For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ: ಈ ಸರ್ಕಾರಿ ನೌಕರರ ಮಾಸಿಕ ಸಂಬಳ 5 ಸಾವಿರ ಹೆಚ್ಚಳ ಮತ್ತು ಬಡ್ತಿ

|

ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಸಿಹಿಸುದ್ದಿ! ಅವರಿಗೆ ದೊಡ್ಡ ವೇತನ ಹೆಚ್ಚಳ ಮತ್ತು ಪ್ರಮೋಷನ್ ಸಿಗಲಿವೆ. ಇದರೊಂದಿಗೆ ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸರಕಾರ ಅಸ್ತು ಅಂದಿದ್ದು, ಹಲವಾರು ಸರಕಾರಿ ನೌಕರರ ಮಾಸಿಕ ವೇತನದಲ್ಲಿ ರೂಪಾಯಿ 5 ಸಾವಿರಗಳವರೆಗೆ ಹೆಚ್ಚಳವಾಗಬಹುದು ಹಾಗೂ ಬಡ್ತಿ ಸಹ ದೊರಕಬಹುದು.

ಮಾಸಿಕ ಸಂಬಳದಲ್ಲಿ 5 ಸಾವಿರ ಹೆಚ್ಚಳ
 

ಮಾಸಿಕ ಸಂಬಳದಲ್ಲಿ 5 ಸಾವಿರ ಹೆಚ್ಚಳ

ಕೇಂದ್ರ ಸರಕಾರಿ ನೌಕರರಿಗೆ ಸರಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಅವರ ಮಾಸಿಕ ಸಂಬಳ ಹೆಚ್ಚಳ ಹಾಗೂ ಬಡ್ತಿ ಎರಡೂ ಸಿಗುವ ಸಾಧ್ಯತೆಗಳಿವೆ. ಮಾಸಿಕ ಸಂಬಳ ರೂ. 5 ಸಾವಿರಗಳವರೆಗೆ ಹೆಚ್ಚಾಗಬಹುದಾಗಿದ್ದು, ಮನೆ ಬಾಡಿಗೆ ಭತ್ಯೆ ಹಾಗೂ ತುಟ್ಟಿ ಭತ್ಯೆಗಳು ಸಹ ಹೆಚ್ಚಾಗಲಿವೆ. ಈ ಎಲ್ಲ ಸೌಲಭ್ಯಗಳು ಕೇಂದ್ರ ಸರಕಾರದ ಅಧೀನದ ಕೇಂದ್ರೀಯ ವಿದ್ಯಾಲಯ ಸಂಘಟನಲ್ಲಿ ಕೆಲಸ ಮಾಡುವ ನೌಕರರಿಗೆ ಅನ್ವಯಿಸಲಿವೆ. ಸರಕಾರದ ಆದೇಶದ ಪ್ರಕಾರ ಈ ನೌಕರರ ವೇತನಗಳು 4200 ರೂ.ಗಳಿಂದ 4600 ರೂ.ಗಳವರೆಗೆ ಹೆಚ್ಚಾಗಲಿವೆ. ಇದರ ಜೊತೆಗೆ ಅವರಿಗೆ ಶ್ರೇಣಿ 6 ರಿಂದ ಶ್ರೇಣಿ 7ಕ್ಕೆ ಬಡ್ತಿ ಸಹ ದೊರಕಲಿದೆ. ಇದೆಲ್ಲದರ ಪರಿಣಾಮವಾಗಿ ಅವರ ಒಟ್ಟು ಮಾಸಿಕ ಸಂಬಳದಲ್ಲಿ 5 ಸಾವಿರ ರೂ. ಏರಿಕೆಯಾಗಲಿದೆ.

ಬಾಡಿಗೆ ಭತ್ಯೆ, ತುಟ್ಟಿ ಭತ್ಯೆ ಹೆಚ್ಚಳ

ಬಾಡಿಗೆ ಭತ್ಯೆ, ತುಟ್ಟಿ ಭತ್ಯೆ ಹೆಚ್ಚಳ

ಆಲ್ ಇಂಡಿಯಾ ಆಡಿಟ್ಸ್ ಆಂಡ್ ಅಕೌಂಟ್ಸ್ ಅಸೋಸಿಯೇಶನ್ ಜನರಲ್ ಸೆಕ್ರೆಟರಿ ಹರಿಶಂಕರ ತಿವಾರಿ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೆವಿಎಸ್ ನಲ್ಲಿ ಪ್ರಸ್ತುತ ಅಸಿಸ್ಟಂಟ್ ಎಡಿಟರ್ ಆಗಿ ಕೆಲಸ ಮಾಡುತ್ತಿರುವವರ ಗ್ರೇಡ್ ಪೇ ಯನ್ನು 4200 ರೂ.ಗಳಿಂದ 4600 ರೂ.ಗಳಿಗೆ ಹೆಚ್ಚಿಸಲಾಗಿರುವುದು ಆಶಾದಾಯಕ ಬೆಳವಣಿಗೆ. ಇದರಿಂದ ಈ ನೌಕರರ ಮನೆ ಬಾಡಿಗೆ ಭತ್ಯೆ ಹಾಗೂ ತುಟ್ಟಿ ಭತ್ಯೆಗಳು ಸಹ ಹೆಚ್ಚಾಗಲಿವೆ ಎಂದು ತಿವಾರಿ ಹೇಳಿದ್ದಾರೆ.

ಆಗಸ್ಟ್ 6 ರಂದು ಸರಕಾರದಿಂದ ಆದೇಶ

ಆಗಸ್ಟ್ 6 ರಂದು ಸರಕಾರದಿಂದ ಆದೇಶ

ಆಗಸ್ಟ್ 6 ರಂದು ಸರಕಾರದಿಂದ ಈ ಆದೇಶವನ್ನು ಹೊರಡಿಸಲಾಗಿದ್ದು, ಅದರ ಪ್ರಕಾರ ಕೆವಿಎಸ್ ನೌಕರರ ಸಂಬಳ ಏರಿಕೆ ಹಾಗೂ ಬಡ್ತಿ ಆದೇಶಗಳು 2016 ರ ಜನೇವರಿ 1 ರಿಂದ ಪೂರ್ವಾನ್ವಯವಾಗಿ ಜಾರಿಯಾಗಲಿವೆ. ಎಲ್ಲ ನೌಕರರು ಸುಮಾರು ಮೂರೂವರೆ ವರ್ಷದ ಹೆಚ್ಚುವರಿ ಸಂಬಳದ ಹಿಂಬಾಕಿಯನ್ನು ಶೀಘ್ರ ಪಡೆಯಲಿದ್ದಾರೆ. ಈ ಆದೇಶದ ಪ್ರತಿಯನ್ನು ಈಗಾಗಲೇ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ಕೇಂದ್ರೀಯ ವಿದ್ಯಾಲಯ ಸಂಘಟನೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

 7ನೇ ಗ್ರೇಡ್ ಅಧಿಕಾರಿಗಳ ಕನಿಷ್ಠ ವೇತನ 44,900
 

7ನೇ ಗ್ರೇಡ್ ಅಧಿಕಾರಿಗಳ ಕನಿಷ್ಠ ವೇತನ 44,900

೭ನೇ ವೇತನ ಆಯೋಗದ ವೇತನ ಶ್ರೇಣಿಯ ಪ್ರಕಾರ 7ನೇ ಗ್ರೇಡ್ ಅಧಿಕಾರಿಗಳ ಕನಿಷ್ಠ ವೇತನ ರೂ. 44,900 ಗಳಾಗಿರಲಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಶೇ. 12 ರ ದರದಲ್ಲಿ ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಗಳನ್ನು ಸೇರಿಸಿದಲ್ಲಿ 10,776 ರೂ. ದೊರಕಲಿವೆ. ಇದರಂತೆ ಗ್ರೇಡ್ 6 ರ ಅಧಿಕಾರಿಗಳ ಮೂಲ ವೇತನ 35 ಸಾವಿರ ರೂ.ಗಳಾಗಿದ್ದು ಇವರಿಗೆ ಶೇ. 12 ರಂತೆ ಮನೆ ಬಾಡಿಗೆ ಭತ್ಯೆ ಹಾಗೂ ತುಟ್ಟಿ ಭತ್ಯೆಗಳನ್ನು ಸೇರಿಸಿದಲ್ಲಿ ಹೆಚ್ಚುವರಿಯಾಗಿ 8496 ರೂ. ಸಿಗಲಿವೆ.

English summary

7th Pay Commission! These government employees get Rs 5,000 monthly increment plus promotion!

Big news for these central government employees has been announced! They will get a big pay hike as well as promotions.
Story first published: Friday, August 16, 2019, 11:05 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more