For Quick Alerts
ALLOW NOTIFICATIONS  
For Daily Alerts

ಸಂಬಳ ಹೊರತುಪಡಿಸಿ ಪ್ರತಿ ತಿಂಗಳು ನಿರಂತರ ಆದಾಯ ಪಡೆಯಬೇಕೆ?

ತಿಂಗಳ ಸಂಬಳದ ಜೊತೆಗೆ ನಿಯಮಿತವಾಗಿ ಮತ್ತೊಂದು ಮೂಲದಿಂದ ಆದಾಯ ಪಡೆಯುವುದು ಅಥವಾ ನಿವೃತ್ತಿ ನಂತರ ಪರ್ಯಾಯ ಆದಾಯ ಮೂಲಗಳನ್ನು ಹೊಂದಿರುವುದು ಸುಗಮ ಜೀವನಕ್ಕೆ ದಾರಿ ಮಾಡಿ ಕೊಡುತ್ತದೆ.

|

ತಿಂಗಳ ಸಂಬಳದ ಜೊತೆಗೆ ನಿಯಮಿತವಾಗಿ ಮತ್ತೊಂದು ಮೂಲದಿಂದ ಆದಾಯ ಪಡೆಯುವುದು ಅಥವಾ ನಿವೃತ್ತಿ ನಂತರ ಪರ್ಯಾಯ ಆದಾಯ ಮೂಲಗಳನ್ನು ಹೊಂದಿರುವುದು ಸುಗಮ ಜೀವನಕ್ಕೆ ದಾರಿ ಮಾಡಿ ಕೊಡುತ್ತದೆ. ಪ್ರತಿ ತಿಂಗಳಿನ ನಿಶ್ಚಿತ ಖರ್ಚು-ವೆಚ್ಚಗಳು ಸೇರಿದಂತೆ ಯಾವುದಾದರೂ ಅನಿರೀಕ್ಷಿತ ವೆಚ್ಚಗಳು, ಮನೋರಂಜನೆ ಹೀಗೆ ಬೇರೆ ಖರ್ಚುಗಳಿಗೆ ಸಹ ಬಜೆಟ್ ತಯಾರಿಸಲು ಇದರಿಂದ ಅನುಕೂಲವಾಗುತ್ತದೆ.
ಹಾಗಾದರೆ ಯಾವ ವಿಧಾನಗಳ ಮೂಲಕ ನಿಯಮಿತವಾಗಿ ಆದಾಯ ಬರುವಂತೆ ಮಾಡಬಹುದು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ.

ಮಾಸಿಕ ಆದಾಯ ಯೋಜನೆಗಳು ಹಾಗೂ ಅವುಗಳ ವೈಶಿಷ್ಟ್ಯಗಳು:

1. ಫಿಕ್ಸೆಡ್ ಡಿಪಾಸಿಟ್ (Fixed Deposit-FD)

1. ಫಿಕ್ಸೆಡ್ ಡಿಪಾಸಿಟ್ (Fixed Deposit-FD)

ಫಿಕ್ಸೆಡ್ ಡಿಪಾಸಿಟ್ ಯೋಜನೆಗಳು ಭಾರತೀಯರಿಗೆ ಅಚ್ಚು ಮೆಚ್ಚಿನದಾಗಿವೆ. ಹಣ ಹೂಡಿಕೆಯ ಮಾತು ಬಂದಾಗ ಜನ ಮೊದಲಿಗೆ ಫಿಕ್ಸೆಡ್ ಡಿಪಾಸಿಟ್ ಬಗ್ಗೆಯೇ ವಿಚಾರ ಮಾಡುತ್ತಾರೆ. ಯಾವುದೇ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಎಫ್‌ಡಿ ಖಾತೆ ತೆರೆಯಬಹುದು ಹಾಗೂ ಕಳೆದ ಹಲವಾರು ದಶಕಗಳಿಂದ ಎಫ್‌ಡಿ ಯೋಜನೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ ಆಗಿರುವುದರಿಂದ ಇದೊಂದು ನಂಬಿಕಸ್ಥ ಹೂಡಿಕೆ ಯೋಜನೆಯಾಗಿ ಹೊರಹೊಮ್ಮಿದೆ. ಆದಾಗ್ಯೂ ಎಫ್‌ಡಿಗಳಲ್ಲಿ ತ್ರೈಮಾಸಿಕಕ್ಕೊಮ್ಮೆ ಬಡ್ಡಿ ಜಮೆ ಮಾಡಲಾಗುವುದರಿಂದ ಇದರಲ್ಲಿ ಮಾಸಿಕವಾಗಿ ಆದಾಯ ಪಡೆಯಲು ಸಾಧ್ಯವಿಲ್ಲ.
ಆದರೆ ಎಫ್‌ಡಿ ಹೂಡಿಕೆಯನ್ನು ತುಸು ಜಾಣ್ಮೆಯಿಂದ ಕಾರ್ಯಗತಗೊಳಿಸಿದರೆ ಪ್ರತಿ ತಿಂಗಳೂ ಆದಾಯ ಬರುವಂತೆ ಮಾಡಬಹುದು. ಅಂದರೆ ಒಂದು ನಿರ್ದಿಷ್ಟ ಅವಧಿಯನ್ನು ನಿರ್ಧರಿಸಿ ಅಷ್ಟು ತಿಂಗಳ ಕಾಲ ಪ್ರತಿ ತಿಂಗಳೂ ಒಂದು ವರ್ಷದ ಅವಧಿಯ ಎಫ್‌ಡಿ ಮಾಡಿಸುತ್ತ ಹೋಗಬೇಕು. ಮೊದಲ 12 ತಿಂಗಳು ಕೇವಲ ಹೂಡಿಕೆ ಮಾಡುತ್ತಿರಬೇಕಾಗುತ್ತದೆ. ನಂತರದ ತಿಂಗಳಿಂದ ನಿಮಗೆ ಪ್ರತಿ ತಿಂಗಳು ಬಡ್ಡಿ ಆದಾಯ ಬರಲಾರಂಭಿಸುತ್ತದೆ. ಜೊತೆಗೆ ಹೂಡಿದ ಮೊತ್ತ ಮರು ಹೂಡಿಕೆಯಾಗುತ್ತದೆ. ಹೀಗೆ ಮಾಡುವುದರಿಂದ ಯಾವುದೇ ಹೆಚ್ಚುವರಿ ಬಂಡವಾಳವಿಲ್ಲದೆ ಪ್ರತಿ ತಿಂಗಳು ಬಡ್ಡಿ ಆದಾಯ ಪಡೆಯಬಹುದು.
ಉದಾಹರಣೆಗೆ ನೋಡುವುದಾದರೆ- ಪ್ರತಿ ತಿಂಗಳು 1 ಲಕ್ಷ ರೂಪಾಯಿಗಳಂತೆ 1 ವರ್ಷ ಅವಧಿಯ ಎಫ್‌ಡಿ ಮಾಡಿಸಬೇಕು. ಇದಕ್ಕೆ ವಾರ್ಷಿಕ ಶೇ. 7 ರಷ್ಟು ಬಡ್ಡಿ ಸಿಗುತ್ತದೆ ಹಾಗೂ ಅದನ್ನು ತ್ರೈಮಾಸಿಕಕ್ಕೊಮ್ಮೆ ಪಡೆಯಬಹುದು ಎಂದಿಟ್ಟುಕೊಂಡಾಗ, ಹೂಡಿಕೆ ಮಾಡಿದ 13 ನೇ ತಿಂಗಳಿನಿಂದ ಪ್ರತಿ ತಿಂಗಳು 1,07,185.90 ರೂಪಾಯಿಗಳಷ್ಟು ಮೊತ್ತ ನಿಮಗೆ ಸಿಗಲಾರಂಭಿಸುತ್ತದೆ. ಈ ಮ್ಯಾಚುರಿಟಿ ಮೊತ್ತದಲ್ಲಿ 1 ಲಕ್ಷ ರೂ. ಮೂಲ ಬಂಡವಾಳವನ್ನು ಮರು ಹೂಡಿಕೆ ಮಾಡಿದಲ್ಲಿ ಪ್ರತಿ ತಿಂಗಳು ನೀವು 7,186 ರೂಪಾಯಿ ಬಡ್ಡಿ ಆದಾಯ ಪಡೆಯಬಹುದು. ಬಡ್ಡಿ ಆದಾಯ ಆಯಾ ಕಾಲಾವಧಿಯಲ್ಲಿ ಜಾರಿಯಲ್ಲಿರುವ ಬಡ್ಡಿ ದರಗಳನ್ನು ಆಧರಿಸಿರುತ್ತದೆ ಎಂಬುದು ಗೊತ್ತಿರಲಿ.
ಇದರಲ್ಲಿ ಕೆಲ ಅನಾನುಕೂಲತೆಗಳೂ ಇವೆ. ಮಾಸಿಕ ಆದಾಯ ಪಡೆಯಬೆಕಾದರೆ ನಿಮ್ಮ ಹೂಡಿಕೆಯನ್ನು ಪ್ರತಿ ತಿಂಗಳು ನವೀಕರಣ ಮಾಡಿಸಬೇಕಾಗುತ್ತದೆ. ಅಂದರೆ ತಿಂಗಳಿಗೊಮ್ಮೆ ಮತ್ತೆ ಎಫ್‌ಡಿ ಮಾಡಿಸಬೇಕು. ಬಡ್ಡಿ ದರಗಳಲ್ಲಿ ವ್ಯತ್ಯಾಸ ಆದಲ್ಲಿ ನಿಮ್ಮ ಬಜೆಟ್ ದಾರಿ ತಪ್ಪುವ ಸಾಧ್ಯತೆಯೂ ಇರುತ್ತದೆ.
ಇದರ ಹೊರತಾಗಿ ಹಿರಿಯ ನಾಗರಿಕರಿಗೆ 10 ವರ್ಷದ ಪ್ರಧಾನ ಮಂತ್ರಿ ವಯ ಯೋಜನೆ ಸೂಕ್ತವಾಗಿದೆ. ಇದರಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಬಡ್ಡಿ ಆದಾಯ ಪಡೆಯುವ ಸೌಲಭ್ಯವಿದೆ. ಈ ಯೋಜನೆಯಲ್ಲಿ ವಾರ್ಷಿಕ ಶೇ. 8.3 ರಷ್ಟು ಬಡ್ಡಿ ದರ ಇರುವುದರಿಂದ ಇದು ಮಾಸಿಕ ಶೇ. 8 ರಷ್ಟು ಬಡ್ಡಿದರಕ್ಕೆ ಸಮನಾಗಿದೆ. ಅಂದರೆ ಹಿರಿಯ ನಾಗರಿಕರು ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ ಮುಂದಿನ 10 ವರ್ಷಗಳವರೆಗೆ ಪ್ರತಿ ತಿಂಗಳು 10 ಸಾವಿರ ರೂ. ಆದಾಯ ಪಡೆಯಬಹುದು.

2. ಮಾಸಿಕ ಆದಾಯ ಯೋಜನೆಗಳು

2. ಮಾಸಿಕ ಆದಾಯ ಯೋಜನೆಗಳು

ಅಂಚೆ ಕಚೇರಿ ಶಾಖೆಗಳಲ್ಲಿ ಮಾಸಿಕ ಆದಾಯ ಯೋಜನೆಗಳು ಲಭ್ಯವಿದ್ದು ಪ್ರಸ್ತುತ ಇದರಲ್ಲಿ ಶೇ. 7.3 ರಷ್ಟು ಬಡ್ಡಿದರ ಇದ್ದು, ಮಾಸಿಕವಾಗಿ ಬಡ್ಡಿ ಆದಾಯ ಪಡೆಯಬಹುದು. ಏಕವ್ಯಕ್ತಿ ಖಾತೆಯಾದರೆ ಇದರಲ್ಲಿ ಗರಿಷ್ಠ 4.5 ಲಕ್ಷ ರೂ. ಹಾಗೂ ಜಂಟಿ ಖಾತೆಯಲ್ಲಿ ರೂ. 9 ಲಕ್ಷ ಹೂಡಿಕೆ ಮಾಡಬಹುದು. ಅಂದರೆ ಯಾವುದೇ ವ್ಯಕ್ತಿ ಜಂಟಿ ಖಾತೆಯಲ್ಲಿ 9 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ ಮಾಸಿಕ ಸುಮಾರು 5,300 ರೂ. ಬಡ್ಡಿ ಆದಾಯ ಪಡೆದುಕೊಳ್ಳಬಹುದು.
10 ವರ್ಷ ವಯಸ್ಸಿನ ಚಿಕ್ಕ ಮಕ್ಕಳ ಹೆಸರಲ್ಲೂ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದರೂ, ಹೂಡಿಕೆಯ ಮಿತಿಯ ಕಾರಣದಿಂದ ಆದಾಯ ಸೀಮಿತವಾಗಿರುತ್ತದೆ.
ಇನ್ನು ಕೆಲ ಡೆಬ್ಟ್ ಮಾದರಿಯ ಮ್ಯೂಚುವಲ್ ಫಂಡಗಳಲ್ಲಿ ಸಹ ಮಾಸಿಕ ಆದಾಯ ಯೋಜನೆಗಳಿದ್ದರೂ, ಇವು ಮಾರುಕಟ್ಟೆಯ ಏರಿಳಿತಗಳ ರಿಸ್ಕ್ ಹೊಂದಿರುತ್ತವೆ. ನಿರಂತರ ಆದಾಯ ಇಲ್ಲದ ವ್ಯಕ್ತಿಗಳು ಏನು ಮಾಡಬೇಕು?

3. ವಿಮಾ ವರ್ಷಾಶನ ಯೋಜನೆಗಳು (Insurance Annuity Plans)

3. ವಿಮಾ ವರ್ಷಾಶನ ಯೋಜನೆಗಳು (Insurance Annuity Plans)

ವಿಮಾ ಕಂಪನಿಗಳ ವರ್ಷಾಶನ ಅಥವಾ ಪಿಂಚಣಿ ಯೋಜನೆಗಳು ಜೀವನಾವಧಿಯುದ್ದಕ್ಕೂ ಮಾಸಿಕ ಪಿಂಚಣಿ ನೀಡುವ ಸೌಲಭ್ಯ ಹೊಂದಿವೆ. ಇದರಲ್ಲಿ ಎರಡು ವಿಧಗಳಿವೆ. ಮೊದಲನೆಯದು ತಕ್ಷಣದ ವರ್ಷಾಶನ ಯೋಜನೆ (ಉದಾ: ಎಲ್‌ಐಸಿಯ ಜೀವನ ಅಕ್ಷಯ ಹಾಗೂ ಜೀವನ ಆನಂದ) ಹಾಗೂ ಎರಡನೆಯದು ಮುಂದೂಡಲ್ಪಟ್ಟ ವರ್ಷಾಶನ ಯೋಜನೆಯಾಗಿದೆ (ಉದಾ: ಜೀವನ ಶಾಂತಿ). ತಕ್ಷಣದ ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡಿದ ಕೂಡಲೇ ಪಿಂಚಣಿ ಪಡೆಯಬಹುದು. ಇನ್ನು ಮುಂದೂಡಲ್ಪಟ್ಟ ವರ್ಷಾಶನ ಯೋಜನೆಯಲ್ಲಿ ಪ್ರೀಮಿಯಂಗಳ ಪಾವತಿ ಮುಗಿದ ನಂತರ ಪೂರ್ವ ನಿರ್ಧರಿತ ಅವಧಿಯ ನಂತರ ಪಿಂಚಣಿ ಪಡೆಯಲಾರಂಭಿಸಬಹುದು.
ಹಿರಿಯ ನಾಗರಿಕರು ಮಾತ್ರವಲ್ಲದೆ 30 ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದ್ದು ಇದರ ವೈಶಿಷ್ಟ್ಯತೆಯಾಗಿದೆ. ಸ್ವಂತಕ್ಕೆ ಅಥವಾ ಸಂಗಾತಿಗೆ ಪಿಂಚಣಿ ದೊರಕುವಂತೆ ಮಾಡುವ ಆಯ್ಕೆ ಇವುಗಳಲ್ಲಿದೆ. ಅಲ್ಲದೆ ನಾಮಿನಿಗೆ ಯೋಜನೆಯ ಖರೀದಿ ಮೊತ್ತ ಸಿಗುವಂತೆ ಸಹ ಮಾಡಬಹುದು. ಮಾಸಿಕ ಪಿಂಚಣಿ ಮೊತ್ತವು ಯೋಜನೆಯ ಆಯ್ಕೆ ಹಾಗೂ ಹೂಡಿಕೆದಾರನ ವಯಸ್ಸಿನ ಮೇಲೆ ನಿರ್ಧರಿಸಲ್ಪಡುತ್ತದೆ. ಸಂಬಳದ ಜೊತೆಗೆ ನಿಯಮಿತವಾಗಿ ಮಾಸಿಕ ಆದಾಯ ಪಡೆಯಲು ಏನು ಮಾಡಬೇಕು?

4. ಮ್ಯೂಚುವಲ್ ಫಂಡ ಡಿವಿಡೆಂಡ್ ಪಾವತಿ ಯೋಜನೆ

4. ಮ್ಯೂಚುವಲ್ ಫಂಡ ಡಿವಿಡೆಂಡ್ ಪಾವತಿ ಯೋಜನೆ

ಹಲವಾರು ಅಸೆಟ್ ಮ್ಯಾನೇಜಮೆಂಟ್ ಕಂಪನಿಗಳು ಮಾಸಿಕ ಆದಾಯ ನೀಡುವ ಡೆಬ್ಟ್ ಹಾಗೂ ಇಕ್ವಿಟಿ ವರ್ಗದ ಮ್ಯೂಚುವಲ್ ಫಂಡ ಯೋಜನೆಗಳನ್ನು ಹೊಂದಿವೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಬರುವ ಗರಿಷ್ಠ 10 ಲಕ್ಷ ರೂ.ಗಳವರೆಗಿನ ಡಿವಿಡೆಂಡ್ ತೆರಿಗೆಯಿಂದ ಮುಕ್ತವಾಗಿರುವುದು ಈ ಯೋಜನೆಯ ವೈಶಿಷ್ಟ್ಯತೆಯಾಗಿದೆ. ಆದರೆ ಫಂಡ ಆದಾಯವನ್ನು ಆಧರಿಸಿ ಡಿವಿಡೆಂಡ್ ನೀಡಲಾಗುವುದರಿಂದ ಮಾಸಿಕ ಆದಾಯದ ಮೊತ್ತಕ್ಕೆ ಖಾತರಿ ಇರುವುದಿಲ್ಲ. ಒಂದೊಮ್ಮೆ ಫಂಡ ಎನ್‌ಎವಿ ತೀರಾ ಕೆಳಮಟ್ಟಕ್ಕೆ ಕುಸಿದಲ್ಲಿ ಫಂಡ ವ್ಯಾಲ್ಯು ಬಂಡವಾಳ ಮೊತ್ತಕ್ಕೆ ಏರುವವರೆಗೂ ಡಿವಿಡೆಂಡ್ ನೀಡುವಿಕೆಯನ್ನು ಸ್ಥಗಿತಗೊಳಿಸುವ ಸಾಧ್ಯತೆಯೂ ಇರುತ್ತದೆ.

5. ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಮ್ಯೂಚುವಲ್ ಫಂಡ ಯೋಜನೆ

5. ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಮ್ಯೂಚುವಲ್ ಫಂಡ ಯೋಜನೆ

ಯಾವುದೇ ಫಂಡನಲ್ಲಿ ವರ್ಷಗಳವರೆಗೆ ನಿಯಮಿತವಾಗಿ ಹಣ ಹೂಡಿಕೆ ಮಾಡಿದ್ದಲ್ಲಿ ಹಾಗೂ ಹೂಡಿಕೆದಾರನಾಗಿಯೇ ಇದ್ದ ಸಂದರ್ಭದಲ್ಲಿ, ಸಂಗ್ರಹವಾದ ಮೊತ್ತದಿಂದ ನಿರ್ದಿಷ್ಟ ಮೊತ್ತದ ಹಣವನ್ನು ನಿಯಮಿತವಾಗಿ ಹಿಂತೆಗೆಯಬಹುದಾಗಿದೆ. ವ್ಯವಸ್ಥಿತ ಹಣ ಹಿಂಪಡೆಯುವ ಯೋಜನೆಯಂತೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ಹಣ ಸಿಗುವಂತೆ ಮಾಡಬಹುದು. ಫಂಡ ಎನ್‌ಎವಿ ಜಾಸ್ತಿ ಇದ್ದಾಗ ಕಡಿಮೆ ಯುನಿಟ್‌ಗಳನ್ನು ಮಾರಿ ಆದಾಯ ಪಡೆಯಬಹುದು. ಆದರೆ ಎನ್‌ಎವಿ ತೀರಾ ಕಡಿಮೆ ಆದಾಗ ಹೆಚ್ಚು ಪ್ರಮಾಣದ ಯುನಿಟ್‌ಗಳನ್ನು ಮಾರಬೇಕಾಗುವುದರಿಂದ ಫಂಡ ವ್ಯಾಲ್ಯು ಕುಸಿಯುವ ಅಪಾಯವಿರುತ್ತದೆ.

English summary

Except Salary, Monthly income strategies for you

Having regular monthly income – along with salary or after retirement – makes your life comfortable and allows you to make a budget for your regular expenses as well for occasional extra expenses for enjoyment.
Story first published: Monday, November 5, 2018, 8:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X