For Quick Alerts
ALLOW NOTIFICATIONS  
For Daily Alerts

ಅತೀ ದೊಡ್ಡ ಡೀಲ್: ಅದಾನಿ ತೆಕ್ಕೆಗೆ ಎಸಿಸಿ, ಅಂಬುಜಾ ಸಿಮೆಂಟ್ಸ್

|

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಗೌತಮ್ ಅದಾನಿ ಮೂಲ ಸೌಕರ್ಯ, ಸಿಮೆಂಟ್ ವಲಯದ ಅತಿದೊಡ್ಡ ಡೀಲ್ ಕುದುರಿಸಿದ್ದಾರೆ. ಸ್ವಿಸ್ ಮೂಲದ ಹೋಲ್ಸಿಮ್ ಸಂಸ್ಥೆಯ ಭಾರತೀಯ ಅಂಗ ಸಂಸ್ಥೆಗಳಾದ ಅಂಬುಜಾ ಹಾಗೂ ಎಸಿಸಿ ಸಂಸ್ಥೆಗಳನ್ನು ಭಾರಿ ಮೊತ್ತಕ್ಕೆ ಅದಾನಿ ಸಮೂಹ ಖರೀದಿಸಿದೆ. ಸರಿ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯ ಡೀಲ್ ಇದಾಗಿದೆ.

 

ಈ ಮೂಲಕ ವಾರ್ಷಿಕವಾಗಿ ಸುಮಾರು 66 ಮಿಲಿಯನ್ ಟನ್ ಸಾಮರ್ಥ್ಯದೊಂದಿಗೆ ದೇಶದ ಎರಡನೇ ಅತಿ ದೊಡ್ಡ ಸಿಮೆಂಟ್ ಸಂಸ್ಥೆ ಎಂದು ಅದಾನಿ ಗ್ರೂಪ್ ಎನಿಸಿಕೊಳ್ಳಲಿದೆ. ಈ ಮೂಲಕ ಅತಿದೊಡ್ಡ ಸಿಮೆಂಟ್ ಉತ್ಪಾದನಾ ಸಂಸ್ಥೆ ಅಲ್ಟ್ರಾಟೆಕ್ ಜೊತೆಗೆ ನೇರ ಸ್ಪರ್ಧೆಗಿಳಿಯುತ್ತಿದೆ. ಅಂಬುಜಾ ಹಾಗೂ ಎಸಿಸಿ ಸಂಸ್ಥೆ ಖರೀದಿಸಲು ಸಜ್ಜನ್ ಜಿಂದಾಲ್ ಒಡೆತನದ ಜೆಎಸ್ ಡಬ್ಲ್ಯೂ ಸಂಸ್ಥೆ ಯತ್ನಿಸಿದ್ದು, ಆದರೆ ವಿಫಲವಾಗಿದೆ. ಅದಾನಿ ತೆಕ್ಕೆಗೆ ಎಸಿಸಿ, ಅಂಬುಜಾ ಸಿಮೆಂಟ್ಸ್ ಸೇರಿದೆ.

ಮುಕೇಶ್‌ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿಮುಕೇಶ್‌ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

ಜಾಗತಿಕ ಸರಾಸರಿ ತಲಾ 525 ಕೆಜಿಗೆ ಹೋಲಿಸಿದರೆ, ಭಾರತದ ಸಿಮೆಂಟ್ ಬಳಕೆಯು ತಲಾ 242 ಕೆಜಿಯಲ್ಲಿದೆ, ಭಾರತದಲ್ಲಿ ಸಿಮೆಂಟ್ ಕ್ಷೇತ್ರದ ಬೆಳವಣಿಗೆಗೆ ಗಮನಾರ್ಹ ಸಾಮರ್ಥ್ಯವಿದೆ ಎಂದು ಉಭಯ ಸಂಸ್ಥೆಗಳು ಪತ್ರಿಕಾ ಪ್ರಕಟಣೆ ತಿಳಿಸಿದೆ.

 66 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯ

66 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯ

ಭಾರತದಲ್ಲಿ ಹೋಲ್ಸಿಮ್‌ನ ಪ್ರಮುಖ ಘಟಕ ಅಂಬುಜಾ ಸಿಮೆಂಟ್ ಆಗಿದೆ. ಹೋಲ್ಸಿಮ್‌ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ ಶೇಕಡ 63.19 ಮತ್ತು ಎಸಿಸಿ ಲಿಮಿಟೆಡ್‌ನಲ್ಲಿ ಶೇಕಡ 54.53ರಷ್ಟು ಪಾಲನ್ನು ಹೊಂದಿದೆ. ಇನ್ನು ಈ ಎರಡು ಕಂಪನಿಗಳು ಒಟ್ಟಾಗಿ ವಾರ್ಷಿಕ 66 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

 ಹಲವು  ಬಹುರಾಷ್ಟ್ರೀಯ ಕಂಪನಿಗಳ ದಾರಿ ಹಿಡಿದ ಹೋಲ್ಸಿಮ್

ಹಲವು ಬಹುರಾಷ್ಟ್ರೀಯ ಕಂಪನಿಗಳ ದಾರಿ ಹಿಡಿದ ಹೋಲ್ಸಿಮ್

ಈ ಹಿಂದೆ ಫೋರ್ಡ್, ಜನರಲ್ ಮೋಟಾರ್ಸ್, ಹಾರ್ಲೆ ಡೇವಿಡ್ಸನ್, ಮ್ಯಾನ್ ಟ್ರಕ್, ಹಚಿಸನ್, ಎಟಿಸಲಾಟ್, ಫಿಡೆಲಿಟಿ ಮತ್ತು ಸಿಟಿಬ್ಯಾಂಕ್ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿನ ತಮ್ಮ ಸಂಸ್ಥೆಯ ಮಾಲೀಕತ್ವವನ್ನು ತೊರೆದ ಬೆನ್ನಲ್ಲೇ ಈಗ ಹೋಲ್ಸಿಮ್ ಆ ದಾರಿ ಹಿಡಿದಿದೆ. 71,244 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಅಂಬುಜಾ ಸಿಮೆಂಟ್ಸ್ ಷೇರುಗಳು ಶುಕ್ರವಾರ ಶೇಕಡ 3.79ರಷ್ಟು ಕುಸಿದು 358.80 ರೂಪಾಯಿಗೆ ತಲುಪಿದೆ. ಎಸಿಸಿ ಶೇಕಡ 3.02ರಷ್ಟು ನಷ್ಟ ಕಂಡು, ರೂ 2,113.70ರಲ್ಲಿ ವಹಿವಾಟು ನಡೆಸಿದೆ.

ಅದಾನಿಗೆ ಆಘಾತ, ಯುಎಸ್ ಷೇರುಪೇಟೆಯಿಂದ ಹೊರಕ್ಕೆಅದಾನಿಗೆ ಆಘಾತ, ಯುಎಸ್ ಷೇರುಪೇಟೆಯಿಂದ ಹೊರಕ್ಕೆ

 ಗೌತಮ್ ಅದಾನಿ ಹೇಳುವುದು ಏನು?
 

ಗೌತಮ್ ಅದಾನಿ ಹೇಳುವುದು ಏನು?

ಇನ್ನು ಈ ಬಗ್ಗೆ ಮಾತನಾಡಿದ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, "ಸಿಮೆಂಟ್ ವ್ಯವಹಾರದಲ್ಲಿನ ನಮ್ಮ ಹೆಜ್ಜೆಯು ನಮ್ಮ ದೇಶ ಬೆಳವಣಿಗೆಯ ಕಥೆಯಲ್ಲಿನ ನಮ್ಮ ನಂಬಿಕೆಯ ಮತ್ತೊಂದು ದ್ಯೋತಕವಾಗಿದೆ. ಅಂಬುಜಾ ಮತ್ತು ಎಸಿಸಿ ಕಾರ್ಯಾಚರಣೆಗಳು ಶಕ್ತಿಯ ತೀವ್ರತೆಯನ್ನು ಹೊಂದಿವೆ ಎಂದು ನಾವು ಗುರುತಿಸುತ್ತೇವೆ. ಮುಂದಿನ ಬೆಳವಣಿಗೆಯನ್ನು ಆರಂಭ ಮಾಡಲು ಭಾರತದಲ್ಲಿ ಅದಾನಿ ಗ್ರೂಪ್ ವ್ಯವಹಾರವನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತಿದೆ. ಇದು ಬಹಳ ಸಂತಸದ ವಿಚಾರ. ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಮಾರುಕಟ್ಟೆಯಾಗಿ ಮುಂದುವರಿದಿದ್ದರೂ, ಜಾಗತಿಕ ಸರಾಸರಿ ತಲಾ ಸಿಮೆಂಟ್ ಬಳಕೆಯ ಅರ್ಧಕ್ಕಿಂತ ಕಡಿಮೆಯಿದೆ," ಎಂದು ಹೇಳಿದ್ದಾರೆ.

 800 ಮಿಲಿಯನ್ ಡಾಲರ್‌ಗೆ ಅಂಬುಜಾ ಖರೀದಿಸಿದ್ದ ಹೋಲ್ಸಿಮ್

800 ಮಿಲಿಯನ್ ಡಾಲರ್‌ಗೆ ಅಂಬುಜಾ ಖರೀದಿಸಿದ್ದ ಹೋಲ್ಸಿಮ್

ಹೋಲ್ಸಿಮ್ 2005 ರಲ್ಲಿ 800 ಮಿಲಿಯನ್ ಡಾಲರ್‌ಗೆ ಅಂಬುಜಾ ಸಿಮೆಂಟ್ ಅನ್ನು ಖರೀದಿಸಿತು. ಎಸಿಸಿ ಅನ್ನು 1999 ಮತ್ತು 2001 ರ ನಡುವೆ ಟಾಟಾ ಗುಂಪಿನಿಂದ ಪ್ರತಿ ಷೇರಿಗೆ ರೂ 370 ಕ್ಕೆ ಮೂರು ಭಾಗಗಳಲ್ಲಿ ಅಂಬುಜಾ ಖರೀದಿಸಿತು. ಇನ್ನು ಸಂಸ್ಥೆಯ ಬಗ್ಗೆ ಮಾತನಾಡಿದ ಹೋಲ್ಸಿಮ್‌ ಲಿಮಿಟೆಡ್‌ನ ಸಿಇಒ ಜಾನ್ ಜೆನಿಶ್, "ಕಳೆದ ಹನ್ನೆರಡು ತಿಂಗಳುಗಳಲ್ಲಿ, ನಾವು ಕಂಪನಿಗೆ ಹೊಸ ಬೆಳವಣಿಗೆಯ ಎಂಜಿನ್‌ನಂತೆ ಸೊಲ್ಯೂಷನ್ಸ್ ಮತ್ತು ಉತ್ಪನ್ನಗಳಲ್ಲಿ 5 ಶತಕೋಟಿ ಹೂಡಿಕೆ ಮಾಡಿದ್ದೇವೆ. ನವೀನ ಹಾಗೂ ಸುಸ್ಥಿರ ಜಾಗತಿಕ ನಾಯಕರಾಗಲು ನಾವು ನಮ್ಮ 'ತಂತ್ರ 2025 - ಆಕ್ಸಿಲರೇಟಿಂಗ್ ಗ್ರೀನ್ ಗ್ರೋತ್' ಗೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

English summary

Adani gets control of Ambuja Cement with $10.5 bn Holcim deal

Biggest infra materials deal: Adani gets control of Ambuja Cement with $10.5 bn Holcim deal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X