For Quick Alerts
ALLOW NOTIFICATIONS  
For Daily Alerts

Milk Price: ಅಮುಲ್ ಬಳಿಕ ಈ ಬ್ರ್ಯಾಂಡ್ ಹಾಲಿನ ದರ 3 ರೂಪಾಯಿ ಏರಿಕೆ!

|

ಕೇಂದ್ರ ಬಜೆಟ್ ಮಂಡನೆ ದಿನವೇ ಅಮುಲ್ ತನ್ನ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಇದಾದ ಬೆನ್ನಲ್ಲೇ ಈ ವೆರ್ಕಾ ಕೂಡಾ ತನ್ನ ಹಾಲಿನ ದರವನ್ನು ಏರಿಸಿದೆ. ಹಣದುಬ್ಬರದ ನಡುವೆ ಮತ್ತೆ ಹಲವಾರು ವಸ್ತುಗಳ ದರ ಏರಿಕೆಯಾಗಬಹುದೇ ಎಂದು ಜನಸಾಮಾನ್ಯರ ಆತಂಕವಾಗಿದೆ.

ವೆರ್ಕಾ ಬ್ರಾಂಡ್‌ ಅಡಿಯಲ್ಲಿ ಹಾಲನ್ನು ಮಾರಾಟ ಮಾಡುವ ಪಂಜಾಬ್ ಸ್ಟೇಟ್ ಕಾಪೋರೇವಿಟ್ ಮಿಲ್ಕ್ ಪ್ರೊಡ್ಯೂಸರ್ಸ್ ಫೆಡರೇಷನ್ ಲಿಮಿಟೆಡ್ (ಮಿಲ್ಕ್‌ಫೆಡ್) ಹಾಲಿನ ದರವನ್ನು 3 ರೂಪಾಯಿ ಏರಿಸಿದೆ. ಇದಕ್ಕೂ ಮುನ್ನ ಅಮುಲ್ ಕೂಡಾ ತನ್ನ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಿದೆ. ಅಮುಲ್ ಹಾಲಿನ ದರವು ಫೆಬ್ರವರಿ 3ನೇ ತಾರೀಖಿನಿಂದ ಜಾರಿಗೆ ಬಂದರೆ, ವೆರ್ಕಾ ನೂತನ ಹಾಲಿನ ದರವು ಫೆಬ್ರವರಿ 4, ಶನಿವಾರದಿಂದ ಜಾರಿಗೆ ಬರುತ್ತದೆ.

ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ

500 ಮಿಲಿ ಲೀಟರ್‌ನ ಸಾಮಾನ್ಯ ಹಾಲಿನ ದರವು 29 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ ಎಂದು ವೆರ್ಕಾ ಹೇಳಿಕೊಂಡಿದೆ. ಇನ್ನು ಸ್ಟಾಡರ್ಡ್ ಹಾಲು ಪ್ರತಿ ಲೀಟರ್‌ಗೆ ಈ ಹಿಂದೆ 57 ರೂಪಾಯಿ ಆಗಿತ್ತು. ಆದರೆ ಈಗ 60 ರೂಪಾಯಿ ನೀಡಬೇಕಾಗುತ್ತದೆ. ಸಂಪೂರ್ಣವಾಗಿ ಕ್ರೀಮ್ ಇರುವ ಹಾಲು ಈ ಹಿಂದೆ ಪ್ರತಿ ಲೀಟರ್‌ಗೆ 60 ರೂಪಾಯಿ ಆಗಿದ್ದು, ಆದರೆ ಬೆಲೆ ಏರಿಕೆಯ ಬಳಿಕ 66 ರೂಪಾಯಿ ನೀಡಬೇಕಾಗುತ್ತದೆ. ಅಂದರೆ 6 ರೂಪಾಯಿ ಹೆಚ್ಚಾದಂತಾಗಿದೆ.

 Milk Price: ಅಮುಲ್ ಬಳಿಕ ಈ ಬ್ರ್ಯಾಂಡ್ ಹಾಲಿನ ದರ 3 ರೂಪಾಯಿ ಏರಿಕೆ!

ಇನ್ನು ಟೋನ್ಡ್‌ ಹಾಲಿನ ದರವು ಪ್ರತಿ ಲೀಟರ್‌ಗೆ 51 ರೂಪಾಯಿ ಆಗಿತ್ತು. ಆದರೆ ಈಗ 54 ರೂಪಾಯಿ ಆಗಿದೆ. ಡಬಲ್ ಟೋನಿಂಗ್ ಹಾಲಿನ ದರವು 500 ಮಿಲಿ ಲೀಟರ್‌ಗೆ 23 ರೂಪಾಯಿ ಆಗಿತ್ತು, ಪ್ರಸ್ತುತ 1 ರೂಪಾಯಿ ಹೆಚ್ಚಾಗಿ 24 ರೂಪಾಯಿ ಆಗಿದೆ. ಡಬಲ್ ಟೋನ್ಡ್ 6 ಲೀಟರ್ ಹಾಲಿನ ದರವು ಈ ಹಿಂದೆ 258 ರೂಪಾಯಿ ಆಗಿದ್ದು, ಈಗ 273 ರೂಪಾಯಿ ಆಗಿದೆ.

ಅಮುಲ್ ಹಾಲಿನ ದರ ಪ್ರಸ್ತುತ ಎಷ್ಟಾಗಿದೆ?

ಗುಜರಾತ್ ಕಾಪೋರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ತನ್ನ ಅಮುಲ್ ಬ್ರಾಂಡ್‌ನ ಹಾಲಿನ ದರವನ್ನು ಮತ್ತೆ ಎರಡು ರೂಪಾಯಿ ಏರಿಕೆ ಮಾಡಿದೆ. ಈ ಹಿಂದೆ ಹಲವಾರು ಬಾರಿ ಅಮುಲ್ ತನ್ನ ಹಾಲಿನ ದರವನ್ನು ಏರಿಸಿದೆ. ಒಂದು ಲೀಟರ್ ಹಾಲಿನ ದರ 3 ರೂಪಾಯಿ ಏರಿಕೆಯಾಗಿದ್ದು, ಪಸ್ತುತ 66 ರೂಪಾಯಿ ಆಗಿದೆ. ಈ ಹಿಂದೆ ಫುಲ್ ಕ್ರೀಮ್ ಹಾಲಿನ ದರವು ಪ್ರತಿ ಲೀಟರ್‌ಗೆ 63 ರೂಪಾಯಿ ಆಗಿತ್ತು.

Nandini Milk Price: ನಂದಿನಿ ಹಾಲು, ಮೊಸರು ದರ 2 ರೂಪಾಯಿ ಏರಿಕೆNandini Milk Price: ನಂದಿನಿ ಹಾಲು, ಮೊಸರು ದರ 2 ರೂಪಾಯಿ ಏರಿಕೆ

ಅಮುಲ್ ತಾಜಾ 500 ಮಿಲಿ ಲೀಟರ್: 27 ರೂಪಾಯಿ
ಅಮುಲ್ ತಾಜಾ 1 ಲೀಟರ್: 54 ರೂಪಾಯಿ
ಅಮುಲ್ ತಾಜಾ 2 ಲೀಟರ್ 108 ರೂಪಾಯಿ
ಅಮುಲ್ ತಾಜ್ 6 ಲೀಟರ್: 324 ರೂಪಾಯಿ
ಅಮುಲ್ ತಾಜಾ 180 ಮಿಲಿ ಲೀಟರ್: 10 ರೂಪಾಯಿ
ಅಮುಲ್ ಗೋಲ್ಡ್ 500 ಮಿಲಿ ಲೀಟರ್: 33 ರೂಪಾಯಿ
ಅಮುಲ್ ಗೋಲ್ಡ್ 1 ಲೀಟರ್: 66 ರೂಪಾಯಿ
ಅಮುಲ್ ಗೋಲ್ಡ್ 6 ಲೀಟರ್: 396 ರೂಪಾಯಿ
ಅಮುಲ್ ದನದ ಹಾಲು 500 ಮಿಲಿ ಲೀಟರ್: 28 ರೂಪಾಯಿ
ಅಮುಲ್ ದನದ ಹಾಲು 1 ಲೀಟರ್: 56 ರೂಪಾಯಿ
ಅಮುಲ್ A2 ಎಮ್ಮೆ ಹಾಲು 500 ಮಿಲಿ ಲೀಟರ್: 35 ರೂಪಾಯಿ
ಅಮುಲ್ A2 ಎಮ್ಮೆ ಹಾಲು 1 ಲೀಟರ್: 70 ರೂಪಾಯಿ
ಅಮುಲ್ A2 ಎಮ್ಮೆ ಹಾಲು 6 ಲೀಟರ್: 420 ರೂಪಾಯಿ

ಈ ಹಿಂದೆ ಅಕ್ಟೋಬರ್‌ 2022ರಲ್ಲಿ ಅಮುಲ್ ತನ್ನ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಹಾಗೆಯೇ ಮದರ್ ಡೈರಿ ಕೂಡಾ ತನ್ನ ಹಾಲಿನ ದರವನ್ನು ಏರಿಸಿದೆ. ಈ ಹಿಂದೆ ಆಗಸ್ಟ್‌ನಲ್ಲಿಯೂ ಅಮುಲ್ ಹಾಲಿನ ದರವನ್ನು ಹೆಚ್ಚಿಸಿದೆ. ನಿನ್ನೆ ಪರಾಗ್ ಮಿಲ್ಕ್ ಫುಡ್ಸ್ ತನ್ನ ಗೋವರ್ಧನ ಬ್ರಾಂಡ್ ತನ್ನ ಹಾಲಿನ ದರವನ್ನು 2 ರೂಪಾಯಿ ಹೆಚ್ಚಿಸಿದೆ.

English summary

After Amul, Verka Hikes Milk Prices by Rs.3 per Litre, Details Here

The Punjab State Cooperative Milk Producers Federation Limited (Milkfed), which distributes milk products under the Verka brand, announced it is hiking milk prices by Rs 3 per litre.
Story first published: Saturday, February 4, 2023, 9:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X