For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಹಣ ಗಳಿಸಲು ಬಯಸುವವರಿಗೆ ಇಲ್ಲಿದೆ ಸುವರ್ಣ ಅವಕಾಶ

ಬದುಕುವ ದಾರಿ ಕಂಡುಕೊಳ್ಳಲು ಇಂಟರನೆಟ್ ಎಂಬುದು ಇಷ್ಟೊಂದು ಪ್ರಬಲ ಹಾಗೂ ಪರಿಣಾಮಕಾರಿ ಮಾಧ್ಯಮವಾಗಬಹುದು ಎಂದು ೧೫ ವರ್ಷಗಳ ಹಿಂದೆ ಖಂಡಿತವಾಗಿಯೂ ಯಾರೊಬ್ಬರೂ ಊಹಿಸಿರಲಿಕ್ಕಿಲ್ಲ. ಆದರೆ ಇಂದು ಕಾಲ ಸಂಪೂರ್ಣ ಬದಲಾಗಿದೆ.

|

ಬದುಕುವ ದಾರಿ ಕಂಡುಕೊಳ್ಳಲು ಇಂಟರನೆಟ್ ಎಂಬುದು ಇಷ್ಟೊಂದು ಪ್ರಬಲ ಹಾಗೂ ಪರಿಣಾಮಕಾರಿ ಮಾಧ್ಯಮವಾಗಬಹುದು ಎಂದು 15 ವರ್ಷಗಳ ಹಿಂದೆ ಖಂಡಿತವಾಗಿಯೂ ಯಾರೊಬ್ಬರೂ ಊಹಿಸಿರಲಿಕ್ಕಿಲ್ಲ. ಆದರೆ ಇಂದು ಕಾಲ ಸಂಪೂರ್ಣ ಬದಲಾಗಿದೆ. ಇಂಟರನೆಟ್ ಮಾಧ್ಯಮದಿಂದ ಮನೆಯಿಂದಲೇ ಯಾವುದಾದರೂ ಉದ್ಯೋಗ ಮಾಡುವುದು ಅಥವಾ ಇನ್ನಾವುದೋ ರೀತಿಯಿಂದ ಪಾರ್ಟ ಟೈಂ ಕೆಲಸ ಮಾಡಿ ದುಡ್ಡು ಗಳಿಸಲು ಇಂದು ಹೇರಳ ಅವಕಾಶಗಳಿವೆ.

ಕಳೆದ 10 ವರ್ಷಗಳಲ್ಲಿ ಜಗತ್ತಿನಾದ್ಯಂತ ಹಲವಾರು ಜನ ಇಂಟರನೆಟ್ ಮೂಲಕ ವಿವಿಧ ರೀತಿಯ ವಹಿವಾಟುಗಳನ್ನು ಆರಂಭಿಸಿ ಹಣ ಗಳಿಸುತ್ತಿದ್ದಾರೆ. ಇಂಟರನೆಟ್ ಹಾಗೂ ವ್ಯಾಪಾರದ ಬಗ್ಗೆ ಮಾಹಿತಿ ಇರುವ ಯಾರಾದರೂ ಈ ರೀತಿಯ ವ್ಯಾಪಾರ ಆರಂಭಿಸಿ ಯಶಸ್ಸು ಕಾಣಲು ಸಾಧ್ಯವಿದೆ. ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ? ಇಲ್ಲಿವೆ 12 ಮಾರ್ಗ

ಹಾಗಾದರೆ ಹೊಸಬರು ಇಂಟರನೆಟ್ ಲೋಕದಲ್ಲಿ ಪ್ರವೇಶಿಸಿ ವ್ಯಾಪಾರ, ವಹಿವಾಟು ಆರಂಭಿಸುವುದು ಹೇಗೆ ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ. ಹೊಸಬರು ಇಂಟರನೆಟ್ ಮೂಲಕ ಯಾವ್ಯಾವ ರೀತಿಯ ಹಾಗೂ ಹೇಗೆ ವ್ಯಾಪಾರ ಆರಂಭಿಸಬಹುದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

ಆನ್ಲೈನ್ ಮೂಲಕ ಮಾಡಬಹುದಾದ ಅತ್ಯುತ್ತಮ ಬಿಸಿನೆಸ್ ಐಡಿಯಾಗಳು ಹೀಗಿವೆ:

ಅಫಿಲಿಯೇಟ್ ಮಾರ್ಕೆಟಿಂಗ್

ಅಫಿಲಿಯೇಟ್ ಮಾರ್ಕೆಟಿಂಗ್

ಅಫಿಲಿಯೇಟ್ ಮಾರ್ಕೆಟಿಂಗ್ ಎಂಬುದು ಕೇಳಿದ ತಕ್ಷಣ ಯಾವುದೋ ಹೊಸ ರೀತಿಯ ವ್ಯವಹಾರ ಅನಿಸುತ್ತದೆ. ಆದರೆ ಇದೇನೂ ಹೊಸ ಐಡಿಯಾ ಅಲ್ಲ. ೯೦ರ ದಶಕದ ಕೊನೆಯ ಭಾಗದಲ್ಲಿಯೇ ಪ್ರಥಮ ಬಾರಿ ಅಫಿಲಿಯೇಟ್ ಮಾರ್ಕೆಟಿಂಗ್ ಶುರುವಾಗಿತ್ತು. ಆವಾಗ ಇದು ಕೆಲವೇ ಕಂಪನಿಗಳನ್ನೊಳಗೊಂಡ ಚಿಕ್ಕ ಪ್ರಮಾಣದ ವ್ಯವಹಾರವಾಗಿತ್ತು. ಆದರೆ ಇವತ್ತಿಗೆ ಇದೊಂದು ದೊಡ್ಡ ವ್ಯಾಪಾರವಾಗಿ ಬೆಳೆದಿದೆ.

ಬೇರೊಂದು ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವುದೇ ಅಫಿಲಿಯೇಟ್ ಮಾರ್ಕೆಟಿಂಗ್ ಆಗಿದೆ. ಈ ರೀತಿಯ ವ್ಯವಹಾರ ತುಂಬಾ ಅನುಕೂಲಕರವಾಗಿದೆ. ಇದಕ್ಕಾಗಿ ನೀವು ಯಾವುದೇ ಉತ್ಪನ್ನಗಳನ್ನು ತಯಾರಿಸುವುದು, ಅದನ್ನು ಪೂರೈಸುವುದು ಅಥವಾ ದುಬಾರಿ ವೆಚ್ಚದ ಇ-ಕಾಮರ್ಸ್ ವೆಬ್‌ಸೈಟ್ ಮಾಡುವುದು ಯಾವುದೂ ಬೇಕಿಲ್ಲ. ಅಲ್ಲದೆ ವಸ್ತುಗಳ ದಾಸ್ತಾನು ಮಾಡಿಕೊಳ್ಳುವುದು ಸಹ ಬೇಕಾಗಿಲ್ಲ. ಇದನ್ನೆಲ್ಲ ನೀವು ಸಹವರ್ತಿಯಾಗಿ ಕೆಲಸ ಮಾಡುತ್ತಿರುವ ಕಂಪನಿಯೇ ನಿಭಾಯಿಸುತ್ತದೆ.
ನಿಮ್ಮದೊಂದು ಬ್ಲಾಗ್ ಅಥವಾ ಸರಳವಾದ ವೆಬ್‌ಸೈಟ್ ತಯಾರಿಸಿ, ಸಹವರ್ತಿ ಕಂಪನಿಯ ವೆಬ್‌ಸೈಟ್ ಲಿಂಕ್‌ಗಳನ್ನು ನೇರವಾಗಿ ಅದರಲ್ಲಿ ಪೋಸ್ಟ್ ಮಾಡಿದರಾಯಿತು. ಇಷ್ಟು ಮಾಡಿದರೆ ನೀವು ಅಫಿಲಿಯೇಟ್ ಮಾರ್ಕೆಟಿಂಗ್ ಆರಂಭಿಸಿದಂತೆಯೇ. ಹೊಸಬರು ಆರಂಭದಲ್ಲಿ ಇಷ್ಟನ್ನು ಮಾಡಿದರೆ ದಿನಗಳೆದಂತೆ ಇಂಟರನೆಟ್ ಲೋಕದ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಾರಂಭಿಸುತ್ತವೆ.

ಬ್ಲಾಗಿಂಗ್
 

ಬ್ಲಾಗಿಂಗ್

ಬ್ಲಾಗಿಂಗ್ ಸಹ ಒಂದು ರೀತಿ ಅಫಿಲಿಯೇಟ್ ಮಾರ್ಕೆಟಿಂಗ್ ಮಾದರಿಯಲ್ಲೇ ಇದ್ದರೂ, ಬ್ಲಾಗರ್ ತನ್ನ ಬ್ಲಾಗಿಗೆ ದೊಡ್ಡ ಸಂಖ್ಯೆಯ ಫಾಲೋವರ್ಸ್ ಬರುವಂತೆ ಕೆಲಸ ಮಾಡಬೇಕಾಗುತ್ತದೆ. ಸರ್ಚ್ ಎಂಜಿನ್ ಆಪ್ಟಿಮೈಸೇಶನ್, ಸೋಶಿಯಲ್ ಮೀಡಿಯಾಗಳು ಮತ್ತು ಯೂಟ್ಯೂಬ್‌ಗಳಂಥ ಮಾಧ್ಯಮಗಳಲ್ಲಿ ನಿಮ್ಮ ಉತ್ಪನ್ನಗಳ ಪ್ರಚಾರ ಅಥವಾ ನಿಮ್ಮ ಹವ್ಯಾಸವನ್ನು ಪ್ರದರ್ಶಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ.
ಬ್ಲಾಗ್ ಆರಂಭಿಸುವುದು ನಿಜವಾಗಿಯೂ ಅತ್ಯಂತ ಸುಲಭವಾಗಿದೆ. ಸಾವಿರ ರೂಪಾಯಿ ಪಾವತಿಸಿ ಡೊಮೈನ್ ನೇಮ್ ಹಾಗೂ ಹಾಸ್ಟಿಂಗ್ ಪಡೆದುಕೊಳ್ಳಬಹುದು. ಇನ್ನು ವರ್ಡಪ್ರೆಸ್‌ನಲ್ಲಿ ಸಾವಿರಾರು ಬ್ಲಾಗಿಂಗ್ ಥೀಮ್‌ಗಳು ಉಚಿತವಾಗಿ ಲಭ್ಯವಿದ್ದು, ಇವುಗಳನ್ನು ಬಳಸಿಕೊಳ್ಳಬಹುದು. ಇದನ್ನೆಲ್ಲ ಮಾಡಿದ ನಂತರ ನಿಜವಾದ ಕಷ್ಟದ ಕೆಲಸ ಆರಂಭವಾಗುತ್ತದೆ.
ಯಶಸ್ವಿ ಬ್ಲಾಗರ್ ಆಗಿ ಒಂದಿಷ್ಟು ಹಣ ಗಳಿಸಬೇಕಾದರೆ ನೀವು ಕೆಲವೊಮ್ಮೆ ಮಾಹಿತಿಯ ನಿರ್ದೇಶಕನಾಗಿ ಹಾಗೂ ಇನ್ನೊಮ್ಮೆ ಓರ್ವ ವ್ಯಕ್ತಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಮಾರ್ಕೆಟಿಂಗ್, ಫ್ಯಾಶನ್, ಕಾರುಗಳು ಅಥವಾ ಸಾಮಾನ್ಯ ಹವ್ಯಾಸ ಹೀಗೆ ಯಾವುದೇ ವಿಷಯದಲ್ಲಿ ಬ್ಲಾಗಿಂಗ್ ಮಾಡುತ್ತಿದ್ದರೂ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರೇ ಯಶಸ್ವಿ ಬ್ಲಾಗರ್‌ಗಳಾಗಿದ್ದಾರೆ. ಯಾವುದೇ ವಿಷಯದ ಕುರಿತು ಬ್ಲಾಗ್ ಆರಂಭಿಸಲು ನೀವು ನಿರ್ಧರಿಸಬಹುದು. ಆದರೂ ನಿಮ್ಮ ಇಷ್ಟದ ವಿಷಯದ ಕುರಿತಾಗಿಯೇ ಬ್ಲಾಗ್ ಬರೆಯುವುದು ಸೂಕ್ತ ಎಂಬುದು ತಜ್ಞರ ಸಲಹೆಯಾಗಿದೆ.

ಆನ್‌ಲೈನ್ ಶಾಪ್ ಆರಂಭಿಸಿ

ಆನ್‌ಲೈನ್ ಶಾಪ್ ಆರಂಭಿಸಿ

ಅಫಿಲಿಯೇಟ್ ಮಾರ್ಕೆಟಿಂಗ್ ಎಂಬುದು ನಿಮಗೆ ಅಷ್ಟು ಸರಿ ಕಾಣದಿದ್ದರೆ ನಿಮ್ಮದೇ ವಸ್ತುಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಯಾಕೆ ಯತ್ನಿಸಬಾರದು? ಇಂದಿನ ಆಧುನಿಕ ತಂತ್ರಜ್ಞಾನ ನಮಗೆ ನೀಡಿರುವ ವರದಿಂದ ಯಾರೇ ಆದರೂ ಗುಣಮಟ್ಟದ ಇ-ಕಾಮರ್ಸ್ ಸ್ಟೋರ್ಸ್ ಆರಂಭಿಸಲು ಸಾಧ್ಯವಿದೆ. ಕಳೆದ ೧೦ ವರ್ಷಗಳಲ್ಲಿ ಇಂಟರನೆಟ್ ಕ್ಷೇತ್ರದಲ್ಲಿ ಆದ ಅಗಾಧ ಬೆಳವಣಿಗೆ ಇದನ್ನು ಸಾಧ್ಯವಾಗಿಸಿದೆ. ಇದಕ್ಕಾಗಿ ನೀವೊಬ್ಬ ಕಂಪ್ಯೂಟರ್ ಪ್ರೊಗ್ರಾಮರ್ ಆಗಿರಬೇಕೆಂದೇನೂ ಇಲ್ಲ. 

ಕಲಾಕೃತಿಗಳು, ಫ್ಯಾಶನ್ ವಸ್ತುಗಳು, ಕಟ್ಟಿಗೆಯ ವಸ್ತುಗಳು ಅಥವಾ ಹವ್ಯಾಸಿಗಳಿಗೆ ಉಪಯುಕ್ತವಾಗುವಂಥ ಚಿಕ್ಕ ಪುಟ್ಟ ವಸ್ತುಗಳು ಹೀಗೆ ಆನ್‌ಲೈನ್ ಶಾಪ್ ಮೂಲಕ ತರಹೇವಾರಿ ವಸ್ತುಗಳನ್ನು ಮಾರಾಟ ಮಾಡಬಹುದು.

ಇಬೇ ಸೆಲ್ಲಿಂಗ್	(Ebay Selling)

ಇಬೇ ಸೆಲ್ಲಿಂಗ್ (Ebay Selling)

ಚೀನಾ ದೇಶದ ಅಗ್ಗ ದರದ ಮಾರಾಟಗಾರರು ಆನ್‌ಲೈನ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ನಂತರ ಇಬೇ ಮೂಲಕ ಮಾರಾಟ ಮಾಡುವುದು ಮುಂಚಿನಂತೆ ಲಾಭದಾಯಕವಾಗಿ ಉಳಿದಿಲ್ಲ. ಆದರೆ ಈಗಲೂ ಕೆಲ ಬಗೆಯ ಮಾರಾಟ ವಲಯ ನಿರ್ಲಕ್ಷಿತವಾಗಿಯೇ ಉಳಿದಿದೆ. ಇಂಥ ನಿರ್ಲಕ್ಷಿತ ಮಾರಾಟ ವಲಯವನ್ನು ಗುರುತಿಸುವ ಅನೇಕ ವ್ಯಾಪಾರಸ್ಥರು ಈಗಲೂ ಪ್ರತಿ ತಿಂಗಳು ಸಾವಿರಾರು ವಸ್ತುಗಳನ್ನು ಮಾರಾಟ ಮಾಡುತ್ತಾರೆ.
ಆರಂಭದಲ್ಲಿ ಚಿಕ್ಕದಾಗಿ ವ್ಯವಹಾರ ಆರಂಭಿಸಿ ಯಾವ ರೀತಿಯಲ್ಲಿ ವ್ಯಾಪಾರ ಮಾಡಿದರೆ ಸೂಕ್ತ ಎಂಬುದನ್ನು ಅಧ್ಯಯನ ಮಾಡಬೇಕು. ದಿನಗಳೆದಂತೆ ಅನುಭವದ ಆಧಾರದಲ್ಲಿ ಹೊಸ ಹೊಸ ವಸ್ತುಗಳ ಮಾರಾಟಕ್ಕೆ ಮುಂದಾಗಬಹುದು ಹಾಗೂ ಹೊಸ ಪ್ರಯೋಗಗಳನ್ನು ಮಾಡಬಹುದು.

ವರ್ಚ್ಯುವಲ್ ಅಸಿಸ್ಟಂಟ್ ಕೆಲಸ

ವರ್ಚ್ಯುವಲ್ ಅಸಿಸ್ಟಂಟ್ ಕೆಲಸ

ಇಂದಿನ ಕಾಲದಲ್ಲಿ ಯಾವ್ಯಾವುದೋ ಕೆಲಸಕ್ಕಾಗಿ ಕಂಪನಿಗಳು ಹಣ ನೀಡುತ್ತವೆ. ಕಂಪನಿಯ ಫೋನ್ ಕರೆಗಳಿಗೆ ಉತ್ತರಿಸುವುದು, ಅವರಿಗೆ ಅವಶ್ಯಕವಾದುದನ್ನು ಬರೆದು ಕೊಡುವುದು, ಅಕೌಂಟ್ಸ್ ತಯಾರಿಸುವುದು ಅಥವಾ ಆಡಳಿತಾತ್ಮಕ ಕೆಲಸ ನೋಡಿಕೊಳ್ಳುವುದು ಹೀಗೆ ಹಲವಾರು ರೀತಿಯ ರೀತಿಯ ಕೆಲಸಗಳಿಗಾಗಿ ಕಂಪನಿಗಳು ಹಣ ನೀಡುತ್ತವೆ. ಅಪ್ ವರ್ಕ್ (Upwork) , ಕ್ರೇಗಲಿಸ್ಟ್ (Craigslist) ಅಥವಾ ಪೀಪಲ್ ಪರ್ ಅವರ್ (PeoplePerHour) ಮುಂತಾದ ವೆಬ್‌ಸೈಟ್‌ಗಳನ್ನು ಒಮ್ಮೆ ನೋಡಿ. ಇಲ್ಲಿ ಲಭ್ಯವಿರುವ ಕೆಲಸಗಳನ್ನು ನೋಡಿದರೆ ನೀವು ಬೆರಗಾಗುವಿರಿ.

ತರಬೇತಿ ಹಾಗೂ ಮಾರ್ಗದರ್ಶನ

ತರಬೇತಿ ಹಾಗೂ ಮಾರ್ಗದರ್ಶನ

ನೀವು ಯಾವುದಾದರೂ ವೃತ್ತಿಯಲ್ಲಿ ಪರಿಣಿತಿ ಸಾಧಿಸಿದ್ದಲ್ಲಿ ಅದನ್ನೇ ಇಂಟರನೆಟ್ ಮೂಲಕ ಪ್ರಚಾರ ಮಾಡಿ ವ್ಯವಹಾರ ವೃದ್ಧಿಸಿಕೊಳ್ಳಬಹುದು. ತರಬೇತಿ ಹಾಗೂ ಮಾರ್ಗದರ್ಶನ ಕ್ಷೇತ್ರಕ್ಕೆ ಈ ಮಾತು ಬಹುತೇಕ ಅನ್ವಯವಾಗುತ್ತದೆ. ನೀವೊಬ್ಬ ಜಿಮ್ ತರಬೇತುರಾಗಿದ್ದಲ್ಲಿ, ನಿಮ್ಮದೇ ಆದ ವೆಬ್‌ಸೈಟ್, ಫೇಸಬುಕ್, ಇನಸ್ಟಾಗ್ರಾಂ ಅಥವಾ ಗೂಗಲ್‌ನ ಆಡ್ ವರ್ಡ್ಸ್‌ಗಳ ಸಹಾಯದಿಂದ ಅದರ ಬಗ್ಗೆ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ನಿಮ್ಮ ಜಿಮ್‌ಗೆ ಸೆಳೆಯಬಹುದು.

ಇನ್ನು ಇದರ ಬಗ್ಗೆ ಉತ್ತಮ ವಿಡಿಯೋ ತಯಾರಿಸಿ ಅವನ್ನು ಯೂಟ್ಯೂಬ್‌ನಲ್ಲಿ ಹರಿಬಿಟ್ಟರೆ ಸಾಕಷ್ಟು ಸಂಖ್ಯೆಯ ವೀಕ್ಷಕರನ್ನು ಪಡೆಯಬಹುದು. ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವುದೇ ವ್ಯವಹಾರವಾದರೂ ಅದನ್ನು ಆನ್‌ಲೈನ್ ಮೂಲಕ ಪ್ರಚಾರ ಮಾಡಿದರೆ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ವೃದ್ಧಿಯಾಗುವುದು ಮಾತ್ರ ಖಚಿತ.

ಬ್ಲಾಗ್‌ಗಳಿಗೆ ಬರೆದು ಹಣ ಸಂಪಾದನೆ

ಬ್ಲಾಗ್‌ಗಳಿಗೆ ಬರೆದು ಹಣ ಸಂಪಾದನೆ

ಉತ್ತಮವಾಗಿ ಬರೆಯಬಲ್ಲ ಲೇಖಕರಿಗೆ ಸಹ ಇಂಟರನೆಟ್ ಜಗತ್ತಿನಲ್ಲಿ ಭಾರಿ ಬೇಡಿಕೆ ಇದೆ. ಹಲವಾರು ಕಂಪನಿಗಳು ಇಂಥ ಲೇಖಕರ ಹುಡುಕಾಟದಲ್ಲಿರುತ್ತವೆ. ತಮ್ಮ ಬ್ಲಾಗ್ ಅಥವಾ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲು ಕಂಪನಿಗಳು ಪ್ರತಿನಿತ್ಯ ಹೊಸ ವಿಷಯದ ಬಗ್ಗೆ ಲೇಖನಗಳನ್ನು ಬಯಸುತ್ತವೆ. ಇಂಥ ಅವಕಾಶವನ್ನು ಉಪಯೋಗಿಸಿಕೊಂಡು ಹಣ ಸಂಪಾದಿಸಬಹುದು.

ಕೆಲ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಬ್ಲಾಗ್ ಲೇಖಕರಿಗೆ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ ಎಂಬ ದೂರುಗಳಿವೆ. ಆದರೂ ನಿಯಮಿತವಾಗಿ ಹಣ ನೀಡುವ ಕಂಪನಿಗಳು ಸಾಕಷ್ಟಿದ್ದು, ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು.

ಯೂಟ್ಯೂಬ್

ಯೂಟ್ಯೂಬ್

ನೀವು ದಿನದಲ್ಲಿ ಅನೇಕ ಬಾರಿ ವಿವಿಧ ರೀತಿಯ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಿರಬಹುದು. ಆದರೆ ನೀವು ವಿಡಿಯೋ ನೋಡಿದ ಪ್ರತಿಬಾರಿಯೂ ಆ ಯುಟ್ಯೂಬ್ ಚಾನೆಲ್ ಮಾಲೀಕ ಹಣ ಗಳಿಸುತ್ತಿದ್ದಾನೆ ಎಂಬುದು ಬಹುತೇಕ ನಿಮಗೆ ಗೊತ್ತಿದ್ದಂತಿಲ್ಲ. ಎಷ್ಟು ಹೆಚ್ಚು ವೀಕ್ಷಕರು ಬರುತ್ತಾರೋ ಅಷ್ಟೇ ಹೆಚ್ಚು ಹಣ ಗಳಿಸಬಹುದು ಎಂಬುದು ತಿಳಿದಿರಲಿ.
ಮುಂದಿನ ಸಲ ಯೂಟ್ಯೂಬ್‌ನಲ್ಲಿ ಯಾವುದಾದರೂ ವಿಡಿಯೋ ನೋಡಿದಾಗ ನೀವೂ ಅದರ ಬಗ್ಗೆ ಒಂದಿಷ್ಟು ಐಡಿಯಾಗಳನ್ನು ಸಂಗ್ರಹಿಸಿ. ಹಲವಾರು ವಿಡಿಯೋ ಬ್ಲಾಗರ್ಸ್ ಹಾಗೂ ವಿಡಿಯೋ ತಯಾರಕರು ಇತ್ತೀಚಿನ ದಿನಗಳಲ್ಲಿ ಅದನ್ನೇ ಫುಲ್ ಟೈಂ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಪ್ರತಿದಿನ ಭಾರತದಲ್ಲಿ ಹೊಸ ವಿಡಿಯೋ ಬ್ಲಾಗರ್‌ಗಳು ಹುಟ್ಟಿಕೊಳ್ಳುತ್ತಿದ್ದು ಅವರಲ್ಲನೇಕರು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ.

ಅಭಿಪ್ರಾಯ ಹೇಳಿ ಹಣ ಗಳಿಸಿ

ಅಭಿಪ್ರಾಯ ಹೇಳಿ ಹಣ ಗಳಿಸಿ

ಅಭಿಪ್ರಾಯ ತಿಳಿಸಿದರೆ ಹಣ ಯಾಕೆ ನೀಡುತ್ತಾರೆ ಎಂದು ಗೊಂದಲಕ್ಕೀಡಾಗಬೇಡಿ. ಕಂಪನಿಯ ಉತ್ಪನ್ನಗಳ ಮಾರ್ಕೆಟ್ ರಿಸರ್ಚ್ ಕೆಲಸದಲ್ಲಿ ಇಂಥದೊಂದು ಅವಕಾಶವಿದೆ. ಈಗ ಇದು ಆನ್‌ಲೈನ್ ಮೂಲಕ ಮತ್ತೂ ಸುಲಭವಾಗಿದೆ.
ಮಾರ್ಕೆಟ್ ರಿಸರ್ಚ್ ಕಂಪನಿಗಳ ವೆಬ್‌ಸೈಟ್‌ನಲ್ಲಿ ರಜಿಸ್ಟರ್ ಮಾಡಿಕೊಂಡಲ್ಲಿ ಅವರು ನಿಮಗೆ ವಿವಿಧ ಕಂಪನಿಗಳ ಉತ್ಪನ್ನಗಳ ಬಗ್ಗೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡುತ್ತಾರೆ. ಪ್ರತಿ ಬಾರಿ ಇಂಥ ಓಪಿನಿಯನ್ ಫಾರ್ಮ ತುಂಬಿ ಕಳುಹಿಸಿದಾಗ ನಿಮಗೆ ಚಿಕ್ಕ ಮೊತ್ತದ ಹಣ ಸಿಗುತ್ತದೆ. ಜೊತೆಗೆ ತಮ್ಮ ಉತ್ಪನ್ನಗಳು ಹಾಗೂ ಕಾರ್ಯವೈಖರಿಯ ಬಗ್ಗೆ ಜನ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಕಂಪನಿಗಳು ಅಥವಾ ಸರಕಾರಗಳಿಗೆ ಇದು ಸಹಾಯಕವಾಗುತ್ತದೆ.

ಕರೆನ್ಸಿ ಟ್ರೇಡಿಂಗ್

ಕರೆನ್ಸಿ ಟ್ರೇಡಿಂಗ್

ಕರೆನ್ಸಿ ಟ್ರೇಡಿಂಗ್ ವ್ಯವಹಾರದಲ್ಲಿ ಸಾಕಷ್ಟು ಅಪಾಯ ಇರುವುದರಿಂದ ಇದರ ಬಗ್ಗೆ ಮಾಹಿತಿ ಇರುವವರು ಮಾತ್ರ ಇದರಲ್ಲಿ ಧುಮುಕಬೇಕು. ಈ ಕ್ಷೇತ್ರದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ನಂತರವೇ ವ್ಯವಹಾರ ಆರಂಭಿಸುವುದು ಸೂಕ್ತ.
ಇತ್ತೀಚಿನ ಆನ್‌ಲೈನ್ ಕ್ರಾಂತಿಯಿಂದ ಯಾರು ಬೇಕಾದರೂ ಕರೆನ್ಸಿ, ಶೇರು ಹಾಗೂ ಸ್ಟಾಕ್‌ಗಳನ್ನು ಟ್ರೇಡಿಂಗ್ ಮಾಡಬಹುದಾಗಿದೆ.
ಮೊದಲಿಗೆ ಡೆಮೊ ಅಕೌಂಟ್ ತಯಾರಿಸಿ ಕರೆನ್ಸಿ ಟ್ರೇಡಿಂಗ್ ಬಗ್ಗೆ ತರಬೇತಿ ಪಡೆದುಕೊಳ್ಳಬೇಕು. ನಂತರವಷ್ಟೆ ನಿಜವಾದ ಟ್ರೇಡಿಂಗ್ ಆರಂಭಿಸಬೇಕು. ಈ ವ್ಯವಹಾರದಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಳ್ಳದಂತೆ ಜಾಗೃತಿ ವಹಿಸುವುದು ತುಂಬಾ ಅಗತ್ಯವಾಗಿದೆ.

Read more about: money online finance news savings
English summary

How to earn money Online in India, Here are Top 10 Ideas

15 years ago, nobody could have predicted that the internet would prove to be such a powerful force for helping people to earn a living. Fast forward to 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X