For Quick Alerts
ALLOW NOTIFICATIONS  
For Daily Alerts

ಮನೆಯಿಂದಲೇ ಹಣ ಸಂಪಾದಿಸಬೇಕೆ? ಅಮೆಜಾನ್‌ನ 7 ಆನ್ಲೈನ್ ಜಾಬ್‌ಗಳು ಇಲ್ಲಿವೆ..

ಅಮೆಜಾನ್ ಎಂಬುದು ಕೇವಲ ಸರಕು ಮಾರಾಟ ಪೋರ್ಟಲ್ ಅಲ್ಲ. ಇದರ ವ್ಯವಹಾರದ ಮೇಲೆ ಲಕ್ಷಾಂತರ ಜನತೆ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಮನಸ್ಸು ಮಾಡಿದರೆ ನೀವೂ ಕೂಡ ಅಮೆಜಾನ್ ಜೊತೆ ಕೆಲಸ ಮಾಡಿ ಹಣ ಸಂಪಾದಿಸಬಹುದಾಗಿದೆ.

|

ಅಮೆಜಾನ್ ಹೆಸರು ಕೇಳದವರು ಬಹುಶಃ ಯಾರೂ ಇಲ್ಲ. ಇಂದು ಜಗತ್ತಿನಲ್ಲಿ ಆನ್ಲೈನ್ ಮಾರಾಟ ಕ್ಷೇತ್ರದ ದೈತ್ಯನಾಗಿ ಬೆಳೆದಿರುವ ಕಂಪನಿ ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ವೆಬ್ಸೈಟ್ ಆಗಿದೆ. ಯುರೋಪ್ ಮೂಲದ ಅಂಕಿ ಅಂಶಗಳ ಪೋರ್ಟಲ್ ಸ್ಟ್ಯಾಟಿಸ್ಟಿಯಾ ಹಾಗೂ ಖ್ಯಾತ ಸುದ್ದಿ ಸಂಸ್ಥೆ ಸಿಎನ್‌ಎನ್ ಮುಂತಾದುವುಗಳ ಸರ್ವೆಯಲ್ಲಿ ಅಮೆಜಾನ್ ಕಂಪನಿ ಉನ್ನತ ಸ್ಥಾನದಲ್ಲಿರುವುದು ಖಚಿತಪಟ್ಟಿದೆ. ಜಗತ್ತಿನಾದ್ಯಂತ ಅರ್ಧ ಮಿಲಿಯನ್‌ಗೂ ಹೆಚ್ಚು ಜನ ಕಂಪನಿಗಾಗಿ ಕೆಲಸ ಮಾಡುತ್ತಾರೆ ಎಂಬ ಅಂದಾಜು ಮಾಡಲಾಗಿದೆ.
ಇನ್ನು ಅಮೆಜಾನ್ ಎಂಬುದು ಕೇವಲ ಸರಕು ಮಾರಾಟ ಪೋರ್ಟಲ್ ಅಲ್ಲ. ಇದರ ವ್ಯವಹಾರದ ಮೇಲೆ ಲಕ್ಷಾಂತರ ಜನತೆ ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಮನಸ್ಸು ಮಾಡಿದರೆ ನೀವೂ ಕೂಡ ಅಮೆಜಾನ್ ಜೊತೆ ಕೆಲಸ ಮಾಡಿ ಹಣ ಸಂಪಾದಿಸಬಹುದಾಗಿದೆ. ನೀವು ಜಗತ್ತಿನ ಯಾವುದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಯಾವುದೇ ಅಡೆತಡೆ ಇಲ್ಲದೆ ಅಮೆಜಾನ್ ಜೊತೆ ಕೈಜೋಡಿಸಬಹುದಾಗಿದೆ. ಹೆಚ್ಚು ಸಂಬಳ ಪಡೆಯಲು ಇಚ್ಛಿಸುವವರಿಗೆ 6 ಕೆಲಸಗಳು

ಅಮೆಜಾನ್ ಜೊತೆ ಹಣ ಸಂಪಾದಿಸಲು 7 ಆನ್ಲೈನ್ ಕೆಲಸಗಳು
ತನ್ನ ಬಹು ವಿಶಾಲವಾದ ವ್ಯವಹಾರವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಅಮೆಜಾನ್ ಫ್ರೀಲಾನ್ಸರ್, ಕುಶಲಕರ್ಮಿಗಳು, ಬರಹಗಾರರು, ಬ್ಲಾಗರ್ಸ್, ಯೂಟ್ಯೂಬರ್ಸ್ ಹಾಗೂ ಇನ್ನೂ ಕೆಲವರ ನೆರವನ್ನು ಪಡೆದುಕೊಳ್ಳುತ್ತದೆ. ಇಂಥ ಕೆಲಸಗಳಲ್ಲಿ ನೀವೂ ತೊಡಗಿಸಿಕೊಂಡು ಉತ್ತಮ ಸಂಪಾದನೆ ಮಾಡಬಹುದು. ಯಾವೆಲ್ಲ ರೀತಿಯ ಆನ್ಲೈನ್ ಕೆಲಸಗಳು ಅಮೆಜಾನ್‌ನಲ್ಲಿ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳೋಣ.

ಅಮೆಜಾನ್ ಅಫಿಲಿಯೇಟ್ ಮಾರ್ಕೆಟಿಂಗ್

ಅಮೆಜಾನ್ ಅಫಿಲಿಯೇಟ್ ಮಾರ್ಕೆಟಿಂಗ್

ನಿಮ್ಮ ಫೇಸ್ಬುಕ್ ಪೇಜ್, ಬ್ಲಾಗ್ ಅಥವಾ ವೆಬ್ಸೈಟ್ ಮೂಲಕ ಅಮೆಜಾನ್ ಮೇಲಿನ ಸರಕುಗಳನ್ನು ಪ್ರಮೋಟ್ ಮಾಡುವುದೇ ಅಫಿಲಿಯೇಟ್ ಮಾರ್ಕೆಟಿಂಗ್ ಆಗಿದೆ. ಈ ರೀತಿ ಕೆಲಸ ಮಾಡಿ ಹಣ ಸಂಪಾದಿಸಬೇಕಾದರೆ ಮೊದಲಿಗೆ ನೀವು ಅಮೆಜಾನ್‌ನೊಂದಿಗೆ ರಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
ಪ್ರಸ್ತುತ ಜಗತ್ತಿನ 11 ದೇಶಗಳಲ್ಲಿ ಅಮೆಜಾನ್ ಅಫಿಲಿಯೇಟ್ ಮಾರ್ಕೆಟಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್‌ಗೆ ಭೇಟಿ ನೀಡುವ ವೀಕ್ಷಕರ ಸಂಖ್ಯೆ ಹಾಗೂ ರೀತಿಯನ್ನು ಆಧರಿಸಿ ನೀವು ಒಂದಕ್ಕಿಂತ ಹೆಚ್ಚು ದೇಶಗಳಿಗಾಗಿ ಅಮೆಜಾನ್ ಅಫಿಲಿಯೇಟ್ ಮಾರ್ಕೆಟಿಂಗ್ ರಜಿಸ್ಟರ್ ಮಾಡಿಕೊಳ್ಳಬಹುದು. ನಿಮ್ಮ ಬ್ಲಾಗ್, ಫೇಸ್ಬುಕ್ ಪೇಜ್, ವೆಬ್ಸೈಟ್ ಅಥವಾ ಇಮೇಲ್ ಮೂಲಕ ಅಮೆಜಾನ್‌ನಲ್ಲಿನ ಸರಕುಗಳನ್ನು ಪ್ರಮೋಟ್ ಮಾಡುವುದೇ ಮುಖ್ಯ ಕೆಲಸವಾಗಿದೆ.
ಪ್ರತಿಬಾರಿ ಬಳಕೆದಾರನೊಬ್ಬ ನಿಮ್ಮ ಬ್ಲಾಗ್ ಅಥವಾ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ಸರಕನ್ನು ಕೊಂಡಲ್ಲಿ ಅಮೆಜಾನ್ ನಿಮಗೆ ಶೇ.4 ರಿಂದ 12 ರಷ್ಟು ಕಮಿಷನ್ ನೀಡುತ್ತದೆ.

ಅಮೆಜಾನ್ ಎಂ ಟರ್ಕ್ (Amazon mTurk)

ಅಮೆಜಾನ್ ಎಂ ಟರ್ಕ್ (Amazon mTurk)

ಅಮೆಜಾನ್ ಕಂಪನಿಯು ಅಮೆಜಾನ್ ಮೆಕ್ಯಾನಿಕಲ್ ಟರ್ಕ್ ಎಂಬ ಕೆಲಸದ ರೀತಿಯನ್ನು ನಡೆಸುತ್ತದೆ. ಯಾವುದೇ ಕೆಲಸ ಮಾಡಲು ಮನುಷ್ಯ ಬುದ್ಧಿ ಬಲದ ಅವಶ್ಯಕತೆ ಬಂದಾಗ ಅದಕ್ಕಾಗಿ ಕಂಪನಿಗಳು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅಮೆಜಾನ್ ಎಂ ಟರ್ಕ್‌ನೊಂದಿಗೆ ರಜಿಸ್ಟರ್ ಮಾಡಿಕೊಂಡಿರುವ ಜನರು ಅಮೆಜಾನ್ ಸಹವರ್ತಿ ಕಂಪನಿಗಳಿಗಾಗಿ ಹಲವಾರು ರೀತಿಯ ಕೆಲಸಗಳನ್ನು ಮಾಡಿಕೊಡುತ್ತಾರೆ.
ವೆಬ್ಸೈಟ್‌ನಲ್ಲಿ ಇರಬಹುದಾದ ತಪ್ಪು ಅಥವಾ ಡುಪ್ಲಿಕೇಟ್ ಚಿತ್ರಗಳನ್ನು ಸರಿಪಡಿಸುವ ಡೇಟಾ ಎಂಟ್ರಿ ಕೆಲಸ, ಸರಕು ಸೇವೆಗಳ ಬಗ್ಗೆ ವಿಡಿಯೋ ಸೇರಿಸುವುದು ಅಥವಾ ಸರಕುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡುವುದು, ಔಟ್ ಡೇಟೆಡ್ ಸರಕುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಹೀಗೆ ಹಲವಾರು ರೀತಿಯ ಕೆಲಸಗಳನ್ನು ಇಲ್ಲಿ ಮಾಡಲಾಗುತ್ತದೆ.
ಆಡಿಯೊ ಡೇಟಾಗಳ ಟ್ರಾನಸ್ಕ್ರಿಪ್ಷನ್, ಡೇಟಾ ಅನಾಲಿಸಿಸ್ ಸೇರಿದಂತೆ ಹಲವಾರು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸಲು ಸಹ ಎಂ ಟರ್ಕ್ ನೆರವಾಗಿದೆ ಎಂದು ಸ್ವತಃ ಅಮೆಜಾನ್ ಹೇಳಿಕೊಂಡಿದೆ.

ಅಮೆಜಾನ್ ಕಿಂಡಲ್

ಅಮೆಜಾನ್ ಕಿಂಡಲ್

ಬರಹಗಾರರು, ಕವಿಗಳು, ಚಿಂತಕರು, ಉದ್ಯಮ ವಲಯದ ಪರಿಣಿತರು ಹಾಗೂ ಇನ್ನೂ ಹಲವಾರು ಕ್ಷೇತ್ರದ ಪರಿಣಿತರು ತಮ್ಮ ಬರಹಗಳನ್ನು ಪ್ರಕಟಿಸಲು ಅಮೆಜಾನ್ ಕಿಂಡಲ್ ಅತ್ಯುತ್ತಮವಾದ ಪ್ಲಾಟಫಾರ್ಮ ಆಗಿದೆ. ಅಮೆಜಾನ್ ಕಿಂಡಲ್ ಡೈರೆಕ್ಟ್ ಪಬ್ಲಿಶಿಂಗ್ ವ್ಯವಸ್ಥೆಯ ಮೂಲಕ ನೀವು ೫ ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪುಸ್ತಕವೊಂದನ್ನು ನೀವು ಆನ್ಲೈನ್ ಪಬ್ಲಿಷ್ ಮಾಡಬಹುದಾಗಿದೆ.
ಮುಂದಿನ 24 ರಿಂದ 48 ಗಂಟೆಗಳಲ್ಲಿ ನಿಮ್ಮ ಪುಸ್ತಕವು ವಿಶ್ವಾದ್ಯಂತ ಕಿಂಡಲ್ ಮೂಲಕ ಮಾರಾಟಕ್ಕೆ ಲಭ್ಯವಿರುತ್ತದೆ. ಕಾಮಿಕ್ಸ್, ಕತೆ, ತಾಂತ್ರಿಕ, ಶಿಕ್ಷಣ, ರೋಮಾನ್ಸ್, ವಿಜ್ಞಾನ ಕತೆಗಳು, ರೋಚಕ ಕತೆಗಳು, ಅಡಲ್ಟ್ ವಿಷಯ ಹೀಗೆ ಹಲವಾರು ಜನಪ್ರಿಯ ವಿಭಾಗಗಳಲ್ಲಿ ಕಿಂಡಲ್ ಪುಸ್ತಕಗಳನ್ನು ಪ್ರಕಟಿಸುತ್ತದೆ.

ಅಮೆಜಾನ್ ಮೇಲೆ ಮಾರಾಟ

ಅಮೆಜಾನ್ ಮೇಲೆ ಮಾರಾಟ

ಕುಶಲ ಕರ್ಮಿಗಳು, ಚಿಲ್ಲರೆ ಮಾರಾಟಗಾರರು, ವಿದ್ಯಾರ್ಥಿಗಳು, ಹೌಸ್ ವೈಫ್ ಹಾಗೂ ಇನ್ನಿತರ ಉದ್ಯಮಿಗಳು ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಅಮೆಜಾನ್ ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ. ಅಮೆಜಾನ್‌ನ ಸೆಲ್ಲರ್ ಆಗಿ ರಜಿಸ್ಟರ್ ಮಾಡಿಕೊಂಡು ನೀವೂ ಸೆಲ್ಲರ್ ಆಗಬಹುದು.
ಕುಶಲಕರ್ಮಿಗಳು ತಾವು ತಯಾರಿಸಿದ ವರ್ಣಚಿತ್ರಗಳು, ಸರಕುಗಳು ಸೇರಿದಂತೆ ಇನ್ನಿತರ ಕಲಾತ್ಮಕ ವಸ್ತುಗಳನ್ನು ಅಮೆಜಾನ್ ಮೇಲೆ ಮಾರಾಟಕ್ಕಿಡಬಹುದು. ಪುಸ್ತಕ ಬರೆಯುವ ಹವ್ಯಾಸವಿರುವ ವಿದ್ಯಾರ್ಥಿಗಳು ಅಥವಾ ಇನ್ನಾರೇ ಆದರೂ ತಮ್ಮ ಪುಸ್ತಕಗಳನ್ನು ಅಮೆಜಾನ್ ಮೇಲೆ ಮಾರಾಟಕ್ಕಿಟ್ಟು ಹಣ ಸಂಪಾದಿಸಬಹುದು. ಬಟ್ಟೆ ಹೊಲಿಗೆ, ಅಡುಗೆ, ಆಭರಣ ಮುಂತಾದುವುಗಳನ್ನು ತಯಾರಿಸುವ ಕೌಶಲವಿರುವ ಹೌಸವೈಫ್‌ಗಳು ಸಹ ಅಮೆಜಾನ್ ಮೂಲಕ ಅನ್ಲೈನ್ ಮಾರಾಟ ಮಾಡಿ ಹಣ ಸಂಪಾದಿಸುವ ಅವಕಾಶಗಳಿವೆ.
ಹೀಗೆ ಅಮೆಜಾನ್ ಮೇಲೆ ಮಾರಾಟ ಆರಂಭಿಸುವ ಮುನ್ನ ಅಮೆಜಾನ್‌ನ 'ರಿಟರ್ನ್ಸ್' ಪಾಲಿಸಿ ಹಾಗೂ ಪೇಮೆಂಟ್ ಪಾಲಿಸಿಯ ನಿಯಮಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಅಮೆಜಾನ್‌ಗಾಗಿ ಸರಕು ಸಾಗಾಟ

ಅಮೆಜಾನ್‌ಗಾಗಿ ಸರಕು ಸಾಗಾಟ

ಭಾರತದಂಥ ಅಭಿವೃದ್ಧಿಶೀಲ ದೇಶದಲ್ಲಿ ಇ-ಕಾಮರ್ಸ್ ಹಾಗೂ ಆನ್ಲೈನ್ ಶಾಪಿಂಗ್ ವ್ಯವಹಾರಗಳು ಅತಿ ವೇಗದಲ್ಲಿ ಬೆಳವಣಿಗೆ ಕಾಣುತ್ತಿವೆ. ಎಲ್ಲರ ಕೈಯಲ್ಲಿರುವ ಸ್ಮಾರ್ಟಫೋನ್‌ಗಳು ಹಾಗೂ ಅದಕ್ಕೆ ಬೇಕಾದ ಡೇಟಾ ಸಂಪರ್ಕ ಅತಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವುದರಿಂದ ಇ-ಕಾಮರ್ಸ್ ವೇಗವಾಗಿ ಬೆಳೆಯಲು ಕಾರಣವಾಗಿವೆ.
ಅಧ್ಯಯನವೊಂದರ ಪ್ರಕಾರ ಭಾರತದಲ್ಲಿನ ಎಲ್ಲ ಆನ್ಲೈನ್ ವ್ಯವಹಾರಗಳ ಪೈಕಿ ಶೇ.60 ರಷ್ಟು ವ್ಯವಹಾರಗಳು ಸ್ಮಾರ್ಟಫೋನ್ ಮೂಲಕವೇ ನಡೆಯುತ್ತವೆ ಎಂಬುದು ಕಂಡು ಬಂದಿದೆ. ಇಷ್ಟು ದೊಡ್ಡ ಇ-ಕಾಮರ್ಸ್ ವ್ಯವಹಾರ ನಿಭಾಯಿಸಲು ಅಮೆಜಾನ್ ತನ್ನದೆ ಆದ 'ಅಮೆಜಾನ್ ಟ್ರಾನ್ಸಪೊರ್ಟೇಶನ್ ಸರ್ವಿಸ್' ಎಂಬ ವ್ಯವಸ್ಥೆಯನ್ನು ಹೊಂದಿದೆ.
ಇಷ್ಟು ಮಾತ್ರವಲ್ಲದೆ ದೇಶದ ಬಹುತೇಕ ಎಲ್ಲ ಕೊರಿಯರ್ ಹಾಗೂ ಸರಕು ಸಾಗಾಟ ಕಂಪನಿಗಳೊಂದಿಗೆ ಅಮೆಜಾನ್ ಒಪ್ಪಂದ ಮಾಡಿಕೊಂಡಿದೆ. ಯಾವ ಪ್ರದೇಶದಲ್ಲಿ ಈವರೆಗೂ ಸರಕು ಸಾಗಾಟ ಸಾಧ್ಯವಾಗಿಲ್ಲವೊ ಅಂಥ ಪ್ರದೇಶಗಳಲ್ಲಿ ಸರಕು ಸಾಗಾಟ ಏಜೆಂಟರನ್ನು ನೇಮಿಸುವ ಪ್ರಕ್ರಿಯೆ ನಿರಂತರವಾಗಿರುತ್ತದೆ. ನೀವೂ ಸಹ ಇಂಥ ಅವಕಾಶ ಬಲಸಿಕೊಂಡು ಸರಕು ಸಾಗಾಟಗಾರ ಆಗಬಹುದಾಗಿದೆ.

ಅಮೆಜಾನ್ ವರ್ಚ್ಯುವಲ್ ಅಸಿಸ್ಟಂಟ್

ಅಮೆಜಾನ್ ವರ್ಚ್ಯುವಲ್ ಅಸಿಸ್ಟಂಟ್

ಅಮೆಜಾನ್ ಪ್ಲಾಟಫಾರ್ಮನಲ್ಲಿ ತಮ್ಮ ವಸ್ತುಗಳನ್ನು ಮಾರುವ ಅಥವಾ ಈಗಿರುವ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಬಯಸುವವರು ಅಮೆಜಾನ್ ವರ್ಚ್ಯುವಲ್ ಅಸಿಸ್ಟಂಟ್ ಸಹಾಯ ಪಡೆಯುತ್ತಾರೆ. ಇದೊಂದು ಪೂರ್ಣಕಾಲಿಕ ಉದ್ಯೋಗವಾಗಿದ್ದು ಉತ್ತಮ ಸಂಬಳವನ್ನು ನೀಡಲಾಗುತ್ತದೆ.
ಆದರೆ ಹಾಗಂತ ಈ ವ್ಯವಸ್ಥೆಯಲ್ಲಿ ನೀವು ನೇರವಾಗಿ ಅಮೆಜಾನ್‌ಗಾಗಿ ಕೆಲಸ ಮಾಡುವುದಿಲ್ಲ. ತಯಾರಕರು ಹಾಗೂ ಚಿಲ್ಲರೆ ಮಾರಾಟಗಾರರಿಂದ ವಸ್ತುಗಳನ್ನು ಖರೀದಿಸುವುದು, ಮಾರುಕಟ್ಟೆಯ ರಿಸರ್ಚ್ ಮಾಡುವುದು, ಅಮೆಜಾನ್ ಸ್ಟೋರ್ ಅಕೌಂಟ್ ಅಧ್ಯಯನ ಮಾಡಿ ಡೇಟಾ ಎಂಟ್ರಿ ಮಾಡುವುದು ಈ ಕೆಲಸದಲ್ಲಿನ ಅಂಶಗಳಾಗಿವೆ.

ಅಮೆಜಾನ್ ಡೇಟಾ ಎಂಟ್ರಿ

ಅಮೆಜಾನ್ ಡೇಟಾ ಎಂಟ್ರಿ

ಅಮೆಜಾನ್‌ನಲ್ಲಿ 'ಕಸ್ಟಮ್ ಪ್ರಾಡಕ್ಟ್ಸ್' ಎಂಬ ವರ್ಗೀಕರಣ ಮಾಡಲಾಗಿದೆ. ಇವು ಗ್ರಾಹಕರ ಬೇಡಿಕೆಗೆ ತಕ್ಕಂತೆ ತಯಾರಿಸಲಾದ ವಿಶೇಷ ವಸ್ತುಗಳಾಗಿರುತ್ತವೆ. ದುಬಾರಿ ಆಭರಣಗಳು, ಸಾಂಪ್ರದಾಯಿಕ ಕಲಾಕೃತಿಗಳು, ಪೇಂಟಿಂಗ್ಸ್, ಮಗ್ಸ್, ಟಿ ಶರ್ಟಗಳು ಮುಂತಾದುವುಗಳನ್ನು ಇದು ಒಳಗೊಂಡಿರುತ್ತದೆ. ಅಲ್ಲದೆ ಇಂಥ ವಸ್ತುಗಳ ಮೇಲೆ ಗಿಫ್ಟ್ ಮಾಡುವವರ ಅಥವಾ ಪಡೆಯುವವರ ಹೆಸರನ್ನು ಸಹ ವಿಶೇಷವಾಗಿ ನಮೂದಿಸಲಾಗಿರುತ್ತದೆ.
ಇಂಥ ವಸ್ತುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ತಪ್ಪಿಲ್ಲದೆ ಸರಿಯಾದ ಭಾಷೆಯಲ್ಲಿ ವಸ್ತುಗಳ ಮೇಲೆ ಬರೆಯುವ ಕುಶಲ ಕರ್ಮಿಗಳ ಅವಶ್ಯಕತೆ ಇರುತ್ತದೆ. ಇದೊಂದು ಪಾರ್ಟ್ ಟೈಂ ಕೆಲಸವಾಗಿದ್ದು ನಿಮ್ಮ ಮನೆಯಿಂದಲೇ ಇದನ್ನು ಮಾಡಬಹುದಾಗಿದೆ.

ಕೊನೆ ಮಾತು

ಕೊನೆ ಮಾತು

ಜಗತ್ತಿನ ಯಾವುದೇ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಅಮೆಜಾನ್‌ನ ಆನ್ಲೈನ್ ಕೆಲಸಗಳು ಅತ್ಯಂತ ಅನುಕೂಲಕರವಾಗಿವೆ. ವಿಶ್ವದ ಇ-ಕಾಮರ್ಸ್ ದೈತ್ಯ ಅಮೆಜಾನ್‌ನೊಂದಿಗೆ ಕೆಲಸ ಮಾಡುವುದು ಒಂದು ಖುಷಿಯ ವಿಷಯವೇ ಆಗಿದೆ. ತನಗಾಗಿ ಕೆಲಸ ಮಾಡುವವರು ಹಾಗೂ ತನ್ನ ಚಿಲ್ಲರೆ ಮಾರಾಟಗಾರರಿಗೆ ಅತ್ಯಂತ ಸೂಕ್ತವಾಗಿ ಹಣ ಪಾವತಿ ಮಾಡುವಲ್ಲಿ ಅಮೆಜಾನ್ ಖ್ಯಾತಿ ಪಡೆದಿದೆ. ಕುಶಲ ಕರ್ಮಿಗಳು ಅಮೆಜಾನ್‌ನಲ್ಲಿ ಕೆಲಸ ಮಾಡುವ ಅವಕಾಶವನ್ನು ಸಹ ಪಡೆಯಬಹುದು. ಅಮೆಜಾನ್ ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಕಾಲ್ ಸೆಂಟರ್ ಹಿಡಿದು ಹಲವಾರು ಬಗೆಯ ಕಸ್ಟಮರ್ ಕೇರ್ ಕೆಲಸ, ಡೇಟಾ ಅನಾಲಿಸಿಸ್, ಇಂಟರನೆಟ್ ಸುರಕ್ಷತೆ, ಇ-ಕಾಮರ್ಸ್ ಪರಿಣಿತಿ ಮುಂತಾದ ಕ್ಷೇತ್ರಗಳಲ್ಲಿ ಕೆಲಸಗಳು ಸೃಷ್ಟಿಯಾಗುತ್ತಲೇ ಇವೆ.

Read more about: amazon online jobs employment
English summary

Make Money with 7 Amazon Online Jobs Work from Home

Amazon depends on freelancers, craftsmen, writers, bloggers, YouTubers and motley other individuals to assist in its colossal business.
Story first published: Saturday, March 9, 2019, 10:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X