For Quick Alerts
ALLOW NOTIFICATIONS  
For Daily Alerts

ಎಷ್ಟೇ ಪ್ರಯತ್ನಿಸಿದ್ರೂ ಹಣ ಉಳಿತಾಯವಾಗದಿದ್ರೆ ಇದನ್ನೊಮ್ಮೆ ಓದಿ ಸಾಕು

|

ಬಹುತೇಕ ಜನರು ಭವಿಷ್ಯಕ್ಕಾಗಿ, ನಿವೃತ್ತಿ ಜೀವನದಲ್ಲಿ ಸಹಾಯಕ್ಕಾಗಿ ಹಣವನ್ನು ಎತ್ತಿಡಲು ಎದುರು ನೋಡುತ್ತಿರುತ್ತಾರೆ. ಹಣ ಉಳಿತಾಯ ಮಾಡಲು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಎಷ್ಟೇ ಪ್ರಯತ್ನಿಸಿದರು ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವವರು ಇದ್ದಾರೆ. ಅದೇನು ಆಗುತ್ತೋ ತಿಳಿಯದು ಬಂದ ಹಣ ಹಾಗೇ ಖರ್ಚು ಆಗಿ ಬಿಡುತ್ತದೆ ಎಂದು ಹೇಳುವುದನ್ನು ನೀವು ಕೇಳಿದ್ದೀರಿ.

ಕೆಲವೊಮ್ಮೆ ಹಣ ಉಳಿತಾಯ ಮಾಡುವುದು ಸವಾಲಿನ ಸಂಗತಿಯಾಗಿ ಬಿಡುತ್ತದೆ. ಹೇಗೆ ಖರ್ಚು ತಗ್ಗಿಸುವುದು ಎಂದು ತಿಳಿಯದೇ ದಿನವನ್ನು ದೂಡುತ್ತಿರುವವರು ಇದ್ದಾರೆ. ಆದರೆ ಈ ಕೆಳಗಿನ ಸಲಹೆಗಳು ಹಂತ ಹಂತವಾಗಿ ನೀವು ಹಣ ಉಳಿತಾಯ ಮಾಡಲು ಸಹಾಯ ಮಾಡುತ್ತವೆ. ಹಾಗೂ ನಿಮ್ಮ ಭವಿಷ್ಯದ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

1. ನೀವು ಮಾಡುವ ಖರ್ಚುಗಳನ್ನು ಲೆಕ್ಕ ಮಾಡಿ

1. ನೀವು ಮಾಡುವ ಖರ್ಚುಗಳನ್ನು ಲೆಕ್ಕ ಮಾಡಿ

ನೀವು ಹಣ ಉಳಿತಾಯ ಮಾಡಲು ಇಡಬೇಕಾದ ಮೊದಲ ಹೆಜ್ಜೆ ಎಂದರೆ ನೀವು ತಿಂಗಳಿಗೆ ಎಷ್ಟು ಹಣ ಖರ್ಚು ಮಾಡುತ್ತೀರಿ? ಪ್ರತಿ ದಿನದ ನಿಮ್ಮ ಖರ್ಚುಗಳೆಷ್ಟು ಎಂದು ಲೆಕ್ಕಾಚಾರ ಮಾಡಬೇಕು. ಅಂದರೆ ನೀವು ಪ್ರತಿದಿನ ಕುಡಿಯುವ ಕಾಫಿ,ಟೀ ನಿಂದ ಏನನ್ನೇ ಖರೀದಿಸಿದರು ಲೆಕ್ಕ ಮಾಡಿಡಬೇಕು.

ಹೀಗೆ ಒಂದು ಸಾರಿ ನಿಮ್ಮ ಖರ್ಚುಗಳ ಬಗ್ಗೆ ಲೆಕ್ಕಗಳು ಸಿಕ್ಕ ಬಳಿಕ ಅವುಗಳನ್ನು ವಿಭಾಗಗಳಾಗಿ ವಿಂಗಡಿಸಿ. ಗ್ಯಾಸ್, ದಿನಸಿ , ಅಡಮಾನದಂತಹ ವರ್ಗಗಳ ಜೊತೆಗೆ ಒಟ್ಟು ಎಷ್ಟು ಖರ್ಚು ಎಂಬುದನ್ನು ತಿಳಿಯಿರಿ. ನಿಖರವಾಗಿ ಖರ್ಚುಗಳನ್ನು ತಿಳಿಯಲು ಕ್ರೆಡಿಟ್‌ ಕಾರ್ಡ್‌, ಬ್ಯಾಂಕ್ ಸ್ಟೇಟ್‌ಮೆಂಟ್ ನೋಡಿಕೊಂಡು ಲೆಕ್ಕಾಚಾರ ಮಾಡಿ ಈ ಮೂಲಕ ಸರಿಯಾಗಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ತಿಳಿಯುತ್ತದೆ.

ಸಲಹೆ: ನೀವು ಮೊಬೈಲ್ ಆ್ಯಪ್ ಬಳಸುವ ಮೂಲಕವೂ ನಿಮ್ಮ ಖರ್ಚುಗಳನ್ನು ಲೆಕ್ಕಾಚಾರ ಮಾಡಬಹುದು. ಡಿಜಿಟಲ್ ಪ್ರೋಗ್ರಾಂ ಆ್ಯಪ್‌ಗಳು ನಿಮ್ಮ ಖರ್ಚುಗಳನ್ನು ವಿಂಗಡಿಸಿ ನಿಮಗೆ ಮಾಹಿತಿ ನೀಡುತ್ತವೆ. ಆ ಮೂಲಕವೂ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

 

2. ನಿಮ್ಮ ಉಳಿತಾಯಕ್ಕಾಗಿ ಬಜೆಟ್ ರೂಪಿಸಿ

2. ನಿಮ್ಮ ಉಳಿತಾಯಕ್ಕಾಗಿ ಬಜೆಟ್ ರೂಪಿಸಿ

ಒಮ್ಮೆ ತಿಂಗಳಿಗೆ ನೀವು ಎಷ್ಟು ಹಣ ಖರ್ಚು ಮಾಡುತ್ತೀರಿ ಎಂದು ತಿಳಿದ ತಕ್ಷಣ ನಿಮ್ಮ ಖರ್ಚುಗಳನ್ನು ಒಂದು ಬಜೆಟ್‌ ಆಗಿ ರೂಪಿಸಿಕೊಳ್ಳಬಹುದು. ಆ ಮೂಲಕ ನಿಮಗೆ ಬರುವ ಆದಾಯದಲ್ಲಿ ಎಷ್ಟು ಹಣ ಖರ್ಚು ಆಗುತ್ತಿದೆ. ಹಣ ಎಲ್ಲಿ ಹೆಚ್ಚು ವೆಚ್ಚವಾಗುತ್ತಿದೆ ಹಾಗೂ ಹೆಚ್ಚು ವೆಚ್ಚದ ಸೋರಿಕೆಯನ್ನು ಹೇಗೆ ತಡೆಗಟ್ಟುವುದು ಎಂದು ತಿಳಿಯಲು ಸಾಧ್ಯವಾಗುತ್ತದೆ.

ಸಲಹೆ: ನಿಮ್ಮ ಆದಾಯದಲ್ಲಿ ಕನಿಷ್ಠ 10 ರಿಂದ 15 ಪರ್ಸೆಂಟ್‌ನಷ್ಟು ಹಣವನ್ನು ಎತ್ತಿಡಲು ಪ್ರಯತ್ನಿಸಿ. ಆ ಮೂಲಕ ನಿಮ್ಮ ಉಳಿತಾಯದ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

 

3. ಖರ್ಚುಗಳನ್ನು ತಡೆಗಟ್ಟಲು ಮಾರ್ಗಗಳನ್ನು ಹುಡುಕಿಕೊಳ್ಳಿ

3. ಖರ್ಚುಗಳನ್ನು ತಡೆಗಟ್ಟಲು ಮಾರ್ಗಗಳನ್ನು ಹುಡುಕಿಕೊಳ್ಳಿ

ನಿಮಗೆ ಬರುವ ಆದಾಯದಲ್ಲಿ ಅತಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದೀರಿ ಎಂದರೆ ನೀವು ಕೈಗೆತ್ತಿಕೊಳ್ಳಬೇಕಾದ ಮೊದಲ ಕೆಲಸ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಯಾವುದರ ಮೇಲೆ ಕಡಿಮೆ ಖರ್ಚು ಮಾಡಬಹುದು ಎಂಬುದನ್ನು ಗುರುತಿಸಿಕೊಳ್ಳಿ. ಉದಾಹರಣೆಗೆ ಮನೋರಂಜನೆಗಾಗಿ ಮತ್ತು ಆಚೆ ಹೋಟೆಲ್‌ಗಳಲ್ಲಿ ಊಟ ಮುಂತಾದ ಹೆಚ್ಚುವರಿ ಖರ್ಚುಗಳಿಗೆ ಕಡಿವಾಣ ಹಾಕಿ.

ಸಲಹೆ: * ಮನೋರಂಜನಾ ವೆಚ್ಚವನ್ನು ತಗ್ಗಿಸಬೇಕಾದರೆ ಕಡಿಮೆ ಅಥವಾ ಉಚಿತವಾಗಿರುವ ಈವೆಂಟ್‌ಗಳನ್ನು ನೋಡಿಕೊಂಡು ತೆರಳುವುದು

* ನೀವು ಬಳಸದ/ಉಪಯೋಗಿಸದ ಚಂದಾದಾರಿಕೆಗಳು ಮತ್ತು ಸದಸ್ಯತ್ವಗಳನ್ನು ರದ್ದುಗೊಳಿಸಿ. ಅದರಲ್ಲೂ ಸ್ವಯಂ ಆಗಿ ನವೀಕರಿಸುವಂತಹ ಚಂದಾದಾರಿಕೆಯನ್ನು ರದ್ದುಗೊಳಿಸಿ.

* ತಿಂಗಳಿಗೆ ಒಮ್ಮೆ ಮಾತ್ರ ಹೊರಗೆ ಊಟಕ್ಕೆ ತೆರಳುವುದನ್ನು ರೂಢಿಸಿಕೊಳ್ಳುವುದು. ದುಬಾರಿ ಹೋಟೆಲ್‌ಗಳನ್ನು ತಪ್ಪಿಸುವುದು

* ಖರೀದಿ ವಿಚಾರವಾಗಿ ನಿಮಗೆ ನೀವೆ ನಿರ್ಬಂಧ ವಿಧಿಸಿಕೊಳ್ಳುವುದು. ಈ ಮೂಲಕ ಅನವಶ್ಯಕ ಖರ್ಚುಗಳನ್ನು ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

 

20 ರಿಂದ 30ರ ವಯಸ್ಸಿನಲ್ಲೇ ಶ್ರೀಮಂತರಾಗಲು 7 ಸೂತ್ರಗಳು20 ರಿಂದ 30ರ ವಯಸ್ಸಿನಲ್ಲೇ ಶ್ರೀಮಂತರಾಗಲು 7 ಸೂತ್ರಗಳು

4.  ಉಳಿತಾಯ ಗುರಿಗಳನ್ನು ಇಟ್ಟುಕೊಳ್ಳಿ

4. ಉಳಿತಾಯ ಗುರಿಗಳನ್ನು ಇಟ್ಟುಕೊಳ್ಳಿ

ಹಣ ಉಳಿತಾಯ ಮಾಡಲು ಉತ್ತಮವಾದ ಮಾರ್ಗ ಅಂದರೆ ಗುರಿಯನ್ನು ನಿಗದಿಪಡಿಸುವುದು. ಅಂದರೆ ಭವಿಷ್ಯದಲ್ಲಿ ಯಾವ ಕಾರ್ಯಗಳಿಗೆ ಎಷ್ಟು ಖರ್ಚಾಗಬಹುದು ಎಂದು ಅಂದಾಜಿಸಿ ಅದಕ್ಕಾಗಿ ಪ್ರತಿ ತಿಂಗಳು ಎಷ್ಟು ಹಣ ಉಳಿತಾಯ ಮಾಡಬೇಕು ಎಂದು ಯೋಜನೆ ರೂಪಿಸಿಕೊಳ್ಳಿ.

ಸಲಹೆ: ನಿಮ್ಮ ಉಳಿತಾಯ ಗುರಿಗಳನ್ನು ಅಲ್ಪಾವಧಿ, ದೀರ್ಘಾವಧಿ ಎಂದು ವಿಂಗಡಿಸಿ. ಆ ಮೂಲಕ ಅಲ್ಪಾವಧಿಗೆ ಯೋಜನೆಗಳಿಗೆ ಎಷ್ಟು ಹಣ ಉಳಿತಾಯ ಮಾಡಬೇಕು, ದೀರ್ಘಾವಧಿ ಗುರಿಗಳಿಗೆ ಎಷ್ಟು ಹಣ ಉಳಿಸಬೇಕು ಎಂದು ಅಂದಾಜಿಸಲು ಸಾಧ್ಯವಾಗುತ್ತದೆ. ಆ ಮೂಲಕ ಪ್ರತಿ ತಿಂಗಳು ಎಷ್ಟು ಹಣ ಎತ್ತಿಡಬೇಕು ಎಂದು ತಿಳಿಯುತ್ತದೆ.

 

5.  ನಿಮ್ಮ ಆದ್ಯತೆಗಳನ್ನು ಗುರುತಿಸಿಕೊಳ್ಳಿ

5. ನಿಮ್ಮ ಆದ್ಯತೆಗಳನ್ನು ಗುರುತಿಸಿಕೊಳ್ಳಿ

ನಿಮ್ಮ ಖರ್ಚುಗಳು ಮತ್ತು ಆದಾಯದ ಬಗ್ಗೆ ತಿಳಿದುಕೊಂಡ ಬಳಿಕ ನಿಮ್ಮ ಗುರಿಗಳು ಉಳಿತಾಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ನಿಮ್ಮ ದೀರ್ಘಾವಧಿ ಗುರಿಗಳ ತಲುಪಲು ನಿಮ್ಮ ಆದ್ಯತೆಗಳು ಯಾವುವು ಎಂದು ಗುರುತಿಸಿಕೊಳ್ಳಬೇಕಾಗುತ್ತದೆ. ಆ ಮೂಲಕ ಖರ್ಚುಗಳಿಗೆ ಕಡಿವಾಣ ಹಾಕಲು ಸಾಧ್ಯ.

ಸಲಹೆ: ನಿಮ್ಮ ಉಳಿತಾಯದ ಗುರಿಗಳಿಗೆ ಹೇಗೆ ಆದ್ಯತೆ ನೀಡಬೇಕೆಂದು ಮೊದಲು ತಿಳಿಯಿರಿ. ಈ ಮೂಲಕ ಉಳಿತಾಯವನ್ನು ಎಲ್ಲಿ ಆರಂಭಿಸಬೇಕು ಎಂಬುದರ ಕುರಿತು ನಿಮಗೆ ಸ್ಪಷ್ಟವಾದ ಆಲೋಚನೆ ಸಿಗುತ್ತದೆ. ಉದಾಹರಣೆಗೆ ಮುಂದಿನ ದಿನಗಳಲ್ಲಿ ನಿಮ್ಮ ಕಾರನ್ನು ಬದಲಿಸುವ ಅವಶ್ಯಕತೆಯಿದೆ ಎಂದು ನಿಮಗೆ ತಿಳಿದಿದ್ದರೆ, ಈಗಿನಿಂದಲೇ ಅದಕ್ಕಾಗಿ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

 

6. ಹಣ ಉಳಿತಾಯಕ್ಕೆ ಸರಿಯಾದ ಮಾರ್ಗ ಆಯ್ದುಕೊಳ್ಳಿ

6. ಹಣ ಉಳಿತಾಯಕ್ಕೆ ಸರಿಯಾದ ಮಾರ್ಗ ಆಯ್ದುಕೊಳ್ಳಿ

ನಿಮ್ಮ ಉಳಿತಾಯದ ಗುರಿಗಳು ಅಲ್ಪಾವಧಿಯ, ದೀರ್ಘಾವಧಿಯ ಎಂಬುದನ್ನು ಆಯ್ದುಕೊಳ್ಳಿ. ಆ ಮೂಲಕ ಅಲ್ಪಾವಧಿಯಾಗಿದ್ದರೆ ನಿಮ್ಮ ಹಣವನ್ನು ಡೆಪಾಸಿಟ್ ಮಾಡುವ ಮೂಲಕ ಹೆಚ್ಚಿನ ಬಡ್ಡಿ ಬರುವ ನಿಶ್ಚಿತ ಠೇವಣಿಯಲ್ಲಿ ಇಡುವ ಮೂಲಕ ಹೆಚ್ಚಿನ ಹಣ ಪಡೆಯಬುದು. ಉಳಿತಾಯ ಖಾತೆಯಲ್ಲಿ ಹಣ ಇಡುವುದಕ್ಕಿಂತ ನಿಶ್ಚಿತ ಠೇವಣಿಗಳಲ್ಲಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ.

ಸಲಹೆ: ಒಂದೇ ಕಡೆಯಲ್ಲಿ ಹಣವನ್ನು ಹೂಡಿಕೆ ಮಾಡದಿರಿ. ನಿಶ್ಚಿತ ಠೇವಣಿಗಳಲ್ಲಿ ಹಣ ಡೆಪಾಸಿಟ್ ಮಾಡುವುದಾದರೆ ಯಾವ ಬ್ಯಾಂಕಿನಲ್ಲಿ ಹೆಚ್ಚಿನ ಬಡ್ಡಿದರವಿದೆ ಎಂದು ತಿಳಿದುಕೊಂಡು ಮುಂದುವರಿಯಿರಿ.

 

7. ಸ್ವಯಂ ಚಾಲಿತವಾಗಿ ಹಣ ಉಳಿತಾಯ ಮಾಡಬಹುದು

7. ಸ್ವಯಂ ಚಾಲಿತವಾಗಿ ಹಣ ಉಳಿತಾಯ ಮಾಡಬಹುದು

ಬಹುತೇಕ ಬ್ಯಾಂಕುಗಳು ನಿಮ್ಮ ಉಳಿತಾಯ ಖಾತೆಯಲ್ಲಿನ ಹಣವು ಸ್ವಯಂ ಚಾಲಿತವಾಗಿ ವರ್ಗಾವಣೆಯಾಗುವ ಅವಕಾಶವನ್ನು ನೀಡುತ್ತವೆ. ನೀವು ನಿಮಗೆ ಅನುಕೂಲವಾಗುವ ದಿನಾಂಕದಲ್ಲಿ ಇಂತಿಷ್ಟು ಹಣವು ನಿಶ್ಚಿತ ಠೇವಣಿ ಅಥವಾ ಇತರೆ ಠೇವಣಿ ಯೋಜನೆಗಳಿಗೆ ವರ್ಗಾವಣೆಯಾಗುವ ಅವಕಾಶ ಕಲ್ಪಿಸಿಕೊಡುತ್ತದೆ.

ಸಲಹೆ: ಸ್ವಯಂ ಚಾಲಿತವಾಗಿ ಹಣ ವರ್ಗಾವಣೆ ಆಯ್ದುಕೊಳ್ಳುವುದರಿಂದ ನೀವು ಅಂದುಕೊಂದಷ್ಟು ಹಣವು ನಿಮ್ಮ ಅನವಶ್ಯಕ ಖರ್ಚುಗಳಿಗೆ ಸಿಗದೆ ಉಳಿತಾಯವಾಗಲು ಸಾಧ್ಯವಾಗುತ್ತದೆ. ಹೀಗಾಗಿ ಸ್ವಯಂ ಚಾಲಿತವಾಗಿ ಹಣ ವರ್ಗಾವಣೆಯು ಉತ್ತಮ ಆಯ್ಕೆಯಾಗಿದೆ.

 

8. ನಿಮ್ಮ ಬಜೆಟ್ ಹಾಗೂ ಉಳಿತಾಯದ ಮೇಲೆ ಕಣ್ಣಿಡಿ

8. ನಿಮ್ಮ ಬಜೆಟ್ ಹಾಗೂ ಉಳಿತಾಯದ ಮೇಲೆ ಕಣ್ಣಿಡಿ

ನಿಮ್ಮ ಬಜೆಟ್ ಹಾಗೂ ಉಳಿತಾಯವು ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂದು ಪ್ರಗತಿಯನ್ನು ಪರಿಶೀಲಿಸಿ. ಒಂದು ವೇಳೆ ನೀವು ಅಂದುಕೊಂಡಷ್ಟು ಉಳಿತಾಯ ಸಾಧ್ಯವಾಗುತ್ತಿಲ್ಲ ಎಂದು ಅರಿವಾದರೆ, ಅದಕ್ಕೆ ಅಡ್ಡಿಯಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಜೊತೆಗೆ ಪ್ರತಿ ತಿಂಗಳು ಹಣವನ್ನು ಹೇಗೆ ಉಳಿಸುವುದು ಮತ್ತು ಹೆಚ್ಚಿನ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

English summary

8 Simple Tips To Save Money

These are the 8 ways to save money. This guide for how to save money can help you develop a simple and realistic strategy
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X