For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್‌ಧನ್ ಯೋಜನೆಯಡಿ ಮಾಸಿಕ 3,000 ಪಿಂಚಣಿ ಪಡೆಯಿರಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್‌ಧನ್‌ ಯೋಜನೆಯನ್ನು ಘೋಷಿಸಿದ್ದಾರೆ.

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್‌ಧನ್‌ ಯೋಜನೆಯನ್ನು ಘೋಷಿಸಿದ್ದಾರೆ.

ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್‌ಧನ್ ಯೋಜನೆಯಡಿ ಮಾಸಿಕ 3,000 ಪಿಂಚಣಿ

ಇದರ ಅಡಿಯಲ್ಲಿ ಅಸಂಘಟಿತ ವಲಯ ಮತ್ತು ಸಂಘಟಿತ ವಲಯದ ಸುಮಾರು 60 ಕೋಟಿ ಕಾರ್ಮಿಕರು 60 ವರ್ಷ ಮೀರಿದ ನಂತರ ತಿಂಗಳಿಗೆ ರೂ. 3,000 ಪಿಂಚಣಿ ಪಡೆಯಲಿದ್ದಾರೆ.
ಪ್ರಧಾನ ಮಂತ್ರಿ ಕರ್ಮ ಯೋಗಿ ಮಾನ್‌ಧನ್‌ ಯೋಜನೆಯಲ್ಲಿ 3 ಕೋಟಿ ಚಿಲ್ಲರೆ (ರಿಟೇಲ್) ವ್ಯಾಪಾರಿಗಳೂ ಒಳಗೊಳ್ಳಲಿದ್ದಾರೆ. ವಾರ್ಷಿಕವಾಗಿ ರೂ. 1.5 ಕೋಟಿವರೆಗೆ ಆದಾಯ ಇರುವ ವರ್ತಕರೂ ಕರ್ಮ ಯೋಗಿ ಮಾನ್‌ಧನ್ ಪಿಂಚಣಿ ಸೌಲಭ್ಯ ಪಡೆಯಬಹುದು. ಫಲಾನುಭವಿಗಳು ಕೇವಲ ಆಧಾರ್ ನಂಬರ್ ಮತ್ತು ಬ್ಯಾಂಕ್‌ ಖಾತೆಯ ಮೂಲಕ ಈ ಯೋಜನೆಯ ಫಲಾನುಭವ ಪಡೆಯಬಹುದು.
ಲೋಕಸಭಾ ಚುನಾವಣಾ ಪೂರ್ವದ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಅವರು ಇದೇ ಮಾದರಿಯ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್ ಯೋಜನೆಯನ್ನು ಘೋಷಿಸಿದ್ದರು. ಇದರಡಿಯಲ್ಲಿ ಈಗಾಗಲೇ 30 ಲಕ್ಷ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ ಕಡೆಗೆ (ಎನ್‌ಪಿಎಸ್‌) ಗ್ರಾಹಕರನ್ನು ಸೆಳೆಯಲು ವಿತ್ ಡ್ರಾವಲ್ ಮಿತಿಯನ್ನು ಶೇ. 40 ರಿಂದ ಶೇ. 60ಕ್ಕೆ ಹೆಚ್ಚಿಸಲಾಗಿದೆ.
ನಿನ್ನೆ ಬಜೆಟ್ ಮಂಡನೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಗಾಗಿ ರೂ. 900 ಕೋಟಿ ಅನುದಾನ ಇಡಲಾಗಿದೆ. ಈ ಯೋಜನೆ ಮೂಲಕ 14 ಕೋಟಿ ರೈತರಿಗೆ ವಾರ್ಷಿಕ ರೂ. 6,000 ಸಹಾಯಧನ ನೀಡಲಾಗುವುದು.

ಬಜೆಟ್ 2019: ಜನಸಾಮಾನ್ಯರಿಗೆ ಸಿಕ್ಕಿರುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ವಿವರ.. ಬಜೆಟ್ 2019: ಜನಸಾಮಾನ್ಯರಿಗೆ ಸಿಕ್ಕಿರುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ವಿವರ..

English summary

Pradhan Mantri Karma Yogi Maan Dhan Scheme, Get 3,000 monthly pensions

India Union Budget 2019 Pradhan Mantri Karma Yogi Maan Dhan Scheme announced by FM Nirmala sitharaman people will get Get 3,000 monthly pensions.
Story first published: Saturday, July 6, 2019, 10:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X