For Quick Alerts
ALLOW NOTIFICATIONS  
For Daily Alerts

ಕಡಿಮೆ ಬಂಡವಾಳದಲ್ಲಿ ಕೈತುಂಬಾ ಹಣ ಗಳಿಸಬಹುದಾದ 20 ಬಿಸಿನೆಸ್ ಐಡಿಯಾ

|

ತಂತ್ರಜ್ಞಾನ, ಡಿಜಿಟಲೀಕರಣ, ಆಧುನಿಕ ಜಗತ್ತಿನಲ್ಲಿ ದಿನಗಳು ಉರುಳಿದಂತೆ ಉದ್ಯೋಗ ಭದ್ರತೆ ಕಡಿಮೆಯಾಗತೊಡಗಿದೆ. ಕಳೆದ ಕೆಲ ವರ್ಷಗಳಲ್ಲಿ 'ನವೋದ್ಯಮಿ' ಗಳ ಉದಯವಾಗುತ್ತಿದೆ. ಅವರು ಹೊಸ ಉದ್ಯಮ (ಸ್ಟಾರ್ಟ್‌ಅಪ್) ಗಳ ಆರಂಭಕ್ಕೆ ಕೈ ಹಾಕುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಸ್ಟಾರ್ಟ್‌ಅಪ್ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಬೆಂಗಳೂರು ಸ್ಟಾರ್ಟ್‌ಅಪ್ ಪ್ರಿಯರ ನೆಚ್ಚಿನ ತವರೂರಾಗಿದೆ.

ಜನ್ಮತಾಳುವ ಎಲ್ಲ ಸ್ಟಾರ್ಟ್‌ಅಪ್ ಗಳೂ ಯಶಸ್ಸು ಕಾಣುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯೇ ಆಗಿದೆ. ಆದರೂ ದೇಶದಲ್ಲಿನ ಸಮಸ್ಯೆಗಳ ನಿವಾರಣೆಗೆ ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸ್ಟಾರ್ಟ್‌ಅಪ್ ಗಳು ಆರಂಭವಾಗುತ್ತಲೇ ಇರುವುದನ್ನು ನಾವೆಲ್ಲ ನೋಡಿದ್ದೇವೆ. ಯಾವುದೇ ಸ್ಟಾರ್ಟ್ ಅಪ್ ಐಡಿಯಾ ತನ್ನಷ್ಟಕ್ಕೆ ತಾನೇ ವಿಭಿನ್ನವಾಗಿರುವುದಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಆದರೂ ಸ್ಟಾರ್ಟ್ ಅಪ್ ಅನ್ನು ನೀವು ಎಷ್ಟು ವಿಶಿಷ್ಟವಾಗಿ ಜಾರಿಗೆ ತರುತ್ತೀರಿ ಎಂಬುದರ ಮೇಲೆ ಅದರ ಯಶಸ್ಸು ನಿರ್ಧರಿತವಾಗುತ್ತದೆ. ಅದಕ್ಕೇ ಯಾವುದೇ ಸ್ಟಾರ್ಟ್‌ಅಪ್ ನ ವೈಶಿಷ್ಟ್ಯತೆ ಅದನ್ನು ನಿಭಾಯಿಸುವ ವಿಭಿನ್ನತೆಯಲ್ಲಿದೆ ಎಂದು ಹೇಳಲಾಗುತ್ತದೆ. ಇಂದಿನ ಸ್ಟಾರ್ಟ್ ಅಪ್ ಜಮಾನಾದಲ್ಲಿ ನೀವೂ ಸಹ ನಿಮ್ಮದೇ ವ್ಯವಹಾರ ಆರಂಭಿಸಬಹುದು. ವಿಶೇಷವಾಗಿ ಯುವ ಉತ್ಸಾಹಿಗಳು, ಉದ್ಯಮ ಆರಂಭಿಸಲು ಬಯಸುವವರು ಈ ಕೆಳಗೆ ವಿವರಿಸಲಾದ ಪ್ರಮುಖ ಬಿಸಿನೆಸ್ ಐಡಿಯಾಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಯಶ ಕಾಣಬಹುದು.

ಆನ್ಲೈನ್ ಮೂಲಕ ವಸ್ತುಗಳ ಮಾರಾಟ
 

ಆನ್ಲೈನ್ ಮೂಲಕ ವಸ್ತುಗಳ ಮಾರಾಟ

ಇದೊಂದು ಉತ್ತಮ ಬಿಸಿನೆಸ್ ಐಡಿಯಾ ಆಗಿದ್ದು, ಮನೆಯಲ್ಲಿಯೇ ಹಲವಾರು ರೀತಿಯ ವಿಶಿಷ್ಟ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ನಮ್ಮ ಭಾರತೀಯ ಹೆಣ್ಣು ಮಕ್ಕಳು ಹಲವಾರು ವಸ್ತುಗಳನ್ನು ತಯಾರಿಸುವ ನೈಪುಣ್ಯತೆ ಹೊಂದಿರುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮನೆಯಿಂದ ಹೊರ ಹೋಗಿ ತಮ್ಮ ಕೌಶಲ್ಯ ತೋರಿಸುವ ಅವಕಾಶ ಸಿಗದೆ ಅವರ ಪ್ರತಿಭೆ ಬೆಳಕಿಗೆ ಬರಲ್ಲ. ಆದರೆ ತಮ್ಮ ವಸ್ತುಗಳನ್ನು ಆನ್ಲೈನ್ ಮೂಲಕ ಮಾರಬಹುದಾಗಿದೆ. ಮನೆಗಳಲ್ಲಿ ತಯಾರಾದ ವಸ್ತುಗಳನ್ನು ಆನ್ಲೈನ್ ಮೂಲಕ ಮಾರುವ ಕ್ಷೇತ್ರದಲ್ಲಿ ಇನ್ನೂ ಅಂತಹ ಬೆಳವಣಿಗೆಗಳಾಗಿಲ್ಲದ ಕಾರಣ ಇದರಲ್ಲಿ ಸ್ಟಾರ್ಟ್ಅಪ್ ಮಾಡಲು ಅವಕಾಶಗಳಿವೆ. ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಒಂದು ಪ್ಲಾಟ್ ಫಾರ್ಮ್ ನೀಡುವ ರೀತಿಯಲ್ಲಿ ಸ್ಟಾರ್ಟ್‌ಅಪ್ ಮಾಡಬಹುದು. ಇದರಿಂದ ಗ್ರಾಹಕರಿಗೆ ತಮಗಿಷ್ಟವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಸಹ ಅವಕಾಶ ಕಲ್ಪಿಸಿದಂತಾಗುತ್ತದೆ.

ಗಿಫ್ಟ್ ಐಟಂ ತಯಾರಿಸಿ ಮಾರಾಟ

ಈ ಒಂದು ವಹಿವಾಟು ಮನೆಯಿಂದಲೇ ವಸ್ತುಗಳನ್ನು ತಯಾರಿಸಿ ಮಾರಬೇಕೆನ್ನುವ ಮಹಿಳೆಯರಿಗೆ ಸೂಕ್ತವಾಗಿದೆ. ಗ್ರಾಹಕರ ಅಭಿರುಚಿ ಹಾಗೂ ಅವರು ತಿಳಿಸುವ ಸಂದರ್ಭಕ್ಕನುಗುಣವಾಗಿ ಗಿಫ್ಟ್ ಐಟಂ ತಯಾರಿಸಿ ಆನ್ ಲೈನ್ ಮೂಲಕ ಮಾರುವ ವ್ಯವಸ್ಥೆ ಮಾಡಬಹುದು. ಈ ಕ್ಷೇತ್ರ ಸಾಕಷ್ಟು ವಿಶಾಲವಾಗಿದ್ದು, ಐಡಿಯಾಗಳಿದ್ದರೆ ಏನು ಬೇಕಾದರೂ ಸಾಧಿಸಬಹುದು.

ಆಹಾರ ಪೂರೈಕೆ

ಆಹಾರ ಮಾರಾಟ ಅಥವಾ ಹೋಟೆಲ್ ಉದ್ಯಮಗಳಲ್ಲಿ ನೌಕರರನ್ನು ಕೈಬಿಡಲಾಗುತ್ತಿದೆ ಎಂಬ ವರದಿಗಳನ್ನು ಕೇಳಿ ಆತಂಕ ಪಡುವ ಅಗತ್ಯವಿಲ್ಲ. ಭಾರತದಲ್ಲಿ ಆಹಾರ ಉದ್ಯಮ ಬಿಲಿಯನ್ ಡಾಲರ್ ಉದ್ಯಮವಾಗಿದ್ದು, ಈ ಕ್ಷೇತ್ರದಲ್ಲಿ ಇನ್ನೂ ಅಪರಿಮಿತ ಅವಕಾಶಗಳಿವೆ. ಸರಿಯಾದ ಮಾರ್ಗದಲ್ಲಿ ನಿಪುಣತೆಯಿಂದ ಆಹಾರ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ ಪ್ರಾರಂಭಿಸಿದರೆ, ನೀವು ಜನರ ಆಹಾರ ಪದ್ಧತಿಯನ್ನೇ ಬದಲಾಯಿಸಬಲ್ಲಿರಿ.

ಡೆಟಾ ಸೆಕ್ಯುರಿಟಿ (Data Security)
 

ಡೆಟಾ ಸೆಕ್ಯುರಿಟಿ (Data Security)

ಆಧುನಿಕ ಜಗತ್ತಿನಲ್ಲಿ ಆನ್ಲೈನ್ ವ್ಯವಹಾರ ಬೆಳೆಯುತ್ತ ಸಾಗುತ್ತಿದೆ. ಹೀಗಾಗಿ ವೆಬ್ ಸೈಟ್, ಪೋರ್ಟಲ್ ಗಳಲ್ಲಿನ ಮಾಹಿತಿಯನ್ನು ಹ್ಯಾಕರ್ಸ್ ಗಳು ಹಾಗೂ ವಂಚಕರಿಂದ ಕಾಪಾಡುವುದು ಅವಶ್ಯಕವಾಗಿದೆ. ಇಂಥ ಅವಕಾಶ ಬಳಸಿಕೊಂಡು ಗ್ರಾಹಕರ ಆನ್ ಲೈನ್ ಡೇಟಾ ಸೆಕ್ಯುರಿಟಿ ಸೇವೆಯನ್ನು ಆರಂಭಿಸಬಹುದು.

ಕಾರ್ ವಾಶಿಂಗ್

ಕಾರು ಕೊಂಡಿರುವ ಎಲ್ಲರೂ ಅದಕ್ಕೆ ಡ್ರೈವರ್ ನನ್ನು ನೇಮಿಸಿಕೊಂಡಿರುವುದಿಲ್ಲ. ಹೀಗಾಗಿ ಹಲವಾರು ಬಾರಿ ಕಾರು ತೊಳೆಯುವುದು, ಅದನ್ನು ಸರ್ವಿಸ್ ಗೆ ಬಿಟ್ಟು ಸುಸ್ಥಿತಿಯಲ್ಲಿಡುವುದು ಕಾರು ಮಾಲೀಕರಿಗೆ ಕಿರಿ ಕಿರಿ ಉಂಟು ಮಾಡುತ್ತವೆ. ಇಂಥ ಒಂದು ಅವಕಾಶವನ್ನು ಉಪಯೋಗಿಸಿಕೊಂಡು ಅಟೋಮೆಟೆಡ್ ಕಾರ್ ವಾಶಿಂಗ್ ಸ್ಟಾರ್ಟ್‌ಅಪ್ ಬಗ್ಗೆ ಮುಂದುವರಿಯಬಹುದು.

ಸೋಷಿಯಲ್ ಮೀಡಿಯಾ ಬಗ್ಗೆ ಸಲಹಾ ಸೇವೆ

ಇಂದು ಸೋಶಿಯಲ್ ಮೀಡಿಯಾ ಜಗತ್ತನ್ನು ಆಳುತ್ತಿದೆ. ವ್ಯಾಪಾರ ವಲಯದಲ್ಲಿ ಸೋಶಿಯಲ್ ಮೀಡಿಯಾ 'ಕಿಂಗ್' ಆಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಕನ್ಸಲ್ಟನ್ಸಿ ಎಂಬುದು ಬಹು ಬೇಡಿಕೆಯ ಸೇವೆಯಾಗಿ ಹೊರ ಹೊಮ್ಮಿದೆ. ಸೂಕ್ತ ಜ್ಞಾನ ಹಾಗೂ ಸರಿಯಾದ ಮಾರ್ಗದಲ್ಲಿ ಕನ್ಸಲ್ಟನ್ಸಿ ಆರಂಭಿಸಿದರೆ ಲಕ್ಷಾಂತರ ರೂಪಾಯಿ ಹಣ ಗಳಿಸುವ ಸಾಧ್ಯತೆಗಳಿವೆ.

ಕರಕುಶಲ ವಸ್ತುಗಳ ಮಾರಾಟ

ಸುಂದರವಾದ ವಸ್ತುಗಳನ್ನು ಖರೀದಿಸುವುದು ಪ್ರತಿಯೊಬ್ಬರ ಸಹಜ ಗುಣ. ಹೀಗಾಗಿ ಆಕರ್ಷಕವಾಗಿ ತಯಾರಿಸಲಾದ ಕರಕುಶಲ ವಸ್ತುಗಳು ಎಲ್ಲರ ಮನಸೂರೆಗೊಳ್ಳುತ್ತವೆ. ನಮ್ಮ ಸುತ್ತಲೂ ಅನೇಕ ಕಡೆಗಳಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುವವರು ಅನೇಕರು ಇದ್ದೇ ಇರುತ್ತಾರೆ. ಇಂಥವರನ್ನು ಗುರುತಿಸಿ ಇವರು ತಯಾರಿಸಿದ ವಸ್ತುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಸ್ಟಾರ್ಟ್‌ಅಪ್ ಆರಂಭಿಸಬಹುದು.

ಪ್ರತಿಭೆಗಳಿಗಾಗಿ ಆನ್ಲೈನ್ ವೇದಿಕೆ

ಪ್ರತಿಯೊಬ್ಬರಲ್ಲೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದರ ಅನಾವರಣಕ್ಕೆ ಸೂಕ್ತ ವೇದಿಕೆ ಸಿಕ್ಕಿರುವುದಿಲ್ಲ. ಇಂಥ ಎಲೆ ಮರೆಯ ಕಾಯಿಯಂತಿರುವ ಜನ ಸಾಮಾನ್ಯರ ಪ್ರತಿಭೆ ಹಾಗೂ ಅವರಲ್ಲಿರುವ ಇನ್ನಿತರ ವಿಶೇಷ ಗುಣಗಳ ಪ್ರದರ್ಶನಕ್ಕೆ ಒಂದು ಆನ್ ಲೈನ್ ವೇದಿಕೆ ಒದಗಿಸಿ, ವೀಕ್ಷಕರು ಅವರ ಪ್ರತಿಭೆಗೆ ರೇಟಿಂಗ್ ನೀಡುವ ವ್ಯವಸ್ಥೆ ಮಾಡಬಹುದು. ವೀಕ್ಷಕರ ಲೈಕ್ ಹಾಗೂ ರೇಟಿಂಗ್ ಆಧರಿಸಿ ಪ್ರತಿಭಾವಂತರಿಗೆ ಹೆಸರಾಂತ ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನ ನೀಡುವ ಅವಕಾಶ ಒದಗಿಸಿ ಕೊಡಬಹುದು. ಯಾವುದೇ ರೀತಿಯ ತಾರತಮ್ಯವಿಲ್ಲದೆ, ನಿಜವಾದ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಥ ಒಂದು ಸ್ಟಾರ್ಟ್‌ಅಪ್ ಪ್ರಯೋಗ ಮಾದರಿಯಾಗಬಹುದು.

ವಿಡಿಯೋ ವೆಬ್ಸೈಟ್

ಸಮಾನ ಮನಸ್ಕರು ಜತೆಗೂಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಉತ್ತಮ ಕಂಟೆಂಟ್ ಹಂಚಿಕೊಳ್ಳಲು ಆನ್ಲೈನ್ ಪ್ಲಾಟ್ ಫಾರ್ಮ್ ತಯಾರಿಸಬಹುದು. ಯೂಟ್ಯೂಬ್ ಚಾನೆಲ್ ಮೂಲಕ ವಿಭಿನ್ನ ಕಂಟೆಂಟ್ ಗಳ ಬಗ್ಗೆ ಮಾಹಿತಿ ಕೊಟ್ಟು ಜನರನ್ನು ಶಿಕ್ಷಿತರನ್ನಾಗಿಸಬಹುದು. ಇಲ್ಲವೇ ತಮ್ಮ ಬಗ್ಗೆ ವಧುವರರ ವೇದಿಕೆ ಮಾಹಿತಿ, ಅಭಿರುಚಿಗಳನ್ನು ಹಂಚಿಕೊಂಡು ಗೆಳೆಯ ಅಥವಾ ಜೀವನ ಸಂಗಾತಿಯನ್ನು ಹುಡುಕಲು ನೆರವಾಗಬಹುದು.

ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಬಗ್ಗೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಕಲಬೆರಕೆಯಿಂದ ಕೂಡಿದೆ. ಇದು ಆರೋಗ್ಯದ ಬಗ್ಗೆ ನಾವು ಮತ್ತಷ್ಟು ಕಾಳಜಿ ವಹಿಸುವಂತೆ ಮಾಡಿದೆ. ತೆಳುವಾದ, ಆರೋಗ್ಯಪೂರ್ಣ ದೇಹವನ್ನು ಹೊಂದಿರುವುದು ಸಹ ಈಗ ಟ್ರೆಂಡ್ ಆಗಿದೆ. ಆದರೆ ಆರೋಗ್ಯ ಪೂರ್ಣ ಆಹಾರ ಯಾವುದು? ಏನು ಸೇವಿಸಿದರೆ ಆರೋಗ್ಯವಾಗಿರಬಲ್ಲೆವು ಎಂಬುದು ಬಹುತೇಕರಿಗೆ ಗೊತ್ತಿರುವುದಿಲ್ಲ. ಈ ಎಲ್ಲ ಮಾಹಿತಿ ನೀಡಲು ಒಂದು ಆನ್ ಲೈನ್ ಪ್ಲಾಟ್ ಫಾರ್ಮ್ ಆರಂಭಿಸಬಹುದು.

ಮೇಕಪ್ ಹಾಗೂ ಸೌಂದರ್ಯವರ್ಧನೆ ಸೇವೆ

ಬಟ್ಟೆಗಳಿಂದ ಹಿಡಿದು ಗೃಹೋಪಕರಣಗಳು, ಆಹಾರದಿಂದ ಕಾರುಗಳವರೆಗೆ ಎಲ್ಲವೂ ಆನ್ಲೈನ್ ಮಯವಾಗುತ್ತಿದೆ! ಈ ಯುಗದಲ್ಲಿ ಮೇಕಪ್ ಸರ್ವಿಸ್ ಮಾತ್ರ ಇನ್ನೂ ಸಂಪ್ರದಾಯಿಕ ಬ್ಯೂಟಿ ಪಾರ್ಲರ್‌ಗೆ ಸೀಮಿತವಾಗಿರಬೇಕು? ಇಂದು ಜನರಿಗೆ ಎಲ್ಲವೂ ಮನೆ ಬಾಗಿಲಿಗೇ ಬಂದು ತಲುಪುವಂತಿರಬೇಕು. ಹೀಗಿರುವಾಗ ಮನೆಗೇ ಹೋಗಿ ಬ್ಯೂಟಿ ಹಾಗೂ ಮೇಕಪ್ ಸರ್ವಿಸ್ ನೀಡುವ ಹಾಗೆ ಸ್ಟಾರ್ಟ್‌ಅಪ್ ಬಗ್ಗೆ ವಿಚಾರ ಮಾಡಬಹುದು.

ಬಾಡಿಗೆ ವಸ್ತುಗಳ ಸೇವೆ

ಸಾಮಾನ್ಯವಾಗಿ ನಾವು ನಮ್ಮ ಕಾರನ್ನು ಯಾರಾದರೂ ಕೇಳಿದರೆ ಬಾಡಿಗೆಗೆ ಕೊಟ್ಟು ಬಿಡುತ್ತೇವೆ. ಆದರೆ ಮನೆಗಳಲ್ಲಿ ಬಳಸುವ ಅನೇಕ ವಸ್ತುಗಳು ಬಾಡಿಗೆಗೆ ಸಿಗುವುದಿಲ್ಲ. ಉದಾಹರಣೆಗೆ- ಮನೆಗೆ ಯಾರೋ ಪ್ರಮುಖ ಅತಿಥಿ ಬರಲಿದ್ದಾರೆ ಎಂದಿಟ್ಟುಕೊಳ್ಳಿ. ಅಂಥ ಸಂದರ್ಭದಲ್ಲಿ ಅವರಿಗೆ ಊಟ, ತಿಂಡಿ ಬಡಿಸಲು ದುಬಾರಿ ತಟ್ಟೆ ಹಾಗೂ ಲೋಟ ಖರೀದಿಸಬೇಕಾಗುತ್ತದೆ. ಆದರೆ ಇವು ನಮಗೆ ಮನೆಯಲ್ಲಿ ಮತ್ತೆ ಯಾವ ಉಪಯೋಗಕ್ಕೂ ಬಾರದಂತಾಗುತ್ತವೆ. ಇಂಥ ಪರಿಸ್ಥಿತಿಯಲ್ಲಿ ತಟ್ಟೆ, ಲೋಟಗಳೂ ಬಾಡಿಗೆಗೆ ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ. ಅದರಂತೆ ಮನೆಯಲ್ಲಿರುವ ಗಿಟಾರ್ ಅನ್ನು ಯಾವತ್ತೋ ಒಂದು ಬಾರಿ ಉಪಯೋಗಿಸುತ್ತೇವೆ. ಇದನ್ನೂ ಸಹ ಬಾಡಿಗೆಗೆ ನೀಡಬಹುದು. ಭಾರತದಲ್ಲಿ ಈವರೆಗೂ ಇಂಥ ವೈಯಕ್ತಿಕ ವಸ್ತುಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆ ಯಾವುದೂ ಇಲ್ಲ. ಬಟ್ಟೆ, ಫರ್ನಿಚರ್, ಅಡುಗೆ ಪಾತ್ರೆಗಳು, ಗ್ಯಾಜೆಟ್ ಗಳು ಹೀಗೆ ಏನನ್ನಾದರೂ ಬಾಡಿಗೆ ನೀಡುವ ವ್ಯವಹಾರಕ್ಕಾಗಿ ಒಂದು ಪ್ಲಾಟ್ ಫಾರ್ಮ್ ತಯಾರಿಸಬಹುದು.

ಆನ್ಲೈನ್ ಕೋರ್ಸ್

ಪ್ರಸ್ತುತ ಇಂಟರ್ನೆಟ್ ನಲ್ಲಿ ಇರುವ ಕೋರ್ಸೆರಾ, ಉಡೆಮಿಯಂತಹ ಆನ್ಲೈನ್ ಕಲಿಕಾ ತಾಣದಲ್ಲಿ ಸಿಗುವ ದುಬಾರಿ ಕೋರ್ಸ್ ಗಳನ್ನು ಖರೀದಿಸಲು ಎಲ್ಲರೂ ಶಕ್ತರಾಗಿರುವುದಿಲ್ಲ. ಅಲ್ಲದೆ ಭಾರತದಲ್ಲಿ ಇಂದಿಗೂ ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ನೀಡುವುದರಿಂದ ಇವುಗಳಲ್ಲಿನ ಉನ್ನತ ಮಟ್ಟದ ಇಂಗ್ಲಿಷ್ ಅರ್ಥ ಮಾಡಿಕೊಳ್ಳುವುದು ಸಹ ಕಷ್ಟಕರವಾಗಿದೆ. ಹೀಗಾಗಿ ಎಲ್ಲರಿಗೂ ತಿಳಿಯುವಂತಿರುವ ಸರಳ ಕೋರ್ಸ್ ಗಳಿಗೆ ಎಲ್ಲೆಲ್ಲೂ ಬೇಡಿಕೆ ಇದೆ. ಹೀಗಿರುವಾಗ ಸ್ಥಳೀಯ ಭಾಷೆಗಳಲ್ಲಿಯೇ ನಿರ್ದಿಷ್ಟ ವಿಷಯಗಳ ಕೋರ್ಸ್ ವಿಡಿಯೋ ತಯಾರಿಸಿ ಆನ್ಲೈನ್ ಮೂಲಕ ವ್ಯವಹಾರ ಆರಂಭಿಸಲು ಅವಕಾಶವಿದೆ. ಶಿಕ್ಷಣ ಕ್ಷೇತ್ರದಲ್ಲಿ ಬೈಜೂಸ್ ಸಾಕಷ್ಟು ಯಶ ಗಳಿಸಿದೆ.

ಟೀ-ಶರ್ಟ್ ಪ್ರಿಂಟಿಂಗ್

ಬಟ್ಟೆಗಳ ಬಗ್ಗೆ ಯುವಜನತೆ ಭಾರೀ ವ್ಯಾಮೋಹ ಹೊಂದಿದ್ದಾರೆ. ಟೀ-ಶರ್ಟ್ ಪ್ರಿಂಟಿಂಗ್ ವ್ಯವಹಾರ ಬಹು ಜನಪ್ರಿಯತೆ ಪಡೆಯುತ್ತಿದೆ. ದೇಶದಲ್ಲಿರುವ ಬಹುತೇಕ ಎಲ್ಲ ದೊಡ್ಡ ಸಂಘ, ಸಂಸ್ಥೆಗಳು ಹಾಗೂ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ತಮ್ಮ ಕಂಪನಿ ಹೆಸರಿನ ಪ್ರಿಂಟ್ ಇರುವ ಟೀ-ಶರ್ಟ್ ಗಳ ಅವಶ್ಯಕತೆ ಇರುತ್ತದೆ. ಕಂಪನಿಗಳಿಗೆ ಬೇಕಾದ ಹಾಗೆ, ವೈವಿಧ್ಯಮಯವಾಗಿ ಟೀ-ಶರ್ಟ್ ಪ್ರಿಂಟ್ ಮಾಡಿಕೊಡುವುದು ಲಾಭದಾಯಕ ಉದ್ಯಮವಾಗಿದೆ.

ಬೆಬಿ ಡೇ ಕೇರ್

ಬೆಬಿ ಡೇ ಕೇರ್ ಎಂಬುದು ಹೆಸರೇ ಸೂಚಿಸುವಂತೆ ದಿನದ ಅವಧಿಯಲ್ಲಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸವಾಗಿದೆ. ಇಂದು ಬಹುತೇಕ ಸುಶಿಕ್ಷಿತ ಮಹಿಳೆಯರು ಉದ್ಯೋಗಸ್ಥರಾಗಿದ್ದು, ಮಕ್ಕಳನ್ನೂ ನೋಡಿಕೊಂಡು ಕೆಲಸಕ್ಕೆ ಹೋಗುವುದು ಅವರಿಗೆ ಹೊರೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಾಳಜಿ ಪೂರ್ವಕವಾಗಿ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್ ಆರಂಭಿಸಿ ಯಶಸ್ವಿ ಉದ್ಯಮಿಯಾಗಬಹುದು.

ಹೊರಾಂಗಣ ಜಾಹೀರಾತು

ಡಿಜಿಟಲ್ ಮಾರ್ಕೆಟಿಂಗ್ ವಿಧಾನ ಅತಿ ಪರಿಣಾಮಕಾರಿ ಹಾಗೂ ಮಿತವ್ಯಯಕಾರಿಯಾಗಿದೆ. ಆದರೂ ಹೋರ್ಡಿಂಗ್ಸ್, ಬಸ್ ಶೆಲ್ಟರ್ ಹಾಗೂ ಇನ್ನಿತರ ಕಡೆ ಹೊರಾಂಗಣ ಜಾಹೀರಾತುಗಳು ತಮ್ಮ ಬೇಡಿಕೆ ಕಳೆದುಕೊಂಡಿಲ್ಲ. ಈ ವಲಯ ಸಹ ಬುದ್ಧಿವಂತ ಉತ್ಸಾಹಿಗಳಿಗೆ ಸಾಕಷ್ಟು ಅವಕಾಶಗಳನ್ನು ಒಳಗೊಂಡಿದೆ. ೨೮. ಪರ್ಯಾಯ ಮಾರ್ಗಗಳ ಮೂಲಕ ಮಿತವ್ಯಯದ ಇಂಧನ ಉತ್ಪಾದನೆ ಪರ್ಯಾಯ ಮಾರ್ಗಗಳ ಮೂಲಕ ಇಂಧನ ಉತ್ಪಾದನೆ ಇಂದಿನ ದಿನಮಾನಗಳಲ್ಲಿ ಅತಿ ಅಗತ್ಯವಾಗಿದೆ. ಸೋಲಾರ್, ಗಾಳಿ ಯಂತ್ರ ಹಾಗೂ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಘಟಕಗಳು ಭಾರಿ ಬೇಡಿಕೆಯಲ್ಲಿವೆ. ಬೆಳೆಯುತ್ತಿರುವ ನಮ್ಮ ದೇಶದಲ್ಲಿ ಇವುಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ.

ಭಾಷಾಂತರಕಾರರು

ಬಹು ಭಾಷೆಗಳ ದೇಶವಾಗಿರುವ ಭಾರತದಲ್ಲಿ ವೈದ್ಯಕೀಯ ಕ್ಷೇತ್ರವೇ ಇರಲಿ, ಹಣಕಾಸು ವಲಯ, ಆರೋಗ್ಯ ವಲಯ, ವಿಮಾ ವಲಯವೇ ಇರಲಿ, ಗ್ರಾಹಕರೊಂದಿಗೆ ವ್ಯವಹರಿಸಲು ಕಂಪನಿಗಳಿಗೆ ಭಾಷಾಂತರಕಾರರ ಅಗತ್ಯವಿದೆ. ಅಲ್ಲದೆ ವಿದೇಶಗಳಲ್ಲಿನ ಗ್ರಾಹಕರೊಂದಿಗೆ ವ್ಯವಹರಿಸಲು ವಿದೇಶಿ ಭಾಷೆಗಳ ನಿಪುಣರ ಅವಶ್ಯಕತೆಯಿದೆ. ಈ ಕ್ಷೇತ್ರದಲ್ಲಿ ಭಾಷಾಂತರಕಾರರ ಕೊರತೆ ನೀಗಿಸುವ ಮೂಲಕ ಲಾಭದಾಯಕ ಉದ್ದಿಮೆ ಆರಂಭಿಸಬಹುದು. ೩೮. ಹಿರಿಯ ನಾಗರಿಕರ ಸೇವೆ ವರದಿಗಳ ಪ್ರಕಾರ, ೨೦೨೧ರ ವೇಳೆಗೆ ವೃದ್ಧರ ಜನಸಂಖ್ಯೆ ೧೪೩ ಮಿಲಿಯನ್ ಆಗಲಿದೆ. ಆದರೆ ಮನೆಯಲ್ಲಿರುವ ಗಂಡ-ಹೆಂಡತಿ ಇಬ್ಬರೂ ಕೆಲಸ ಮಾಡುವ ಈ ಯುಗದಲ್ಲಿ ವಯೋವೃದ್ಧರ ಸರಿಯಾದ ಆರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ವಯೋವೃದ್ಧರ ಆರೈಕೆಗಾಗಿ ವಿಶೇಷ ಸೇವೆಗಳನ್ನು ಆರಂಭಿಸಬಹುದು.

ಯೋಗ ಹಾಗೂ ಜಿಮ್ ಸೇವೆ

ಆಧುನಿಕ ಒತ್ತಡದ ಜೀವನದಲ್ಲಿ ಯೋಗ, ಜಿಮ್ ಹಾಗೂ ಇನ್ನಿತರ ತಾಳ್ಮೆಯ ವಿಧಾನಗಳು ಉದ್ಯಮಿಗಳು, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಎಲ್ಲರಿಗೂ ಅತ್ಯವಶ್ಯಕ.. ಹೆಲ್ಥ ಕ್ಲಬ್ ಗಳು, ಜಿಮ್ ಗಳು, ಯೋಗ ತರಬೇತಿ ಶಿಬಿರಗಳು ಹೀಗೆ ಎಲ್ಲೆಡೆ ನುರಿತ ಯೋಗ ತರಬೇತಿದಾರರ ಅವಶ್ಯಕತೆ ಇದೆ. ಇಂಥ ಸಂದರ್ಭದಲ್ಲಿ ನಮ್ಮ ಸುತ್ತ ಮುತ್ತಲಿನವರನ್ನು ಯೋಗ ಹಾಗೂ ಇತರ ಸಂಬಂಧಿತ ಚಟುವಟಿಕೆಗಳತ್ತ ಸೆಳೆಯುವುದು ಅತಿ ಅಗತ್ಯವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿದ್ದು, ಸರಿಯಾದ ಯೋಜನೆಯ ಮೂಲಕ ಜನರನ್ನು ತರಬೇತಿ ಶಿಬಿರಗಳತ್ತ ಸೆಳೆಯುವುದು ಅವಶ್ಯವಾಗಿದೆ. ಈ ವಲಯದ ಬಗ್ಗೆ ಗಮನ ಹರಿಸಿದರೆ ಒಳ್ಳೆಯ ಸ್ಟಾರ್ಟ್‌ಅಪ್ ಆರಂಭಿಸುವುದು ಕಷ್ಟವೇನಲ್ಲ.

ಆರೋಗ್ಯ ವಿಮಾ ಸಲಹಾಗಾರ

ಹಲವಾರು ಕಂಪನಿಗಳು ಪೂರ್ಣಾವಧಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಷ್ಟು ಆರ್ಥಿಕ ಸಬಲತೆ ಹೊಂದಿರುವುದಿಲ್ಲ. ಅದರಲ್ಲೂ ಅತಿ ಸಂಕೀರ್ಣತೆಯ ಆರೋಗ್ಯ ವಿಮೆ ಕ್ಷೇತ್ರದಲ್ಲಿ ಪರಿಣಿತರನ್ನು ನೇಮಕ ಮಾಡಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿಯೇ ಬಹುತೇಕ ಆರೋಗ್ಯ ವಿಮಾ ಕಂಪನಿಗಳು ತಮ್ಮ ಸೇವೆಗಳನ್ನು ಗ್ರಾಹಕರಿಗೆ ವಿವರಿಸಲು ಹೊರಗುತ್ತಿಗೆ ಏಜೆನ್ಸಿ ಮೊರೆ ಹೋಗುತ್ತವೆ. ಈ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದರೆ ಸ್ಟಾರ್ಟ್‌ಅಪ್ ಆರಂಭಿಸಲು ಸಾಧ್ಯ.

ಆಟೋ ರಿಕ್ಷಾ ಸರ್ವಿಸ್

ಹೆಚ್ಚಿನ ಸಂದರ್ಭಗಳಲ್ಲಿ ನಗರಗಳಲ್ಲಿ ಆಟೋ ರಿಕ್ಷಾಗಳೇ ಜನರ ಪ್ರಮುಖ ಸಾರಿಗೆ ಸಾಧನಗಳಾಗಿವೆ. ಆದರೆ ಕೆಲ ಸಂದರ್ಭಗಳಲ್ಲಿ ಮನೆಯ ಹತ್ತಿರ ಆಟೋ ಸಿಗದೆ ಪರದಾಡುವಂತಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆಟೋ ರಿಕ್ಷಾ ಸರ್ವಿಸ್ ಸಿಗುವಂತೆ ವ್ಯವಸ್ಥೆ ಮಾಡುವುದು ಒಂದು ಲಾಭದಾಯಕ ವ್ಯವಹಾರವಾಗಬಹುದು. ಅದರಲ್ಲೂ 2 ಹಾಗೂ 3ನೇ ಹಂತದ ನಗರಗಳಲ್ಲಿ ಈ ಸರ್ವಿಸ್ ಗೆ ಹೆಚ್ಚು ಬೇಡಿಕೆ ಇದೆ.

English summary

Top 20 low cost business ideas

While job uncertainty is increasing every day, there has been a flurry of startups taking birth in the country.
Story first published: Tuesday, July 2, 2019, 11:21 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more