For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಕೆಲಸ ಮಾಡಿ ಪ್ರತಿ ದಿನ 4-5 ಸಾವಿರ ಗಳಿಸಿ

ಹೊಸ ರೀತಿಯಲ್ಲಿ ಕೆಲಸ ಮಾಡಿ ಕೈತುಂಬಾ ಗಳಿಸಲು ಇಂಟರನೆಟ್ ಎಂಬ ಅದ್ಭುತ ಮಾಧ್ಯಮವು ಹೊಸ ರೀತಿಯಲ್ಲಿ ಅವಕಾಶಗಳ ಬಾಗಿಲನ್ನು ತೆರೆಯುತ್ತಿದೆ.

|

ಹೊಸ ರೀತಿಯಲ್ಲಿ ಕೆಲಸ ಮಾಡಿ ಕೈತುಂಬಾ ಗಳಿಸಲು ಇಂಟರನೆಟ್ ಎಂಬ ಅದ್ಭುತ ಮಾಧ್ಯಮವು ಹೊಸ ರೀತಿಯಲ್ಲಿ ಅವಕಾಶಗಳ ಬಾಗಿಲನ್ನು ತೆರೆಯುತ್ತಿದೆ. ನಿಮ್ಮ ಬುದ್ದಿ ಸಾಮರ್ಥ್ಯ, ಕೌಶಲ್ಯಕ್ಕೆ ಅನುಗುಣವಾಗಿ ನೀವು ಎಷ್ಟು ಹೆಚ್ಚು ಕೆಲಸ ಮಾಡುವಿರೋ ಅಷ್ಟೆ ಹೆಚ್ಚು ಹಣ ಗಳಿಕೆ ಮಾಡಬಹುದು. ಮನೆಯಲ್ಲಿಯೇ ಕುಳಿತು ಇಂಟರ್ನೆಟ್ ಸಂಪರ್ಕದ ಮೂಲಕ ಸಾವಿರಾರು ಹಣ ಗಳಿಸಬಹುದು. ಆನ್ಲೈನ್ ಮೂಲಕ ಯಾವ ಯಾವ ಕೆಲಸ ಮಾಡಿ ಉತ್ತಮ ಸಂಪಾದನೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ..

ಬ್ಲಾಗಿಂಗ್

ಬ್ಲಾಗಿಂಗ್

ಆನ್ಲೈನ್ ಮೂಲಕ ಹಣ ಗಳಿಸುವ ಮುಂಚೂಣಿ ಕೆಲಸಗಳಲ್ಲಿ ಬ್ಲಾಗಿಂಗ್ ಕೂಡ ಒಂದು. ಬ್ಲಾಗ್ ಬರೆಯುವ ಪರಿಣತಿ ಹೊಂದಿದ್ದಲ್ಲಿ ಹಣ ಸಂಪಾದಿಸಬಹುದು. ನಿಮ್ಮ ಬ್ಲಾಗ್ ಅನ್ನು ಗೂಗಲ್‌ನ ಆಡ್ ಸೆನ್ಸ್‌ಗೆ ಸೈನ್ ಅಪ್ ಮಾಡಿದರೆ, ನಿಮ್ಮ ಬ್ಲಾಗ್‌ನಲ್ಲಿ ಗೂಗಲ್ ಜಾಹೀರಾತುಗಳನ್ನು ನೀಡಲಾಗುತ್ತದೆ. ನಿಮ್ಮ ಬ್ಲಾಗ್ ಅನ್ನು ಗೂಗಲ್ ಆಡ್ ಸೆನ್ಸ್ ಅಪ್ರೂವ್ ಮಾಡಿದಲ್ಲಿ ನಿಧಾನವಾಗಿಯಾದರೂ, ನಿಯಮಿತ ಆದಾಯವನ್ನು ನಿರೀಕ್ಷಿಸಬಹುದು. ನಿಮ್ಮ ಬ್ಲಾಗ್ ಮೇಲಿನ ಜಾಹೀರಾತುಗಳನ್ನು ಎಷ್ಟು ಬಾರಿ ಕ್ಲಿಕ್ ಮಾಡಲಾಗಿದೆ ಹಾಗೂ ಎಷ್ಟು ಬಾರಿ ನೋಡಲಾಗಿದೆ ಎಂಬ ಆಧಾರದಲ್ಲಿ ಗೂಗಲ್ ಹಣ ಪಾವತಿಸುತ್ತದೆ. ಇದರೊಂದಿಗೆ ನೀವು ಬೇರೆ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಅಫಿಲಿಯೇಟ್ ಮಾರ್ಕೆಟಿಂಗ್ ಸಹ ಆರಂಭಿಸಬಹುದು. ಈ ಮೂಲಕ ಕೂಡ ಉತ್ತಮ ಆದಾಯ ಗಳಿಸಬಹುದು.

ಸಂಭಾವ್ಯ ಗಳಿಕೆ :
ನಿಮ್ಮ ಬ್ಲಾಗ್‌ನಲ್ಲಿ 2 ಇಂಚು ಉದ್ದ ಹಾಗೂ 2 ಇಂಚು ಅಗಲದ ಜಾಗದಲ್ಲಿ ಜಾಹೀರಾತುಗಳ ಪ್ರದರ್ಶಿಸುವ ಮೂಲಕ ತಿಂಗಳಿಗೆ ರೂ. 2 ರಿಂದ 15 ಸಾವಿರವರೆಗೆ ಗಳಿಸಬಹುದು. ಇದು ನಿಮ್ಮ ಬ್ಲಾಗ್ ಸಂದರ್ಶಿಸುವ ವೀಕ್ಷಕರ ಸಂಖ್ಯೆಯನ್ನು ಆಧರಿಸಿರುತ್ತದೆ.

 

ಟ್ರಾನ್ಸಲೇಟರ್

ಟ್ರಾನ್ಸಲೇಟರ್

ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಹಿಡಿತವಿದ್ದವರು ಭಾಷಾಂತರಕಾರರಾಗಿ ಕೆಲಸ ಆರಂಭಿಸಬಹುದು. ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಹಾಗೂ ಒಂದೆರಡು ಭಾರತೀಯ ಭಾಷೆಗಳ ಮೇಲೆ ಉತ್ತಮ ಜ್ಞಾನವಿದ್ದರೆ ಈ ಕೆಲಸ ಸುಲಭ. ಜೊತೆಗೆ ಒಂದು ನಿರ್ದಿಷ್ಟ ಭಾಷೆಯ ತರಬೇತಿ ಪಡೆದಲ್ಲಿ ಗಳಿಕೆಯ ಅವಕಾಶ ಇನ್ನೂ ಹೆಚ್ಚಾಗುತ್ತವೆ.
ಉತ್ತಮವಾಗಿ ಭಾಷಾಂತರ ಮಾಡುವ ಕಲೆ ನಿಮ್ಮಲ್ಲಿದ್ದರೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು, ವಿದ್ವಾಂಸರು, ಲೇಖಕರು ನಿಮ್ಮ ಸೇವೆಯನ್ನು ಪಡೆಯಲು ಮುಂದಾಗುತ್ತಾರೆ. ಭಾಷಾಂತರಕಾರರಾಗಿ ಕೆಲಸ ಮಾಡುವ ಆಸಕ್ತಿ ನಿಮ್ಮಲಿದ್ದರೆ ಫಿವರ್ ಡಾಟ್ ಕಾಂ (Fiverr.com) ಅಥವಾ ಅಪ್ ವರ್ಕ ಡಾಟ್ ಕಾಂ (Upwork.com) ಮುಂತಾದ ಸೈಟ್‌ಗಳಿಗೆ ಭೇಟಿ ನೀಡಿ ನಿಮ್ಮ ಭಾಷಾ ಪ್ರಾವೀಣ್ಯತೆಯ ವಿವರಗಳನ್ನು ನೀಡಿ ಸೈನ ಅಪ್ ಮಾಡಿಕೊಳ್ಳಿ.

ವರ್ಚ್ಯುವಲ್ ಅಸಿಸ್ಟಂಟ್

ವರ್ಚ್ಯುವಲ್ ಅಸಿಸ್ಟಂಟ್

ಆನ್ಲೈನ್ ಮೂಲಕ ಕಂಪನಿಗಳಿಗಾಗಿ ಅದರ ದಿನನಿತ್ಯದ ಕೆಲಸವನ್ನು ಆನ್ಲೈನ್ ಮೂಲಕ ನಿಭಾಯಿಸುವುದೇ ವರ್ಚ್ಯುವಲ್ ಅಸಿಸ್ಟಂಟಶಿಪ್. ಮೀಟಿಂಗ್‌ಗಳನ್ನು ಆಯೋಜಿಸುವುದು, ಗ್ರಾಹಕರು ಹಾಗೂ ಹೂಡಿಕೆದಾರರೊಂದಿಗೆ ಸಂಪರ್ಕ ಏರ್ಪಡಿಸುವುದು, ಆರ್ಡರ್‌ಗಳನ್ನು ಫಾಲೊ ಅಪ್ ಮಾಡುವುದು, ಪವರ ಪಾಯಿಂಟ್ ಮತ್ತು ಎಕ್ಸೆಲ್ ಶೀಟ್‌ಗಳ ಮೂಲಕ ಬಿಸಿನೆಸ್ ಡಾಕ್ಯೂಮೆಂಟ್ ತಯಾರಿಸುವುದು, ಕಂಪನಿಯ ಬ್ಲಾಗ್ ಹಾಗೂ ವೆಬ್ಸೈಟ್‌ಗಳನ್ನು ನಿರ್ವಹಿಸುವುದು ಹೀಗೆ ಹಲವಾರು ಕೆಲಸಗಳು ವರ್ಚ್ಯುವಲ್ ಅಸಿಸ್ಟಂಟ್ ಒಳಗೊಂಡಿರುತ್ತದೆ. ಒಂದು ಕಂಪನಿಗೆ ಎಲ್ಲ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ವರ್ಚ್ಯುವಲ್ ಅಸಿಸ್ಟಂಟಗಳ ಮೂಲಕ ಕೆಲಸಗಳನ್ನು ರಿಮೋಟ್ ಆಗಿ ನಿರ್ವಹಿಸುವ ಅವಕಾಶ ನೀಡುತ್ತಾರೆ.

ವರ್ಚ್ಯುವಲ್ ಅಸಿಸ್ಟಂಟ ಕೆಲಸ ಮಾಡಲು ಕೆಲ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಹಾಗೂ ತರಬೇತಿ ಪಡೆದಿರುವುದು ಅವಶ್ಯಕವಾಗಬಹುದು. ಆದರೂ ಅತ್ಯುತ್ತಮ ಸಂವಹನ ಕೌಶಲ ಹಾಗೂ ಎಂಎಸ್ ಆಫೀಸ್ ಹಾಗೂ ಇನ್ನಿತರ ಅಪ್ಲಿಕೇಶನ್‌ಗಳ ಬಗ್ಗೆ ಆಳವಾದ ಜ್ಞಾನವಿದ್ದಲ್ಲಿ ನೀವು ಈ ಕೆಲಸ ಆರಂಭಿಸಬಹುದು. ಇಲಾನ್ಸ್ ಡಾಟ್ ಕಾಂ (Elance.com) ಮತ್ತು ಝಿರ್ಚ್ಯುವಲ್ ಡಾಟ್ ಕಾಂ (Zirtual.com) ಮುಂತಾದ ವೆಬ್ಸೈಟ್‌ಗಳಲ್ಲಿ ಸೈನ್ ಅಪ್ ಮಾಡುವ ಮೂಲಕ ವರ್ಚ್ಯುವಲ್ ಅಸಿಸ್ಟಂಟಶಿಪ್ ಆರಂಭಿಸಬಹುದು.
ಸಂಭಾವ್ಯ ಗಳಿಕೆ : ದಿನಕ್ಕೆ ರೂ. 4000 - 5000 ಗಿಂತ ಹೆಚ್ಚು.

 

ಆನ್ಲೈನ್ ನಲ್ಲಿ ಉತ್ಪನ್ನಗಳ ಮಾರಾಟ

ಆನ್ಲೈನ್ ನಲ್ಲಿ ಉತ್ಪನ್ನಗಳ ಮಾರಾಟ

ಆನ್ಲೈನ್ ಮೂಲಕ ನಿಮ್ಮದೇ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಮೊದಲು ಯಾವ ವಸ್ತುಗಳನ್ನು ಮಾರಾಟ ಮಾಡಬೇಕೆಂಬುದನ್ನು ನಿರ್ಧರಿಸಿ ಅವುಗಳನ್ನು ಹೋಲಸೇಲ್ ಮಾರುಕಟ್ಟೆಯಲ್ಲಿ ಖರೀದಿಸಿ ಸಂಗ್ರಹ ಮಾಡಿಟ್ಟುಕೊಳ್ಳಿ. ನಂತರ ಅವುಗಳಿಗೆ ಬೆಲೆ ನಿಗದಿಪಡಿಸಿ ನಿಮ್ಮ ವೆಬ್ಸೈಟ್‌ನಲ್ಲಿ ಪ್ರದರ್ಶಿಸಿ.
ನಿಮ್ಮದೇ ವೆಬ್ಸೈಟ್ ಬೇಡ ಎಂದಾದರೆ ಅಮೇಜಾನ್, ಇಬೇ ಹಾಗೂ ಸಣ್ಣ ಪ್ರಮಾಣದ ಪೋರ್ಟಲ್ ಇಂಡಿಬಜಾರ್ ಡಾಟ್ ಕಾಂ ಗಳಲ್ಲಿ ರಜಿಸ್ಟರ್ ಮಾಡಿ ನಿಮ್ಮ ಉತ್ಪನ್ನಗಳನ್ನು ಮಾರಬಹುದು. ನಿಮ್ಮ ವಸ್ತುಗಳನ್ನು ಲಿಸ್ಟಿಂಗ್ ಮಾಡಲು ಈ ವೆಬ್ಸೈಟ್‌ಗಳಿಗೆ ಸಣ್ಣ ಮೊತ್ತದ ಶುಲ್ಕ ಪಾವತಿಸಬೇಕಾಗುತ್ತದೆ. ನಿಮ್ಮ ವಸ್ತುಗಳ ಗುಣಮಟ್ಟ ಹಾಗೂ ದರಗಳನ್ನು ಆಧರಿಸಿ ನಿಮ್ಮ ಗಳಿಕೆ ಬರಲಾರಂಭಿಸುತ್ತದೆ.

ಯೂಟ್ಯೂಬ್ ವಿಡಿಯೋ

ಯೂಟ್ಯೂಬ್ ವಿಡಿಯೋ

ಪ್ರಸ್ತುತ ಯೂಟ್ಯೂಬ್ ಟ್ರೆಂಡ್ ಅತ್ಯಂತ ಜನಪ್ರಿಯತೆ ಗಳಿಸಿದೆ. ಪ್ರತಿಯೊಬ್ಬರೂ ಸುಲಭವಾಗಿ ಬಳಸಬಹುದು. ವಿಡಿಯೋ ಛಾಯಾಗ್ರಹಣದಲ್ಲಿ ಮಾಡುವವರು ಯೂಟ್ಯೂಬ್ ಮೂಲಕ ಸಂಪಾದನೆ ಮಾಡಬಹುದು. ಯೂಟ್ಯೂಬ್ ಚಾನೆಲ್ ಮೂಲಕ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸುವವರಿದ್ದಾರೆ. ನಿರ್ದಿಷ್ಟ ವಿಷಯವನ್ನು ಆರಿಸಿಕೊಂಡು ವಿಡಿಯೋ ಮಾಡಲಾರಂಭಿಸಿ ಹಾಗೂ ಅವನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿ. ಆದರೆ ಜಗತ್ತಿನಲ್ಲಿ ಹೆಚ್ಚು ಜನ ಬಯಸುವ, ಹುಡುಕಾಡುವ ಹಾಗೂ ಕುತೂಹಲಕಾರಿ ವಿಷಯದ ವಿಡಿಯೋಗಳಿದ್ದರೆ ಹೆಚ್ಚು ಸಂಪಾದನೆ ಮಾಡಬಹುದು.
ಯೂಟ್ಯೂಬ್ ನಲ್ಲಿ ಸೈನ ಅಪ್ ಮಾಡಿ ನಿಮ್ಮದೇ ಆದ ಚಾನೆಲ್ ಆರಂಭಿಸಬೇಕು. ಇದು ಬ್ಲಾಗ್ ರೀತಿಯಲ್ಲಿಯೇ ಕೆಲಸ ಮಾಡುತ್ತದೆ. ನಿಮ್ಮ ಚಾನೆಲ್‌ಗೆ ವೀಕ್ಷಕರು ಹಾಗೂ ಚಂದಾದಾರರ ಸಂಖ್ಯೆ ಹೆಚ್ಚಾದಂತೆ ಆದಾಯವೂ ಹೆಚ್ಚಾಗುತ್ತ ಹೋಗುತ್ತದೆ.

ಸಂಭಾವ್ಯ ಗಳಿಕೆ : ಪ್ರತಿ ಸಾವಿರ ವೀಕ್ಷಣೆಗೆ 200 ರಿಂದ 300 ರೂಪಾಯಿಗಳು. ಜಾಹೀರಾತುಗಳನ್ನು ಎಷ್ಟು ಬಾರಿ ಕ್ಲಿಕ್ ಮಾಡಲಾಗಿದೆ ಎಂಬುದರ ಮೇಲೆ ಹಣ ಸಿಗುತ್ತದೆ.

 

ವೆಬ್ ಡೆವಲಪಮೆಂಟ್

ವೆಬ್ ಡೆವಲಪಮೆಂಟ್

ನಿಮಗೆ ವೆಬ್ ಡಿಸೈನ್ ಹಾಗೂ ಕೋಡಿಂಗ್ ಮಾಡುವ ಕೌಶಲ್ಯ ಇದ್ದರೆ ಮನೆಯಿಂದಲೇ ವೆಬ್ ಡಿಸೈನರ್ ಕೆಲಸ ಆರಂಭಿಸಬಹುದು. ಈಗಿನ್ನೂ ಕಲಿಯುವವರಾಗಿದ್ದರೂ ಸಹ ಆನ್ಲೈನ್ ಟ್ಯುಟೋರಿಯಲ್‌ಗಳ ಮೂಲಕ ನೀವು ಪರಿಣಿತಿ ಸಾಧಿಸಬಹುದು. ಕಂಪನಿಗಳು ಸಾಮಾನ್ಯವಾಗಿ ವೆಬ್ ಡಿಸೈನ್ ಕೆಲಸವನ್ನು ಬಾಹ್ಯವಾಗಿ ಮಾಡಿಸಿಕೊಳ್ಳುವುದರಿಂದ ಈ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ.
ಸಂಭಾವ್ಯ ಗಳಿಕೆ :
ಡಿಸೈನ್ ಹಾಗೂ ಕಂಪನಿಯ ಪ್ರೊಫೈಲ್ ಆಧರಿಸಿ ಪ್ರೊಜೆಕ್ಟ್ ಒಂದಕ್ಕೆರೂ. 20 ದಿಂದ 1 ಲಕ್ಷಗಳವರೆಗೆ ಗಳಿಸಬಹುದು.

ಕಂಟೆಂಟ್ ರೈಟಿಂಗ್

ಕಂಟೆಂಟ್ ರೈಟಿಂಗ್

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವೆಬ್ಸೈಟ್ ಗಳು ಸಾಕಷ್ಟು ಮುಂಚೂಣಿಗೆ ಬರುತ್ತಿರುವುದರಿಂದ ಫ್ರೀ ಲಾನ್ಸ್ ಕೆಲಸಗಳಲ್ಲಿ ಕಂಟೆಂಟ್ ರೈಟಿಂಗ್ (ನಿರ್ದಿಷ್ಟ ವಿಷಯದ ಬಗ್ಗೆ ಲೇಖನ ಬರೆಯುವುದು) ಅತ್ಯಂತ ಜನಪ್ರಿಯವಾಗಿದೆ. ಸಂಶೋಧನಾತ್ಮಕ ಹಾಗೂ ಉತ್ತಮ ಶೈಲಿಯಲ್ಲಿ ಬರೆಯಲಾದ ವೆಬ್ ಕಂಟೆಂಟ್‌ಗೆ ಯಾವಾಗಲೂ ಬೇಡಿಕೆ ಇದೆ. ವೆಬ್ ರಿಕ್ರೂಟರ್‌ಗಳು ಹೆಚ್ಚು ಸಂಖ್ಯೆಯಲ್ಲಿ ಓದುಗರನ್ನು ಸೆಳೆಯಬಲ್ಲ, ವಿನೂತನ ಕಂಟೆಂಟ್ ಬರೆಯುವವರ ಹುಡುಕಾಟದಲ್ಲಿರುತ್ತಾರೆ. ಫಿವರ್ ಡಾಟ್ ಕಾಂ (Fiverr.com) , ಅಪ್ ವರ್ಕ ಡಾಟ್ ಕಾಂ (Upwork.com) , ಫ್ರೀಲಾನ್ಸರ ಡಾಟ್ ಕಾಂ (Freelancer.com), ಇಲಾನ್ಸ್ ಡಾಟ್ ಕಾಂ (Elance.com), ವರ್ಕ ಎನ್ ಹೈರ್ ಡಾಟ್ ಕಾಂ (Worknhire.com) ಮುಂತಾದ ವೆಬ್ಸೈಟ್‌ಗಳಿಗೆ ಸೈನ್ ಆಪ್ ಮಾಡುವ ಮೂಲಕ ಕಂಟೆಂಟ್ ರೈಟಿಂಗ್ ಕೆಲಸ ಆರಂಭಿಸಬಹುದು.
ಸಂಭಾವ್ಯ ಗಳಿಕೆ : ಹೊಸಬರು ತಿಂಗಳಿಗೆ 8 ಸಾವಿರದಿಂದ 10 ಸಾವಿರ
ಅನುಭವಿಕರು ರೂ. 20 ರಿಂದ 25 ಸಾವಿರ

ಡೇಟಾ ಎಂಟ್ರಿ

ಡೇಟಾ ಎಂಟ್ರಿ

ಅಟೊಮೇಶನ್ ನಿಂದ ಡೇಟಾ ಎಂಟ್ರಿ ಕೆಲಸಗಳು ಕಡಿಮೆಯಾಗುತ್ತಿದ್ದರೂ, ಹಲವಾರು ರೀತಿಯ ಡೇಟಾ ಎಂಟ್ರಿ ಕೆಲಸಗಳು ಲಭ್ಯವಿವೆ. ಇದು ಇಂಟರನೆಟ್ ಮೂಲಕ ಮಾಡಬಹುದಾದ ಅತಿ ಸುಲಭ ಕೆಲಸವಾಗಿದೆ. ವಿಶೇಷ ಕೌಶಲಗಳೇನೂ ಬೇಕಾಗಿರದ ಈ ಕೆಲಸಕ್ಕೆ ಒಂದು ಕಂಪ್ಯೂಟರ್, ಇಂಟರನೆಟ್ ಸಂಪರ್ಕ ಇದ್ದರೆ ಸಾಕು. ವಿವರಗಳನ್ನು ಸರಿಯಾಗಿ ಗ್ರಹಿಸುವ ಶಕ್ತಿ ಹಾಗೂ ವೇಗವಾಗಿ ಟೈಪಿಂಗ್ ಮಾಡಲು ಬಂದರೆ ಹೆಚ್ಚು ಆದಾಯ ಗಳಿಸಬಹುದು.

ಸಂಭಾವ್ಯ ಗಳಿಕೆ : ಪ್ರತಿ ಗಂಟೆಗೆ 300 ರಿಂದ 1500

 

ಆನ್ಲೈನ್ ಮೂಲಕ ಕಲಿಸುವಿಕೆ

ಆನ್ಲೈನ್ ಮೂಲಕ ಕಲಿಸುವಿಕೆ

ನೀವು ಈಗಾಗಲೇ ಶಿಕ್ಷಕರಾಗಿದ್ದರೆ ಅಥವಾ ನಿರ್ದಿಷ್ಟ ವಿಷಯವನ್ನು ಕಲಿಸುವ ನೈಪುಣ್ಯತೆ ಹೊಂದಿದವರಾಗಿದ್ದಲ್ಲಿ ಆನ್ಲೈನ್ ಮೂಲಕ ಕಲಿಸುವಿಕೆ ಆರಂಭಿಸಬಹುದು. ಮೈ ಪ್ರೈವೇಟ್ ಟ್ಯೂಟರ್ ಡಾಟ್ ಕಾಂ (MyPrivateTutor.com) , ಭಾರತ ಟ್ಯೂಟರ್ಸ್ ಡಾಟ್ ಕಾಂ BharatTutors.com), ಟ್ಯೂಟರ್ ಇಂಡಿಯಾ ಡಾಟ್ ನೆಟ್ (tutorindia.net) ನಂತಹ ವೆಬ್ಸೈಟ್‌ಗಳಿಗೆ ಭೇಟಿ ನೀಡಿ ಅದರಲ್ಲಿ ಆನ್ಲೈನ್ ಟ್ಯೂಟರ್ ಆಗಿ ರಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಪರಿಣತಿ ವಿಷಯಗಳು, ಅನುಭವ, ವಿದ್ಯಾರ್ಹತೆ ಮುಂತಾದ ವಿವರಗಳನ್ನು ನೀಡಬೇಕಾಗುತ್ತದೆ.

ಸಂಭಾವ್ಯ ಗಳಿಕೆ :
ಹೊಸಬರು ಪ್ರತಿ ತಾಸಿಗೆ ರೂ. 200 ಗಳಿಸಬಹುದು.
ಅನುಭವ ಹಾಗೂ ಪರಿಣಿತಿ ಹೆಚ್ಚಾದಂತೆ ತಾಸಿಗೆ ರೂ. 500 ಗಳಿಸುವ ಸಾಧ್ಯತೆಗಳೂ ಇವೆ.

 

English summary

Start Online Jobs and earn 4-5 thousand every day

The world of internet brings plenty of opportunities that let you work from home without compromising your earning potential.
Story first published: Monday, September 23, 2019, 10:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X