For Quick Alerts
ALLOW NOTIFICATIONS  
For Daily Alerts

ಇವು ತೆರಿಗೆ ವಿನಾಯಿತಿ ಹಾಗು ಅತಿಹೆಚ್ಚು ಬಡ್ಡಿದರ ನೀಡುವ 5 ಅಂಚೆ ಕಚೇರಿ ಉಳಿತಾಯ ಯೋಜನೆಗಳು

ದೀರ್ಘಾವಧಿ ಹಣ ಉಳಿತಾಯದ ಹಲವಾರು ಯೋಜನೆಗಳು ದೇಶದಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ. ಇಂಥ ಅನೇಕ ಉಳಿತಾಯ ಯೋಜನೆಗಳು ತೆರಿಗೆ ವಿನಾಯಿತಿಯ ಖಾತರಿಯನ್ನೂ ನೀಡುತ್ತವೆ. ಅದರಲ್ಲೂ ದೇಶದ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು ಜನರಿಗೆ ಬಹು ಅನುಕೂಲಕರವಾಗಿವೆ

|

ದೀರ್ಘಾವಧಿ ಹಣ ಉಳಿತಾಯದ ಹಲವಾರು ಯೋಜನೆಗಳು ದೇಶದಲ್ಲಿ ಸಾರ್ವಜನಿಕರಿಗೆ ಲಭ್ಯವಿವೆ. ಇಂಥ ಅನೇಕ ಉಳಿತಾಯ ಯೋಜನೆಗಳು ತೆರಿಗೆ ವಿನಾಯಿತಿಯ ಖಾತರಿಯನ್ನೂ ನೀಡುತ್ತವೆ. ಅದರಲ್ಲೂ ದೇಶದ ಅಂಚೆ ಇಲಾಖೆಯ ಉಳಿತಾಯ ಯೋಜನೆಗಳು (Post Office Savings Schemes) ಜನರಿಗೆ ಬಹು ಅನುಕೂಲಕರವಾಗಿವೆ. ಮಾಸಿಕ ಅಥವಾ ವಾರ್ಷಿಕವಾಗಿ ಕಂತುಗಳಲ್ಲಿ ಉಳಿತಾಯ ಮಾಡಬಹುದಾದ ಈ ಯೋಜನೆಗಳು ತೆರಿಗೆ ವಿನಾಯಿತಿಯ ಖಾತರಿಯೊಂದಿಗೆ, ಹೂಡಿಕೆಗೆ ಉತ್ತಮ ಪ್ರತಿಫಲವನ್ನೂ ನೀಡುತ್ತವೆ.

 

ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), ಕೆಲ ನಿಶ್ಚಿತ ಅವಧಿಯ ಠೇವಣಿ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳು ತೆರಿಗೆ ವಿನಾಯಿತಿಯ ಖಾತರಿಯೊಂದಿಗೆ ಒಳ್ಳೆಯ ಆದಾಯ ನೀಡುವ ಜನಪ್ರಿಯ ಯೋಜನೆಗಳಾಗಿವೆ. ಇವು ಸುನಿಶ್ಚಿತ ಬಡ್ಡಿದರದೊಂದಿಗೆ ಹೂಡಿದ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಸಹ ನೀಡುವುದರಿಂದ ಇತರ ಎಲ್ಲ ಉಳಿತಾಯ ಯೋಜನೆಗಳಿಗಿಂತ ವಿಶಿಷ್ಟವಾಗಿವೆ. ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ತೆರಿಗೆ ವಿನಾಯಿತಿ ಹಾಗೂ ಅತಿಹೆಚ್ಚು ಬಡ್ಡಿದರದ ಖಾತರಿದಾಯಕ ಪ್ರತಿಫಲ ನೀಡುವ ಅಂಚೆ ಇಲಾಖೆಯ 5 ಪ್ರಮುಖ ಉಳಿತಾಯ ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ನೀಡಲಾಗಿದೆ.

ತೆರಿಗೆ ವಿನಾಯಿತಿ, ಉತ್ತಮ ಪ್ರತಿಫಲ ನೀಡುವ ಅಂಚೆ ಕಚೇರಿ 5 ಪ್ರಮುಖ ಉಳಿತಾಯ ಯೋಜನೆಗಳು:

ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF)

ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF)

ಪಿಪಿಎಫ್ ಇದು ಯಾವುದೇ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿ ಶಾಖೆಯಲ್ಲಿ ತೆರೆಯಬಹುದಾದ ಅತಿ ಜನಪ್ರಿಯ ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲೊಂದಾಗಿದೆ. 15 ವರ್ಷ ಕಾಲಾವಧಿಯ ಈ ಅಂಚೆ ಕಚೇರಿ ಉಳಿತಾಯ ಯೋಜನೆ ಪ್ರಸ್ತುತ ವಾರ್ಷಿಕವಾಗಿ ಶೇ. 8 ರಷ್ಟು ಬಡ್ಡಿ ದರವನ್ನು ನೀಡುತ್ತಿದೆ.
ಈ ಯೋಜನೆ ವಿನಾಯಿತಿ-ವಿನಾಯಿತಿ-ವಿನಾಯಿತಿ ವರ್ಗೀಕರಣಕ್ಕೆ ಒಳಪಟ್ಟಿದ್ದು, ಇದರಲ್ಲಿ ಮೂರು ರೀತಿಯ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಅಂದರೆ ಮಾಸಿಕ ಅಥವಾ ವಾರ್ಷಿಕವಾಗಿ ಪಾವತಿಸುವ ಕಂತಿನ ಮೊತ್ತ, ಅದರ ಮೇಲೆ ಸಿಗುವ ಬಡ್ಡಿ ಮತ್ತು ಮ್ಯಾಚುರಿಟಿ ನಂತರ ಸಿಗುವ ಮೊತ್ತ ಎಲ್ಲದಕ್ಕೂ ತೆರಿಗೆ ವಿನಾಯಿತಿ ಲಭಿಸುತ್ತದೆ. ಪ್ರತಿವರ್ಷ ಹೂಡಿಕೆ ಮಾಡಲಾಗುವ 1.5 ಲಕ್ಷ ರೂ. ವರೆಗಿನ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 80ಸಿ ಪ್ರಕಾರ ತೆರಿಗೆ ವಿನಾಯಿತಿ ಇದ್ದು, ತೆರಿಗೆ ಉಳಿಸಲು ಈ ಯೋಜನೆ ಅತಿ ಸೂಕ್ತವಾಗಿದೆ. ಖಾತೆ ಆರಂಭಿಸಿದ 7ನೇ ವರ್ಷದಿಂದ ಈ ಖಾತೆಯಲ್ಲಿನ ಹಣ ಹಿಂಪಡೆಯಲಾರಂಭಿಸಬಹುದು. ವರ್ಷಕ್ಕೆ ಕನಿಷ್ಠ500 ರೂ. ಕಂತು ಪಾವತಿಸಿ ಖಾತೆಯನ್ನು ಜಾರಿಯಲ್ಲಿಡಬಹುದು ಹಾಗೂ ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು.

ರಾಷ್ಟ್ರೀಯ ಉಳಿತಾಯ ಪತ್ರ (National Savings Certificate-NSC)
 

ರಾಷ್ಟ್ರೀಯ ಉಳಿತಾಯ ಪತ್ರ (National Savings Certificate-NSC)

ಎನ್‌ಎಸ್‌ಸಿ ಇದು 5 ವರ್ಷ ಕಾಲಾವಧಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಸದ್ಯಕ್ಕೆ ಎನ್‌ಎಸ್‌ಸಿ ಖಾತೆಗೆ ವಾರ್ಷಿಕ ಶೇ. 8 ಬಡ್ಡಿದರ ನಿಗದಿಪಡಿಸಲಾಗಿದ್ದು, ವಾರ್ಷಿಕವಾಗಿ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಕನಿಷ್ಠ 100 ರೂ. ಬ್ಯಾಲೆನ್ಸ್‌ನೊಂದಿಗೆ ಎನ್‌ಎಸ್‌ಸಿ ಖಾತೆಯನ್ನು ಚಾಲನೆಯಲ್ಲಿಡಬಹುದಾಗಿದ್ದು, ಇದರಲ್ಲಿ ಹೂಡಿಕೆ ಮಾಡಬಹುದಾದ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿಯನ್ನು ವಿಧಿಸಲಾಗಿಲ್ಲ.
ಇದರಲ್ಲಿನ ಹೂಡಿಕೆಯು 1.5 ಲಕ್ಷ ರೂ. ಮೀರದಿದ್ದರೆ ಆದಾಯ ತೆರಿಗೆ ಕಾಯ್ದೆ 80 ಸಿ ಪ್ರಕಾರ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಗ್ಯೂ ಈ ಯೋಜನೆಯಲ್ಲಿನ ಹೂಡಿಕೆಯ ಮೇಲೆ ಕೊನೆಯ ವರ್ಷದಲ್ಲಿ ಸಿಗುವ ಬಡ್ಡಿಗೆ ಮಾತ್ರ ತೆರಿಗೆ ವಿನಾಯಿತಿ ಇರುವುದಿಲ್ಲ. ಕೊನೆಯ ವರ್ಷದ ಬಡ್ಡಿಯು ಪುನರ್ ಹೂಡಿಕೆ ಆಗುವುದಿಲ್ಲವಾದ್ದರಿಂದ ಅದಕ್ಕೆ ತೆರಿಗೆ ವಿನಾಯಿತಿ ಸಿಗುವುದಿಲ್ಲ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Savings Scheme-SCSS)

ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Savings Scheme-SCSS)

60 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ವಯೋಮಾನದವರಿಗಾಗಿ ಇರುವ ಈ ಯೋಜನೆ ಮತ್ತೊಂದು ಜನಪ್ರಿಯ ಉಳಿತಾಯ ಯೋಜನೆಯಾಗಿದೆ. 55 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನಲ್ಲಿ ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದ ನೌಕರರು ಸಹ ಈ ಖಾತೆ ತೆರೆಯಲು ಅರ್ಹರಾಗಿರುತ್ತಾರೆ. ಎನ್‌ಎಸ್‌ಸಿ ಮಾದರಿಯಲ್ಲಿಯೇ ಈ ಯೋಜನೆ ಸಹ ೫ ವರ್ಷ ಕಾಲಾವಧಿಯದಾಗಿದ್ದು, ಮತ್ತೆ ೩ ವರ್ಷ ಹೆಚ್ಚಿಸಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಪ್ರಸ್ತುತ ವಾರ್ಷಿಕ ಶೇ. 8.7 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದ್ದು, ಓರ್ವ ವ್ಯಕ್ತಿ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು. ಇದರಲ್ಲಿ 80ಸಿ ಕಾಯ್ದೆ ಪ್ರಕಾರ 1.5 ಲಕ್ಷ ರೂ. ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಗ್ಯೂ ಈ ವರ್ಷದಿಂದ ಆದಾಯ ತೆರಿಗೆ ಕಾಯ್ದೆ ೮೦ ಟಿಟಿಬಿ ಅನ್ವಯ ೫೦ ಸಾವಿರ ರೂ. ವರೆಗಿನ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಪ್ರತಿ ತ್ರೈಮಾಸಿಕದ ಕೊನೆಯಲ್ಲಿ ಹಿರಿಯ ನಾಗರಿಕರಿಗೆ ಬಡ್ಡಿ ಆದಾಯವನ್ನು ಪಾವತಿಸಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆ

ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ರೂಪಿಸಲಾಗಿರುವ ಈ ಉಳಿತಾಯ ಯೋಜನೆಯಲ್ಲಿ ಪ್ರತಿವರ್ಷ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಪ್ರಸಕ್ತ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕಾಗಿ ವಾರ್ಷಿಕ ಶೇ. 8.5 ರಷ್ಟು ಬಡ್ಡಿ ದರ ನೀಡಲಾಗುತ್ತಿದ್ದು, ಈ ಯೋಜನೆ ಸಹ ೮೦ಸಿ ಅನ್ವಯ ತೆರಿಗೆ ವಿನಾಯಿತಿ ಹೊಂದಿದೆ.
ಅಂದರೆ ಈ ಯೋಜನೆಯಲ್ಲಿ ಸಿಗುವ ಸಂಪೂರ್ಣ ಮ್ಯಾಚುರಿಟಿ ಮೊತ್ತವು ತೆರಿಗೆಯಿಂದ ಮುಕ್ತವಾಗಿದೆ. ಈ ಯೋಜನೆಯ ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ. ಕೆಲ ನಿರ್ದಿಷ್ಟ ಬ್ಯಾಂಕ್ ಶಾಖೆಗಳಲ್ಲಿಯೂ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದಾಗಿದೆ.

ಅಂಚೆ ಕಚೇರಿ ನಿಶ್ಚಿತ ಅವಧಿ ಠೇವಣಿ ಯೋಜನೆ

ಅಂಚೆ ಕಚೇರಿ ನಿಶ್ಚಿತ ಅವಧಿ ಠೇವಣಿ ಯೋಜನೆ

ಇದು 5 ವರ್ಷದ ಠೇವಣಿ ಯೋಜನೆಯಾಗಿದ್ದು, ಬ್ಯಾಂಕುಗಳ 5 ವರ್ಷದ ಠೇವಣಿ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಅಂಚೆ ಕಚೇರಿಯ ಈ ಯೋಜನೆ 5 ವರ್ಷದ ಲಾಕ್ ಇನ್ ಅವಧಿ ಹೊಂದಿದ್ದು, ಇದರಲ್ಲಿ ಪ್ರತಿವರ್ಷ ಹೂಡಿಕೆ ಮಾಡಲಾಗುವ ೧.೫ ಲಕ್ಷ ರೂ. ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ತೆರಿಗೆ ವಿನಾಯಿತಿ ಸೌಲಭ್ಯವಿರುವುದಿಲ್ಲ. ಈ ಯೋಜನೆಗೆ ಪ್ರಸ್ತುತ ವಾರ್ಷಿಕ ಶೇ. 7.3 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.

English summary

5 post office savings schemes that offer guaranteed tax benefits and Interest Rates

It is worth mentioning that most post office savings schemes come along with guaranteed tax benefits to investors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X