For Quick Alerts
ALLOW NOTIFICATIONS  
For Daily Alerts

Amazon Prime Video Mobile Edition : ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿ ಪ್ರಾರಂಭ, ಏನಿದು?

|

ಅಮೆಜಾನ್ ಭಾರತದಲ್ಲಿ ತನ್ನ ಪ್ರಧಾನ ವೀಡಿಯೊ ಸದಸ್ಯತ್ವಕ್ಕಾಗಿ ಹೊಸ ಚಂದಾದಾರಿಕೆ ಪ್ರಾರಂಭ ಮಾಡಿದೆ. ಕಂಪನಿಯು Amazon Prime Video Mobile Edition ಅನ್ನು ಬಿಡುಗಡೆ ಮಾಡಿದೆ.

 

ಹೊಸ ಚಂದಾದಾರಿಕೆ ಶ್ರೇಣಿಯು ಭಾರತದಲ್ಲಿ ಗ್ರಾಹಕರಿಗೆ ಲಭ್ಯವಿರುವ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆ ಆಯ್ಕೆಗಳ ಜೊತೆಗೆ ಇರುತ್ತದೆ. ಅಮೆಜಾನ್‌ನ ಈ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಂತಹವುಗಳ ವಿರುದ್ಧ ಸ್ಪರ್ಧಿಸಲು ಸಹಾಯ ಮಾಡುತ್ತದೆ.

ಡಿಸ್ನಿ+ ಹಾಟ್‌ಸ್ಟಾರ್ ಭಾರತದಲ್ಲಿ ಹಲವಾರು ಟೆಲಿಕಾಂ ರೀಚಾರ್ಜ್ ಪ್ಯಾಕ್‌ಗಳೊಂದಿಗೆ ಆಫರ್‌ ರೂಪದಲ್ಲಿ ಲಭ್ಯವಾಗುತ್ತದೆ. ಈಗ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆಯು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಭಾರತದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಬೆಲೆ, ಫೀಚರ್‌ಗಳು ಮತ್ತು ಇತರ ವಿವರಗಳನ್ನು ನೋಡೋಣ. ಮುಂದೆ ಓದಿ...

 ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿ ಏನಿದು?

ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿ ಏನಿದು?

ಅಮೆಜಾನ್ ತನ್ನ ಹೊಸ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯನ್ನು ವರ್ಷಕ್ಕೆ 599 ರೂಪಾಯಿ ಚಂದಾದಾರಿಕೆಯೊಂದಿಗೆ ಬಿಡುಗಡೆ ಮಾಡಿದೆ. ಸ್ಟಾಡರ್ಡ್ ಆನ್ಯುವಲ್ ಪ್ಯಾಕ್ ವರ್ಷಕ್ಕೆ 1,499 ರೂಪಾಯಿ ಆಗಿರುತ್ತದೆ. ಮೊಬೈಲ್ ಆವೃತ್ತಿಯಲ್ಲಿ ಕೊಂಚ ಫೀಚರ್ ಕಡಿಮೆ ಇರುತ್ತದೆ. ಆರಂಭಿಕರಿಗಾಗಿ, ಸ್ಟ್ರೀಮಿಂಗ್ ಗುಣಮಟ್ಟವು 480p ಆಗಿರುತ್ತದೆ. ಇದು ಮೊಬೈಲ್‌ನ ಸಣ್ಣ ಪರದೆಗೆ ಸೂಕ್ತವಾಗಿದೆ. ಸ್ಟ್ಯಾಂಡರ್ಡ್ ಪ್ಲಾನ್, ವರ್ಷಕ್ಕೆ ರೂ 1,499 ಅಥವಾ ತಿಂಗಳಿಗೆ ರೂ 129 ಆಗಿರುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ 4K ವರೆಗೆ ಸ್ಟ್ರೀಮಿಂಗ್ ಇರುತ್ತದೆ.

 ಯಾವೆಲ್ಲ ಪ್ಲ್ಯಾನ್‌ಗಳು ಇದೆ?

ಯಾವೆಲ್ಲ ಪ್ಲ್ಯಾನ್‌ಗಳು ಇದೆ?

ಮೊಬೈಲ್ ಪ್ಯಾಕ್‌ನಲ್ಲಿ ಅಮೆಜಾನ್ ಒರಿಜಿನಲ್ಸ್, ಲೈವ್ ಕ್ರಿಕೆಟ್ ಜೊತೆಗೆ ಭಾರತೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರಗಳನ್ನು ನೋಡಲು ಸಾಧ್ಯವಾಗುತ್ತದೆ. ಇವುಗಳ ಜೊತೆಗೆ, ಚಂದಾದಾರರು IMDb ನಿಂದ ನಡೆಸಲ್ಪಡುವ ಎಕ್ಸ್-ರೇ ಮತ್ತು ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯೊಂದಿಗೆ ಆಫ್‌ಲೈನ್ ವೀಕ್ಷಣೆಗಾಗಿ ಡೌನ್‌ಲೋಡ್‌ ಮಾಡಬಹುದು. ಅಮೆಜಾನ್‌ ಮೊಬೈಲ್ ಎಡಿಷನ್‌ನಲ್ಲಿ ಕೆಲವು ಪ್ರಮುಖ ಫೀಚರ್‌ಗಳು ಇರುವುದಿಲ್ಲ. ಅಮೆಜಾನ್‌.ಇನ್ ನಲ್ಲಿ ಉಚಿತ ಫಾಸ್ಟ್ ಡೆಲವರಿ, ಪ್ರೈಮ್ ಮ್ಯೂಸಿಕ್‌ನೊಂದಿಗೆ ಜಾಹೀರಾತು-ಮುಕ್ತ ಹಾಡು, ಪ್ರೈಮ್ ರೀಡಿಂಗ್‌ನಂತಹ ಕೆಲವು ಪ್ರಮುಖ ಫೀಚರ್‌ಗಳು ಮೊಬೈಲ್ ಆವೃತ್ತಿಯ ಪ್ಯಾಕ್‌ನಲ್ಲಿ ಲಭ್ಯವಿಲ್ಲ. ಈ ಫೀಚರ್‌ಗಳು ರೂ 1499 ಯೋಜನೆಗೆ ಲಭ್ಯವಾಗಲಿದೆ. ಹಾಗೆಯೇ ಹೆಚ್ಚಿ ರೆಸಲ್ಯೂಶನ್‌ನಲ್ಲಿ ಸ್ಟ್ರೀಮಿಂಗ್ ಲಭ್ಯವಾಗಲಿದೆ. ಮೊಬೈಲ್‌ನ ಈ ಆವೃತ್ತಿಯಲ್ಲಿ ಬಳಕೆದಾರರು ಒಂದು ಸಮಯದಲ್ಲಿ ಒಂದು ಖಾತೆಯನ್ನು ಮಾತ್ರ ಬಳಕೆ ಮಾಡಲು ಸಾಧ್ಯವಾಗಲಿದೆ.

 ಹೆಚ್ಚು ಜನರನ್ನು ತಲುಪುವ ಗುರಿ
 

ಹೆಚ್ಚು ಜನರನ್ನು ತಲುಪುವ ಗುರಿ

ಈ ಬಗ್ಗೆ ಮಾಹಿತಿ ನೀಡಿದ ಅಮೆಜಾನ್ ಪ್ರೈಮ್ ಇಂಡಿಯಾ ಉಪಾಧ್ಯಕ್ಷ ಗೌರವ್ ಗಾಂಧಿ, " ಕಂಪನಿಯು ತನ್ನ ಹೊಸ ಕೇವಲ ಮೊಬೈಲ್‌ನಲ್ಲಿ ಬಳಕೆ ಮಾಡಲು ಸಾಧ್ಯವಾಗುವಂತಹ ಪ್ಲ್ಯಾನ್ ಅನ್ನು ಆರಂಭ ಮಾಡಿದೆ. ಹೆಚ್ಚಿನ ಭಾರತೀಯರು ಪ್ರೈಮ್‌ ಬಳಕೆ ಮಾಡಲು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಈ ಪ್ಲ್ಯಾನ್ ಆರಂಭ ಮಾಡಲಾಗಿದೆ," ಎಂದು ಹೇಳಿದ್ದಾರೆ. ಅಮೆಜಾನ್ ಪ್ರೈಮ್ ವೀಡಿಯೊ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆಸಕ್ತ ಬಳಕೆದಾರರು Android ನಲ್ಲಿ Amazon Prime ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಂಡು ಚಂದಾದಾರಿಕೆ ಮಾಡಿಕೊಳ್ಳಬಹುದು ಅಥವಾ ಮೊಬೈಲ್ ಪ್ಲಾನ್ ಚಂದಾದಾರಿಕೆಯನ್ನು ಖರೀದಿಸಲು ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

 ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್‌ ಚಂದಾದಾರಿಕೆಗೆ ಎಷ್ಟು?

ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್‌ ಚಂದಾದಾರಿಕೆಗೆ ಎಷ್ಟು?

ಪ್ರೈಮ್ ವೀಡಿಯೋಗೆ ಹೋಲಿಸಿದರೆ, ಹಾಟ್‌ಸ್ಟಾರ್ ವರ್ಷಕ್ಕೆ ರೂ 499 ಗೆ ಮೊಬೈಲ್‌ ಚಂದಾದಾರಿಕೆಯನ್ನು ಒದಗಿಸುತ್ತದೆ. ಆದರೆ ನೆಟ್‌ಫ್ಲಿಕ್ಸ್‌ನ ಮೊಬೈಲ್ ಯೋಜನೆಯು ತಿಂಗಳಿಗೆ ರೂ 149 ವೆಚ್ಚವಾಗುತ್ತದೆ. ಭಾರತದಲ್ಲಿ ಬಳಕೆದಾರರಿಗಾಗಿ ನೆಟ್‌ಫ್ಲಿಕ್ಸ್ ವಾರ್ಷಿಕ ಯೋಜನೆಯನ್ನು ಹೊಂದಿಲ್ಲ. ಮಾಸಿಕ ಯೋಜನೆಯು ದುಬಾರಿಯಾಗಿದೆ.

English summary

Amazon Prime Video Mobile Edition Launched to Take on Disney+ Hotstar, Netflix in India

Amazon Prime Video Mobile Edition Launched to Take on Disney+ Hotstar, Netflix in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X