For Quick Alerts
ALLOW NOTIFICATIONS  
For Daily Alerts

ಈ ಬಿಸಿನೆಸ್ ಆರಂಭಿಸಿ ಪ್ರತಿದಿನ 4 ಸಾವಿರ, ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ

|

ಕಳೆದ ಒಂದು ದಶಕದಿಂದ ಇತ್ತೀಚಿಗೆ ಸ್ವಂತ ಬಿಸಿನೆಸ್ ಮಾಡಬೇಕೆಂದು ಆಸಕ್ತಿ ಹೊಂದಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸ ಉದ್ಯಮ ಆರಂಭಿಸಿ ಕೈ ತುಂಬಾ ಆದಾಯ ಗಳಿಸಬೇಕು ಎಂಬ ಕನಸು ತುಂಬಾ ಜನರಲ್ಲಿ ಇರುತ್ತದೆ. ಸ್ವಂತ ಬಿಸಿನೆಸ್ ಆಲೋಚನೆ ನಿಮ್ಮದಾಗಿದ್ದರೆ ಇಲ್ಲೊಂದು ಬೆಸ್ಟ್ ಐಡಿಯಾ ಇದೆ ನೋಡಿ..

ಕಡಿಮೆ ಬಂಡವಾಳದಲ್ಲಿ ಬಿಸಿನೆಸ್ ಆರಂಭಿಸಿ ತಿಂಗಳಿಗೆ ಲಕ್ಷದವರೆಗೆ ಸಂಪಾದನೆ ಮಾಡಲು ಬಯಸುವವರು ಬಾಳೆಕಾಯಿ ಚಿಪ್ಸ್ ವ್ಯಾಪಾರ ಶುರು ಮಾಡಬಹುದು. ಚಿಪ್ಸ್, ಸ್ಪೈಸಿ ಮಸಾಲೆ ಪದಾರ್ಥಗಳನ್ನು ತಿನ್ನುವವರ ಸಂಖ್ಯೆ ಹೇರಳವಾಗಿದೆ. ಬಾಳೆಕಾಯಿ ಚಿಪ್ಸ್ ಆರೋಗ್ಯಕ್ಕೂ ಒಳ್ಳೆಯದು. ಆಲೂಗಡ್ಡೆ ಚಿಪ್ಸ್ ಗಿಂತ ಬಾಳೆ ಕಾಯಿ ಚಿಪ್ಸ್ ಇಷ್ಪಪಡುವವರ ಸಂಖ್ಯೆ ತುಂಬಾ ಇದೆ. ಆದರೆ ಇದರ ಮಾರುಕಟ್ಟೆ ಸಣ್ಣದು ಎನ್ನಬಹುದು. ದೊಡ್ಡ ದೊಡ್ಡ ಬ್ರಾಂಡ್ ಕಂಪನಿಗಳು ಬಾಳೆಕಾಯಿ ಚಿಪ್ಸ್ ವ್ಯವಹಾರಕ್ಕೆ ಮಾಡಲು ಬಯಸುವುದಿಲ್ಲ.

ಈ ಬಿಸಿನೆಸ್ ಆರಂಭಿಸಿ ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ

 

ಬಿಸಿನೆಸ್ ಆರಂಭಿಸುವುದು ಹೇಗೆ?

ಸಣ್ಣ ಪ್ರಮಾಣದಲ್ಲಿ ಬಾಳೆ ಕಾಯಿ ಚಿಪ್ಸ್ ಉದ್ಯಮ ಆರಂಭಿಸಲು ಬಯಸುತ್ತಿರಾದರೆ ಹೆಚ್ಚು ಉಪಕರಣಗಳ ಅಗತ್ಯವಿಲ್ಲ. ದೊಡ್ಡ ಪ್ರಮಾಣದಲ್ಲಿ ಕೈ ಹಾಕುವವರು ಬಾಳೆ ಕಾಯಿ ತೊಳೆಯುವ ಯಂತ್ರ, ಸಿಪ್ಪೆ ತೆಗೆಯುವ ಯಂತ್ರ, ಕತ್ತರಿಸುವ ಯಂತ್ರ, ಬೇಯಿಸುವ ಯಂತ್ರ ಹಾಗೂ ಮಸಾಲೆ ಮಿಶ್ರಣ ಮಾಡುವ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ.

ಈ ಯಂತ್ರಗಳನ್ನು ನೀವು https://www.indiamart.com/ ಅಥವಾ https://india.alibaba.com/index.html ನಲ್ಲಿ ಖರೀದಿ ಮಾಡಬಹುದು.

ಅಗತ್ಯ ಸಾಮಾಗ್ರಿಗಳು, ಬಂಡವಾಳ

ಬಾಳೆಕಾಯಿ, ಎಣ್ಣೆ, ಉಪ್ಪು, ಫ್ಲೇವರ್ & ಸ್ಪೈಸಸ್,

ಪ್ಯಾಕೇಜಿಂಗ್ ಮೆಟೀರಿಯಲ್ ಇತ್ಯಾದಿ ಕಚ್ಚಾ ಸಾಮಾಗ್ರಗಳು ಬೇಕಾಗುತ್ತವೆ. ಬಾಳೆ ಕಾಯಿ ಚಿಪ್ಸ್ ಉದ್ಯಮ ಆರಂಭಿಸಲು ಸ್ವಲ್ಪ ಜಾಗದ ಅಗತ್ಯವಿರುತ್ತದೆ.

ನೀವು 50 ಕೆ.ಜಿ. ಚಿಪ್ಸ್ ತಯಾರಿಸಲು ಬಯಸಿದರೆ 120 ಕೆ.ಜಿ. ಬಾಳೆಕಾಯಿ ಬೇಕಾಗುತ್ತದೆ. ಇದು ರೂ. 1000 ವರೆಗೆ ಖರೀದಿಸಬಹುದು. ಇದಕ್ಕೆ 12 ರಿಂದ 15 ಲೀಟರ್ ಎಣ್ಣೆ ಬೇಕು. ಪ್ರತಿ ಲೀಟರ್ ಗೆ ರೂ. 70 ರಂತೆ ಲೆಕ್ಕ ಮಾಡಿದರೆ ರೂ. 1050 ಖರ್ಚು ಬರುತ್ತದೆ.

ಚಿಪ್ಸ್ ಯಂತ್ರಗಳ ಖರೀದಿಗೆ ರೂ. 28 ಸಾವಿರದಿಂದ 50 ಸಾವಿರವರೆಗೆ ಖರ್ಚು ಬರಬಹುದು. ಚಿಪ್ಸ್ ಬೇಯಿಸುವ ಯಂತ್ರಕ್ಕೆ 1 ತಾಸಿಗೆ 10 -11 ಲೀಟರ್ ಡಿಸೇಲ್ ಹಾಕಬೇಕಾಗುತ್ತದೆ. ಇದಕ್ಕಾಗಿ ಸರಾಸರಿ ಒಂದು ಸಾವಿರ ರೂಪಾಯಿ ಬೇಕಾಗುತ್ತದೆ. ಉಪ್ಪು ಮಸಾಲೆಗೆ ರೂ. 150 ರೂಪಾಯಿ ಖರ್ಚಾಗುತ್ತದೆ. 50 ಕೆ.ಜಿ. ಚಿಪ್ಸ್ ಸರಾಸರಿ 3200-3500 ರೂಪಾಯಿಗೆ ಸಿದ್ಧವಾಗುತ್ತದೆ.

ಪ್ಯಾಕಿಂಗ್ ವೆಚ್ಚ ಸೇರಿ ನಿಮಗೆ ಒಂದು ಕೆ.ಜಿ. ಪ್ಯಾಕೆಟ್ ಚಿಪ್ಸ್ ಗೆ 70 ರೂಪಾಯಿ ಖರ್ಚಾಗಬಹುದು. ಅದನ್ನು ನೀವು 90-100 ರೂಪಾಯಿಗೆ ಮಾರಾಟ ಮಾಡಬಹುದು.

ತಿಂಗಳಿಗೆ 1 ಲಕ್ಷ ಲಾಭ ಗಳಿಕೆ

1 ಕೆ.ಜಿ ಚಿಪ್ಸ್ ಮಾರಾಟ ಮಾಡಿದ ನಂತರ 10-20 ರೂಪಾಯಿ ಲಾಭ ಬಂದರೂ ಚಿಪ್ಸ್ ತಯಾರಿಕೆಯನ್ನು‌ ಹೆಚ್ಚಿಸಿಕೊಳ್ಳುವ ಮೂಲಕ ಒಂದು ದಿನಕ್ಕೆ 4000 -7000 ರೂಪಾಯಿವರೆಗೆ ಅದಾಯ ಗಳಿಸಬಹುದು. ತಿಂಗಳಿಗೆ 25 ದಿನ ಕೆಲಸ ಮಾಡಿದರೂ ನಿಮ್ಮ ಆದಾಯ 1 ಲಕ್ಷ ಮುಟ್ಟುತ್ತದೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಬಿಸಿನೆಸ್ ಮಾಡಲು ಬಯಸಿದರೆ ಹೆಚ್ಚ್ಉ ಯಂತ್ರಗಳನ್ನು ಅಳವಡಿಸಿ ಇನ್ನೂ ಹೆಚ್ಚಿನ ಆದಾಯ ಗಳಿಸಬಹುದು. ಜೊತೆಗೆ ಹತ್ತಿಪ್ಪತ್ತು ಜನರಿಗೆ ಉದ್ಯೋಗ ಕೂಡ ಕಲ್ಪಿಸಬಹುದು. ಶೂನ್ಯ ಬಂಡವಾಳದಲ್ಲಿ ನಡೆಸಬಹುದಾದ 11 ಉದ್ಯಮಗಳು

English summary

Start Banana chips making business, earn lakhs of rupee a month

You can Start Banana chips making business with low investment and earn lakhs of rupee a month.
Story first published: Wednesday, May 8, 2019, 10:42 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more