For Quick Alerts
ALLOW NOTIFICATIONS  
For Daily Alerts

ಈ ಉದ್ಯೋಗಗಳನ್ನು ಆಯ್ಕೆ ಮಾಡಿದರೆ ತಿಂಗಳಿಗೆ 1 ಲಕ್ಷ ಸಂಬಳ ಪಡೆಯಬಹುದು

ಆರಂಕಿಯ ಸಂಬಳ ಅಂದರೆ ತಿಂಗಳಿಗೆ ಒಂದು ಲಕ್ಷ ಸಂಬಳ ಪಡೆಯುವುದು ನಮ್ಮಲ್ಲಿ ಬಹುತೇಕರ ಆಸೆ. ಜೀವನದಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡುವಾಗ ಕೈಗೊಳ್ಳುವ ಅತ್ಯಂತ ಪರಿಣಾಮಕಾರಿ ನಿರ್ಧಾರಗಳಲ್ಲಿ ಇದು ಒಂದಾಗಿದೆ.

|

ಆರಂಕಿಯ ಸಂಬಳ ಅಂದರೆ ತಿಂಗಳಿಗೆ ಒಂದು ಲಕ್ಷ ಸಂಬಳ ಪಡೆಯುವುದು ನಮ್ಮಲ್ಲಿ ಬಹುತೇಕರ ಆಸೆ. ಜೀವನದಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡುವಾಗ ಕೈಗೊಳ್ಳುವ ಅತ್ಯಂತ ಪರಿಣಾಮಕಾರಿ ನಿರ್ಧಾರಗಳಲ್ಲಿ ಇದು ಒಂದಾಗಿದೆ. ಒಬ್ಬರ ಆಯ್ಕೆ ಇನ್ನೊಬ್ಬರಿಗೆ ಉತ್ತಮ ಆಯ್ಕೆ ಆಗದೆ ಇರಬಹುದು. ಅದು ಅವರವರ ಕೌಶಲ್ಯ, ಶಿಕ್ಷಣ, ವೈಯಕ್ತಿಕ ಮೌಲ್ಯಗಳನ್ನು ಆಧರಿಸಿರುತ್ತದೆ. ಅಮೆರಿಕನ್ನರು ವಾರ್ಷಿಕ ಸರಾಸರಿ 50,620 ಡಾಲರ್ ಗಳಿಸುತ್ತಾರೆ. ಆದರೆ ಕೆಲವರು ಉದ್ಯೋಗದ ಅದಾರದ ಮೇಲೆ ಇದಕ್ಕಿಂತಲೂ ದುಪ್ಪಟ್ಟು ವೇತನ ಗಳಿಸುತ್ತಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹೀಗೆ ದುಪ್ಪಟ್ಟು ವೇತನ ಗಳಿಸುವವರನ್ನು ಗಮನಿಸಿರುತ್ತೇವೆ. ಅಮೆರಿಕಾ ಹಾಗು ಭಾರತದಂತಹ ದೇಶಗಳಲ್ಲಿ ಈ ಕೆಳಗಿನ ಕ್ಷೇತ್ರಗಳಲ್ಲಿ ಹೆಚ್ಚು ಬೇಡಿಕೆ ಇದೆ. ಇಲ್ಲಿ ಯುಎಸ್/ಭಾರತ ದಲ್ಲಿ ನೀಡುವ ಸಂಬಳ ಆಧರಿಸಿ ವಿವರ ನೀಡಲಾಗಿದೆ. ಭಾರತದಲ್ಲಿ ಅತಿಹೆಚ್ಚು ಸಂಬಳ ನೀಡುವ ಉದ್ಯೋಗಗಳು ಯಾವುವು ಗೊತ್ತೆ?

ಹಾಗಿದ್ದರೆ ಯಾವ ಉದ್ಯೋಗಗಳ ಮೂಲಕ ಒಂದು ಲಕ್ಷ ಸಂಬಳ ಗಳಿಸಬಹುದು ನೋಡೋಣ ಬನ್ನಿ ...

ಮಾರ್ಕೆಟಿಂಗ್ ಮ್ಯಾನೇಜರ್

ಮಾರ್ಕೆಟಿಂಗ್ ಮ್ಯಾನೇಜರ್

> ಸರಾಸರಿ ವಾರ್ಷಿಕ ವೇತನ: $ 145,620
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಈ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ತುಂಬಾ ಬೇಡಿಕೆ ಇದ್ದು, ಭಾರತ ಕೂಡ ಉದ್ಯೋಗಾವಕಾಶ ಒದಗಿಸುತ್ತಿದೆ.
ಯಾವುದೇ ವಹಿವಾಟಿನಲ್ಲಿ ಉತ್ಪನ್ನ ಅಥವಾ ಸೇವೆ ಮಾರಾಟವಾಗಿ ಹೋದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಈ ವೃತ್ತಿಯಲ್ಲಿರುವವರು ಗ್ರಾಹಕರ ಅಂತಃಕರಣವನ್ನು ಅರಿತು ಪ್ರಲೋಭನೆಗಳನ್ನು ಒಡ್ಡಿ ಮಾರಾಟವನ್ನು ಹೆಚ್ಚಿಸಬೇಕಾಗುತ್ತದೆ. ಈ ತಂತ್ರಗಳು ಫಲ ನೀಡಿದರೆ ಹೆಚ್ಚಿನ ವೇತನ ಮಾತ್ರವಲ್ಲ, ಸಂಸ್ಥೆಯ ಉನ್ನತ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಇದಕ್ಕಾಗಿ ಮಾರುಕಟ್ಟೆಯ ಅಂತರಾಳವನ್ನು ಅರಿತು ಗ್ರಾಹಕರು ಈ ಉತ್ಪನ್ನಗಳಿಗೆ ಒಲವು ನೀಡುವಂತೆ ಉತ್ಪನ್ನ ಅಥವಾ ಸೇವೆಗಳನ್ನು ಬದಲಾವಣೆಗೊಳಪಡಿಸುವುದು ಸಹಾ ಇವರಿಗೆ ಕಾರ್ಯಗತವಾಗಿರಬೇಕಾಗುತ್ತದೆ.

ಅರಿವಳಿಕೆಶಾಸ್ತ್ರಜ್ಞರು

ಅರಿವಳಿಕೆಶಾಸ್ತ್ರಜ್ಞರು

> ಸರಾಸರಿ ವಾರ್ಷಿಕ ವೇತನ: $ 265,990
> ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ

ಸರ್ಜನ್ಸ್
> ಸರಾಸರಿ ವಾರ್ಷಿಕ ವೇತನ: $ 251,890
> ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ

ಮನೋವೈದ್ಯರು

ಮನೋವೈದ್ಯರು

> ಸರಾಸರಿ ವಾರ್ಷಿಕ ವೇತನ: $ 216,090
> ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ
ನಗರ/ಪಟ್ಟಣ ಪ್ರದೇಶಗಳಲ್ಲಿ ಮನೋವೈದ್ಯರಿಗೆ ಹೆಚ್ಚಿನ ಬೇಡಿಕೆ ಇದೆ.

ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು, ಇತರರು
> ಸರಾಸರಿ ವಾರ್ಷಿಕ ವೇತನ: $ 211,390
> ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ

ದಂತವೈದ್ಯರು, ಇತರರು ತಜ್ಞರು
> ಸರಾಸರಿ ವಾರ್ಷಿಕ ವೇತನ: $ 199,980
> ಶೈಕ್ಷಣಿಕ ಅರ್ಹತೆ: ಡಾಕ್ಟರಲ್ ಅಥವಾ ವೃತ್ತಿಪರ ಪದವಿ

ಮುಖ್ಯ ಕಾರ್ಯನಿರ್ವಾಹಕರು

ಮುಖ್ಯ ಕಾರ್ಯನಿರ್ವಾಹಕರು

> ಸರಾಸರಿ ವಾರ್ಷಿಕ ವೇತನ: $ 196,050
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
> ಪ್ರಸ್ತುತ ಅಮೆರಿಕಾದಲ್ಲಿ ೨ ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶವಿದೆ.

ಏರ್ಲೈನ್ ​​ಪೈಲಟ್, ವಿಮಾನ ಎಂಜಿನಿಯರ್

ಏರ್ಲೈನ್ ​​ಪೈಲಟ್, ವಿಮಾನ ಎಂಜಿನಿಯರ್

> ಸರಾಸರಿ ವಾರ್ಷಿಕ ವೇತನ: $ 161,280
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
> ಅಮೆರಿಕಾದಲ್ಲಿ ಒಟ್ಟು 84 ಸಾವಿರ ಉದ್ಯೋಗಗಳಿವೆ.

ಪೆಟ್ರೋಲಿಯಂ ಎಂಜಿನಿಯರ್

ಪೆಟ್ರೋಲಿಯಂ ಎಂಜಿನಿಯರ್

> ಸರಾಸರಿ ವಾರ್ಷಿಕ ವೇತನ: $ 154,780
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ

ಆರ್ಕಿಟೆಕ್ಚರಲ್ ಮತ್ತು ಎಂಜಿನಿಯರಿಂಗ್ ವ್ಯವಸ್ಥಾಪಕರು
> ಸರಾಸರಿ ವಾರ್ಷಿಕ ವೇತನ: $ 146,29
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ

 

ಕಂಪ್ಯೂಟರ್ ಮತ್ತು ಮಾಹಿತಿ ವ್ಯವಸ್ಥಾಪಕರು

ಕಂಪ್ಯೂಟರ್ ಮತ್ತು ಮಾಹಿತಿ ವ್ಯವಸ್ಥಾಪಕರು

> ಸರಾಸರಿ ವಾರ್ಷಿಕ ವೇತನ: $ 149,730
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಐಟಿ-ಬಿಟಿ ಎಲ್ಲ ಯುವಕರ ನೆಚ್ಚಿನ ಕ್ಷೇತ್ರವಾಗಿ ಮಾರ್ಪಟ್ಟಿದ್ದು, ಬಹುಬೇಡಿಕೆಯ ಉದ್ಯಮವಾಗಿದೆ. ಕಾಲೇಜು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಇದು ನೆಚ್ಚಿನ ಕ್ಷೇತ್ರ.

ಹಣಕಾಸು/ವಾಣಿಜ್ಯ ವ್ಯವಸ್ಥಾಪಕರು

ಹಣಕಾಸು/ವಾಣಿಜ್ಯ ವ್ಯವಸ್ಥಾಪಕರು

> ಸರಾಸರಿ. ವಾರ್ಷಿಕ ವೇತನ: $ 143,530
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಇಂದು ಭಾರತದಲ್ಲಿಯೂ ವಾಣಿಜ್ಯ ವಹಿವಾಟು ಅತ್ಯಂತ ಪೈಪೋಟಿ ಹೊಂದಿದ್ದು, ಈ ವೃತ್ತಿಯಲ್ಲಿರುವವರಿಗೆ ಪೈಪೋಟಿಯನ್ನು ಎದುರಿಸುವುದು ಹೇಗೆ ಎಂಬ ಸವಾಲನ್ನು ಎದುರಿಸಬೇಕಾಗುತ್ತದೆ. ಈ ವೃತ್ತಿಗೆ ಅತಿಹೆಚ್ಚು ಬುದ್ದಿ ಚಾಣಾಕ್ಷರು ಹಾಗೂ ತಾರ್ಕಿಕವಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದೆ.

ವಕೀಲರು

ವಕೀಲರು

> ಸರಾಸರಿ ವಾರ್ಷಿಕ ವೇತನ: $ 141,890
> ಶೈಕ್ಷಣಿಕ ಅರ್ಹತೆ: ಎಲ್ಎಲ್ಬಿ ಅಥವಾ ವೃತ್ತಿಪರ ಪದವಿ
ಕಾನೂನು ವೃತ್ತಿಪರರು ಖ್ಯಾತ ವಕೀಲರಿಗೆ ಉಚ್ಛಮಟ್ಟದ ನ್ಯಾಯಾಧೀಶರಾಗುವ ಅವಕಾಶ ತಾನೇ ತಾನಾಗಿ ಒದಗಿ ಬಂದಾಗ ಇದನ್ನು ಹಲವರು ನಿರಾಕರಿಸಿದ್ದಾರೆ. ಏಕೆಂದರೆ ವೃತ್ತಿಪರ ವಕೀಲರಾಗಿ ಗಳಿಸುವಷ್ಟು ವೇತನ ಉಚ್ಛನ್ಯಾಯಾಧೀಶರಿಗೆ ದೊರಕುವುದಿಲ್ಲ. ಇದು ವಾಸ್ತವ. ವೃತ್ತಿಪರ ವಕೀಲರಾಗಬೇಕಾದರೆ ಉನ್ನತ ಶಿಕ್ಷಣ, ಅಪಾರ ತಾಳ್ಮೆ, ಹಾಗೂ ಅದ್ಭುತ ವಾಕ್ಚತುರತೆಯ ಅಗತ್ಯವಿದೆ. ಈ ವೃತ್ತಿಯಲ್ಲಿ ಪಳಗುತ್ತಾ ಹೋದಂತೆ ಪ್ರತಿ ವಾದಕ್ಕೂ ಹೆಚ್ಚು ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದು.

ಮಾರಾಟದ ವ್ಯವಸ್ಥಾಪಕರು (ಸೇಲ್ಸ್ ಮ್ಯಾನೆಜರ್)

ಮಾರಾಟದ ವ್ಯವಸ್ಥಾಪಕರು (ಸೇಲ್ಸ್ ಮ್ಯಾನೆಜರ್)

> ಸರಾಸರಿ ವಾರ್ಷಿಕ ವೇತನ: $ 137,650
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಸೇಲ್ಸ್ ಮ್ಯಾನೆಜರ್ ಗಳಿಗೆ ಜಗತ್ತಿನಾದ್ಯಂತ ಬಹುಬೇಡಿಕೆ ಇದೆ. ಗ್ರಾಹಕರನ್ನು ಸೆಳೆಯುವ ಮಾರ್ಕೆಟಿಂಗ್ ಚಾಣಾಕ್ಷತನದ ಮೇಲೆ ಸಂಬಳ ಹೆಚ್ಚು ಪಡೆಯಬಹುದು.

ವೈಯಕ್ತಿಕ ಹಣಕಾಸು ಸಲಹೆಗಾರರು

ವೈಯಕ್ತಿಕ ಹಣಕಾಸು ಸಲಹೆಗಾರರು

> ಸರಾಸರಿ ವಾರ್ಷಿಕ ವೇತನ: $ 124,140
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಯಾವುದೇ ವ್ಯವಹಾರದ ಬೆಳವಣಿಗೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಹಣಕಾಸು ಸಲಹೆಗಾರರ ಪಾತ್ರ ಪ್ರಮುಖವಾಗಿದೆ. ವ್ಯವಹಾರದಲ್ಲಿನ ತೊಡಕುಗಳನ್ನು ನಿವಾರಿಸುವ ಪರಿಣತಿ ಹೊಂದಿರುವ ಇವರು ಯಾವುದೇ ಉದ್ಯಮ ಸಂಸ್ಥೆಯ ಉನ್ನತ ವಲಯದಲ್ಲಿ ಉದ್ಯೋಗಾವಕಾಶವನ್ನು ಪಡೆದಿರುತ್ತಾರೆ.

ಜಾಹೀರಾತು ಮತ್ತು ಪ್ರಚಾರದ ನಿರ್ವಾಹಕರು

ಜಾಹೀರಾತು ಮತ್ತು ಪ್ರಚಾರದ ನಿರ್ವಾಹಕರು

> ಸರಾಸರಿ ವಾರ್ಷಿಕ ವೇತನ: $ 123,880
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಜಾಹೀರಾತು ಹಾಗು ಪ್ರಚಾರ ನಿರ್ವಾಹಕರ ಪಾತ್ರದ ಬಗ್ಗೆ ನಿಮಗೆಲ್ಲ ತಿಳಿದಿದೆ. ಪ್ರತಿಯೊಂದು ಕಂಪನಿ, ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರ ಹಾಗು ಜಾಹೀರಾತಿಗಾಗಿ ತಜ್ಞರನ್ನು ನೇಮಕ ಮಾಡುತ್ತದೆ.

ಕಂಪ್ಯೂಟರ್ ಮತ್ತು ಮಾಹಿತಿ ಸಂಶೋಧನಾ ವಿಜ್ಞಾನಿ

ಕಂಪ್ಯೂಟರ್ ಮತ್ತು ಮಾಹಿತಿ ಸಂಶೋಧನಾ ವಿಜ್ಞಾನಿ

> ಸರಾಸರಿ. ವಾರ್ಷಿಕ ವೇತನ: $ 119,570
> ಶೈಕ್ಷಣಿಕ ಅರ್ಹತೆ: ಮಾಸ್ಟರ್ಸ್ ಪದವಿ

ಕಂಪ್ಯೂಟರ್ ಹಾರ್ಡ್ವೇರ್ ಎಂಜಿನಿಯರ್
> ಸರಾಸರಿ ವಾರ್ಷಿಕ ವೇತನ: $ 119,650
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ
ಮಾಹಿತಿ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿಯಂತರರು ಇದೊಂದು ನಿತ್ಯಹರಿದ್ವರ್ಣದ ಉದ್ಯೋಗವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ಕಂಪ್ಯೂಟರುಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಕಂಪ್ಯೂಟರ್ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅಗತ್ಯಕ್ಕೆ ತಕ್ಕಂತೆ ಬರೆಯುವ ನೈಪುಣ್ಯತೆಯನ್ನು ಪಡೆಯಬೇಕಾಗುತ್ತದೆ. ಈ ವೃತ್ತಿಯಲ್ಲಿರುವವರು ಹೊಸ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ, ಹೊಸ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಹಾಗೂ ನಿರ್ವಹಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ.

ಏರೋಸ್ಪೇಸ್ ಎಂಜಿನಿಯರ್ಗಳು

ಏರೋಸ್ಪೇಸ್ ಎಂಜಿನಿಯರ್ಗಳು

> ಸರಾಸರಿ ವಾರ್ಷಿಕ ವೇತನ: $ 115,300
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ

ಸಿಸ್ಟಮ್ಸ್ ಸಾಫ್ಟ್ವೇರ್ ಡೆವಲಪರ್
> ಸರಾಸರಿ ವಾರ್ಷಿಕ ವೇತನ: $ 111,780
> ಶೈಕ್ಷಣಿಕ ಅರ್ಹತೆ: ಬ್ಯಾಚುಲರ್ ಪದವಿ

 

ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರು

ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರು

> ಸರಾಸರಿ ವಾರ್ಷಿಕ ವೇತನ: $ 112,650
> ಶೈಕ್ಷಣಿಕ ಅರ್ಹತೆ: ಮಾಸ್ಟರ್ ಡಿಗ್ರಿ
ಅರ್ಥಶಾಸ್ತ್ರಜ್ಞರು ಹಾಗು ರಾಜಕೀಯ ವಿಶ್ಲೇಷಕರು ರಾಜಕೀಯ ವ್ಯವಸ್ಥೆ ಹಾಗೂ ಅರ್ತವ್ಯವಸ್ಥೆಯಲ್ಲಿ ಘಟಿಸಬಹುದಾದ ಬದಲಾವಣೆಗಳ ಬಗ್ಗೆ ರಾಜಕೀಯ, ಆರ್ಥಿಕ ವಿಶ್ಲೇಷಕರು ಸಂಶೋಧನೆಗಳನ್ನು ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ರಾಜಕೀಯ ಪಕ್ಷಗಳು ಇಂಥ ವಿಶ್ಲೇಷಕರ ಸೇವೆಯನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ರಾಜ್ಯಶಾಸ್ತ್ರ ಅಥವಾ ಸಾರ್ವಜನಿಕ ಆಡಳಿತ ವಿಷಯದಲ್ಲಿ ಡಾಕ್ಟರೇಟ್ ಹೊಂದಿರುವ ಪೊಲಿಟಿಕಲ್ ಪಂಡಿತರು ಸರಕಾರದ ಆಡಳಿತ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳಲ್ಲಿ ಉನ್ನತ ಮಟ್ಟದ ಉದ್ಯೋಗವನ್ನು ಪಡೆಯಬಹುದಾಗಿದೆ. ಅತಿ ಹೆಚ್ಚು ವೇತನ ಪಾವತಿಸುವ ಟಾಪ್ 10 ಉದ್ಯೋಗಗಳು

English summary

There are many jobs with six figure (1 lakh) salaries

Choosing a career is one of the most consequential decisions many will make in their lifetime. There are many jobs with six figure (1 lakh) salaries .
Story first published: Thursday, December 6, 2018, 10:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X