For Quick Alerts
ALLOW NOTIFICATIONS  
For Daily Alerts

ನೀವು ಫೆಸ್ಬುಕ್ ಬಳಕೆದಾರರೇ? ಫೇಸ್ಬುಕ್ ಮೂಲಕ ಹಣ ಗಳಿಸುವ 10 ಮಾರ್ಗಗಳು ಇಲ್ಲಿವೆ..

|

ಫೇಸ್ಬುಕ್ ಇವತ್ತು ವಿಶ್ವಾದ್ಯಂತ ಅತಿ ಜನಪ್ರಿಯವಾದ ಹಾಗೂ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ ಆಗಿದೆ. ಬಹುತೇಕ ಸ್ಮಾರ್ಟಫೋನ್ ಬಳಕೆದಾರರ ಬೆಳಗು ಆರಂಭವಾಗುವುದು ಫೇಸ್ಬುಕ್ ನೋಡುವುದರಿಂದಲೇ. ಹಾಗೆಯೇ ರಾತ್ರಿ ಸಹ ಫೇಸ್ಬುಕ್ ನಿಂದಲೇ ಕೊನೆಗೊಳ್ಳುತ್ತದೆ. ಕಳೆದೊಂದು ದಶಕದಲ್ಲಿ ಫೇಸ್ಬುಕ್ ಎಂಬುದು ಭಾರತದಲ್ಲಿ ಮನೆಮಾತಾಗಿದ್ದು, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಫೇಸ್ಬುಕ್‌ನಲ್ಲಿ ಖಾತೆ ಹೊಂದಿದ್ದಾರೆ ಎಂದರೆ ಇದರ ಅಗಾಧತೆಯನ್ನು ಅರ್ಥ ಮಾಡಿಕೊಳ್ಳಬಹುದು.

ಪ್ರಸ್ತುತ ಫೇಸ್ಬುಕ್ 2.2 ಬಿಲಿಯನ್ ಸಕ್ರಿಯ ಬಳಕೆದಾರರನ್ನು (Monthly Active Users-MAUs) ಹೊಂದಿದ್ದು ಈ ಸಂಖ್ಯೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಮನೆಯಿಂದಲೇ ಹಣ ಸಂಪಾದಿಸಬೇಕೆ? ಅಮೆಜಾನ್‌ನ 7 ಆನ್ಲೈನ್ ಜಾಬ್‌ಗಳು ಇಲ್ಲಿವೆ..

 

ತಮ್ಮ ಗೆಳೆಯರು ಹಾಗೂ ಬಂಧು ಬಾಂಧವರೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುವಂತೆ ಮಾಡಿರುವ ಫೇಸ್ಬುಕ್ ಹಲವಾರು ವಿಧಾನಗಳ ಮೂಲಕ ಹಣ ಸಂಪಾದನೆ ಮಾಡುವ ಅವಕಾಶಗಳನ್ನೂ ನೀಡುತ್ತಿದೆ. ಈಗ ನೀವು ಪರೋಕ್ಷ ಅಥವಾ ಅಪರೋಕ್ಷವಾಗಿ ಫೇಸ್ಬುಕ್ ಮೂಲಕ ಹಣ ಗಳಿಸಬಹುದಾಗಿದೆ.

ನೀವು ಫೇಸ್ಬುಕ್ ಖಾತೆಯೊಂದನ್ನು ಹೊಂದಿದ್ದು ಒಂದಿಷ್ಟು ಕ್ರಿಯಾಶೀಲತೆ, ಹೊಸ ಮಾರ್ಗದಲ್ಲಿ ಚಿಂತಿಸುವ ಮನೋಭಾವನೆ ಹೊಂದಿದ್ದಲ್ಲಿ ನೀವೂ ಸಹ ಇಲ್ಲಿ ಹಣ ಗಳಿಸಬಹುದಾಗಿದೆ.

ಹಣ ಗಳಿಸಲು ಉತ್ತಮ ಮಾರ್ಗ ಫೇಸ್ಬುಕ್

ಹಣ ಗಳಿಸಲು ಉತ್ತಮ ಮಾರ್ಗ ಫೇಸ್ಬುಕ್

ವರ್ತಮಾನದಲ್ಲಿ ಸರ್ಚ್ ಎಂಜಿನ್ ಗೂಗಲ್ ಹಾಗೂ ವಿಡಿಯೋ ಪ್ಲಾಟಫಾರ್ಮ ಯೂಟ್ಯೂಬ್‌ಗಳನ್ನೂ ಹಿಮ್ಮೆಟ್ಟಿಸಿ ಮುಂದುವರೆಯುತ್ತಿರುವ ಫೇಸ್ಬುಕ್ ವಿಶ್ವದ ಮೂರನೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ ಆಗಿದೆ. ಅಂದರೆ ಫೇಸ್ಬುಕ್‌ನಲ್ಲಿ ನೀವೇನೇ ಮಾಡಿದರೂ ಅದು ಇಡೀ ವಿಶ್ವದಲ್ಲಿ ಸಂಚಲನ ಸೃಷ್ಟಿಸುವಂತೆ ಮಾಡಬಹುದಾಗಿದೆ.

ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

ಫೇಸ್ಬುಕ್‌ನಿಂದ ಹಣ ಗಳಿಕೆ ಹೇಗೆ?

ಫೇಸ್ಬುಕ್‌ನಿಂದ ಹಣ ಗಳಿಕೆ ಹೇಗೆ?

ಫೇಸ್ಬುಕ್‌ನ ಪ್ರಬಲವಾದ ಸಾಧನಗಳನ್ನು ಬಳಸಿಕೊಂಡು ಹೇಗೆ ಹಣ ಸಂಪಾದಿಸಬಹುದು ಎಂಬ ಬಗ್ಗೆ ನಿಮ್ಮಲ್ಲಿಯೂ ಕುತೂಹಲವಿರಬಹುದು. ಫೇಸ್ಬುಕ್ ಮೂಲಕ ಹಣ ಸಂಪಾದನೆಗೆ ಹಲವಾರು ಮಾರ್ಗಗಳಿದ್ದು, ಅಂಥ ಪ್ರಮುಖ ೧೦ ವಿಧಾನಗಳನ್ನು ನಾವಿಲ್ಲಿ ತಿಳಿಸಿದ್ದೇವೆ. ನೀವೂ ಸಹ ಇವನ್ನು ತಿಳಿದುಕೊಂಡು ಶ್ರೀಮಂತರಾಗಲು ಪ್ರಯತ್ನಿಸಬಹುದು.

ಫೇಸ್ಬುಕ್‌ನಿಂದ ಹಣ ಗಳಿಕೆಯ 10 ಪ್ರಮುಖ ವಿಧಾನಗಳು ಇಲ್ಲಿವೆ ನೋಡಿ..

1. ಫೇಸ್ಬುಕ್ ಮಾರ್ಕೆಟ್ ಪ್ಲೇಸ್
 

1. ಫೇಸ್ಬುಕ್ ಮಾರ್ಕೆಟ್ ಪ್ಲೇಸ್

ಫೇಸ್ಬುಕ್ ಮಾರ್ಕೆಟ್ ಪ್ಲೇಸ್ ಎಂಬುದು ಹಣ ಗಳಿಕೆಗಾಗಿ ಫೇಸ್ಬುಕ್ ನೀಡುತ್ತಿರುವ ಒಂದು ಉಚಿತ ಸೌಲಭ್ಯವಾಗಿದೆ. ಇಲ್ಲಿ ನೀವು ನಿಮ್ಮ ಹಲವಾರು ವಸ್ತು ಹಾಗೂ ಸೇವೆಗಳನ್ನು ಮಾರಾಟಕ್ಕಿಡಬಹುದು ಮತ್ತು ಅವನ್ನು ನಿಮ್ಮ ಗುಂಪಿನಲ್ಲಿ ಪ್ರಮೋಟ್ ಮಾಡಬಹುದು.

ಈ ವ್ಯವಸ್ಥೆಯ ಮೂಲಕ ನೀವು ಏಕಕಾಲಕ್ಕೆ ಸಾವಿರಾರು ಜನರನ್ನು ತಲುಪಬಹುದು ಹಾಗೂ ನಿಮ್ಮ ಗೆಳೆಯರು ಸಹ ನಿಮ್ಮ ವಸ್ತುಗಳು ಹಾಗೂ ಸೇವೆಗಳನ್ನು ಮಾರಾಟ ಮಾಡಲು ಸಹಾಯ ಮಾಡಬಲ್ಲರು. ಇದರಲ್ಲಿ ಫೇಸ್ಬುಕ್ ನಿಯಮಾವಳಿಗಳ ಪ್ರಕಾರ ಯಾವುದೇ ವಸ್ತು ಅಥವಾ ಸೇವೆಗಳನ್ನು ಮಾರಾಟ ಮಾಡಲು ಅವಕಾಶವಿದೆ.

ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳ ರೀತಿಯಲ್ಲಿಯೇ ಇದು ಕೆಲಸ ಮಾಡುತ್ತದೆ. ಆದರೆ ಫೇಸ್ಬುಕ್ ಮೂಲಕ ಮಾರಾಟ ತುಂಬಾ ಪರಿಣಾಮಕಾರಿಯಾಗಿದ್ದು, ನಿಮ್ಮ ವಸ್ತುಗಳನ್ನು ಕೊಳ್ಳಬಯಸುವವರು ಅದರ ಬಗ್ಗೆ ಚಿತ್ರಗಳನ್ನು, ವಿಡಿಯೋಗಳನ್ನು ನೋಡಿ ನಿಮ್ಮೊಂದಿಗೆ ಚರ್ಚಿಸಿ ದರ ಅಂತಿಮಗೊಳಿಸಿಕೊಂಡು ಅವನ್ನು ಕೊಳ್ಳಬಹುದಾಗಿದೆ.

2. ಫೇಸ್ಬುಕ್‌ನಲ್ಲಿ ಅಫಿಲಿಯೇಟ್ ಮಾರ್ಕೆಟಿಂಗ್

2. ಫೇಸ್ಬುಕ್‌ನಲ್ಲಿ ಅಫಿಲಿಯೇಟ್ ಮಾರ್ಕೆಟಿಂಗ್

ಯಾವುದಾದರೂ ಕಂಪನಿ ಅಥವಾ ಬ್ರ್ಯಾಂಡಿನ ವಸ್ತುಗಳು, ಸೇವೆ ಅಥವಾ ಆ ಕಂಪನಿಯ ಇನ್ನಾವುದೋ ಉತ್ಪನ್ನವನ್ನು ನೀವು ನಿಮ್ಮ ಫೇಸ್ಬುಕ್ ಪೇಜ್ ಅಥವಾ ಗುಂಪಿನಲ್ಲಿ ಪ್ರಮೋಟ್ ಮಾಡುವ ಪ್ರಕ್ರಿಯೆಯಾಗಿದೆ. ದೈತ್ಯ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್, ಫ್ಲಿಪಕಾರ್ಟ್, ವಿ ಕಮೀಶನ್, ಶಾದಿ ಡಾಟ್ ಕಾಂ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಮೋಶನ್‌ಗೆ ಬಳಕೆದಾರರಿಗೆ ಹಣ ನೀಡುತ್ತವೆ.

ಇದಕ್ಕಾಗಿ ನೀವು ಮೊದಲು ಈ ಕಂಪನಿಗಳ ಅಫಿಲಿಯೇಟ್ ಮಾರ್ಕೆಟಿಂಗ್‌ಗಾಗಿ ರಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಅವರ ಉತ್ಪನ್ನಗಳನ್ನು ನಿಮ್ಮ ಪೇಜ್ ಅಥವಾ ಗ್ರೂಪ್‌ನಲ್ಲಿ ಶೇರ್ ಮಾಡಬೇಕು. ಪ್ರತಿಬಾರಿ ಬಳಕೆದಾರರು ಆ ಪೋಸ್ಟ್ ಅಥವಾ ಜಾಹಿರಾತಿನ ಲಿಂಕ್ ಕ್ಲಿಕ್ ಮಾಡಿ ವಸ್ತುಗಳನ್ನು ಕೊಂಡಾಗ ನಿಮಗೆ ಕೆಲ ಪ್ರಮಾಣದ ಹಣ ಸಿಗಲಾರಂಭಿಸುತ್ತದೆ.

3. ಫೇಸ್ಬುಕ್‌ನಲ್ಲಿ ನಿಮ್ಮ ವ್ಯಾಪಾರ, ವ್ಯವಹಾರ ಬೆಳೆಸುವುದು

3. ಫೇಸ್ಬುಕ್‌ನಲ್ಲಿ ನಿಮ್ಮ ವ್ಯಾಪಾರ, ವ್ಯವಹಾರ ಬೆಳೆಸುವುದು

ಮನೆಯಿಂದಲೇ ಮಾಡುವಂಥ ಚಿಕ್ಕ ಬಿಸಿನೆಸ್‌ನಿಂದ ಹಿಡಿದು ಜಾಗತಿಕ ಮಟ್ಟದ ಬ್ಯಾಂಕಿಂಗ್ ಕಂಪನಿಗಳನ್ನು ಸಹ ಹೊಂದಿರುವ ಏಕೈಕ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ ಆಗಿ ಫೇಸ್ಬುಕ್ ಹೊರಹೊಮ್ಮಿದೆ.

ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ಜನ ಯಾವುದೋ ಟ್ರೇನಿಂಗ್, ಸಲಹೆ, ಮನೆಯಲ್ಲಿ ತಯಾರಿಸಿದ ವಸ್ತುಗಳ ಮಾರಾಟ, ವಿಶಿಷ್ಟವಾಗಿ ಸಿದ್ಧಪಡಿಸಿದ ಉಡುಪುಗಳು ಅಥವಾ ಆಭರಣಗಳು ಹೀಗೆ ಹಲವಾರು ಉತ್ಪನ್ನಗಳನ್ನು ಫೇಸ್ಬುಕ್ ಮೂಲಕ ಮಾರಾಟ ಮಾಡಿ ಯಶಸ್ವಿಯಾಗುತ್ತಿದ್ದಾರೆ. ಹಲವಾರು ವಿಧಾನಗಳ ಮೂಲಕ ನೀವು ನಿಮ್ಮ ಬಳಕೆದಾರರನ್ನು ಸಂಪರ್ಕಿಸಬಹುದಾಗಿದ್ದು, ಫೇಸ್ಬುಕ್ ನ ಮೆಸೆಂಜರ್ ಸರ್ವಿಸ್ ಮೂಲಕ ನೀವು ನೇರವಾಗಿ ಬಳಕೆದಾರರನ್ನು ಸಂಪರ್ಕಿಸಬಹುದಾಗಿದೆ. https://business.facebook.com/

4. ಫೇಸ್ಬುಕ್ ಕಂಟೆಂಟ್ ತಯಾರಿಸುವುದು

4. ಫೇಸ್ಬುಕ್ ಕಂಟೆಂಟ್ ತಯಾರಿಸುವುದು

ಫೇಸ್ಬುಕ್ ತನ್ನ ಆಪ್ 22ಸೋಶಿಯಲ್ ಮೂಲಕ ಮಾರಾಟ ಮಾಡಲು ಸೋಶಿಯಲ್ ಕಂಟೆಂಟ್ ತಯಾರಿಸಬಲ್ಲ ವಿಶಿಷ್ಟ ಕಲೆ ಹಾಗೂ ನೈಪುಣ್ಯತೆ ಹೊಂದಿರುವ ಜನರಿಗಾಗಿ ಹಲವಾರು ಅವಕಾಶಗಳನ್ನು ನೀಡುತ್ತಿದೆ. ಪಿಡಿಎಫ್ ಫೈಲ್‌ಗಳು, ವಿಡಿಯೋಗಳು ಹಾಗೂ ಆಡಿಯೋಗಳನ್ನು ಇದು ಒಳಗೊಂಡಿದೆ.

ಅಲ್ಲದೆ 22ಸೋಶಿಯಲ್ ಪ್ಲಾಟಫಾರ್ಮ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ ಮೇಲೆ ವ್ಯಾಪಾರ ಮಾಡಲು ಬಯಸುವವರಿಗಾಗಿಯೇ ಆನ್ಲೈನ್ ಟ್ಯೂಟೋರಿಯಲ್ ಸಹ ಈಗ ಲಭ್ಯವಿದೆ.

ಇದನ್ನೆಲ್ಲ ಮಾಡಲು ಬಯಸುವಿರಾದರೆ ನೀವು ಫೇಸ್ಬುಕ್ ಖಾತೆ, ಉಚಿತ 22ಸೋಶಿಯಲ್ ಆಪ್ ಖಾತೆ, ಪ್ರಮಾಣೀಕರಿಸಿದ ಪೇಪಾಲ್ ಖಾತೆ ಹಾಗೂ ಉಚಿತ ಅಥವಾ ಪಾವತಿಸಿದ ಡ್ರಾಪಬಾಕ್ಸ್, ವಿಮೇಯೊ, ಯೂಟ್ಯೂಬ್, ಗೂಗಲ್ ಡ್ರೈವ್, ಸೌಂಡ್ ಕ್ಲೌಡ್ ಅಥವಾ ಇಂಥ ಯಾವುದಾದರೂ ಡಿಜಿಟಲ್ ಹಾಸ್ಟಿಂಗ್ ಪ್ಲಾಟಫಾರ್ಮನಲ್ಲಿ ಖಾತೆ ಹೊಂದಿರಬೇಕಾಗುತ್ತದೆ.

5. ಫೇಸ್ಬುಕ್ ಲೈಕ್ಸ್ ಮಾರಾಟ ಮಾಡಿಯೂ ಹಣ ಗಳಿಸಬಹುದು

5. ಫೇಸ್ಬುಕ್ ಲೈಕ್ಸ್ ಮಾರಾಟ ಮಾಡಿಯೂ ಹಣ ಗಳಿಸಬಹುದು

ಫೇಸ್ಬುಕ್ ಲೈಕ್ಸ್ ಮಾರಾಟ ಮಾಡುವಿಕೆಯು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಹಲವಾರು ಫೋರಂಗಳಲ್ಲಿ ಫೇಸ್ಬುಕ್ ಲೈಕ್ಸ್‌ಗಳನ್ನು ಮಾರಾಟವನ್ನು ಪ್ರಮೋಟ್ ಮಾಡಲಾಗುತ್ತಿದೆಯಾದರೂ ಕೆಲವರು ಇದನ್ನು ಅಕ್ರಮ ಎಂದು ಹೇಳುತ್ತಾರೆ. ಅದೇನೇ ಇದ್ದರೂ ಬೇರೆಯವರ ಪೇಜ್ ಒಂದನ್ನು ನಿಮ್ಮ ಫ್ರೆಂಡ್ಸ್‌ಗೆ ಕಳಿಸಿ ಪ್ರಮೋಟ್ ಮಾಡಲು ಹಲವಾರು ಕಂಪನಿಗಳು ದುಡ್ಡು ನೀಡುತ್ತಿರುವುದು ಮಾತ್ರ ಸತ್ಯ.

ನೀವು ಪ್ರಮೋಟ್ ಮಾಡಿದ ಪೇಜ್ ಅನ್ನು ನಿಮ್ಮ ಗೆಳೆಯರು ಲೈಕ್ ಮಾಡಿದರೆ ಸಾಕು. ಇತ್ತೀಚಿನ ಸಂಶೋಧನಾ ವರದಿಯೊಂದರ ಪ್ರಕಾರ ಪೇಜ್ ಒಂದಕ್ಕೆ ಪ್ರತಿ 1000 ಫೇಸ್ಬುಕ್ ಲೈಕ್ಸ್ ನೀಡಲು 75 ಯುಎಸ್ ಡಾಲರ್‌ಗಳವರೆಗೆ ಶುಲ್ಕ ಪಡೆಯಲಾಗುತ್ತಿದೆಯಂತೆ. ಫೀವರ್ ಪ್ಲಾಟಫಾರ್ಮ ಮೇಲೆ ಸಹ ಇದನ್ನು ಮಾರ್ಕೆಟ್ ಮಾಡಲಾಗುತ್ತಿದೆ. https://www.npr.org/sections/money/2012/05/16/152736671/this-guy-will-sell-you-sell-you-1-000-facebook-likes

6. ಇನಫ್ಲುಯೆನ್ಸರ್ ಮಾರ್ಕೆಟಿಂಗ್ ಆನ್ ಫೇಸ್ಬುಕ್

6. ಇನಫ್ಲುಯೆನ್ಸರ್ ಮಾರ್ಕೆಟಿಂಗ್ ಆನ್ ಫೇಸ್ಬುಕ್

ಪ್ರಭಾವ ಬೀರುವ ವ್ಯಕ್ತಿಗಳ ಫೇಸ್ಬುಕ್ ಪೇಜ್ ಮೂಲಕ ಮಾರಾಟ ಮಾಡುವಿಕೆಯನ್ನು ಇನಫ್ಲುಯೆನ್ಸರ್ ಮಾರ್ಕೆಟಿಂಗ್ ಎಂದು ಕರೆಯಲಾಗುತ್ತದೆ. ಭಾರಿ ಸಂಖ್ಯೆಯ ಫಾಲೋವರ್ಸ್ ಹಾಗೂ ಗೆಳೆಯರನ್ನು ಹೊಂದಿರುವವರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ತೀರಾ ಧಾರ್ಮಿಕ ಹಾಗೂ ರಾಜಕೀಯವಾಗಿ ಸೂಕ್ಷ್ಮ ವಿಚಾರಗಳ ಪ್ರತಿಪಾದಕರು ತಮ್ಮನ್ನು ಬೇರೆಯವರು ಫಾಲೋ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿರುತ್ತಾರೆ. ಸೂಕ್ಷ್ಮ ಅಥವಾ ವಿವಾದಾತ್ಮಕ ಪೋಸ್ಟ್‌ಗಳಿಂದ ಉಂಟಾಗಬಹುದಾದ ಸಮಸ್ಯೆಗಳಿಂದ ದೂರವಿರಲು ಹೀಗೆ ಮಾಡಲಾಗುತ್ತದೆ.

ಆದಾಗ್ಯೂ ಫೇಸ್ಬುಕ್ ವಲಯದಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಸ್ ಹಾಗೂ ಹೆಚ್ಚು ಗೆಳೆಯರನ್ನು ಹೊಂದಿರುವ ವ್ಯಕ್ತಿಗಳನ್ನು ಸಂಪರ್ಕಿಸುವ ಇನಫ್ಲುಯೆನ್ಸರ್ ಮಾರ್ಕೆಟರ್ಸ್ (https://www.adweek.com/digital/liz-gottbrecht-mavrck-guest-post-facebook-paid-influencer-marketing-features/) ತಮ್ಮ ಯಾವುದೋ ನಿರ್ದಿಷ್ಟ ವಿಚಾರಧಾರೆ ಅಥವಾ ಉತ್ಪನ್ನವನ್ನು ಪ್ರಮೋಟ್ ಮಾಡುವಂತೆ ಕೇಳುತ್ತಾರೆ ಹಾಗೂ ಇದಕ್ಕಾಗಿ ದೊಡ್ಡ ಮೊತ್ತದ ಹಣ ಸಹ ನೀಡುತ್ತಾರೆ.

ಹಲವಾರು ದೇಶಗಳಲ್ಲಿ ಚುನಾವಣಾ ಸಂದರ್ಭಗಳಲ್ಲಿ ಈ ಇನಫ್ಲುಯೆನ್ಸರ್ ಮಾರ್ಕೆಟಿಂಗ್ ಪರಿಣಾಮ ಬೀರಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ವಿಧಾನ ತನಿಖೆಗೆ ಒಳಪಟ್ಟಿದೆ.

ಆದಾಗ್ಯೂ ಕೇವಲ ಉತ್ಪನ್ನಗಳನ್ನು ನಿಮ್ಮ ಫಾಲೋವರ್ಸ್ ಮೂಲಕ ಮಾರಾಟ ಮಾಡಲು ಅವಕಾಶ ಒದಗಿಸುವುದು ಅಷ್ಟೊಂದು ಅಪಾಯಕಾರಿಯೇನಲ್ಲ.

7. ಫೇಸ್ಬುಕ್ ಜಾಹೀರಾತುಗಳ ಮೂಲಕ ಸಂಪಾದನೆ

7. ಫೇಸ್ಬುಕ್ ಜಾಹೀರಾತುಗಳ ಮೂಲಕ ಸಂಪಾದನೆ

ವೈಯಕ್ತಿಕ ಹಾಗೂ ಕಾರ್ಪೊರೇಟ್ ಬಳಕೆದಾರರಿಗಾಗಿ ಫೇಸ್ಬುಕ್ ತನ್ನ ಫೇಸ್ಬುಕ್ ಆಡ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ನೀವು ನಿಮ್ಮ ಉತ್ಪನ್ನಗಳನ್ನು ನಿರ್ದಿಷ್ಟ ವಯಸ್ಸಿನ, ಸ್ಥಳದ ಅಥವಾ ಇನ್ನಾವುದಾದರೂ ಮಾನದಂಡಗಳನ್ನು ಆಧರಿಸಿದ ಬಳಕೆದಾರರನ್ನು ನೇರವಾಗಿ ಗುರಿಯಾಗಿಸಿಕೊಳ್ಳಬಹುದು.

ಮನೆಯಿಂದಲೇ ನಡೆಸಲಾಗುವ ಯಾವುದೋ ಒಂದು ವ್ಯವಹಾರವನ್ನು ನೀವು ಹೊಂದಿದ್ದಲ್ಲಿ ಅದನ್ನು ಫೇಸ್ಬುಕ್ ಆಡ್ಸ್ ಮೂಲಕ ಜಾಹೀರಾತು ಪ್ರದರ್ಶಿಸಿ ಹಣ ಗಳಿಸಬಹುದು. ನಿಮ್ಮ ಗುರಿಯ ನಿರ್ದಿಷ್ಟ ಬಳಕೆದಾರರು ಹಾಗೂ ಉತ್ಪನ್ನಗಳನ್ನು ಆಧರಿಸಿ ಇದಕ್ಕಾಗಿ ಫೇಸ್ಬುಕ್‌ನಲ್ಲಿ ಉಚಿತ ಹಾಗೂ ಪಾವತಿಸಬಹುದಾದ ಪ್ಯಾಕೇಜ್‌ಗಳಿವೆ.

ಅಲ್ಲದೆ ತಮ್ಮ ಗುರುತನ್ನು ಗೌಪ್ಯವಾಗಿಡಲು ಬಯಸುವ ಕಂಪನಿಗಳ ಉತ್ಪನ್ನಗಳನ್ನು ಸಹ ನೀವು ನಿಮ್ಮ ಫೇಸ್ಬುಕ್ ಆಡ್ಸ್ ಮೂಲಕ ಪ್ರಮೋಟ್ ಮಾಡಬಹುದು. ಉದಾಹರಣೆಗೆ ಹಲವಾರು ದೊಡ್ಡ ಕಂಪನಿಗಳು ತಮಗಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ತಮ್ಮ ಗುರುತನ್ನು ಗೌಪ್ಯವಾಗಿಡಲು ಬಯಸುತ್ತವೆ. ಇಂಥ ಅವಕಾಶಗಳನ್ನು ಬಲಸಿಕೊಂಡು ಅವರ ಪರವಾಗಿ ಜಾಹೀರಾತು ಪ್ರದರ್ಶಿಸಿ ಹಣ ಸಂಪಾದಿಸಬಹುದಾಗಿದೆ.

8. ಫೇಸ್ಬುಕ್ ಖಾತೆ ಅಥವಾ ಪೇಜ್‌ಗಳ ನಿರ್ವಹಣೆ

8. ಫೇಸ್ಬುಕ್ ಖಾತೆ ಅಥವಾ ಪೇಜ್‌ಗಳ ನಿರ್ವಹಣೆ

ದೊಡ್ಡ ಕಂಪನಿಗಳು ಅಥವಾ ಸೆಲೆಬ್ರಿಟಿಗಳ ಫೇಸ್ಬುಕ್ ಖಾತೆ ಅಥವಾ ಪೇಜ್‌ಗಳನ್ನು ನಿರ್ವಹಣೆ ಮಾಡುವುದು ಮನೆಯಿಂದಲೇ ನಿರ್ವಹಿಸಬಹುದಾದ ಕೆಲಸವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ.

ಇಂಥ ನಿರ್ವಹಣೆ ಕೆಲಸಗಳನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕವಾಗಿ ಮಾಡಬಹುದಾಗಿದೆ. ಸೋಶಿಯಲ್ ಮೀಡಿಯಾ ಮ್ಯಾನೇಜರ್, ಫೇಸ್ಬುಕ್ ಅಸಿಸ್ಟಂಟ್, ಸೋಶಿಯಲ್ ಮೀಡಿಯಾ ಸ್ಪೆಷಲಿಸ್ಟ್ ಎಂಬ ಹುದ್ದೆಗಳೇ ಇದಕ್ಕಾಗಿ ಇವೆ ಎಂದರೆ ನೀವು ನಂಬಲೇಬೇಕು.

9. ಫೇಸ್ಬುಕ್ ಗ್ರೂಪ್‌ಗಳು

9. ಫೇಸ್ಬುಕ್ ಗ್ರೂಪ್‌ಗಳು

ಹಲವಾರು ಕಾರಣಗಳಿಗಾಗಿ ಜನ ಫೇಸ್ಬುಕ್ ಗ್ರೂಪ್ ಪೇಜ್‌ಗಳನ್ನು ಆರಂಭಿಸುತ್ತಾರೆ. ಈ ಗ್ರೂಪ್‌ಗಳಲ್ಲಿ ಓಪನ್ ಹಾಗೂ ಕ್ಲೋಸ್ಡ್ ಎಂಬ ಎರಡು ರೀತಿಗಳಿವೆ. ಓಪನ್ ಗ್ರೂಪ್‌ನಲ್ಲಿ ಯಾರು ಬೇಕಾದರೂ ತಕ್ಷಣ ಸೇರಿಕೊಳ್ಳಬಹುದು. ಇನ್ನು ಕ್ಲೋಸ್ಡ್ ಗ್ರೂಪ್‌ನಲ್ಲಿ ಆಮಂತ್ರಣದ ಮೇರೆಗೆ ಅಥವಾ ಒಪ್ಪಿಗೆಯ ಮೇರೆಗೆ ಸೇರಿಕೊಳ್ಳಬಹುದು.

ಫೇಸ್ಬುಕ್ ಗ್ರೂಪ್ ರಚಿಸಿದಾಗ ನೀವು ಯಾವುದೋ ಒಂದು ನಿರ್ದಿಷ್ಟ ವಿಚಾರಧಾರೆಯನ್ನು ಪ್ರಭಾವಶಾಲಿಯಾಗಿ ಪ್ರಮೋಟ್ ಮಾಡಬಹುದು. ಅಲ್ಲದೆ ರಾಜಕೀಯ, ಧಾರ್ಮಿಕ ವಿಚಾರಧಾರೆಗಳನ್ನು ಅಥವಾ ಯಾವುದೋ ವ್ಯವಹಾರವನ್ನು ಸಹ ಬೆಳೆಸಬಹುದು. ಇನ್ನು ಬೇರೆ ಗ್ರೂಪ್ ಜನರನ್ನು ನಿಮ್ಮ ಗ್ರೂಪ್‌ಗೆ ಸೇರುವಂತೆ ನೀವು ಆಹ್ವಾನ ನೀಡಬಹುದು. ನೀವು ಬಯಸಿದ ಸಂಖ್ಯೆಯ ಸದಸ್ಯರನ್ನು ಹೊಂದಿದ ಬಳಿಕ ಬೇಕಾದರೆ ಗ್ರೂಪ್ ಅನ್ನು ಕ್ಲೋಸ್ಡ್ ಗ್ರೂಪ್ ಆಗಿ ಪರಿವರ್ತಿಸಬಹುದು. ಕ್ಲೋಸ್ಡ್ ಗ್ರೂಪ್ ಮೂಲಕ ನೀವು ಯಾವುದೇ ವಿಚಾರಧಾರೆಯನ್ನು ಪ್ರಭಾವಶಾಲಿಯಾಗಿ ಪ್ರಚಾರ ಮಾಡಬಹುದು.

10. ನೇರ ಜಾಹೀರಾತು ಪ್ರದರ್ಶಿಸುವಿಕೆ

10. ನೇರ ಜಾಹೀರಾತು ಪ್ರದರ್ಶಿಸುವಿಕೆ

ಡೈರೆಕ್ಟ್ ಅಡ್ವರಟೈಸಿಂಗ್ ಅಥವಾ ನೇರ ಜಾಹೀರಾತು ಮೂಲಕ ನೀವು ನಿಮ್ಮ ಸಣ್ಣ ವ್ಯಾಪಾರದ ಬಗ್ಗೆ ನಿಮ್ಮ ಪೇಜ್‌ನಲ್ಲಿಯೇ ಜಾಹೀರಾತು ಹಾಕಬಹುದು. ಉದ್ಯೋಗವಕಾಶ, ಉತ್ಪನ್ನಗಳ ಮಾರಾಟ, ಸೇವೆಗಳು ಹೀಗೆ ಯಾವುದರ ಬಗ್ಗೆಯಾದರೂ ಜಾಹೀರಾತು ನೀಡಬಹುದು. ಹಲವಾರು ಸಣ್ಣ ಕಂಪನಿಗಳು ಫೇಸ್ಬುಕ್ ಪೇಜ್‌ಗಳನ್ನು ತಮ್ಮ ವ್ಯವಹಾರ ವೃದ್ಧಿಗೆ ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆ.

ಇನ್ನು ಹಲವಾರು ಉದ್ಯೋಗಾಕಾಂಕ್ಷಿಗಳು ನೇಮಕಾತಿ ಅವಕಾಶಗಳಿಗಾಗಿ ಕಂಪನಿಗಳ ಫೇಸ್ಬುಕ್ ಪೇಜ್ ನೋಡುತ್ತಲೇ ಇರುತ್ತಾರೆ.

ಕೊನೆ ಮಾತು

ಕೊನೆ ಮಾತು

ಹಲವಾರು ಹೊರಗಿನ ಆಪ್‌ಗಳನ್ನು ನಿಮ್ಮ ಫೇಸ್ಬುಕ್ ಖಾತೆಗೆ ನೇರವಾಗಿ ಲಿಂಕ್ ಮಾಡುವ ಅವಕಾಶವಿದ್ದು, ನೀವು ಆನ್ಲೈನ್ ಸ್ಟೋರ್ ಆರಂಭಿಸಬಹುದು ಅಥವಾ ಸದಸ್ಯರನ್ನು ಹೆಚ್ಚಿಸಿಕೊಳ್ಳಬಹುದು. ಆದಾಗ್ಯೂ ಮಾರ್ಚ್ 2018ರಲ್ಲಿ ಮಾಹಿತಿ ಸೋರಿಕೆಯಾದ ಆರೋಪಗಳ ಹಿನ್ನೆಲೆಯಲ್ಲಿ ಫೇಸ್ಬುಕ್, ಆಪ್ ಲಿಂಕ್ ಮಾಡುವ ವ್ಯವಸ್ಥೆಯನ್ನು ಮರುಪರಿಶೀಲನೆ ಮಾಡುತ್ತಿದ್ದು, ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲು ಮುಂದಾಗಿದೆ.

English summary

10 Easy Ways to Earn Money from Facebook

Facebook is a household name around the world. This social networking platform has over 2.2 billion registered Monthly Active Users (MAUs) and the number is growing rapidly.
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more