For Quick Alerts
ALLOW NOTIFICATIONS  
For Daily Alerts

  ನೀವು ಅತೀ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಬೆಸ್ಟ ಬಿಸಿನೆಸ್ ಐಡಿಯಾ

  |

  ಹೊಸ ಉದ್ಯಮ ಆರಂಭಿಸುವಾಗ ತುಂಬಾ ಬಂಡವಾಳ ಬೇಕಾಗುತ್ತದೆ ಎಂದು ತುಂಬಾ ಜನ ಅಂದುಕೊಂಡಿರುತ್ತಾರೆ. ಆದರೆ ಹಲವು ಉದ್ಯಮಗಳನ್ನು ತುಂಬಾ ಕಡಿಮೆ ಇಲ್ಲವೇ ಶೂನ್ಯ ಬಂಡವಾಳದಲ್ಲಿ ಆರಂಭಿಸಬಹುದಾಗಿದೆ.
  ನಿಮ್ಮ ಆಸಕ್ತಿಯ ಕ್ಷೇತ್ರ ಯಾವುದು ಎಂದು ನಿಮ್ಮನ್ನ ನೀವೇ ಪ್ರಶ್ನಿಸಿಕೊಳ್ಳಿ. ಯಾರ ಕೈ ಕೆಳಗೆ ಕೆಲಸ ಮಾಡಲು ಇಚ್ಛಿಸದೆ ಸ್ವತಂತ್ರವಾಗಿ ಜೀವನ ನಡೆಸಬೇಕೆಂದುಕೊಂಡಿದ್ದಿರಾ? ಹಾಗಿದ್ದರೆ ನಿಮಗಾಗಿ ಇಲ್ಲಿ ಕೆಲವೊಂದು ಬಿಸಿನೆಸ್ ಐಡಿಯಾಗಳನ್ನು ನೀಡಲಾಗಿದೆ. ಮುಂದೆ ಓದಿ..

  ಶಿಕ್ಷಕ/ಟ್ಯೂಶನ್

  ನಿಮಗೆ ಯಾವುದಾದರೂ ವಿಷಯದಲ್ಲಿ ಪರಿಣಿತಿ ಹಾಗು ಕಲಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದನ್ನು ವೃತ್ತಿಯಾಗಿ ಬಳಸಬಹುದು. ನೀವು ಮನೆಯಲ್ಲಿ ಅಥವಾ ನಿಮ್ಮ ವಿದ್ಯಾರ್ಥಿಗಳ ಮನೆಗಳಲ್ಲಿ ನಿಯಮಿತ ತರಗತಿಗಳನ್ನು ನಡೆಸಿ ಕೈ ತುಂಬಾ ಹಣ ಗಳಿಸಬಹುದು. ಇಂದು ಶೈಕ್ಷಣಿಕ ಗುಣಮಟ್ಟ ಹೆಚ್ಚಿರುವುದರಿಂದ ಪ್ರತೀ ಪೋಷಕರು ತಮ್ಮ ಮಕ್ಕಳು ಅತ್ಯುತ್ತಮವಾಗಿ ಓದಬೇಕೆಂದು ಬಯಸುವುದು ಸಹಜ. ಇದರಿಂದಾಗಿ ಅವರು ತಮ್ಮ ಮಗುವಿಗೆ ಉತ್ತಮ ತರಬೇತಿ ಕ್ಲಾಸುಗಳಿಗೆ ಆದ್ಯತೆಯನ್ನು ನೀಡುತ್ತಾರೆ. ಇದರಿಂದಾಗಿ ಇಂದು ಎಲ್ಲಾ ಕಡೆ ಬಹು ಕೋಚಿಂಗ್ ತರಗತಿಗಳು ಯಶಸ್ವಿಯಾಗುವುದನ್ನು ಕಾಣಬಹುದಾಗಿದೆ. ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 20 ಮ್ಯಾನುಫ್ಯಾಕ್ಚರಿಂಗ್ ಉದ್ಯಮ

  ಭಾಷಾಂತರಕಾರ

  ದ್ವಿಭಾಷೆ ಅಥವಾ ಬಹುಭಾಷೆ ಬರುವವರು ಈ ಉದ್ಯಮ ಆಯ್ಕೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಬರಹಗಾರರಿಗೆ ತುಂಬಾ ಬೇಡಿಕೆ ಇದೆ. ಅನೇಕ ಕಂಪನಿಗಳು ಅಂತರ್ಜಾಲದಲ್ಲಿ ಪ್ರಾಜೆಕ್ಟ್ ಗಳನ್ನು ಒದಗಿಸುತ್ತವೆ. ಭಾಷಾಂತರ ಸೇವೆಗಳಿಗಾಗಿ ಪ್ರಕಾಶಕರನ್ನು ಸಂಪರ್ಕಿಸುತ್ತೀರಿ. ಬಂಡವಾಳ ಇಲ್ಲದೆ ನಡೆಸಬಹುದಾದ 10 ಆನ್‌ಲೈನ್ ಉದ್ಯೋಗಗಳು

  ಛಾಯಾಗ್ರಾಹಕ

  ನಿಮ್ಮಲ್ಲಿ ಫೋಟೋಗ್ರಫಿ ಕೌಶಲ್ಯ ಇದ್ದರೆ ನಿಮ್ಮ ಸುತ್ತಮುತ್ತಲಿನವರ ಹಾಗು ಮದುವೆ, ಹಬ್ಬ ಹರಿದಿನ ಸಮಾರಂಭಗಳ ಭಾವಚಿತ್ರಗಳನ್ನು ನೀವು ತೆಗೆಯಬಹುದು. ಛಾಯಾಗ್ರಾಹಕರಿಗೆ ಉತ್ತಮ ಕ್ಯಾಮರಾ, ಟ್ರೈಪಾಡ್ ಮತ್ತು ಉಪಕರಣಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಆದಾಗ್ಯೂ, ಇದು ಭವಿಷ್ಯದಲ್ಲಿ ಒಂದು ದೊಡ್ಡ ಉದ್ಯಮವಾಗಬಹುದು.

  ವರ್ಚುವಲ್ ಅಸಿಸ್ಟಂಟ್ (Virtual assistant)

  ಇಂದು ಅಂತರ್ಜಾಲದ ಮೂಲಕ ಕಾರ್ಯನಿರ್ವಹಿಸುತ್ತಿರುವ ನೂರಾರು ಸಂಸ್ಥೆಗಳಿಗೆ ತಮ್ಮದೇ ಆದ ಕಛೇರಿ ಇರುವುದೇ ಇಲ್ಲ. ಈ ಸಂಸ್ಥೆಗಳು ನೀಡುವ ವಿವಿಧ ಸೇವೆಗಳನ್ನು ಜಗತ್ತಿನ ಇತರ ಭಾಗಗಳಿಗೆ ವಿಸ್ತರಿಸಲು ಇವರಿಗೆ ಸಹಾಯಕರ ನೆರವು ಬೇಕಾಗಿರುತ್ತದೆ. ಈ ಕೆಲಸಗಳನ್ನು ಮನೆಯಲ್ಲಿದ್ದುಕೊಂಡೇ ಅಂತರ್ಜಾಲದ ಮೂಲಕವೇ ನಿರ್ವಹಿಸಬಹುದು. ಉದಾಹರಣೆಗೆ ಗ್ರಾಹಕ ಸೇವಾ ಕರ್ತವ್ಯಗಳು, ದೂರವಾಣಿ ಕರೆಗಳನ್ನು ಸ್ವೀಕರಿಸಿ ಸೂಕ್ತ ಮಾಹಿತಿ ಒದಗಿಸುವುದು, ವ್ಯಕ್ತಿಗಳ ನಡುವಣ ಭೇಟಿಯ ಸಮಯಗಳನ್ನು ನಿಗದಿಪಡಿಸುವುದು, ಇ-ಮೇಲ್ ಗಳನ್ನು ವಿಶ್ಲೇಷಿಸಿ ಅಗತ್ಯ, ಅನಗತ್ಯವುಗಳನ್ನು ವಿಂಗಡಿಸಿ ವಿಲೇವಾರಿ ಮಾಡುವುದು ಇತ್ಯಾದಿ ಕೆಲಸಗಳನ್ನು ನಿವರ್ಹಿಸಲು ಈ ವೃತ್ತಿ ನೆರವಾಗುತ್ತದೆ. ಕೇವಲ ಇಂಟರ್ನೆಟ್ ಮೂಲಕ ಅಥವಾ ಫೋನ್ ಮೂಲಕ ಯುವ ಉದ್ಯಮಿಗಳು ವರ್ಚುವಲ್ ಸಹಾಯಕನಾಗಿ ಕೆಲಸ ಆರಭೀಸಬಹುದು. ಪಾರ್ಟ್-ಟೈಮ್ ಉದ್ಯೋಗದ ಮೂಲಕ ಹೆಚ್ಚು ಹಣ ಗಳಿಸಬೇಕೆ?

  ಬ್ಲಾಗಿಂಗ್

  ಬ್ಲಾಗಿಂಗ್ ಕೂಡ ಉತ್ತಮ ಆದಾಯ ತಂದುಕೊಡಬಲ್ಲ ವ್ಯವಹಾರ ಆಗಿದೆ. ಒಂದು ರೂಪಾಯಿಯ ಖರ್ಚು ಇಲ್ಲದೆ ನೀವು ಬ್ಲಾಗ್ ಖಾತೆಯನ್ನು ತೆರೆಯಬಹುದು. ಬ್ಲಾಗಿಂಗ್ ಮೂಲಕ ಹೆಚ್ಚು ಹಣ ಸಂಪಾದಿಸಬೇಕೆಂದರೆ ಹೆಚ್ಚು ತಾಳ್ಮೆ, ಕಠಿಣ ಪರಿಶ್ರಮ ಬೇಕಾಗುತ್ತದೆ. ಯಾವ ವಿಷಯದಲ್ಲಿ ನೀವು ಪರಿಣಿತಿ ಪಡೆದಿರುತ್ತಿರಿ ಅದರಲ್ಲಿ ನೀವು ಬ್ಲಾಗಿಂಗ್ ಮಾಡಬಹುದು. ಈಗಾಗಲೇ ನೂರಾರು ಜನ ಬ್ಲಾಗರ್ಸ್ ಇದ್ದರೂ ಸಹ ನೀವು ನಿಮ್ಮದೆ ಆದ ಛಾಪನ್ನು ಮೂಡಿಸಬಹುದು. ಸಿಎಂಎಸ್, ಡೊಮೈನ್, ಎಸ್ ಇಒ ನಂತಹ ಕೆಲ ಪ್ರಮುಖ ಅಂಶಗಳನ್ನು ನೀವು ಬ್ಲಾಗಿಂಗ್ ಸಮಯದಲ್ಲಿ ಕಲಿಯಬಹುದು. ಇದು ಶೂನ್ಯ ಬಂಡವಾಳದ ಉದ್ಯಮವಾಗಿದೆ.

  ಕಂಟೆಂಟ್ ಬರಹಗಾರ

  ಕಂಟೆಂಟ್ ಕಂಪನಿಗಳು ಮತ್ತು ವೆಬ್ಸೈಟ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ವಿಷಯ ಬೇಕು. ಇತ್ತೀಚಿನ ದಿನಗಳಲ್ಲಿ ತುಂಬಾ ಬೇಡಿಕೆ ಇರುವ ಫ್ರೀಲ್ಯಾನ್ಸ್ ಬರಹಗಾರರಾಗಿ ವ್ಯವಹಾರ ಪ್ರಾರಂಭಿಸುವುದನ್ನು ಪರಿಗಣಿಸಬಹುದು. ಇದಕ್ಕಾಗಿ ಕಂಪನಿಗಳು ಪ್ರತಿಯೊಂದು ಪ್ರಾಜೆಕ್ಟ್ ಅಥವಾ ಪ್ರತಿ ಪದಕ್ಕೆ ಅನುಗುಣವಾಗಿ ಪಾವತಿಸುತ್ತಾರೆ. ಆದ್ದರಿಂದ ನಿಮ್ಮ ಗಳಿಕೆಯು ಬದಲಾಗಬಹುದು.

  ಡೈರೆಕ್ಟ್ ಮಾರ್ಕೆಟರ್

  ಸ್ವತಂತ್ರ ಮಾರಾಟ ಪ್ರತಿನಿಧಿಗಳು ಬ್ರ್ಯಾಂಡ್, ಉತ್ಪನ್ನ ಅಥವಾ ಬಿಸಿನೆಸ್ ಸ್ಟ್ರಕ್ಚರ್ ಬಗ್ಗೆ ಚಿಂತೆ ಮಾಡಬೇಕಿಲ್ಲ. ನೀವು ಜನರೊಂದಿಗೆ ಬೆರೆತು ಮಾತನಾಡುವ ಕಲೆ ಹೊಂದಿದವರಾದರೆ ಈ ಸಾಮಾಜಿಕ ವ್ಯವಹಾರವು ನಿಮಗಾಗಿ. ನೀವು ಸೇರುವ ಕಂಪನಿ ಮತ್ತು ನಿಮ್ಮ ಮಾರಾಟ ಕಲೆಯ ಆಧಾರದ ಮೇಲೆ ಲಾಭಗಳು ಬದಲಾಗುತ್ತವೆ. ಅತಿಕಡಿಮೆ ಬಂಡವಾಳದಲ್ಲಿ ಪ್ರತಿಯೊಬ್ಬರು ಈ ಉದ್ಯಮಗಳನ್ನು ಪ್ರಾರಂಭಿಸಬಹುದು

  ಗ್ರಾಫಿಕ್ ಡಿಸೈನರ್/ವೆಬ್ ಡೆವಲಪರ್(Graphic designer/web developer)

  ಒಂದು ವೇಳೆ ನೀವು ಉತ್ತಮ ಗ್ರಾಫಿಕ್ ಕಲಾವಿದರಾಗಿದ್ದು, ಕಂಪ್ಯೂಟರಿನಲ್ಲಿ ಗ್ರಾಹಕರ ಮನಸೆಳೆಯುವಂತಹ ಚಿತ್ರಣಗಳನ್ನು ನಿರ್ಮಿಸಬಲ್ಲ ಚಾಕಚಕ್ಯತೆ ಹೊಂದಿದ್ದರೆ ಅಥವಾ ಈ ಬಗ್ಗೆ ಕೋಡ್ (ಸಂಕೇತಭಾಷೆ) ಬರೆಯುವ ಸಾಮರ್ಥವಿದ್ದರೆ ನೀವು ಗಂಟೆಗಳ ಲೆಕ್ಕದಲ್ಲಿ ಹಣ ಗಳಿಸಲು ಸಾಧ್ಯ. ಇಂದು ಅಂತರ್ಜಾಲದಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಸಂಭಾವನೆ ಸಿಗುವಂತಹ ಕೆಲಸವನ್ನು ನೀವೇ ಆಯ್ದುಕೊಂಡು ನಿಮಗೆ ಸೂಕ್ತವಾಗುವ ಸಮಯದಲ್ಲಿ ನಿರ್ವಹಿಸಿ ಉತ್ತಮ ಜೀವನ ನಡೆಸಬಹುದು.

  ಸಲಹೆಗಾರ (Consultant)

  ನಮಗೆಲ್ಲಾ ಎಷ್ಟೋ ವಿಷಯದಲ್ಲಿ ಸಲಹೆಗಳು ಬೇಕಾಗಿರುತ್ತದೆ. ಆರೋಗ್ಯ, ಹಣಕಾಸು, ವ್ಯಾಪಾರ, ಭವಿಷ್ಯ, ಉದ್ಯೋಗ ಮೊದಲಾದ ಹತ್ತು ಹಲವು ವಿಷಯಗಳಲ್ಲಿ ತಜ್ಞರ ಅಭಿಮತ ಬೇಕಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ನಮ್ಮ ಮನೆ ವೈದ್ಯರೇ ಹೆಚ್ಚಿನ ವಿವರ ಒದಗಿಸಬಹುದು. ಇಂದು ನೂರಾರು ವಿಷಯಗಳ ತಜ್ಞರು ಅಂತರ್ಜಾಲದ ಮೂಲಕ ಲಭ್ಯವಿದ್ದು, ಕೊಂಚ ಮೊತ್ತಕ್ಕೆ ಅಗತ್ಯವಾದ ಮತ್ತು ಸೂಕ್ತವಾದ ಸಲಹೆ ನೀಡುತ್ತಾರೆ. ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ವಿಷಯದಲ್ಲಿ ಇತರರಿಗೆ ಮಾರ್ಗದರ್ಶನವಾಗಬಹುದಾದ ನೈಪುಣ್ಯತೆ ಇದ್ದರೆ ಇದನ್ನು ನೀವು ನಗದೀಕರಿಸಿಕೊಳ್ಳಬಹುದು ಹಾಗೂ ನಿಮ್ಮಿಂದಾಗಿ ಅಗತ್ಯವುಳ್ಳವರಿಗೂ ನೆರವಾದ ಆತ್ಮತೃಪ್ತಿಯೂ ದೊರಕುತ್ತದೆ. ಈ ಸೇವೆ ನೀಡುತ್ತಿರುವ ಸಂಸ್ಥೆಯೊಂದು ಹೇಳಿಕೊಳ್ಳುವ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸೇವೆಯನ್ನು ಒದಗಿಸುವ ಪುಟ್ಟ ಸಂಸ್ಥೆಯಿಂದ ಇಂದು ಸಲಹೆ ಕೇಳಬಯಸುವವರಿಗೆ ಸೇವೆ ಒದಗಿಸುವ ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದು ಇಂದು ಸಂಸ್ಥೆಯ ಲಾಂಛನವೇ ಗ್ರಾಹಕರಿಗೆ ಭರವಸೆಯ ಸಂಕೇತವಾಗಿದೆ. ಹೆಚ್ಚಿನವರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ತಮ್ಮ ತಂಡಗಳಿಗೆ ಸಲಹೆ ನೀಡಲು ನಮ್ಮಲ್ಲಿ ಬರುತ್ತಿದ್ದಾರೆ.

  ಈವೆಂಟ್ ಮ್ಯಾನೇಜ್ಮೆಂಟ್

  ಇತರ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ದೊಡ್ಡ ಸಂದರ್ಭಗಳನ್ನು ಯೋಜಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುವ ಆಸಕ್ತಿ ಇರುವವರಿಗೆ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಪರಿಪೂರ್ಣ ಸಣ್ಣ ವ್ಯಾಪಾರ ಕಲ್ಪನೆಯಾಗಿದೆ.
  ಈವೆಂಟ್ ಮ್ಯಾನೇಜ್ಮೆಂಟ್ ಸೇವೆ ಇಂದಿನ ಉದ್ಯಮದಲ್ಲಿ ಖಂಡಿತವಾಗಿಯೂ ಅವಶ್ಯಕತೆಯಿರುತ್ತದೆ. ಕಂಪನಿಗಳು ನಿರಂತರವಾಗಿ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಮತ್ತು ಸೇವೆಯನ್ನು ಪಡೆಯಲು ಇಂತಹ ಸಂದರ್ಭಗಳನ್ನು ಆಯೋಜಿಸುತ್ತಾ ಇರುತ್ತವೆ. ಇಂತಹ ಸಂದರ್ಭಗಳನ್ನು ಯಶಸ್ವಿಗೊಳಿಸಲು ಅವರು ಯಾವಾಗಲೂ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಪರಿಣಿತರ ಮೊರೆಹೋಗುತ್ತಾರೆ ಆದುದುರಿಂದ ಈ ವ್ಯವಹಾರವು ಉತ್ತಮವಾದ ವ್ಯವಹಾರ ಕಲ್ಪನೆಯೆನಿಸಿದೆ. ಇವು ಅತ್ಯಂತ ಯಶಸ್ಸು ಕಂಡಿರುವ 10 ಬಿಸಿನೆಸ್ ಐಡಿಯಾ

  English summary

  Best Businesses Ideas, You Can Start with LITTLE INVESTMENT

  If you’re looking to start your own business with LITTLE INVESTMENT, here are some ideas to get you started.
  Story first published: Monday, February 25, 2019, 14:51 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more