For Quick Alerts
ALLOW NOTIFICATIONS  
For Daily Alerts

7th Pay Commission: ಜನವರಿ 31ರಂದು ಮತ್ತೆ ಡಿಎ ಏರಿಕೆ, ಯಾಕೆ?

|

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಜನವರಿ 31ರಂದು ತುಟ್ಟಿ ಭತ್ಯೆಯನ್ನು ಏರಿಕೆ ಮಾಡುವ ಸೂಚನೆ ಲಭ್ಯವಾಗಿದೆ. ಜನವರಿ 31ರಂದು ಅಖಿಲ ಭಾರತ ಗ್ರಾಹಕರ ದರ ಸೂಚ್ಯಂಕ (ಎಐಸಿಪಿಐ) ವರದಿಯನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮತ್ತೆ ಡಿಎ ಹೆಚ್ಚಳದ ಬಗ್ಗೆ ಮಾಹಿತಿ ನೀಡಲಿದೆ.

 

ಎಐಸಿಪಿಐ ಸೂಚ್ಯಂಕ ಆಧಾರದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಘೋಷಣೆ ಮಾಡಲಾಗುತ್ತದೆ, ಲೆಕ್ಕಾಚಾರ ಮಾಡಲಾಗುತ್ತದೆ. ಈ ಸೂಚ್ಯಂಕವನ್ನು 88 ಸೆಂಟರ್‌ಗಳಿಗಾಗಿ ಸಿದ್ಧಪಡಿಸಲಾಗುತ್ತದೆ. ಪ್ರತಿ ತಿಂಗಳು ಎಐಸಿಪಿಐ ಸೂಚ್ಯಂಕ ವನ್ನು ಕೊನೆಯ ಕೆಲಸದ ದಿನದಂದು ಪ್ರಕಟಿಸುತ್ತದೆ. ಈ ಸಂದರ್ಭದಲ್ಲೇ ತುಟ್ಟಿ ಭತ್ಯೆ ಏರಿಕೆ ಘೋಷಣೆ ನಿರೀಕ್ಷೆಯಿದೆ.

 

7ನೇ ವೇತನ ಆಯೋಗ:ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ಡಿಎ7ನೇ ವೇತನ ಆಯೋಗ:ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ಡಿಎ

ನವೆಂಬರ್ 2022ರಲ್ಲಿ ಎಐಸಿಪಿಐ ಸೂಚ್ಯಂಕವು 132.5 ಆಗಿದೆ. ಮುಂಬರುವ ಸೂಚ್ಯಂಕ ಅಂದರೆ ಡಿಸೆಂಬರ್‌ 2022ರ ಸೂಚ್ಯಂಕವು ಸ್ಥಿರವಾಗಿರುವ ಸಾಧ್ಯತೆಯಿದೆ. ಸ್ಥಿರವಾಗಿದ್ದರೆ ತುಟ್ಟಿ ಭತ್ಯೆ ಶೇಕಡ 3ರಷ್ಟು ಏರಿಕೆಯಾಗಲಿದೆ. ಇದರಿಂದಾಗಿ ಶೇಕಡ ತುಟ್ಟಿ ಭತ್ಯೆ ಅಥವಾ ಡಿಎ ಶೇಕಡ 38ರಿಂದ ಶೇಕಡ 41ಕ್ಕೆ ಏರಿಕೆಯಾಗಲಿದೆ.

 7ನೇ ವೇತನ ಆಯೋಗ: ಜನವರಿ 31ರಂದು ಮತ್ತೆ ಡಿಎ ಏರಿಕೆ, ಯಾಕೆ?

ಈ ಹಿಂದೆ ಶೇಕಡ 4ರಷ್ಟು ಡಿಎ ಹೆಚ್ಚಳ

ಈ ಹಿಂದೆ ಏಳನೇ ವೇತನ ಆಯೋಗದ ಅಡಿಯಲ್ಲಿ 2022ರ ಸೆಪ್ಟೆಂಬರ್ 28ರಂದು ಕೇಂದ್ರ ಸಂಸತ್ತು ಡಿಎ ಶೇಕಡ 4ರಷ್ಟು ಏರಿಕೆ ಮಾಡಲು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಈ ಡಿಎ ಏರಿಕೆಯನ್ನು ಮಾಡಲಾಗಿದೆ.

7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ7ನೇ ವೇತನ ಆಯೋಗ:ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ(HRA) ಪರಿಷ್ಕರಣೆ, ನಿಯಮ ತಿಳಿಯಿರಿ

ಜೂನ್ 2022ರಲ್ಲಿ ಅಖಿಲ ಭಾರತ ಗ್ರಾಹಕರ ದರ ಸೂಚ್ಯಂಕ (ಎಐಸಿಪಿಐ) 12 ತಿಂಗಳ ಸರಾಸರಿಯಿಂದ ಏರಿಕೆಯಾದಾಗ ಈ ತುಟ್ಟಿ ಭತ್ಯೆ ಏರಿಕೆ ಘೋಷಣೆ ಮಾಡಲಾಗಿತ್ತು. ಹಾಗೆಯೆ ಜುಲೈ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶೇಕಡ 4ರಷ್ಟು ಹೆಚ್ಚುವರಿ ತುಟ್ಟಿ ಭತ್ಯೆ ಲಭ್ಯವಾಗಿದೆ.

ಕೇಂದ್ರ ಸರ್ಕಾರವು ತಮ್ಮ ಸರ್ಕಾರಿ ನೌಕರರಿಗೆ ನೀಡುವ ತುಟ್ಟಿ ಭತ್ಯೆ ವಾರ್ಷಿಕವಾಗಿ 6,591.36 ಕೋಟಿ ರೂಪಾಯಿಗೆ ಏರುವ ನಿರೀಕ್ಷೆಯಿದೆ. 2022-23ರ ಹಣಕಾಸು ವರ್ಷದಲ್ಲಿ 4,394.24 ಕೋಟಿ ರೂಪಾಯಿ ಆಗುವ ಅಂದಾಜು ಇದೆ. ಇದು 2022ರ ಜುಲೈನಿಂದ 2023ರ ಫೆಬ್ರವರಿವರೆಗಿನ 8 ತಿಂಗಳ ಲೆಕ್ಕಾಚಾರವಾಗಿದೆ.

ಇನ್ನು ತುಟ್ಟಿ ಪರಿಹಾರ ವಾರ್ಷಿಕವಾಗಿ 6,261.20 ಕೋಟಿ ರೂಪಾಯಿಗೆ ಏರಿಕೆಯಾಗುವ, 2022-23ರ ಹಣಕಾಸು ವರ್ಷದಲ್ಲಿ (2022ರ ಜುಲೈನಿಂದ 2023ರ ಫೆಬ್ರವರಿವರೆಗಿನ 8 ತಿಂಗಳು) 4,174.12 ಕೋಟಿ ರೂಪಾಯಿ ಆಗುವ ಅಂದಾಜು ಇದೆ. ಈ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರ ಸೇರಿ ವಾರ್ಷಿಕವಾಗಿ 12,852.56 ಕೋಟಿ ರೂಪಾಯಿ, 2022ರ ಜುಲೈನಿಂದ 2023ರ ಫೆಬ್ರವರಿವರೆಗಿನ 8 ತಿಂಗಳಿಗೆ 8,568.36 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

English summary

7th Pay Commission: Next update on Dearness allowance hike may come on January 31, Why, Details Here

7th Pay Commission latest update: The hint for hike in next Dearness Allowance (DA) could come on January 31. recently DA hiked by 4 percent to 38 percent. Why, Details Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X