For Quick Alerts
ALLOW NOTIFICATIONS  
For Daily Alerts

ಬಜೆಟ್ ನಂತರ ಇದು ಹೂಡಿಕೆ ಮಾಡಲು ಸಮಯ..!

|

ಪ್ರತಿ ಬಜೆಟ್‌ನ ನಂತರ, ಮಾರುಕಟ್ಟೆಗಳು ಒಂದು ವಾರದ ನಂತರ, ಒಂದು ತಿಂಗಳ ನಂತರ ಹೇಗಿದೆ ಎಂದು ಹಲವಾರು ವರದಿಗಳು ಪ್ರಕಟವಾಗುತ್ತದೆ. ಈ ಸಂದರ್ಭದಲ್ಲಿ ಬಜೆಟ್‌ ಸ್ಟಾಕ್‌ ಮಾರುಕಟ್ಟೆಯ ಮೇಲೆ ಬೀರುವ ಪರಿಣಾಮವನ್ನು ಕೂಡಾ ನಾವು ನೋಡುತ್ತೇವೆ. ಈ ನಡುವೆ ನಾವು ಹೂಡಿಕೆ ಹಾಗೂ ನಮ್ಮ ವೈಯಕ್ತಿಕ ಗುರಿಯ ಬಗ್ಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳುವುದು ಬಹಳ ಮುಖ್ಯವಾಗಿದೆ.

ಈ ವರ್ಷವೂ ಷೇರು ಮಾರುಕಟ್ಟೆಗಳು ಬಜೆಟ್ ದಿನದಂದು ಏರಿಕೆ ಕಂಡಿದೆ. ಫೆಬ್ರವರಿ 1, 2022 ರಂದು ಷೇರು ಮಾರುಕಟ್ಟೆ ಶೇಕಡಾ 1.5 ರಷ್ಟು ಏರಿಕೆಯಾಗಿದೆ. ಆದರೆ ಬಜೆಟ್ ಭಾಷಣದ ಪ್ರಾರಂಭದಿಂದ ಮಾರುಕಟ್ಟೆಗಳು 0.2 ಶೇಕಡ ಏರಿಳಿತ ಕಂಡಿದ್ದವು. ತಜ್ಞರು ಈ ಬಜೆಟ್‌ ಷೇರು ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಆರ್ಥಿಕತೆಗೆ ದೀರ್ಘಾವಾದ ಕಣ್ಣೋಟವನ್ನು ಹೊಂದಿರುವಂತೆ ಭಾರತ @ 100 ಎಂಬ ವಿಚಾರ ಪ್ರಸ್ತಾಪ ಮಾಡಿದೆ.

 ಐಟಿಆರ್‌ ಫಾರ್ಮ್‌ನಲ್ಲಿ ಕ್ರಿಪ್ಟೋಕರೆನ್ಸಿ ಆದಾಯದ ವಿವರಕ್ಕೆ ಪ್ರತ್ಯೇಕ ಕಾಲಮ್‌ ಐಟಿಆರ್‌ ಫಾರ್ಮ್‌ನಲ್ಲಿ ಕ್ರಿಪ್ಟೋಕರೆನ್ಸಿ ಆದಾಯದ ವಿವರಕ್ಕೆ ಪ್ರತ್ಯೇಕ ಕಾಲಮ್‌

ಈ ಎಲ್ಲಾ ವಿಚಾರಗಳ ನಡುವೆ ನೀವು ಬಜೆಟ್‌ ಬಳಿಕ ಯಾವ ವಲಯದಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದು ತಿಳಿದು ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿದೆ. ಹಾಗಾದರೆ ಏಕೆ ತಡ ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ..

ಬಜೆಟ್ ನಂತರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಬಜೆಟ್ ನಂತರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಹೂಡಿಕೆ ಸಲಹೆಗಾರರು ಏನು ಹೇಳುತ್ತಾರೆ?

ಹೂಡಿಕೆ ಸಲಹೆಗಾರರು ಏನು ಹೇಳುತ್ತಾರೆ?

ನೋಂದಾಯಿತ ಹೂಡಿಕೆ ಸಲಹೆಗಾರರ ಪ್ರಕಾರ ಬಜೆಟ್ ಮಿಶ್ರಿತವಾಗಿದೆ. ಗ್ರಾಹಕರು ಅಥವಾ ಹೂಡಿಕೆದಾರರು ತಮ್ಮ ಸಂಪೂರ್ಣ ಬಂಡವಾಳವನ್ನು ನೋಂದಾಯಿತ ಹೂಡಿಕೆ ಸಲಹೆಗಾರರ ಮೂಲಕ ನಿರ್ವಹಣೆ ಮಾಡುತ್ತಾರೆ. ಹಣಕಾಸಿನ ಯೋಜನೆ ಅಥವಾ ಆಸ್ತಿ ಹಂಚಿಕೆ ವಿಧಾನವು ಈ ಕ್ಲೈಂಟ್‌ಗಳು ಕೇವಲ ಈಕ್ವಿಟಿಗಳನ್ನು ಹೊರತುಪಡಿಸಿ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮವಾಗಿದೆ. ಇದಲ್ಲದೆ, ಹೆಚ್ಚುವರಿ ನಿಧಿಯ ನಿರ್ವಹಣೆ ಬೇಕಾಗಿದೆ. ಈಕ್ವಿಟಿ ಮಾರುಕಟ್ಟೆಗಳು ತೀವ್ರವಾಗಿ ಏರುತ್ತಿರುವ ಹಿನ್ನೆಲೆ ಈಗಾಗಲೇ ಮಾಡಿದ ಹೂಡಿಕೆಗಳಿಗೆ ಉತ್ತಮವಾಗಿದೆ. ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡಲು ಕೂಡಾ ಉತ್ತಮ ಸಮಯವಾಗಿದೆ.

 ನಿರಾಶಾದಾಯಕ ಬಜೆಟ್‌

ನಿರಾಶಾದಾಯಕ ಬಜೆಟ್‌

ದಿನಕ್ಕೆ ಕನಿಷ್ಠ 6.65 ಶೇಕಡಾವನ್ನು ತಲುಪಿದ ನಂತರ 6.85 ಶೇಕಡಾ (10-ವರ್ಷ) ಗೆ ಏರಿದ ಬಾಂಡ್‌ಗಳ ಮೇಲೆ ನೀವು ಕಣ್ಣಿಟ್ಟರೆ ಬಜೆಟ್‌ ನಿರಾಶೆದಾಯಕವಾಗಿದೆ. ಹತ್ತು-ವರ್ಷದ ಬಾಂಡ್‌ಗಳು ಬಜೆಟ್‌ ಹಿಂದಿನ ದಿನಕ್ಕೆ ಹೋಲಿಸಿದರೆ ಒಂದು ದಿನದಲ್ಲಿ 2 ಪ್ರತಿಶತ ಮತ್ತು ಕನಿಷ್ಠ 1 ಪ್ರತಿಶತವನ್ನು ಕಳೆದುಕೊಂಡಿವೆ. ಇದು ಕೇವಲ ದೇಶೀಯ ವಿದ್ಯಮಾನವಲ್ಲ. ಕೊರೊನಾ ಸಾಂಕ್ರಾಮಿಕದ ನಂತರ ಹಣದುಬ್ಬರವು ಜಗತ್ತಿನಾದ್ಯಂತ ತಲೆ ಎತ್ತಿದೆ. ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಮಧ್ಯಪ್ರಾಚ್ಯದಲ್ಲಿ ಡ್ರೋನ್ ದಾಳಿಯಂತಹ ಭೌಗೋಳಿಕ ರಾಜಕೀಯ ಸಮಸ್ಯೆಗಳ ಕಾರಣದಿಂದಾಗಿ ತೈಲ ಬೆಲೆಗಳು ಏರಿವೆ. ತೈಲ ಬೆಲೆಯು ಬ್ಯಾರೆಲ್‌ಗೆ 75 ಡಾಲರ್‌ಗಿಂತ ಹೆಚ್ಚಾಗಿರುವ ಕಾರಣ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ ಎಂಬುವುದು ಆರ್‌ಬಿಐ ಚಿಂತಿಸಬೇಕಾದ ವಿಷಯವಾಗಿದೆ. ಈ ಪರಿಸ್ಥಿತಿಗಳು ಮುಂದುವರಿದರೆ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಭಾರತ ಹೊಂದಿರುವ ಆರೋಗ್ಯಕರ ವಿದೇಶಿ ವಿನಿಮಯ ಮೀಸಲು ಆಧರಿಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆರ್‌ಬಿಐ ಹೊಂದಿದೆ.

 ಹೂಡಿಕೆದಾರರಿಗೆ ಏನಿದೆ ಅವಕಾಶ?

ಹೂಡಿಕೆದಾರರಿಗೆ ಏನಿದೆ ಅವಕಾಶ?

ವೈಯಕ್ತಿಕ ಹೂಡಿಕೆದಾರ ನಿವೃತ್ತಿ ವೇತನದ ಬಗ್ಗೆ ಗಮನ ಹರಿಸುವಲ್ಲಿ ಬಜೆಟ್‌ ವಿಫಲವಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಮಾಡಿದಂತೆ, ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಕಂಪನಿಗಳಿಗೆ ತಮ್ಮ ಸಂಬಳದ 14 ಪ್ರತಿಶತವನ್ನು (ಪ್ರಸ್ತುತ 10 ಪ್ರತಿಶತದ ಬದಲಿಗೆ) ಎನ್‌ಪಿಎಸ್‌ ಅನ್ನು ಹೂಡಿಕೆ ಮಾಡಲು ಅನುಮತಿ ನೀಡಬಹುದು. ಆದರೆ ಜನರಿಗೆ ಅದಕ್ಕೆ ಸರಿಯಾದ ಇನ್‌ ಹ್ಯಾಂಡ್ ವೇತನ ಇರುವುದು ಈ ದುಬಾರಿ ಜೀವನದಲ್ಲಿ ಅತ್ಯಗತ್ಯವಾಗಿದೆ. ಪ್ರಸ್ತುತ ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯಲ್ಲಿ ಅವಕಾಶ ಇದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಅಪಾಯ ತಪ್ಪಿದ್ದಲ್ಲ.

 ಸ್ವಂತ ಬಜೆಟ್ ರಚಿಸಿ

ಸ್ವಂತ ಬಜೆಟ್ ರಚಿಸಿ

ನೀವು ಕೇಂದ್ರ ಸರ್ಕಾರದ ಬಜೆಟ್‌ ಅನ್ನು ನೋಡಿದ್ದೀರಿ. ಈ ಬಳಿಕ ನೀವು ಕೂಡಾ ಸ್ವಂತ ಬಜೆಟ್ ರಚಿಸುವುದು ಉತ್ತಮ. ಕೇಂದ್ರ ಬಜೆಟ್‌ ಜನರು ತಮ್ಮ ವೈಯಕ್ತಿಕ ಬಜೆಟ್ ಬಗ್ಗೆ ಯೋಚಿಸಲು ಅತ್ಯುತ್ತಮ ಸಮಯವಾಗಿದೆ. ನಿಮ್ಮ ದೀರ್ಘಾವಧಿಯ ಗುರಿಗಳು ಏನೆಂದು ಸರಿಯಾಗಿ ನಿರ್ಧಾರ ಮಾಡಿ, ನಿಮ್ಮ ಆದಾಯಕ್ಕೆ ಸರಿಯಾದ ಬಜೆಟ್‌ ಅನ್ನು ಸಿದ್ಧಪಡಿಸಿ. ಆದಾಯಕ್ಕೆ ಅನುಗುಣವಾಗಿ ಹೂಡಿಕೆಯನ್ನು ಕೂಡಾ ಮಾಡಿ. ಹೂಡಿಕೆ ಮಾಡುವ ಸಂದರ್ಭದಲ್ಲಿ ಅಲ್ಪಾವಧಿಯ ಹೂಡಿಕೆ ಮಾಡಿದರೆ ಉತ್ತಮ. ನಿಮಗೆ ಈ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆಯಲು ನೋಂದಾಯಿತ ಹೂಡಿಕೆ ಸಲಹೆಗಾರರ ಬಳಿ ಸಲಹೆಯನ್ನು ಪಡೆಯಿರಿ.

English summary

After Budget 2022 Lets Focus On Personal Goals and Investments

After Budget 2022 Lets focus on personal goals and investments. Here's Details Read on.
Story first published: Thursday, February 3, 2022, 10:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X