For Quick Alerts
ALLOW NOTIFICATIONS  
For Daily Alerts

ಎಸ್ಬಿಐ ಸ್ಯಾಲರಿ ಅಕೌಂಟ್ ವೈಶಿಷ್ಟ್ಯತೆ ಹಾಗು ಪ್ರಯೋಜನಗಳೇನು ಗೊತ್ತೆ?

ಸ್ಯಾಲರಿ ಅಕೌಂಟ್ ಅಥವಾ ಸಂಬಳ ಖಾತೆ ಎಂಬುದು ಪ್ರತಿ ತಿಂಗಳು ಕಂಪನಿಯು ಸಂಬಳವನ್ನು ಜಮೆ ಮಾಡುವ ಉದ್ಯೋಗಿಯ ಬ್ಯಾಂಕ್ ಖಾತೆಯಾಗಿರುತ್ತದೆ. ಉದ್ಯೋಗಿ ಅಥವಾ ಕಂಪನಿಯು ತಾವು ಬಯಸಿದ ಬ್ಯಾಂಕಿನಲ್ಲಿ ಸ್ಯಾಲರಿ ಅಕೌಂಟ್ ಅನ್ನು ತೆರೆಯಬಹುದಾಗಿದೆ.

|

ಸ್ಯಾಲರಿ ಅಕೌಂಟ್ ಅಥವಾ ಸಂಬಳ ಖಾತೆ ಎಂಬುದು ಪ್ರತಿ ತಿಂಗಳು ಕಂಪನಿಯು ಸಂಬಳವನ್ನು ಜಮೆ ಮಾಡುವ ಉದ್ಯೋಗಿಯ ಬ್ಯಾಂಕ್ ಖಾತೆಯಾಗಿರುತ್ತದೆ. ಉದ್ಯೋಗಿ ಅಥವಾ ಕಂಪನಿಯು ತಾವು ಬಯಸಿದ ಬ್ಯಾಂಕಿನಲ್ಲಿ ಸ್ಯಾಲರಿ ಅಕೌಂಟ್ ಅನ್ನು ತೆರೆಯಬಹುದಾಗಿದೆ. ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ, ಕಾರ್ಪೊರೇಟ್ ಉದ್ಯೋಗಿಗಳ ಅನುಕೂಲಕ್ಕಾಗಿಯೇ ಕಾರ್ಪೊರೇಟ್ ಸ್ಯಾಲರಿ ಪ್ಯಾಕೇಜ್ (CSP) ಪರಿಚಯಿಸಿದೆ.
ಕಂಪನಿಗಳ ನೌಕರರು, ಆಸ್ಪತ್ರೆ, ಹೊಟೇಲುಗಳು, ಸಾರಿಗೆ ಕ್ಷೇತ್ರ ಹೀಗೆ ಹಲವಾರು ವಲಯಗಳ ಉದ್ಯೋಗಿಗಳಿಗೆ ಈ ಸ್ಯಾಲರಿ ಅಕೌಂಟಿನ ಮೂಲಕ ಅನೇಕ ವಿಶಿಷ್ಟ ಸೌಲಭ್ಯಗಳನ್ನು ನೀಡುತ್ತಿದೆ. ಸ್ಯಾಲರಿ ಸ್ಲಿಪ್: ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

 

ಉದ್ಯೋಗಿಯ ಒಟ್ಟು ಮಾಸಿಕ ಆದಾಯವನ್ನು ಆಧರಿಸಿ ಈ ಸ್ಯಾಲರಿ ಅಕೌಂಟ್ ಗಳನ್ನು ಸಿಲ್ವರ್, ಗೋಲ್ಡ್, ಡೈಮಂಡ್ ಹಾಗೂ ಪ್ಲಾಟಿನಂ ಎಂದು ನಾಲ್ಕು ರೀತಿಯಾಗಿ ವಿಂಗಡಿಸಲಾಗಿದೆ. ಉದ್ಯೋಗಿಯ ಮೂಲ ಸಂಬಳ ಹಾಗೂ ಇತರ ಎಲ್ಲ ಭತ್ಯೆಗಳನ್ನು ಸೇರಿಸಿ ಒಟ್ಟು ಮಾಸಿಕ ಆದಾಯಯನ್ನು ಲೆಕ್ಕ ಹಾಕಲಾಗುತ್ತದೆ. ತೆರಿಗೆ, ಪಿಎಫ್ ಹಾಗೂ ಇನ್ನಿತರ ಕಡಿತಗಳ ನಂತರ ಉದ್ಯೋಗಿ ಪಡೆಯುವ ಸಂಬಳವನ್ನು ನಿವ್ವಳ ವೇತನ ಅಥವಾ ಟೇಕ್ ಹೋಂ ಸ್ಯಾಲರಿ ಎಂದು ಕರೆಯಲಾಗುತ್ತದೆ.

ಸ್ಯಾಲರಿ ಅಕೌಂಟ್ ವಿಧ/ಆದಾಯ ಮಿತಿ

ಸ್ಯಾಲರಿ ಅಕೌಂಟ್ ವಿಧ/ಆದಾಯ ಮಿತಿ

ಎಸ್ಬಿಐನ ಕಾರ್ಪೊರೇಟ್ ಸ್ಯಾಲರಿ ಪ್ಯಾಕೇಜ್‌ ಅಡಿಯಲ್ಲಿ ಬರುವ ಸ್ಯಾಲರಿ ಅಕೌಂಟಿನ ವಿಧ ಹಾಗೂ ಅದಕ್ಕೆ ಬೇಕಾದ ಆದಾಯ ಮಿತಿಗಳು ಹೀಗಿವೆ:
ಪ್ಲಾಟಿನಂ: ರೂ. 1 ಲಕ್ಷ ಹಾಗೂ ಅದಕ್ಕೂ ಮೇಲ್ಪಟ್ಟು
ಡೈಮಂಡ: ರೂ. 50 ಸಾವಿರ ಮೇಲ್ಪಟ್ಟು ಹಾಗೂ 1 ಲಕ್ಷ ರೂ. ವರೆಗೆ
ಗೋಲ್ಡ: ರೂ. 20 ಸಾವಿರ ಮೇಲ್ಪಟ್ಟು ಹಾಗೂ 50 ಸಾವಿರ ರೂ. ವರೆಗೆ
ಸಿಲ್ವರ್: ರೂ. 5 ಸಾವಿರಗಳಿಂದ 20 ಸಾವಿರಗಳವರೆಗೆ ಸ್ಯಾಲರಿ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್ ಬಗ್ಗೆ ವ್ಯತ್ಯಾಸ ತಿಳಿಯಿರಿ

ಖಾತೆಗಳನ್ನಾಧರಿಸಿ ಸೌಲಭ್ಯ
 

ಖಾತೆಗಳನ್ನಾಧರಿಸಿ ಸೌಲಭ್ಯ

ನಿರ್ದಿಷ್ಟ ಸ್ಯಾಲರಿ ಅಕೌಂಟಿನ ವಿಧವನ್ನು ಆಧರಿಸಿ ಡೆಬಿಟ್ ಕಾರ್ಡ್, ವಿಮೆ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತದೆ. ಒಂದು ವೇಳೆ ಉದ್ಯೋಗಿಯ ಸಂಬಳ ಹೆಚ್ಚಾದಾಗ ಸ್ಯಾಲರಿ ಅಕೌಂಟನ್ನು ಮೇಲ್ದರ್ಜೆಗೇರಿಸಲು ಅವಕಾಶವಿದೆ. ಒಟ್ಟು ಸಂಬಳ ಹೆಚ್ಚಾಗಿರುವ ಬಗ್ಗೆ ದಾಖಲೆ ಹಾಗೂ ಕಂಪನಿಯಲ್ಲಿ ಬಡ್ತಿ ದೊರಕಿದ ಬಗ್ಗೆ ದಾಖಲೆಯನ್ನು ಸಲ್ಲಿಸಿ ಅಕೌಂಟನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬಹುದು.
ಒಮ್ಮೆ ಖಾತೆಗಳನ್ನು ತೆರೆದ ನಂತರ ಎಲ್ಲ ಉದ್ಯೋಗಿಗಳಿಗೆ ಖಾತೆಯ ಸಂಖ್ಯೆಗಳನ್ನು ನೀಡಲಾಗುತ್ತದೆ. ಬ್ಯಾಂಕ್ ಶಾಖೆಯ ಮಧ್ಯ ಪ್ರವೇಶವಿಲ್ಲದೆ ಕಂಪನಿಯು ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟಫಾರ್ಮ ಮೂಲಕ ಉದ್ಯೋಗಿಗಳ ಖಾತೆಗೆ ಸಂಬಳವನ್ನು ಜಮಾ ಮಾಡಬಹುದಾಗಿದೆ. ದೇಶದ ಯಾವುದೇ ಊರಿನ ಯಾವುದೇ ಎಸ್ಬಿಐ ಶಾಖೆಯಲ್ಲಿ ಉದ್ಯೋಗಿಯು ಖಾತೆಯನ್ನು ಹೊಂದಬಹುದಾಗಿದ್ದು ನೆಫ್ಟ್, ಆರ್ಟಿಜಿಎಸ್, ಇಸಿಎಸ್ (NEFT, RTGS, ECS) ಮುಂತಾದ ಯಾವುದೇ ಪಾವತಿ ವ್ಯವಸ್ಥೆಯ ಮೂಲಕ ಸಿಂಗಲ್ ಪಾಯಿಂಟ್ ಆಧಾರದಲ್ಲಿ ಕಂಪನಿಗಳು ಸ್ಯಾಲರಿ ಜಮಾ ಮಾಡಬಹುದು.

ವೆಚ್ಚಗಳ ಮರುಪಾವತಿ ಖಾತೆ (Reimbursement account)

ವೆಚ್ಚಗಳ ಮರುಪಾವತಿ ಖಾತೆ (Reimbursement account)

ಕೆಲವು ಸಂದರ್ಭಗಳಲ್ಲಿ ಕಂಪನಿಗಳು ಸಂಬಳದ ಒಂದಿಷ್ಟು ಭಾಗವನ್ನು ವೆಚ್ಚವೆಂದು ಪರಿಗಣಿಸಿ ಅದನ್ನು ಮರುಪಾವತಿ ಮಾಡುತ್ತವೆ. ಇದಕ್ಕಾಗಿ ಪ್ರತ್ಯೇಕ ಸ್ಯಾಲರಿ ಅಕೌಂಟ್ ತೆರೆಯಬೇಕಾಗುತ್ತದೆ. ಈಗಾಗಲೇ ಎಸ್ಬಿಐ ಸ್ಯಾಲರಿ ಅಕೌಂಟ್ ಹೊಂದಿದವರು ವೆಚ್ಚ ಮರುಪಾವತಿ ಅಕೌಂಟ್ ತೆರೆಯಬಹುದಾಗಿದೆ.

ಇಂಥ ಮರುಪಾವತಿ ಸ್ಯಾಲರಿ ಅಕೌಂಟ್ ಮೂಲ ಅಕೌಂಟಿಗೆ ಜೋಡಿಸಲ್ಪಟ್ಟಿದ್ದು, ಇದೊಂದು ಶೂನ್ಯ ಬ್ಯಾಲೆನ್ಸ್ ಹಾಗೂ ಶೂನ್ಯ ನಿರ್ವಹಣಾ ವೆಚ್ಚದ ಚಾಲ್ತಿ ಖಾತೆಯಾಗಿರುತ್ತದೆ. ಸ್ಯಾಲರಿ ಅಕೌಂಟಿಗೆ ನೀಡಲಾದ ಎಟಿಎಂ ಕಂ ಡೆಬಿಟ್ ಕಾರ್ಡ ಅನ್ನು ಈ ಮರುಪಾವತಿ ಖಾತೆಗೆ ಜೋಡಿಸಬಹುದಾಗಿದೆ.

 

ಎಸ್ಬಿಐ ಸ್ಯಾಲರಿ ಅಕೌಂಟಿನ ವಿಶೇಷ ಸೌಲಭ್ಯಗಳು

ಎಸ್ಬಿಐ ಸ್ಯಾಲರಿ ಅಕೌಂಟಿನ ವಿಶೇಷ ಸೌಲಭ್ಯಗಳು

ಎಸ್ಬಿಐನ ಸ್ಯಾಲರಿ ಅಕೌಂಟಿಗೆ ನೀಡಲಾಗುವ ವಿಶೇಷ ಸೌಲಭ್ಯಗಳು ಹೀಗಿವೆ:
- ಜೀರೊ ಬ್ಯಾಲೆನ್ಸ್ ಅಕೌಂಟ್
- ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ಎಷ್ಟು ಬಾರಿಯಾದರೂ ನಿಶುಲ್ಕ ವ್ಯವಹಾರ
- ಜಂಟಿ ಖಾತೆಯಾಗಿದ್ದಲ್ಲಿ ಹೆಚ್ಚುವರಿ ಎಟಿಎಂ ಕಾರ್ಡ್
- ಉಚಿತ ಇಂಟರ್ನೆಟ್ ಬ್ಯಾಂಕಿಂಗ್
- ಉಚಿತ ಮಲ್ಟಿಸಿಟಿ ಚೆಕ್ ಬುಕ್ ಇತ್ಯಾದಿ.

ಸ್ಯಾಲರಿ ಅಕೌಂಟ್ ಹೆಚ್ಚುವರಿ ಸೌಲಭ್ಯಗಳು ಹೀಗಿವೆ

ಸ್ಯಾಲರಿ ಅಕೌಂಟ್ ಹೆಚ್ಚುವರಿ ಸೌಲಭ್ಯಗಳು ಹೀಗಿವೆ

- ಲಾಕರ್ ಶುಲ್ಕದ ಮೇಲೆ ಶೇ.25 ರಷ್ಟು ವಿನಾಯಿತಿ
- ಉಚಿತ ಡಿಮ್ಯಾಂಡ್ ಡ್ರಾಫ್ಟ್
- ಉಚಿತ ಎಸ್ಸೆಮ್ಮೆಸ್ ಅಲರ್ಟ್
- ಉಚಿತ ಆನ್ಲೈನ್ ನೆಫ್ಟ್ ಹಾಗೂ ಆರ್ಟಿಜಿಎಸ್
- 2 ತಿಂಗಳ ನಿವ್ವಳ ಸಂಬಳದಷ್ಟು ಓವರಡ್ರಾಫ್ಟ್ ಸೌಲಭ್ಯ (ಸದ್ಯ ಆಯ್ದ ಖಾತೆದಾರರಿಗೆ ಮಾತ್ರ)
- 20 ಲಕ್ಷ ರೂ.ಗಳವರೆಗೆ ಕಾಂಪ್ಲಿಮೆಂಟರಿ ವೈಯಕ್ತಿಕ ಅಪಘಾತ ವಿಮಾ ಸುರಕ್ಷೆ
- 30 ಲಕ್ಷ ರೂ.ಗಳವರೆಗೆ ಕಾಂಪ್ಲಿಮೆಂಟರಿ ವಾಯುಯಾನ ಅಪಘಾತ ವಿಮಾ ಸುರಕ್ಷೆ
ವೈಯಕ್ತಿಕ ಅಪಘಾತ ಹಾಗೂ ವಾಯುಯಾನ ಅಪಘಾತ ವಿಮಾ ಸೌಲಭ್ಯ ಪಡೆಯಬೇಕಾದರೆ ಘಟನೆ ನಡೆದ ದಿನದಿಂದ ಹಿಂದಿನ ಸತತ ಎರಡು ತಿಂಗಳು ಖಾತೆಗೆ ಸಂಬಳ ಜಮೆ ಆಗಿರಬೇಕು ಹಾಗೂ ಖಾತೆ ಸಕ್ರಿಯವಾಗಿರಬೇಕು.

ಕೆಲಸ ಬದಲಾವಣೆ ಮಾಡಿದರೆ ಹೇಗೆ?

ಕೆಲಸ ಬದಲಾವಣೆ ಮಾಡಿದರೆ ಹೇಗೆ?

ಕೆಲಸ ಬದಲಾಯಿಸಿದರೂ ಅದೇ ಖಾತೆಯ ಮೂಲಕ ಸಂಬಳ ಪಡೆಯಲು ಸಾಧ್ಯವಿದೆ. ಹೊಸ ಕಂಪನಿಗೆ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ಅದಕ್ಕೆ ಸಂಬಳ ಜಮೆಯಾಗುವಂತೆ ಮಾಡಬಹುದು. ಹಾಗೆಯೇ ಬ್ಯಾಂಕಿನ ಶಾಖೆಯಲ್ಲಿ ಹೊಸ ಕಂಪನಿಯ ವಿವರಗಳನ್ನು ಅಪ್ಡೇಟ್ ಮಾಡಿಸಲು ಕಂಪನಿಗೆ ತಿಳಿಸಬೇಕಾಗುತ್ತದೆ.

ಒಂದು ವೇಳೆ ಸ್ಯಾಲರಿ ಅಕೌಂಟಿಗೆ ಸತತ ಮೂರು ತಿಂಗಳು ಸಂಬಳ ಜಮೆಯಾಗದಿದ್ದಲ್ಲಿ ಖಾತೆಗೆ ನೀಡಲಾದ ವಿಶೇಷ ಸೌಲಭ್ಯಗಳನ್ನು ಹಿಂಪಡೆಯಲಾಗುತ್ತದೆ ಹಾಗೂ ತದನಂತರ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿಗಣಿಸಲಾಗುತ್ತದೆ. ಹೀಗಾದಾಗ ಆಯಾ ಸಂದರ್ಭದಲ್ಲಿ ಜಾರಿಯಲ್ಲಿರುವ ಬ್ಯಾಂಕಿನ ಶುಲ್ಕಗಳು ಹಾಗೂ ಇತರ ನಿಯಮಗಳು ಅನ್ವಯಿಸುತ್ತವೆ.

ನಿಮ್ಮ ಕಂಪನಿಯು ಎಸ್ಬಿಐ ಸ್ಯಾಲರಿ ಅಕೌಂಟ್ ಸೌಲಭ್ಯ ಹೊಂದಿರದಿದ್ದರೆ ಏನು ಮಾಡುವುದು?

ನಿಮ್ಮ ಕಂಪನಿಯು ಎಸ್ಬಿಐ ಸ್ಯಾಲರಿ ಅಕೌಂಟ್ ಸೌಲಭ್ಯ ಹೊಂದಿರದಿದ್ದರೆ ಏನು ಮಾಡುವುದು?

ಕೆಲ ಸುಲಭ ನಿಯಮಗಳನ್ನು ಅನುಸರಿಸುವ ಮೂಲಕ ಎಸ್ಬಿಐ ಸ್ಯಾಲರಿ ಖಾತೆಗಳನ್ನು ಆರಂಭಿಸಬಹುದಾಗಿದೆ. ಒಂದು ವೇಳೆ ನೀವು ಕೆಲಸ ಮಾಡುವ ಕಂಪನಿಯಲ್ಲಿ ಎಸ್ಬಿಐ ಸ್ಯಾಲರಿ ಅಕೌಂಟ್ ಸೌಲಭ್ಯ ಇರದಿದ್ದರೆ ನೀವು ಕಂಪನಿಯ ಹಿರಿಯ ಅಧಿಕಾರಿ ಅಥವಾ ಅಕೌಂಟ್ಸ್ ವಿಭಾಗದವರನ್ನು ಭೇಟಿಯಾಗಿ ಎಸ್ಬಿಐನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ವಿನಂತಿಸಬಹುದು.

ಯಾವುದೇ ಕಂಪನಿಯು ಎಸ್ಬಿಐ ಕಾರ್ಪೊರೇಟ್ ಸ್ಯಾಲರಿ ಅಕೌಂಟ್ ಸೌಲಭ್ಯ ಪಡೆಯಬೇಕಾದರೆ ಆ ಕಂಪನಿಯಲ್ಲಿ ಮಾಸಿಕ ಒಟ್ಟು 5000 ರೂ. ಮೇಲ್ಪಟ್ಟು ಸಂಬಳ ಪಡೆಯುತ್ತಿರುವ ಕನಿಷ್ಠ 25 ಉದ್ಯೋಗಿಗಳು ಇರಬೇಕಾಗುತ್ತದೆ. ಅಂದರೆ ಕಂಪನಿಯು ಮಾಸಿಕವಾಗಿ ಕನಿಷ್ಠ 1.25 ಲಕ್ಷ ರೂ. ಸಂಬಳ ಪಾವತಿ ಮಾಡಬೇಕು. ಒಂದೊಮ್ಮೆ ಕಂಪನಿ ಹಾಗೂ ಬ್ಯಾಂಕಿನ ಮಧ್ಯೆ ಒಪ್ಪಂದ ಏರ್ಪಟ್ಟ ನಂತರ ಈಗಾಗಲೇ ಇರುವ ಎಸ್ಬಿಐ ಉಳಿತಾಯ ಖಾತೆಗಳನ್ನು ಸ್ಯಾಲರಿ ಖಾತೆಗಳಾಗಿ ಪರಿವರ್ತಿಸಲು ಅವಕಾಶವಿದೆ.

English summary

SBI Salary Account: Know its unique features, big benefits and what if your employer does not offer this account

Depending on the gross monthly income of employees, the salary account in SBI is offered in four variants- Silver, Gold, Diamond and Platinum.
Story first published: Tuesday, March 19, 2019, 10:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X