For Quick Alerts
ALLOW NOTIFICATIONS  
For Daily Alerts

ಈ 6 ಆನ್ಲೈನ್ ವೆಬ್ಸೈಟ್ ಮೂಲಕ ಕೈ ತುಂಬಾ ಹಣ ಸಂಪಾದಿಸಿ

ಆನ್ಲೈನ್ ಮಾದ್ಯಮ ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ಎಲ್ಲಾ ವರ್ಗದ ಉದ್ಯೋಗಿಗಳು ಆನ್ಲೈನ್ ವೆಬ್ಸೈಟ್ ಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು ಇಲ್ಲವೇ ಸ್ವಂತ ಉದ್ಯಮ ಆರಂಭಿಸಬಹುದು.

|

ಆನ್ಲೈನ್ ಮಾದ್ಯಮ ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ಎಲ್ಲಾ ವರ್ಗದ ಉದ್ಯೋಗಿಗಳು ಆನ್ಲೈನ್ ವೆಬ್ಸೈಟ್ ಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು ಇಲ್ಲವೇ ಸ್ವಂತ ಉದ್ಯಮ ಆರಂಭಿಸಬಹುದು.
ಸಾಮಾನ್ಯವಾಗಿ ಮಧ್ಯಮ ವರ್ಗದ ಜನರು ಒಳ್ಳೆಯ ಉದ್ಯೋಗಕ್ಕೆ ಹೆಚ್ಚಿನ ಒಲವು ಹೊಂದಿರುತ್ತಾರೆ. ಆದರೆ ಉದ್ಯೋಗದ ಮೂಲಕ ಸಿಗುವ ಸಂಬಳ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹೀಗೆ ಎಲ್ಲಾ ವರ್ಗದ ಆಕಾಂಕ್ಷಿಗಳಿಗೆ ಹೆಚ್ಚಿನ ಆದಾಯ ಗಳಿಕೆಗೆ ಆನ್ಲೈನ್ ನಲ್ಲಿ ಸಾಕಷ್ಟು ಅವಕಾಶಗಳಿವೆ.

Shutterstock

Shutterstock

ಶಟರ್ ಸ್ಟಾಕ್ ಪೋಟೊಗಳನ್ನು ಖರೀದಿ/ಡೌನ್ಲೋಡ್ ಮಾಡುವ ವೆಬ್ಸೈಟ್ ತಾಣವಾಗಿದೆ. ಇಲ್ಲಿ ತುಂಬಾ ಜನರು ಫೋಟೋ ಖರೀದಿ ಮಾಡುತ್ತಾರೆ. ನಿಮಗೆ ಫೋಟೋಗ್ರಫಿ ಮಾಆಡುವ ಆಸಕ್ತಿಯಿದ್ದರೆ ನೀವು ಕ್ಲಿಕ್ಕಿಸಿದ ಫೋಟೋಗಳನ್ನು Shutterstock ನಲ್ಲಿ ಅಪ್ಲೋಡ್ ಮಾಡಬಹುದು. ನಿಮ್ಮ ಫೋಟೋವನ್ನು ಡೌನ್ಲೋಡ್ ಮಾಡುತ್ತಿದ್ದಂತೆ ನಿಮಗೆ ಹಣ ಪಾವತಿಯಾಗುತ್ತದೆ.

Udemy

Udemy

Udemy ವೆಬ್ಸೈಟ್ ಯುಟ್ಯೂಬ್ ನಂತೆಯೇ ಕೆಲಸ ಮಾಡುತ್ತಿದ್ದು, ಇಲ್ಲಿ ವಿಡಿಯೋ ಅಪ್ಲೋಡ್ ಮಾಡಬಹುದು. ಆದರೆ ಜ್ಞಾನ ಒದಗಿಸುವ ಉತ್ತಮ ಮಾಹಿತಿ ನೀಡುವ ವಿಡಿಯೋಗಳಿಗೆ ಮಾತ್ರ ಇಲ್ಲಿ ಅವಕಾಶ. ಈ ವಿಡಿಯೋಗಳನ್ನು ನೋಡಲು ಬಯಸುವ ವಿಕ್ಷಕರು ಹಣ ನೀಡಿ ನೋಡಬೇಕಾಗುತ್ತದೆ. ಒಳ್ಳೆಯ ಮಾಹಿತಿಯುಳ್ಳ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ನೀವು ಉತ್ತಮ ಆದಾಯ ಗಳಿಸಬಹುದು.

ಅಮೆಜಾನ್ - Amazon

ಅಮೆಜಾನ್ - Amazon

ಅಮೆಜಾನ್ ಅಫಿಲಿಯೆಟ್ ಪ್ರೋಗ್ರಾಂ ಮೂಲಕ ನೀವು ಹಣ ಗಳಿಸಬಹುದು. ಇದಕ್ಕಾಗಿ ನೀವು ನಿಮ್ಮ ವೆಬ್ಸೈಟ್ ನಲ್ಲಿ ಅಮೆಜಾನ್ ನ ವಸ್ತುಗಳ ಲಿಂಕನ್ನು ಹಾಕಬೇಕಾಗುತ್ತದೆ. ನೀವು ಬೇರೆ ವೆಬ್ಸೈಟ್ ಗಳಲ್ಲೂ ಹಂಚಿಕೊಳ್ಳಬಹುದು. ನೀವು ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ವಸ್ತುಗಳನ್ನು ಖರೀದಿ ಮಾಡಿದರೆ ನಿಮಗೆ ಹಣ ಸಿಗುತ್ತದೆ.

ಬ್ಲಾಗರ್

ಬ್ಲಾಗರ್

ನಿಮ್ಮ ಬರವಣಿಗೆಯ ಕೌಶಲ್ಯವಿದ್ದರೆ ನಿಮ್ಮ ಸ್ವಂತ ಬ್ಲಾಗರ್ ಆರಂಭಿಸಿ ಹಣ ಗಳಿಸಬಹುದು. ಅತ್ಯುತ್ತಮ ಮಾಹಿತಿ ನೀಡುವ ಲೇಖನಗಳನ್ನು ಪ್ರಕಟಿಸಿ ಹೆಚ್ಚು ಓದುಗರನ್ನು ಆಕರ್ಷಿಸಬೇಕು. ಬ್ಲಾಗರ್ ಮೂಲಕ ಹಣ ಗಳಿಸಲು ಗೂಗಲ್ ಆಡ್ಸೆನ್ಸ್, ಅಫಿಲಿಯೆಟ್ ಮಾರ್ಕೆಟಿಂಗ್, ಪ್ರೋಡಕ್ಟ್ ಪ್ರಮೋಷನ್ ಹಾಗು ಯಾವುದೇ ಕಂಪನಿಯ ಪ್ರಚಾರ ಮಾಡುವ ಮೂಲಕ ಹಣ ಗಳಿಸಬಹುದು.

ಯುಟ್ಯೂಬ್- YouTube

ಯುಟ್ಯೂಬ್- YouTube

ಯುಟ್ಯೂಬ್ ಮೂಲಕ ಹಣ ಗಳಿಸುವುದರ ಬಗ್ಗೆ ಹೆಚ್ಚಿನ ಜನರಿಗೆ ತಿಳುವಳಿಕೆಯಿದ್ದು, ಇದೊಂದು ಉತ್ತಮ ವಿಧಾನ. ಯುಟ್ಯೂಬ್ ಚಾನೆಲ್ ಶುರು ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಹಣ ಗಳಿಸಬಹುದು. ನಿಮ್ಮ ಯುಟ್ಯೂಬ್ ಚಾನೆಲ್ ಗೆ 1000 ಚಂದಾದಾರರು ಹಾಗೂ 4000 ಗಂಟೆಗಳ ವಿಡಿಯೋ ವೀಕ್ಷಣೆ ಮಾಡಿದ ತರುವಾಯ ಆದಾಯ ಗಳಿಸಬಹುದು. ನಿಮ್ಮ ವಿಡಿಯೋಕ್ಕೆ ಜಾಹೀರಾತು ಲಿಂಕ್ ಮಾಡಲಾಗುತ್ತದೆ. ಅದರ ಮುಖಾಂತರ ನಿಮಗೆ ಹಣ ಸಿಗುತ್ತದೆ.

ಫೆಸ್ಬುಕ್- Facebook

ಫೆಸ್ಬುಕ್- Facebook

ಸ್ಮಾರ್ಟ್ಫೋನ್ ಇಲ್ಲದ ವ್ಯಕ್ತಿ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಜೊತೆಗೆ ಒಂದು ಫೆಸ್ಬುಕ್ ಖಾತೆ ಕೂಡ ಇರುತ್ತದೆ. ಫೆಸ್ಬುಕ್ ನಾವು ವಿಡಿಯೋಗಳನ್ನು ನೋಡಬಹುದಾಗಿದ್ದು, ಇದಕ್ಕಾಗಿ ಕಂಪನಿ ಹೊಸ ಸೆಕ್ಷನ್ ಕೂಡ ಆರಂಭಿಸಿದೆ. ಈ ವೀಡಿಯೊಗಳಲ್ಲಿ ಫೇಸ್‌ಬುಕ್ ವಿಭಿನ್ನ ಜಾಹೀರಾತುಗಳನ್ನು ನೀಡುತ್ತದೆ. ಇವುಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಹಣವನ್ನು ಸಂಪಾದಿಸಬಹುದು. ಇದಲ್ಲದೆ, ನೀವು ನಿಮ್ಮ ಸ್ವಂತ ಫೇಸ್‌ಬುಕ್ ಪೇಜ್ ಮಾಡಿ ಆ ಮೂಲಕ ಅಫಿಲಿಯೆಟ್ ಮಾರ್ಕೆಟಿಂಗ್ ಮೂಲಕ ಹಣ ಸಂಪಾದಿಸಬಹುದು.

ಕಡಿಮೆ ಬಂಡವಾಳದಲ್ಲಿ ಕೈತುಂಬಾ ಹಣ ಗಳಿಸಬಹುದಾದ 20 ಬಿಸಿನೆಸ್ ಐಡಿಯಾ ಕಡಿಮೆ ಬಂಡವಾಳದಲ್ಲಿ ಕೈತುಂಬಾ ಹಣ ಗಳಿಸಬಹುದಾದ 20 ಬಿಸಿನೆಸ್ ಐಡಿಯಾ

English summary

Earn Money Through These 6 Online Websites

Online media giving huge opportunities for employment. you can Earn good Money Through many Online Websites.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X