For Quick Alerts
ALLOW NOTIFICATIONS  
For Daily Alerts

ಐಟಿ ರಿಟರ್ನ್ ಸಕಾಲಕ್ಕೆ ಸಲ್ಲಿಸಿದರೆ ನಿಮಗೆ 10 ಪ್ರಯೋಜನಗಳು ಸಿಗಲಿವೆ..

ಒಂದು ವೇಳೆ ನಿಮ್ಮ ತೆರಿಗೆ ಸಹಿತ ಆದಾಯ ಮೂಲ ತೆರಿಗೆ ವಿನಾಯಿತಿ ಮಿತಿಯಾದ 2 ಲಕ್ಷ 50 ಸಾವಿರ ರೂಪಾಯಿಗಳನ್ನು ಮೀರುತ್ತಿದ್ದರೆ, ಫೈಲಿಂಗ್ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಕಡ್ಡಾಯವಾಗಿರುತ್ತದೆ.

By Siddu Thoravat
|

ಒಂದು ವೇಳೆ ನಿಮ್ಮ ತೆರಿಗೆ ಸಹಿತ ಆದಾಯ ಮೂಲ ತೆರಿಗೆ ವಿನಾಯಿತಿ ಮಿತಿಯಾದ 2 ಲಕ್ಷ 50 ಸಾವಿರ ರೂಪಾಯಿಗಳನ್ನು ಮೀರುತ್ತಿದ್ದರೆ, ಫೈಲಿಂಗ್ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಕಡ್ಡಾಯವಾಗಿರುತ್ತದೆ. ಒಂದೊಮ್ಮೆ ಇನಕಮ್ ಟ್ಯಾಕ್ಸ್ ರಿಟರ್ನ್ ಸಕಾಲಕ್ಕೆ ಪಾವತಿ ಮಾಡದಿದ್ದಲ್ಲಿ ದಂಡ ಭರಿಸಬೇಕಾಗುತ್ತದೆ. ನಿಗದಿತ ಅವಧಿಯೊಳಗೆ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದರಿಂದ ದಂಡ ಕಟ್ಟುವುದರಿಂದ ಪಾರಾಗಬಹುದು ಅಷ್ಟೆ ಅಲ್ಲದೆ ಅದರಿಂದ ಹಲವಾರು ಪ್ರಯೋಜನಗಳೂ ಇವೆ. ಸಕಾಲಕ್ಕೆ ರಿಟರ್ನ್ ಫೈಲ್ ಮಾಡುವುದರಿಂದ ನಮಗೆ ಸಿಗುವ ಪ್ರಮುಖ ಪ್ರಯೋಜನಗಳಾವುವು ನೋಡೋಣ. ಆದಾಯ ತೆರಿಗೆ (ಐಟಿಆರ್) ಕಟ್ಟಲು ತೊಂದರೆಯೇ? ಚಿಂತೆ ಬೇಡ ಇಲ್ಲಿದೆ ಸಹಾಯವಾಣಿ

1. ಜವಾಬ್ದಾರಿಯುತ ನಾಗರಿಕರ ಕರ್ತವ್ಯ

1. ಜವಾಬ್ದಾರಿಯುತ ನಾಗರಿಕರ ಕರ್ತವ್ಯ

ನಿರ್ದಿಷ್ಟ ಮೊತ್ತದ ಆದಾಯ ಗಳಿಸುವ ಹಾಗೂ ಅದಕ್ಕೆ ತೆರಿಗೆ ಭರಿಸುವ ಎಲ್ಲರೂ ನವೆಂಬರ್ ಅಂತ್ಯದೊಳಗೆ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿರುತ್ತದೆ. ಇನ್ನು ತೆರಿಗೆ ವ್ಯಾಪ್ತಿಗೆ ಒಳಪಡದವರು ಸಹ ಸ್ವಯಂ ಪ್ರೇರಿತರಾಗಿ ರಿಟರ್ನ್ ಸಲ್ಲಿಸಬಹುದು. ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿದಾಗ ಅದು ಅನ್ವಯವಾಗುವ ತೆರಿಗೆಯೊಂದಿಗೆ (ಅನ್ವಯಿಸುತ್ತಿದ್ದರೆ ಮಾತ್ರ) ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲಾಗುತ್ತದೆ. ಹೀಗೆ ರಿಟರ್ನ್ ಫೈಲ್ ಮಾಡುವುದರಿಂದ ರಾಷ್ಟ್ರದ ಅಭಿವೃದ್ಧಿಗಾಗಿ ತೆರಿಗೆ ಜಾಲದ ಮುಖ್ಯವಾಹಿನಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಂತಾಗುತ್ತದೆ. ಇದು ಜವಾಬ್ದಾರಿಯುತ ನಾಗರಿಕರ ಲಕ್ಷಣವಾಗಿದೆ.

2. ಸಾಲ ಪಡೆಯುವಾಗ ಅನುಕೂಲ

2. ಸಾಲ ಪಡೆಯುವಾಗ ಅನುಕೂಲ

ಗೃಹ ಸಾಲ ಅಥವಾ ವಾಹನ ಸಾಲ ಪಡೆಯುವ ಯೋಜನೆ ನಿಮಗಿದ್ದರೆ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ನಿಮ್ಮ ಅನುಕೂಲಕ್ಕೆ ಬರುತ್ತದೆ. ಸಾಲ ನೀಡುವ ಸಂದರ್ಭದಲ್ಲಿ ಬಹುತೇಕ ಬ್ಯಾಂಕ್‌ಗಳು ಐಟಿ ರಿಟರ್ನ್ ಫೈಲ್ ಮಾಡಿದ ದಾಖಲೆ ಕೇಳುತ್ತವೆ. ಹೀಗಾಗಿ ನಿಯಮಿತವಾಗಿ ಐಟಿ ರಿಟರ್ನ್ ಫೈಲ್ ಮಾಡಿ ಅದರ ದಾಖಲೆಯನ್ನು ಇಟ್ಟುಕೊಂಡರೆ ಹಲವಾರು ಸಂದರ್ಭಗಳಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ಐಟಿ ರಿಟರ್ನ್ ಎಂಬುದು ನಿಮ್ಮ ಆದಾಯದ ದಾಖಲೆಯಾಗಿಯೂ ಪರಿಗಣಿಸಲ್ಪಡುವುದರಿಂದ ಅದಕ್ಕೆ ತಕ್ಕಷ್ಟು ಮೊತ್ತದ ಸಾಲವನ್ನು ಪಡೆಯಲು ಇದು ಪ್ರಯೋಜನಕಾರಿಯಾಗಿದೆ.

3. ಹಾನಿಯ ಹೊಂದಾಣಿಕೆ

3. ಹಾನಿಯ ಹೊಂದಾಣಿಕೆ

ಓರ್ವ ವ್ಯಕ್ತಿಗೆ ಆಗುವ ದೀರ್ಘಾವಧಿ ಅಥವಾ ಅಲ್ಪಾವಧಿಯ ಹಾನಿ, ಊಹಾತ್ಮಕ ಅಥವಾ ಊಹಾತ್ಮಕವಲ್ಲದ ಹಾನಿ, ಬಂಡವಾಳ ಅಥವಾ ಇನ್ನಾವುದೇ ರೀತಿಯ ನಷ್ಟಗಳು ಒಂದು ವೇಳೆ ಟ್ಯಾಕ್ಸ್ ರಿಟರ್ನ್‌ನಲ್ಲಿ ದಾಖಲಾಗದಿದ್ದರೆ, ಅವುಗಳನ್ನು ಮುಂದಿನ ವರ್ಷಗಳಿಗೆ ಮುಂದುವರಿಸಲಾಗುವುದಿಲ್ಲ ಹಾಗೂ ಬಂಡವಾಳ ಲಾಭದೊಂದಿಗೆ ಹೊಂದಾಣಿಕೆ ಮಾಡಲೂ ಸಾಧ್ಯವಾಗುವುದಿಲ್ಲ. ಅಂದರೆ ನೀವು ಇನ್‌ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಮುಂದಿನ ವರ್ಷಗಳಲ್ಲಿ ನಿಮ್ಮ ತೆರಿಗೆ ಹೊಣೆಗಾರಿಕೆಗೆ ಯಾವುದೇ ವಿನಾಯಿತಿಗಳು ಸಿಗುವುದಿಲ್ಲ.

4. ರಿಫಂಡ್ ಕ್ಲೇಮ್ ಮಾಡಲು

4. ರಿಫಂಡ್ ಕ್ಲೇಮ್ ಮಾಡಲು

ಟಿಡಿಎಸ್ ಕಡಿತ ಅಥವಾ ಅಡ್ವಾನ್ಸ್ ಟ್ಯಾಕ್ಸ್ ಕಟ್ಟುವ ಹಲವಾರು ಸಂದರ್ಭಗಳಲ್ಲಿ ಪಾವತಿಸಬೇಕಿರುವ ತೆರಿಗೆಗಿಂತಲೂ ಹೆಚ್ಚುವರಿ ತೆರಿಗೆಯನ್ನು ಪಾವತಿ ಮಾಡುವ ಸಂದರ್ಭಗಳು ಎದುರಾಗುತ್ತವೆ. ಇಂಥ ಪರಿಸ್ಥಿತಿಯಲ್ಲಿ ಪಾವತಿಸಲಾದ ಹೆಚ್ಚುವರಿ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆಯಿಂದ ಮರಳಿ ಕ್ಲೇಮ್ ಮಾಡಬಹುದು. ಹೀಗಾಗಿ ಐಟಿ ರಿಟರ್ನ್ ಫೈಲ್ ಮಾಡುವುದು ತಡವಾದಲ್ಲಿ ರಿಫಂಡ್ ಮೊತ್ತದ ಮೇಲೆ ಸಿಗಬೇಕಾದ ಬಡ್ಡಿ ಹಣವನ್ನು ತೆರಿಗೆದಾರ ಕಳೆದುಕೊಳ್ಳುವಂತಾಗುತ್ತದೆ.

5. ವಿದೇಶ ಪ್ರಯಾಣ

5. ವಿದೇಶ ಪ್ರಯಾಣ

ವಿದೇಶ ಪ್ರಯಾಣ ಕೈಗೊಳ್ಳಲು ಆಯಾ ದೇಶದ ವೀಸಾ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ವೀಸಾ ನೀಡುವ ಸಂದರ್ಭದಲ್ಲಿ ರಾಯಭಾರ ಕಚೇರಿಯ ಸಿಬ್ಬಂದಿ ಹಿಂದಿನ ವರ್ಷಗಳ ಐಟಿ ರಿಟರ್ನ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತಾರೆ. ತಮ್ಮ ದೇಶಕ್ಕೆ ಬರುತ್ತಿರುವ ವ್ಯಕ್ತಿಯು ಭಾರತದಲ್ಲಿ ಗಳಿಕೆ ಆದಾಯ ಹೊಂದಿದ್ದಾನೆ ಹಾಗೂ ಆತ ಶಾಶ್ವತವಾಗಿ ತನ್ನ ದೇಶ ಬಿಡುವ ಉದ್ದೇಶ ಹೊಂದಿಲ್ಲ ಎಂಬುದರ ಖಾತರಿಗೆ ಐಟಿ ರಿಟರ್ನ್ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಯುರೋಪಿನ ಬಹುತೇಕ ದೇಶಗಳು, ಅಮೆರಿಕ ಮತ್ತು ಕೆನಡಾ ಕಡ್ಡಾಯವಾಗಿ ಐಟಿ ರಿಟರ್ನ್ ದಾಖಲೆ ಪರಿಶೀಲಿಸುತ್ತವೆ. ಹೀಗಾಗಿ ವಿದೇಶಕ್ಕೆ ತೆರಳಬೇಕೆನ್ನುವವರು ಐಟಿ ರಿಟರ್ನ್ ಫೈಲ್ ಮಾಡುವುದು ಅತಿ ಅವಶ್ಯವಾಗಿದೆ.

6. ಜೀವವಿಮೆ ಕೊಳ್ಳುವ ಸಂದರ್ಭದಲ್ಲಿ

6. ಜೀವವಿಮೆ ಕೊಳ್ಳುವ ಸಂದರ್ಭದಲ್ಲಿ

ಇತ್ತೀಚಿನ ದಿನಗಳಲ್ಲಿ ೫ ಮಿಲಿಯನ್ ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ಅವಧಿ ಜೀವವಿಮಾ ಪಾಲಿಸಿ ಕೊಳ್ಳಬೇಕಾದರೆ ಐಟಿ ರಿಟರ್ನ್ ಮಾಡಿದ ರಸೀತಿ ಕಡ್ಡಾಯವಾಗಿದೆ. ಎಲ್‌ಐಸಿ ಹಾಗೂ ಇತರ ವಿಮಾ ಕಂಪನಿಗಳು ನಿಮ್ಮ ವಾರ್ಷಿಕ ಆದಾಯ ಲೆಕ್ಕ ಹಾಕಲು ಐಟಿಆರ್ ಅನ್ನು ಪರಿಶೀಲಿಸುತ್ತವೆ.

7. ಸರಕಾರದ ಟೆಂಡರ್ ಪಡೆಯುವಾಗ

7. ಸರಕಾರದ ಟೆಂಡರ್ ಪಡೆಯುವಾಗ

ಸರಕಾರದ ಯಾವುದೇ ಟೆಂಡರ್ ಕೆಲಸ ಪಡೆಯಬೇಕಾದರೆ ಐಟಿ ರಿಟರ್ನ್ ದಾಖಲೆಗಳು ಬೇಕೇ ಬೇಕು. ಟೆಂಡರ್ ಪಡೆಯುವ ವ್ಯಕ್ತಿಯ ಪಾವತಿಯ ಹೊಣೆಗಾರಿಕೆಯನ್ನು ಖಚಿತ ಪಡಿಸಲು ಹಿಂದಿನ ಐದು ವರ್ಷಗಳ ಐಟಿ ರಿಟರ್ನ್ ರಸೀದಿಗಳನ್ನು ಸರಕಾರ ಕೇಳುತ್ತದೆ.

8. ಸ್ವಯಂ ಉದ್ಯೋಗಿಗಳ ಆದಾಯ ಪ್ರಮಾಣ ಪತ್ರ ಹಾಗೂ ತೆರಿಗೆ ದಾಖಲೆ

8. ಸ್ವಯಂ ಉದ್ಯೋಗಿಗಳ ಆದಾಯ ಪ್ರಮಾಣ ಪತ್ರ ಹಾಗೂ ತೆರಿಗೆ ದಾಖಲೆ

ಸಂಬಳದಾತರು ಪಡೆಯುವ ಫಾರ್ಮ ೧೬ ದಾಖಲೆಯು ವ್ಯಾಪಾರಿಗಳಿಗೆ ಸಿಗುವುದಿಲ್ಲ. ಹೀಗಾಗಿ ಸ್ವಯಂ ಉದ್ಯೋಗ ಮಾಡುವವರು ತಮ್ಮ ಆದಾಯದ ಹಾಗೂ ತೆರಿಗೆ ಪಾವತಿಯ ದಾಖಲೆಗಾಗಿ ಐಟಿ ರಿಟರ್ನ್ ಫೈಲ್ ಮಾಡಬೇಕು. ಬಹುತೇಕ ವ್ಯವಹಾರಗಳಲ್ಲಿ ಈ ಐಟಿ ರಿಟರ್ನ್ ಫೈಲ್ ಮಾಡಿದ ರಸೀದಿಗಳು ಪ್ರಯೋಜನಕ್ಕೆ ಬರುತ್ತವೆ.

9. ದಂಡ ಶುಲ್ಕಗಳಿಂದ ಪಾರಾಗಲು

9. ದಂಡ ಶುಲ್ಕಗಳಿಂದ ಪಾರಾಗಲು

ಯಾವುದೇ ವ್ಯಕ್ತಿಯ ಆದಾಯ ಇನ್‌ಕಂ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡುತ್ತಿದ್ದರೆ ಅಂಥವರು ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿರುತ್ತದೆ. ಇಂಥವರು ಸಕಾಲಕ್ಕೆ ಐಟಿ ರಿಟರ್ನ್ ಫೈಲ್ ಮಾಡದಿದ್ದರೆ ೧೦ ಸಾವಿರ ರೂಪಾಯಿಗಳವರೆಗೆ ದಂಡ ಹಾಗೂ ಬಡ್ಡಿ ಪಾವತಿಸಬೇಕಾಗಬಹುದು.

10. ಪ್ರಮುಖ ಹಣಕಾಸು ದಾಖಲೆ

10. ಪ್ರಮುಖ ಹಣಕಾಸು ದಾಖಲೆ

ಸಾಲ, ವೀಸಾಗಳನ್ನು ಪಡೆಯಲು ಮಾತ್ರವಲ್ಲದೆ ಇನ್ನೂ ಹಲವಾರು ಸಂದರ್ಭಗಳಲ್ಲಿ ಐಟಿಆರ್ ರಸೀದಿ ಅತ್ಯಂತ ಪ್ರಮುಖ ದಾಖಲೆಯಾಗಿ ಉಪಯೋಗಕ್ಕೆ ಬರುತ್ತದೆ. ಐಟಿ ರಿಟರ್ನ್ ದಾಖಲೆ ಫಾರ್ಮ್-೧೬ ಗಿಂತಲೂ ಹೆಚ್ಚು ವಿವರಗಳನ್ನು ಒಳಗೊಂಡಿರುತ್ತದೆ. ನಿಮ್ಮ ಆದಾಯ, ತೆರಿಗೆ ಹಾಗೂ ಇನ್ನಿತರ ಆದಾಯದ ಮೂಲಗಳ ಮಾಹಿತಿ ಒಳಗೊಂಡಿರುವ ಐಟಿ ರಿಟರ್ನ್ ಅತ್ಯಂತ ಪ್ರಮುಖ ದಾಖಲೆಯಾಗಿದೆ.

ತೆರಿಗೆ ವ್ಯಾಪ್ತಿಗೆ ಒಳಪಡದ ನಾಗರಿಕರು ಸಹ ಇನ್‌ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಸೂಕ್ತವಾಗಿದೆ. ಮೇಲೆ ತಿಳಿಸಲಾದ ಹಲವಾರು ಪ್ರಯೋಜನಗಳು ಅವರಿಗೂ ಅನ್ವಯವಾಗುತ್ತವೆ.

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ

English summary

You will get 10 benefits if you submit your IT return on time

It is mandatory to file tax return if your taxable income falls above the basic exemption threshold of Rs 250,000.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X