For Quick Alerts
ALLOW NOTIFICATIONS  
For Daily Alerts

ಕಡಿಮೆ ಅವಧಿಯಲ್ಲಿ ಹೂಡಿಕೆ, ಟಾಪ್ 5 ಉಪಾಯಗಳು

|

ಜೀವನವೆಂದರೆ ಸಣ್ಣ ಸಣ್ಣ ಕನಸುಗಳನ್ನು ನನಸಾಗಿಸಿಕೊಳ್ಳುವ ಆಟ. ಈ ಆಟದಲ್ಲಿ ಸಣ್ಣ ಸಣ್ಣ ಕನಸು ಈಡೇರಿಸಿಕೊಳ್ಳಲು ಕಡಿಮೆ ಅವಧಿಯಲ್ಲಿ ಹೂಡಿಕೆ ಮಾಡಿ, ಹೆಚ್ಚು ಲಾಭ ಗಳಿಸುವುದು ಬುದ್ಧಿವಂತರ ಲಕ್ಷಣ. ಈಗಂತೂ ಕಡಿಮೆ ಅವಧಿ ಅಂದರೆ 3 ರಿಂದ 5 ವರ್ಷ ಅವಧಿಯಲ್ಲಿ ಹೂಡಿಕೆ ಮಾಡಲು ಅನೇಕ ವಿಧಾನಗಳಿವೆ.

ಈಕ್ವಿಟಿ, ಚಿನ್ನದ ಮೇಲಿನ ಹೂಡಿಕೆ ಅತ್ಯಂತ ಜನಪ್ರಿಯ ಹಾಗೂ ಸುರಕ್ಷಿತ ವಿಧಾನ ಎನಿಸಿಕೊಂಡಿದೆ. 2020ರಲ್ಲಿ ಆರ್ಥಿಕ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಅವಲೋಕಿಸಿ, ಹೂಡಿಕೆ ಮಾಡುವವರಿಗೆ ಕಡಿಮೆ ಅವಧಿಯ ಟಾಪ್ 5 ಹೂಡಿಕೆ ವಿಧಾನಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಅಲ್ಪಾವಧಿಗಾಗಿ (Short Term) ಹಣ ಹೂಡಿಕೆ ಮಾಡಬೇಕೆ?

 

ಕಡಿಮೆ ಅವಧಿಯಲ್ಲಿ ಹೂಡಿಕೆ, ಟಾಪ್ 5 ಉಪಾಯಗಳು

1. ಆಕ್ಸಿಸ್ ದೀರ್ಘಾವಧಿ ಈಕ್ವಿಟಿ ಫಂಡ್

ಕಳೆದ ಮೂರು ವರ್ಷಗಳಲ್ಲಿ ಆಕ್ಸಿಸ್ ದೀರ್ಘಾವಧಿ ಈಕ್ವಿಟಿ ಫಂಡ್ ವಾರ್ಷಿಕವಾಗಿ ಸುಮಾರು 17.7 % ರಿಟರ್ನ್ಸ್ ತೋರಿಸಿದೆ. ಈಗ ಯಾರಾದರೂ ಹೂಡಿಕೆ ಮಾಡಿದರೂ ಇಷ್ಟೇ ಪ್ರಮಾಣದಲ್ಲೇ ರಿಟರ್ನ್ಸ್ ನೀಡುವ ಸಾಧ್ಯತೆಯಿದೆ. ಕ್ರಿಸಿಲ್ ಸ್ಕೋರ್ ಹಾಗೂ ವ್ಯಾಲ್ಯೂ ರಿಸರ್ಚ್ ನಲ್ಲೂ 5 ಸ್ಟಾರ್ ರೇಟಿಂಗ್ ಹೊಂದಿರುವ ಈ ಹೂಡಿಕೆ ವಿಧಾನ ಇದಾಗಿದೆ.

ಸರಿ ಸುಮಾರು 21,000 ಕೋಟಿ ರು ಗೂ ಅಧಿಕ ಮೊತ್ತದ ಮೌಲ್ಯದ ನಿಧಿಯನ್ನು ಹೊಂದಿದ್ದು, ಶೇ 98ರಷ್ಟು ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ.

ನಿಮ್ಮ ವಯಸ್ಸು 30ರೊಳಗಿದ್ದರೆ ಈಗಲೇ ಈ ಹಣಕಾಸಿನ ನಿರ್ಧಾರ ಕೈಗೊಳ್ಳಿ

ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ, ಎಚ್ ಡಿ ಎಫ್ ಸಿ, ಅವಿನ್ಯೂ ಸೂಪರ್ ಮಾರ್ಕೆಟ್. ಇತ್ಯಾದಿ ಮೌಲ್ಯಯುತ ಸಂಸ್ಥೆಗಳನ್ನು ತನ್ನ ಪೋರ್ಟ್ ಫೋಲಿಯೋದಲ್ಲಿ ಹೊಂದಿದೆ. ಮುಂಬರುವ ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ರಿಟರ್ನ್ಸ್ ನೀಡಬಲ್ಲ ಹೂಡಿಕೆ ವಿಧಾನ ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಇಷ್ಟಾದರೂ ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆಯೂ ಮಾರುಕಟ್ಟೆಯ ಏರಿಳಿತಕ್ಕೆ ಒಳಪಟ್ಟಿದ್ದು, ಹೂಡಿಕೆ ಮಾಡುವುದು, ರಿಟರ್ನ್ಸ್ ಬಗ್ಗೆ ಹೂಡಿಕೆದಾರರು ಸ್ವಯಂ ಇಚ್ಛೆಯಿಂದ ನಿರ್ಧಾರಕೈಗೊಳ್ಳುವುದು ಒಳಿತು.

2. ಒನ್ಎನ್ ಜಿಸಿ ಸ್ಟಾಕ್

2. ಒನ್ಎನ್ ಜಿಸಿ ಸ್ಟಾಕ್

ಇತ್ತೀಚೆಗೆ ಈ ಷೇರುಗಳು 52 ವಾರಗಳಷ್ಟು ಕಡಿಮೆ ಪ್ರಮಾಣಕ್ಕೆ ಕುಸಿದಿತ್ತು. ಆದರೆ, ಒನ್ಎನ್ ಜಿಸಿ ಮೇಲೆ ಹೂಡಿಕೆ ಮಾಡುವುದಕ್ಕೆ ಸಕಾರಣವಿದೆ. ಫೆಬ್ರವರಿ-ಮಾರ್ಚ್ 2020ರಲ್ಲಿ ಈ ಸಂಸ್ಥೆ ಡಿವಿಡೆಂಡ್ ಘೋಷಿಸಲಿದೆ. ಕಂಪನಿ ಪ್ರೊಫೈಲ್ ನೋಡಿದರೆ ಪ್ರತಿ ವರ್ಷ ಉತ್ತಮ ಡಿವಿಡೆಂಡ್ ನೀಡುತ್ತಾ ಬಂದಿದೆ. ಸರಿ ಸುಮಾರು 6% ಒಟ್ಟಾರೆ ಡಿವಿಡೆಂಡ್ ಮೊತ್ತ ನಿರೀಕ್ಷಿತ.

ಒಎನ್ ಜಿಸಿ ಇತ್ತೀಚೆಗೆ ಎಲ್ಲಾ 7 ತೈಲ ಮತ್ತು ಅನಿಲ ಘಟಕಗಳನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಸಂಸ್ಥೆಯು ಅನಿಲ ಸಂಬಂಧಿಸಿದ ವ್ಯವಹಾರವನ್ನು ಈ ವರ್ಷ ಪ್ರಗತಿಯತ್ತ ಕೊಂಡೊಯ್ಯಲಿದೆ. ಸಂಸ್ಥೆಯ ಸಾಲದ ಹೊರೆ ಕೂಡಾ ತಗ್ಗಲಿದೆ, ತ್ರೈಮಾಸಿಕ ಲಾಭವೂ ಹೆಚ್ಚಾಗಲಿದೆ.

ಇದೆಲ್ಲದರ ಜೊತೆಗೆ ವಾಸ್ತವ್ಯ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ಹೊಂದಿರುವ ಈ ಸಂಸ್ಥೆ ಷೇರುಗಳು ಅತಿ ದೊಡ್ಡ ಪ್ರಮಾಣದ ರಿಟರ್ನ್ಸ್ ನೀಡುವ ಸಾಧ್ಯತೆಯನ್ನುಅಲ್ಲಗೆಳೆಯುವಂತಿಲ್ಲ.

3. ಮಹೀಂದ್ರಾ ಫಿನಾನ್ಸ್ ನಿಶ್ಚಿತ ಠೇವಣಿ

3. ಮಹೀಂದ್ರಾ ಫಿನಾನ್ಸ್ ನಿಶ್ಚಿತ ಠೇವಣಿ

ಮುಂದಿನ ಮೂರು ವರ್ಷಗಳಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ವಿಧಾನವಾಗಿದ್ದು, ಎಎಎ ರೇಟ್ ಹೊಂದಿದ್ದು, ಸುರಕ್ಷಿತ ವಿಧಾನವಾಗಿದೆ. 33 ತಿಂಗಳ ಮಹೀಂದ್ರಾ ಫಿನಾನ್ಸ್ ಠೇವಣಿಯು ಸುಮಾರು 8.35% ಬಡ್ಡಿದರದಂತೆ ವಾರ್ಷಿಕವಾಗಿ 9% ರಿಟರ್ನ್ ನೀಡುತ್ತದೆ. ಇದೇ ರೀತಿ 40 ತಿಂಗಳ ಠೇವಣಿಯಲ್ಲಿ 8.35ರಷ್ಟು ಬಡ್ಡಿದರವಿದ್ದು, 9.22 ವಾರ್ಷಿಕ ರಿಟರ್ನ್ಸ್ ನಿರೀಕ್ಷಿಸಬಹುದು. ಇದರಲ್ಲಿ ನಾನ್ ಕುಮ್ಯುಲೇಟಿವ್ ಸ್ಕೀಮ್ ಕೂಡಾ ಇದ್ದು, 4 ತಿಂಗಳ ಅವಧಿಯ ಪೇಔಟ್ 7.85% ನಷ್ಟಿದೆ.

4. ಕೆನರಾ ರೊಬೊ ಈಕ್ವಿಟಿ ಡೈವರ್ಸಿಫೈಯ್ಡ್ ಪ್ಲ್ಯಾನ್
 

4. ಕೆನರಾ ರೊಬೊ ಈಕ್ವಿಟಿ ಡೈವರ್ಸಿಫೈಯ್ಡ್ ಪ್ಲ್ಯಾನ್

ಕ್ರಿಸಿಲ್ ನಿಂದ 5 ಸ್ಟಾರ್ ರೇಟಿಂಗ್ ಪಡೆದಿರುವ ಕೆನರಾ ರೊಬೆಕೋ ಈಕ್ವಿಟಿ ಡೈವರ್ಸಿಫೈಯ್ಡ್ ರೆಗ್ಯುಲರ್ ಪ್ಲ್ಯಾನ್- ಗ್ರೋಥ್ ಯೋಜನೆಯು ಕಡಿಮೆ ಅವಧಿಯ ಹೂಡಿಕೆಗೆ ಸೂಕ್ತ ವಿಧಾನವಾಗಿದೆ. ಕಳೆದ ಮೂರು ವರ್ಷಗಳಲ್ಲಿ 15.52ರಷ್ಟು ವಾರ್ಷಿಕ ರಿಟರ್ನ್ಸ್ ನೀಡಿದೆ.

ಇದು ಈಕ್ವಿಟಿ ಮ್ಯೂಚ್ಯುವಲ್ ಫಂಡ್ ಆಗಿದ್ದು, ಸ್ವಲ್ಪ ರಿಸ್ಕ್ ಹೊಂದಿರುವ ಹೂಡಿಕೆ ವಿಧಾನವಾಗಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮುಂತಾದ ಟಾಪ್ ಸಂಸ್ಥೆಗಳನ್ನು ತನ್ನ ಪೋರ್ಟ್ ಫೋಲಿಯೋದಲ್ಲಿ ಹೊಂದಿರುವ ಕೆನರಾ ರೊಬೆಕೋ ಉತ್ತಮ ರಿಟರ್ನ್ಸ್ ನೀಡುವ ನಿರೀಕ್ಷೆಯಿದೆ. ದೀರ್ಘಾವಧಿ ಹೂಡಿಕೆ ಮಾಡಲು ಬಯಸುವವರು ಈ ಸಂಸ್ಥೆಯೆ ಎನ್ಎವಿ 145.83ರು ನಷ್ಟಿದ್ದು, ಹೂಡಿಕೆಗೆ ಪರಿಗಣಿಸಬಹುದು.

5. ಬಜಾಜ್ ಫಿನಾನ್ಸ್

5. ಬಜಾಜ್ ಫಿನಾನ್ಸ್

ಮುಂದಿನ ಮೂರು ವರ್ಷಗಳ ಅವಧಿಗೆ ಬಜಾಜ್ ಫಿನಾನ್ಸ್ ಉತ್ತಮ ಹೂಡಿಕೆ ವಿಧಾನವಾಗಿದೆ. ಕಮ್ಯುಲಟಿವ್ ಸ್ಕೀಮ್ ಅಡಿಯಲ್ಲಿ 8.10 % ಬಡ್ಡಿದರ ನೀಡುತ್ತಿದ್ದು, ಎಎಎ ರೇಟಿಂಗ್ ಹೊಂದಿರುವ ಠೇವಣಿ ಇದ್ದಾಗಿದ್ದು, ಸುರಕ್ಷಿತ ವಿಧಾನವಾಗಿದೆ.

ಇಲ್ಲಿ ಪ್ರಮುಖ ಅಂಶವೆಂದರೆ, ಬಡ್ಡಿಯ ಆದಾಯ 5000 ರು ದಾಟಿದರೆ, ಹೂಡಿಕೆ ಮೊತ್ತವು ಟಿಡಿಎಸ್ ಗೆ ಒಳಪಡಲಿದೆ. ಬಜಾಜ್ ಫಿನಾನ್ಸ್ ಹಾಗೂ ಮಹೀಂದ್ರಾ ಫಿನಾನ್ಸ್ ಹೂಡಿಕೆಯು ತಕ್ಕಮಟ್ಟಿನ ರಿಟರ್ನ್ಸ್ ಪಡೆಯಲು ಕಡಿಮೆ ಅವಧಿಗೆ ಸೂಕ್ತ ವಿಧಾನ ಎನಿಸಿವೆ.

READ IN ENGLISH

English summary

5 Top Investment Plan For Three Years To Consider In 2020

If you are looking to invest for a period of three years, there are plenty of options. Ideally, your investment plans must have a mix of debt and equity and if possible, there should also be gold, which is a safe haven asset.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more