿರಾದರೆ, ಇತರೆ ಹೂಡಿಕೆಯ ಆಯ್ಕೆಗಳಲ್ಲಿ ಬಂಗಾರದ ಮೇಲೂ ಹೂಡಿಕೆ ಮಾಡಬಹುದು. ಚಿನ್ನದ ಬೆಲೆ ಇತ್ತೀಚೆಗೆ ಏರಿಕೆಯಾಗಿದೆ. 22 ಕ್ಯಾರಟ್ ಗಳಿಗೆ 30000 ರೂ ಇರುವ ಈಗಿನ ದರವು ಅನುಕೂಲಕರವಾದ ಅಪಾಯ ಪ್ರತಿಫಲದ ಅನುಪಾತವನ್ನು ಒದಗಿಸುವುದಿಲ್ಲ. ಆದ್ದರಿಂದ ನೀವು ಬಂಗಾರದ ಮೇಲೆ ಹಣವನ್ನು ತೊಡಗಿಸುವ ಆಲೋಚನೆಯಲ್ಲಿದ್ದರೆ, ದರಗಳು ಇಳಿಕೆಯಾಗುವವರೆಗೂ ಕಾಯುವುದು ಉತ್ತಮ. ನೀವು ಹೂಡಿಕೆ ಮಾಡುವ ಮುನ್ನ ಸುರಕ್ಷತೆ ಮತ್ತು ಲಿಕ್ವಿಡಿಟಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದಲ್ಲದೆ ನೀವು ಇವುಗಳ ತೆರಿಗೆ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ.ಪಿಪಿಎಫ್ ಮತ್ತು ಯುಲಿಪ್ ನ ಹೊರತಾಗಿ ಷೇರುಗಳನ್ನೂ ಒಳಗೊಂಡಂತೆ ಎಲ್ಲಾ ಯೋಜನೆಗಳು ತೆರಿಗೆ ಹೊಣೆಗಾರಿಕೆಯನ್ನು ಹೊಂದಿದೆ.

English summary

Where To Invest If You Have Rs 1 Lakh To Rs 5 Lakhs?

Stock markets have fallen around 6 to 7 per cent since from recent peaks, gold is at a new yearly high and interest rates are moving higher. If you have about Rs 1 to Rs 5 lakhs, here are a few places to invest, keeping in mind safety, returns and liquidiity.
Story first published: Wednesday, February 28, 2018, 15:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X